twitter
    For Quick Alerts
    ALLOW NOTIFICATIONS  
    For Daily Alerts

    ನನಗೆ ನಾನೇ ಪತಿ-ಪತ್ನಿ: ಇಂತಹ ಮದುವೆ ಸಿನಿಮಾದಲ್ಲೂ ಬಂದೋಗಿದೆ ಗೊತ್ತಾ?

    |

    ಒಬ್ಬ ಹುಡುಗ ಒಬ್ಬ ಹುಡುಗಿ ಒಪ್ಪಿದರೆ ಒಂದು ಮದುವೆ ಅನ್ನುವ ಪದ್ಧತಿ ಇದೆ. ಆದರೆ, ಇತ್ತೀಚೆಗೆ ಮದುವೆ ಅನ್ನುವುದು ನಿಧಾನವಾಗಿ ಬದಲಾಗುತ್ತಿದೆ. ಹೆಣ್ಣು ಹೆಣ್ಣನ್ನೇ ಮದುವೆಯಾಗುವುದು. ಗಂಡು ಗಂಡನ್ನೇ ಮದುವೆ ಆಗುವುದಕ್ಕೆ ಕಾನೂನು ಅನುಮತಿ ನೀಡಿದೆ. ಆದ್ರೀಗ ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿದೆ. ತನ್ನನ್ನು ತಾನೇ ಮದುವೆಯಾಗುವುದು. ಇದು ಭಾರತದಲ್ಲಿ ಇಂದಿನ ಬೆಳವಣಿಗೆ ಆದರೆ, ವಿದೇಶದಲ್ಲಿ ಇಂತಹ ಪರಿಕಲ್ಪನೆಯೂ ಇದೆ.

    ಗುಜರಾತಿನ ವಡೋದರಾದ 24 ವರ್ಷದ ಹುಡುಗಿ ಕ್ಷಮಾ ಬಿಂದು ತನ್ನನ್ನು ತಾನೇ ವಿವಾಹವಾಗಲುಸಿದ್ಧಳಾಗಿದ್ದಾಳೆ. ಸದ್ಯ ಇಡೀ ದೇಶದಲ್ಲಿ ಈ ವಿಚಿತ್ರ ಮದುವೆ ಬಗ್ಗೆನೇ ಚರ್ಚೆಯಾಗುತ್ತಿದೆ. ಯಾಕಂದ್ರೆ, ಹೀಗೆ ತನ್ನನ್ನು ತಾನೇ ಮದುವೆಯಾಗುತ್ತಿರುವುದು ಇದೇ ಭಾರತದಲ್ಲಿ ಇದೇ ಮೊದಲು.

    ಜಾನಿ ಡೆಪ್ ಗೆಲುವು ಮಾಜಿ ಪತ್ನಿ ಅಂಬರ್‌ಗೆ 116 ಕೋಟಿ ದಂಡ!ಜಾನಿ ಡೆಪ್ ಗೆಲುವು ಮಾಜಿ ಪತ್ನಿ ಅಂಬರ್‌ಗೆ 116 ಕೋಟಿ ದಂಡ!

    ಅಂದ್ಹಾಗೆ ಇಂತಹ ಮದುವೆಯನ್ನು ಇಂಗ್ಲಿಷ್‌ನಲ್ಲಿ 'ಸೊಲೊಗಾಮಿ' ಅಂತಲೂ ಕರೆಯುತ್ತಾರೆ. ಹಾಗಂತ ಇಂತಹ ಮದುವೆ ಕೇಲವ ರಿಯಲ್‌ ಲೈಫ್‌ನಲ್ಲಿ ನಡೆಯುತ್ತಿದೆ ಎಂದುಕೊಳ್ಳಬೇಡಿ. ಈಗಾಗಲೇ ಸಿನಿಮಾಗಳಲ್ಲಿ ಇಂತಹ ಮದುವೆಯ ಪರಿಕಲ್ಪನೆ ಬಂದು ಹೋಗಿದೆ. ಅಂತಹ ಸಿನಿಮಾಗಳ ಪಟ್ಟಿ ಇಲ್ಲಿದೆ.

    'ರೋಸಾಸ್ ವೆಡ್ಡಿಂಗ್'

    'ರೋಸಾಸ್ ವೆಡ್ಡಿಂಗ್'

    ರೋಸಾ 45 ವರ್ಷದ ಮಹಿಳೆ. ತನ್ನ ಕುಟುಂಬಕ್ಕಾಗಿ ದುಡಿಯುತ್ತಿದ್ದ ಹೆಣ್ಣು. ತನ್ನೆಲ್ಲಾ ಆಸೆಗಳನ್ನೂ ಪಕ್ಕಕ್ಕಿಟ್ಟು ಫ್ಯಾಮಿಲಿಗಾಗಿ ತನ್ನ ಖುಷಿಯನ್ನು ತ್ಯಾಗ ಮಾಡಿದ್ದಳು. ಕೊನೆಗೂ ಆ ಒತ್ತಡದಿಂದ ಹೊರಬಂದು ತನಗಾಗಿ ಜೀವಿಸುವ ರೋಸಾ, ತನ್ನನ್ನು ತಾನು ಮದುವೆಯಾಗುವ ದೃಶ್ಯವಿದೆ. ಹೀಗಾಗಿ ತನ್ನನ್ನು ತಾನು ಮದುವೆಯಾಗುವ ಪರಿಕಲ್ಲನೆ ಭಾರತಕ್ಕೆ ಹೊಸತಷ್ಟೇ. 'ಸೊಲೊಗಾಮಿ' ಪ್ರಕರಣ ವಿದೇಶದಲ್ಲಿದೆ.

