»   » ವೀರ್ಯ ದಾನದ ನಿರೀಕ್ಷೆಯಲ್ಲಿ ಖ್ಯಾತ ತಾರೆ

ವೀರ್ಯ ದಾನದ ನಿರೀಕ್ಷೆಯಲ್ಲಿ ಖ್ಯಾತ ತಾರೆ

By: ರವಿಕಿರಣ್
Subscribe to Filmibeat Kannada
Actress Lindsay Lohan
ರಕ್ತದಾನ, ವಿದ್ಯಾದಾನ, ಅನ್ನದಾನ, ನೇತ್ರದಾನಗಳ ನಡುವೆ ಇತ್ತೀಚೆಗೆ ವೀರ್ಯದಾನವೂ ತನ್ನದೇ ಆದಂತಹ ಮಹತ್ವ ಪಡೆಯುತ್ತಿದೆ. ಮಕ್ಕಳಿಲ್ಲದೆ ಕೊರಗುತ್ತಿರುವ ಅದೆಷ್ಟೋ ದಂಪತಿಗಳ ಪಾಲಿಗೆ ವೀರ್ಯದಾನ ವರದಾನವಾಗಿ ಪರಿಣಮಿಸಿದೆ.

ಈಗ ಖ್ಯಾತ ಹಾಲಿವುಡ್ ತಾರೆ ಲಿಂಡ್ಸೆ ಲೋಹನ್ ಅವರು ವೀರ್ಯದಾನದ ನಿರೀಕ್ಷೆಯಲ್ಲಿದ್ದಾರೆ. ಯಾರಾದರೂ ವೀರ್ಯದಾನ ಮಾಡಿದರೆ ಅವರು ಅಮ್ಮನಾಗುತ್ತಾರಂತೆ. ಅಂದಹಾಗೆ ಲಿಂಡ್ಸೆ ಲೋಹನ್ ಅವರ ಪ್ರಾಯ ಇನ್ನೂ ಇಪ್ಪತ್ತಾರು.

ಈಗಾಗಲೆ ವೀರ್ಯದಾನಕ್ಕಾಗಿ ಹಲವರನ್ನು ಸಂಪರ್ಕಿಸಲಾಗಿಯಂತೆ. ತಮ್ಮ ಹಲವಾರು ಗೆಳೆಯರನ್ನು ಸಂಪರ್ಕಿಸಿದ್ದಾರಂತೆ. ಅದರಲ್ಲಿ ಒಬ್ಬನಂತೂ, ನಿನಗೆ ಮಗು ಬೇಕೆಂದರೆ ಮೊದಲು ನಿನ್ನ ಬಗ್ಗೆ ನೀನು ಕಾಳಜಿ ವಹಿಸು ಎಂಬ ಸಲಹೆ ನೀಡಿದ್ದಾನಂತೆ.

ಸದ್ಯಕ್ಕೆ ಈ ಅಂತೆಕಂತೆಗಳ ಸುದ್ದಿ ಹಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ಹಿಂದೊಮ್ಮೆ ಲಿಂಡ್ಸೆ ಲೋಹನ್ ಮನಸ್ಸಿನ ಒತ್ತಡ ಕಡಿಮೆ ಮಾಡಿಕೊಳ್ಳಲು ವೋಡ್ಕಾಗೆ ದಾಸಿಯಾಗಿರುವುದಾಗಿ ಹೇಳಿಕೊಂಡಿದ್ದರು. ಇದಿಷ್ಟೇ ಅಲ್ಲದೆ ಲಿಂಡ್ಸೆ ಆರ್ಥಿಕ ಪರಿಸ್ಥಿತಿಯೂ ನೆಟ್ಟಗಿಲ್ಲ ಎನ್ನಲಾಗಿತ್ತು. ಹಾಗಾಗಿ ತಾವು ಕುಡಿತದ ಚಟಕ್ಕೆ ಬಿದ್ದಿದ್ದಾಗಿ ಹೇಳಿಕೊಂಡಿದ್ದರು.

ಅಮೆರಿಕನ್ ನಟಿ, ರೂಪದರ್ಶಿ ಹಾಗೂ ಪಾಪ್ ತಾರೆ ಲಿಂಡ್ಸೆ ಲೋಹನ್ ಮಿಯಾಮಿ ಬೀಚ್‌ನಲ್ಲಿ ಜಲಕ್ರೀಡೆಯಾಡುತ್ತಿರಬೇಕಾದರೆ ಅಚಾನಕ್ ಆಗಿ ಒಂದು ನಡೆಯಬಾರದ ಘಟನೆ ನಡೆದು ಹೋಗಿತ್ತು. ಅದೇನೆಂದರೆ ಇಲ್ಲಿ ಓದಿ.

English summary
Hollywood actress Lindsay Lohan is reportedly looking for a male partner who can donate sperm so that she can become a mother.
Please Wait while comments are loading...