ಮದುವೆಯಾದ ನಾಲ್ಕೇ ತಿಂಗಳಿಗೆ ದುರಂತ ಅಂತ್ಯ ಕಂಡ ಮಿಸ್ ಯೂನಿವರ್ಸ್ ಸ್ಫರ್ಧಿ

ಹುಟ್ಟು ಉಚಿತ.. ಸಾವು ಖಚಿತ.. ಮನುಷ್ಯ ಯಾವಾಗ ಜನ್ಮ ಪಡೆಯಬಹುದು ಎಂದು ಹೇಳಬಹುದು. ಆದರೆ ಮನುಷ್ಯನ ಅಂತ್ಯ ಹೇಗೆ ಆಗುತ್ತೆ ಎಂದು ಹೇಳುವುದು ಅಸಾಧ್ಯ. ಸಾವು ಯಾರನ್ನು ಹೇಳಿ ಕೇಳಿ ಬರುವುದಿಲ್ಲ. ಈ ಸಾವಿಗೆ ಲಿಂಗ, ಜಾತಿ, ಧರ್ಮದ ಭೇದ ಭಾವ ಕೂಡ ಇಲ್ಲ. ಸಾವು ಯಾವಾಗ ಬೇಕಾದರೂ ಯಾರನ್ನ ಬೇಕಾದರು ಕರೆಯಬಹುದು. ಇದಕ್ಕೆ ರಷ್ಯಾದ ಮಾಡೆಲ್ ಮತ್ತು ಮಾಜಿ ಯೂನಿವರ್ಸ್ ಸ್ಫರ್ಧಿ ಕೆಸೆನಿಯಾ ಅಲೆಕ್ಸಾಂಡ್ರೊವಾ ಅವರ ದುರಂತ ಅಂತ್ಯ ಮತ್ತೊಂದು ಉದಾಹರಣೆ.

ಹೌದು. ಕೆಸೆನಿಯಾ ಅಲೆಕ್ಸಾಂಡ್ರೊವಾ 2017ರಲ್ಲಿ ಮಿಸ್ ಯೂನಿವರ್ಸ ಸ್ಫರ್ಧೆಯಲ್ಲಿ ಎರಡನೇ ಸ್ಥಾನ ಪಡೆದಿದ್ದ ಚೆಲುವೆ. ಅದೇ ವರ್ಷ ಮಿಸ್ ರಷ್ಯಾ ಸೌಂದರ್ಯ ಸ್ಫರ್ಧೆಯಲ್ಲಿ ಮೊದಲ ರನ್ನರ್ ಅಪ್ ಕೂಡ ಆಗಿದ್ದ ಕೆಸೆನಿಯಾ ಅಲೆಕ್ಸಾಂಡ್ರೊವಾ ಸೈಕಾಟ್ರಿಸ್ಟ್ ಕೂಡ ಆಗಿದ್ದರು. ಮಾಸ್ಕೋ ಪೆಡಾಗೋಜಿಕಲ್ ಸ್ಟೇಟ್ ಯೂನಿವರ್ಸಿಟಿಯಿಂದ ಪದವಿಯನ್ನು ಕೂಡ ಪಡೆದಿದ್ದರು.

Miss Russia Runner-up Kseniya Alexandrova Dies in Bizarre Car Crash Four Months After Wedding

ಅದೇ ವರ್ಷ ಅವರು ಮಿಸ್ ರಷ್ಯಾ ಸ್ಪರ್ಧೆಯಲ್ಲಿ ಮೊದಲ ರನ್ನರ್-ಅಪ್ ಆಗಿದ್ದರು. ಇದರ ಜೊತೆಗೆ, ಅವರು ವೃತ್ತಿಪರ ಮನಶ್ಶಾಸ್ತ್ರಜ್ಞರೂ ಆಗಿದ್ದರು. ಅವರು ಮಾಸ್ಕೋ ಪೆಡಾಗೋಜಿಕಲ್ ಸ್ಟೇಟ್ ಯೂನಿವರ್ಸಿಟಿಯಿಂದ ಪದವಿ ಪಡೆದಿದ್ದರು. ನಾಲ್ಕು ತಿಂಗಳ ಹಿಂದೆಯೇ ಖುಷಿ ಖುಷಿಯಾಗಿ ಮದುವೆಯಾಗಿದ್ದರು.ಇಂತಹದ್ದೊಂದು ದಿನ ಬರುತ್ತೆ ಎಂದು ನಾನು ಎಂದಿಗೂ ಅಂದುಕೊಂಡಿರಲಿಲ್ಲ. ನಾನು ಭಾವನೆಗಳ ಅಲೆಯ ಮೇಲೆ ಬದುಕುತ್ತಿದ್ದೇನೆ ಎಂದು ಭಾಸವಾಗುತ್ತಿದೆ ಎಂದು ತಮ್ಮ ಮದುವೆಯ ನಂತರ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ದರು ಕೆಸೆನಿಯಾ ಅಲೆಕ್ಸಾಂಡ್ರೊವಾ. ಆದರೆ ವಿಧಿ ಘೋರ.