    'ಗ್ಲೀ' ಟಿವಿ ಸೀರಿಸ್

    'ಗ್ಲೀ' ಟಿವಿ ಸೀರಿಸ್

    2009ರಲ್ಲಿ ಅಮೆರಿಕದಲ್ಲಿ ಪಕ್ಕಾ ಮ್ಯೂಸಿಕಲ್ ಕಾಮಿಡಿ ಟಿವಿ ಸೀರಿಸ್ ಪ್ರಸಾರ ಆಗಿತ್ತು. ಈ ಟಿವಿ ಶೋ ಸಂಗೀತದ ಜೊತೆಗೆ ಸಮಾಜದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿತ್ತು. ಕುಟುಂಬ, ಜಾತಿ, ಯೌವ್ವನ, ಸಂಬಂಧ, ಲೈಂಗಿಕತೆ ಇಂತಹ ವಿಷಯಗಳನ್ನು ಆಧಾರವಾಗಿಟ್ಟುಕೊಂಡು ಶೋ ಪ್ರಸಾರವಾಗುತ್ತಿತ್ತು. ಈ ಸೀರಿಸ್‌ನ ಒಂದು ಸಂಚಿಕೆಯಲ್ಲಿ ಹಾಲಿವುಡ್ ನಟಿ ಸ್ಯೂ ಸಿಲ್ವೆಸ್ಟರ್ ಒಂದು ಸಂದರ್ಭದಲ್ಲಿ ತನ್ನನ್ನು ತಾನೇ ವಿವಾಹವಾಗುವ ದೃಶ್ಯವಿದೆ.

    'ದಿ ಎಕ್ಸೆಸ್'

    'ದಿ ಎಕ್ಸೆಸ್'

    ಈ ಸೀರಿಸ್ ಕೂಡ ಅಮೆರಿಕದಲ್ಲಿ ಬೇಜಾನ್ ಸದ್ದು ಮಾಡಿತ್ತು. ನ್ಯೂಯಾರ್ಕ್‌ನಲ್ಲಿರುವ ಮೂವರು ವಿಚ್ಛೇದನ ಪಡೆದವರ ಕಥೆಯನ್ನು ಟಿವಿಯಲ್ಲಿ ತೋರಿಸಲಾಗಿತ್ತು. ಕ್ರಿಶ್ಚಿಯನ್ ಜಾನ್‌ಸ್ಟೆನ್ ಈ ಸೀರಿಸ್‌ನಲ್ಲಿ ಹೋಲಿ ಪ್ರಾಂಕ್ಲೀನ್ ಎಂಬ ಪಾತ್ರದಲ್ಲಿ ನಟಿಸಿದ್ದರು. ಒಂದು ಸಂಚಿಕೆಯಲ್ಲಿ ಈ ನಟಿ ತನ್ನನ್ನು ತಾನೇ ಮದುವೆಯಾಗುವ ದೃಶ್ಯವಿದೆ. ಈ ಸೀರಿಸ್ 2011ರಿಂದ 2014ರ ವರೆಗೆ ಪ್ರಸಾರವಾಗಿತ್ತು.

    'ಜೂಲ್ಯಾಂಡರ್ 2'

    'ಜೂಲ್ಯಾಂಡರ್ 2'

    ಅಮೆರಿಕದ ಆಕ್ಷನ್ ಕಾಮಿಡಿ ಸಿನಿಮಾ 'ಜೂಲ್ಯಾಂಡರ್ 2' 2016ರಲ್ಲಿ ರಿಲೀಸ್ ಆಗಿತ್ತು. ಈ ಸಿನಿಮಾ ಹಾಲಿವುಡ್‌ನ ಸ್ಟಾರ್ ನಟ ಬೆನ್ ಸ್ಟಿಲ್ಲೆರ್ ನಟಿಸಿದ್ದರು. ಈ ಸಿನಿಮಾ ಒಂದು ಸನ್ನಿವೇಶದಲ್ಲಿ ಬೆಸ್ ಸ್ಟಿಲ್ಲೆರ್ ತನ್ನನ್ನು ತಾವೇ ವಿವಾಹವಾಗಿ ಸನ್ನಿವೇಶವಿದೆ. ಆದರೆ, ಈ ಸಿನಿಮಾ ನೆಗೆಟಿವ್ ರಿವ್ಯೂ ಬಂದಿತ್ತು.

    English summary
    Kshama Bindu Set To Marry Herself: Here Is List Of Sologomy Movies, Know More.
    Friday, June 3, 2022, 9:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X