'ಕಂಟೇಜಿಯನ್' ಸಿನಿಮಾದ ವೈದ್ಯಕೀಯ ಸಲಹೆಗಾರ, ಖ್ಯಾತ ವೈರಾಲಜಿಸ್ಟ್‌ಗೆ ಕೊರೊನಾವೈರಸ್
ಜಗತ್ತಿನ ಪ್ರಸಿದ್ಧ ವೈರಾಲಜಿಸ್ಟ್‌ಗಳಲ್ಲಿ ಒಬ್ಬರಾದ ಡಾ. ಇಯಾನ್ ಲಿಪ್‌ಕಿನ್ ಅವರಲ್ಲಿಯೂ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದಿದೆ. 2020ರಲ್ಲಿ ವೈರಸ್ ಒಂದು ಜಗತ್ತನ್ನು ತಲ್ಲಣಗೊಳಿಸಲಿದೆ ಎಂಬ ಭವಿಷ್ಯದ ಪರಿಕಲ್ಪನೆಯೊಂದಿಗೆ 2011ರಲ್ಲಿ ಬಿಡುಗಡೆಯಾಗಿದ್ದ ಹಾಲಿವುಡ್‌ನ ಜನಪ್ರಿಯ ಸಿನಿಮಾ 'ಕಂಟೇಜಿಯನ್'ಗೆ ಅವರು ವೈದ್ಯಕೀಯ ಸಲಹೆಗಾರರಾಗಿದ್ದರು.
ಕೊಲಂಬಿಯಾ ವಿಶ್ವವಿದ್ಯಾಲಯದ ಇನ್‌ಫೆಕ್ಷನ್ ಆಂಡ್ ಇಮ್ಯುನಿಟಿ ಕೇಂದ್ರದ ಮುಖ್ಯಸ್ಥರಾಗಿರುವ ಲಿಪ್‌ಕಿನ್, ವೈರಸ್‌ಗಳಿಗೆ ಸಂಬಂಧಿಸಿದಂತೆ ಟೆಲಿವಿಷನ್ ಕಾರ್ಯಕ್ರಮಗಳಲ್ಲಿ ನಿರಂತರ ಭಾಗವಹಿಸುತ್ತಿದ್ದರು. ತಮಗೆ ಕೊರೊನಾ ವೈರಸ್ ತಗುಲಿರುವುದನ್ನು ಅವರೇ ಬಹಿರಂಗಪಡಿಸಿದ್ದಾರೆ.
'ಅದು ನನಗೇ ತಗುಲುವಂತಿದ್ದರೆ, ಇನ್ನು ಯಾರಿಗೆ ಬೇಕಾದರೂ ತಗುಲಬಹುದು' ಎಂದಿರುವ ಲಿಪ್‌ಕಿನ್, ತಮ್ಮ ಪರಿಸ್ಥಿತಿ ಹೀನಾಯವಾಗಿದೆ ಎಂದು ತಿಳಿಸಿದ್ದಾರೆ. ತಮಗೆ ಎಲ್ಲಿಂದ ವೈರಸ್ ತಗುಲಿತು ಎನ್ನುವುದು ಮುಖ್ಯವಲ್ಲ. ಏಕೆಂದರೆ ಅಮೆರಿಕದಾದ್ಯಂತ ವೈರಸ್ ಹರಡಿದೆ. ಅದು ಎಲ್ಲಿಂದ ಬೇಕಾದರೂ ನಿಮಗೆ ತಗುಲಬಹುದು' ಎಂದಿದ್ದಾರೆ.

2011ರಲ್ಲಿ ಬಿಡುಗಡೆಯಾಗಿದ್ದ ಸ್ಟೀವನ್ ಸೊಡರ್‌ಬರ್ಗ್ ನಿರ್ದೇಶನದ 'ಕಂಟೇಜಿಯನ್' ಸಿನಿಮಾ 2020ರಲ್ಲಿ ವೈರಸ್‌ಒಂದು ಹೇಗೆ ಜಗತ್ತಿನಲ್ಲಿ ದಾಳಿ ನಡೆಸುತ್ತದೆ ಎಂಬ ಕಥಾವಸ್ತುವನ್ನು ಹೊಂದಿತ್ತು. ತಜ್ಞರ ಅಭಿಪ್ರಾಯಗಳನ್ನು ಆಧರಿಸಿ ಈ ಸಿನಿಮಾ ಮಾಡಲಾಗಿತ್ತು. ಈ ಸಲಹೆಗಾರರಲ್ಲಿ ಲಿಪ್‌ಕಿನ್ ಒಬ್ಬರು.


Click it and Unblock the Notifications











