ಬಾಲ್ಟಿಮೋರ್ ಸೇತುವೆಗೆ ಹಡಗು ಡಿಕ್ಕಿ: ಒಬಾಮಾ ನಿರ್ಮಾಣದ ಸಿನಿಮಾ ನೆನಪಿಸಿದ ನೆಟ್ಟಿಗರು.. ಯಾವುದದು?

ಅಮೆರಿಕದ ಬಾಲ್ಟಿಮೋರ್‌ನಲ್ಲಿ ಮಂಗಳವಾರ (ಮಾರ್ಚ್ 26) ಕಂಟೇನರ್‌ಗಳನ್ನು ಹೊತ್ತ ಹಡುಗು ಉಕ್ಕಿನ ಸೇತುವೆಗೆ ಡಿಕ್ಕಿ ಹೊಡೆದಿದೆ. 22 ಮಂದಿ ಭಾರತೀಯರೇ ಇದ್ದ ಈ ಹಡಗು ಹೊರಟ ಕೆಲವೇ ಕ್ಷಣಗಳಲ್ಲಿ ತಾಂತ್ರಿಕ ದೋಷವನ್ನು ಎದುರಿಸಿತ್ತು. ಈ ಪರಿಣಾಮ ಹಡಗು ನಿಯಂತ್ರಣವನ್ನು ಕಳೆದುಕೊಂಡಿತ್ತು. ಎಷ್ಟೇ ಹರಸಾಹಸ ಮಾಡಿದರೂ ಹಡಗು ನಿಯಂತ್ರಣಕ್ಕೆ ಸಿಗದೆ ಸೇತುವೆ ಕುಸಿದು ಬಿದ್ದಿದೆ.

ಸಿಂಗಾಪುರ ಮೂಲದ ಈ ಕಂಟೇನರ್ ಶಿಪ್‌ನಲ್ಲಿ 22 ಮಂದಿ ಭಾರತೀಯ ಸಿಬ್ಬಂದಿಗಳು ಇದ್ದರು. ಮುಂದೆ ಆಗಬಹುದಾದ ದುರಂತವನ್ನು ತಪ್ಪಿಸಲು ಸಿಬ್ಬಂದಿಗಳು ಬಾಲ್ಟಿಮೋರ್‌ನ ಸಂಬಂಧ ಪಟ್ಟ ಅಧಿಕಾರಿಗಳಿಗೆ 'ಮೇ ಡೇ' ಕರೆ ನೀಡಿದ್ದರು. ಈ ಪರಿಣಾಮ ಜರುಗಬಹುದಾಗಿದ್ದ ದೊಡ್ಡ ದುರಂತವನ್ನು ತಪ್ಪಿಸಿದ್ದರು. ಆದರೂ ಆರು ಮಂದಿ ಸಾವನ್ನಪ್ಪಿರುವುದಾಗಿ ಸ್ಥಳೀಯ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.

Netizens found similarities between the Baltimore Bridge collapse and leave the world behind

ಹಡಗು ಫ್ರಾನ್ಸಿನ್ ಸ್ಕಾಟ್ ಕೀ ಬ್ರಿಡ್ಜ್‌ಗೆ ಡಿಕ್ಕಿ ಹೊಡೆದ ಬಳಿಕ ಕುಸಿದು ಬಿದ್ದ ಸೇತುವೆಯ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ದೃಶ್ಯಗಳನ್ನು ನೋಡಿದರೆ, ಒಂದು ಹಾಲಿವುಡ್ ಸಿನಿಮಾದ ದೃಶ್ಯವನ್ನೇ ನೋಡಿದ ಅನುಭವ ಆಗುತ್ತೆ. ಇತ್ತ ನೆಟ್ಟಿಗರು ಬಾಲ್ಟಿಮೋರ್ ಸೇತುವೆ ದುರಂತವನ್ನು ನೆನಪಿಸುವ ಹಾಲಿವುಡ್ ಸಿನಿಮಾದ ದೃಶ್ಯವನ್ನು ಹುಡುಕಿ ತೆಗೆದಿದ್ದಾರೆ. ವಿಶೇಷ ಅಂದರೆ, ಆ ಸಿನಿಮಾವನ್ನು ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ನಿರ್ಮಾಣ ಮಾಡಿದ್ದಾರೆ. ಹಾಗಿದ್ದರೆ ಆ ಸಿನಿಮಾ ಯಾವುದು? ತಿಳಿಯಲು ಮುಂದೆ ಓದಿ.