ಇಂಥಾ ಕೆಸೆನಿಯಾ ಅಲೆಕ್ಸಾಂಡ್ರೊವಾ ಜುಲೈನಲ್ಲಿ ತಮ್ಮ ಪತಿಯ ಜೊತೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಇವರ ಪತಿಯೇ ಕಾರನ್ನು ಚಲಾಯಿಸುತ್ತಿದ್ದರು. ಈ ಸಮಯದಲ್ಲಿ ರಷ್ಯಾದ ಟ್ವೆರ್ ಒಬ್ಲಾಸ್ಟ್‌ನಲ್ಲಿ ರಸ್ತೆಯ ಮಧ್ಯೆ ಸಾರಂಗ ಎದುರಾಗಿತ್ತು. ಆಗ ಸಾರಂಗ ಉಳಿಸುವ ಭರದಲ್ಲಿ ಕಾರಿನ ನಿಯಂತ್ರಣವನ್ನು ಕಳೆದುಕೊಂಡ ಹಿನ್ನೆಲೆ ಅಪಘಾತ ಸಂಭವಿಸಿತ್ತು.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಕೆಸೆನಿಯಾ ಅಲೆಕ್ಸಾಂಡ್ರೊವಾ ಅವರನ್ನು ಕೂಡಲೇ ಮಾಸ್ಕೋ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಆದರೆ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದ ಹಿನ್ನೆಲೆ ಚಿಕಿತ್ಸೆ ಫಲಕಾರಿಯಾಗದೇ ಆಗಸ್ಟ್ 12ರಂದು ಕೆಸೆನಿಯಾ ಅಲೆಕ್ಸಾಂಡ್ರೊವಾ ತಮ್ಮ 30ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.

ಕೆಸೆನಿಯಾ ಅಲೆಕ್ಸಾಂಡ್ರೊವಾ ಅವರ ನಿಧನದ ಸುದ್ದಿಯನ್ನು ಅವರ ಏಜೆನ್ಸಿ ಮೋಡಸ್ ವಿವೆಂಡಿಸ್ ದೃಢಪಡಿಸಿದ್ದು, ಈ ಕುರಿತು ಯುಎಸ್‌ನ ಮ್ಯಾಗಜೀನ್ ಕೂಡ ವರದಿಯನ್ನು ಮಾಡಿದೆ.

Miss Russia Runner-up Kseniya Alexandrova Dies in Bizarre Car Crash Four Months After Wedding

ಈ ಕುರಿತು ರಷ್ಯಾದ ಸುದ್ದಿ ವಾಹಿನಿಗೆ ಪ್ರತಿಕ್ರಿಯೆಯನ್ನು ನೀಡಿರುವ ಕೆಸೆನಿಯಾ ಅಲೆಕ್ಸಾಂಡ್ರೊವಾ ಅವರ ಪತಿ, ಸಾರಂಗ ರಸ್ತೆಯಲ್ಲಿ ಅಡ್ಡ ಬಂದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ. ಅಪಘಾತದ ನಂತರ ಕೆಸೆನಿಯಾ ಪ್ರಜ್ಞೆ ಕಳೆದುಕೊಂಡಿದ್ದರು ಅವರ ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು, ದೇಹ ಸಂಪೂರ್ಣವಾಗಿ ರಕ್ತಸಿಕ್ತವಾಗಿತ್ತು ಎಂದು ಹೇಳಿರುವ ಪತಿ ಎಲ್ಲವೂ ಕ್ಷಣಾರ್ಧದಲ್ಲಿಯೇ ನಡೆದು ಹೋಯ್ತು ನನಗೇನು ಮಾಡಬೇಕು ಎನ್ನುವುದೇ ಅರ್ಥವಾಗಲಿಲ್ಲ ಎಂದು ಹೇಳಿದ್ದಾರೆ. ಅಲ್ಲಿದ್ದ ಇತರ ಚಾಲಕರು ಮತ್ತು ತುರ್ತು ಸೇವೆಗಳ ನೆರವಿನಿಂದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ, ನಮ್ಮ ಪ್ರಾರ್ಥನೆ ದೇವರಿಗೆ ತಲುಪಲಿಲ್ಲ ಎಂದು ಹೇಳಿದ್ದಾರೆ.

More from Filmibeat

English summary
A freak car accident involving a deer has claimed the life of Russian model and beauty queen Kseniya Alexandrova. Get the full story on her untimely passing.
Read more about: death accident filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X