ಸೋಶಿಯಲ್ ಮೀಡಿಯಾಗಳಲ್ಲಿ ಕುಸಿದು ಬಿದ್ದ ಸೇತುವೆ ವಿಡಿಯೋ ಹರಿದಾಡುತ್ತಿದ್ದಂತೆ ನೆಟ್ಟಿಗರು ಕಳೆದ ವರ್ಷವಷ್ಟೇ ಬಿಡುಗಡೆಯಾಗಿದ್ದ ಸಿನಿಮಾದ ದೃಶ್ಯಕ್ಕೆ ಹೊಲಿಕೆ ಮಾಡುತ್ತಿದ್ದಾರೆ. ನೆಟ್‌ಫ್ಲಿಕ್ಸ್‌ನಲ್ಲಿ ಈ ಸಿನಿಮಾವಿದ್ದು, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ನಿರ್ಮಾಣ ಮಾಡಿದ್ದರು. ಆ ಸಿನಿಮಾವೇ 'ಲೀವ್ ದಿ ವರ್ಲ್ಡ್ ಬಿಹೈಂಡ್'.

'ಲೀವ್ ದಿ ವರ್ಲ್ಡ್ ಬಿಹೈಂಡ್' ಸಿನಿಮಾದ ಒಂದು ದೃಶ್ಯ ಬಾಲ್ಟಿಮೋರ್‌ನಲ್ಲಿ ನಡೆದ ದುರಂತವನ್ನೇ ನೆನಪಿಸುತ್ತದೆ ಎಂದು ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡುತ್ತಿದ್ದಾರೆ. ಬಾಲ್ಟಿಮೋರ್ ಹಾಗೂ ಸಿನಿಮಾ ದೃಶ್ಯವನ್ನು ಶೇರ್ ಮಾಡುತ್ತಿದ್ದಾರೆ. ಸ್ಯಾಮ್ ಎಸ್ಮೇಲ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಹಾಲಿವುಡ್ ಸ್ಟಾರ್ ನಟಿ ಜೂಲಿಯಾ ರಾಬರ್ಟ್ಸ್, ಮಹೆರ್ಶಾಲಾ ಅಲಿ , ಎಥಾನ್ ಹಾಕ್ , ಮೈಹಾಲಾ ಹಾಗೂ ಕೆವಿನ್ ಬೇಕನ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಕಳೆದ ವರ್ಷ ನೆಟ್‌ಫ್ಲಿಕ್ಸ್‌ನಲ್ಲಿ 'ಲೀವ್ ದಿ ವರ್ಲ್ಡ್ ಬಿಹೈಂಡ್' ಸ್ಟ್ರೀಮಿಂಗ್ ಆಗುತ್ತಿದೆ. ಸಿನಿಮಾ ದೃಶ್ಯಕ್ಕೆ ಹೋಲಿಕೆ ಮಾಡಿ ತಮ್ಮ ಎಕ್ಸ್‌ ಖಾತೆಯಲ್ಲಿ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಾರೆ. " ಇಂದು ಬಾಲ್ಟಿಮೋರ್‌ನಲ್ಲಿ ನಡೆದ ದುರಂತ 'ಲೀವ್ ದಿ ವರ್ಲ್ಡ್ ಬಿಹೈಂಡ್' ಸಿನಿಮಾವನ್ನು ಹೋಲಿಕೆ ಮಾಡುತ್ತಿದೆ" ಎಂದು ನೆಟ್ಟಿಗರೊಬ್ಬರು ಹೇಳುತ್ತಿದ್ದಾರೆ. ಇನ್ನೊಬ್ಬರು ಒಂದು ಫೋಟೊ ಒಬಾಮಾ ನಿರ್ಮಿಮಿಸಿದ್ದ ಸಿನಿಮಾದ್ದು, ಇನ್ನೊಂದು ರಿಯಾಲಿಟಿ.. ಇದು ಕಾಕತಾಳೀಯವೇ" ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ.

ಬಾಲ್ಟಿಮೋರ್ ಸೇತುವೆ ಹಡಗು ದುರಂತ ಹಾಗೂ ಸಿನಿಮಾವನ್ನು ನಾನಾ ರೀತಿಯಲ್ಲಿ ಹೋಲಿಕೆ ಮಾಡುತ್ತಿದ್ದಾರೆ. ಬಾಲ್ಟಿಮೋರ್‌ನಿಂದ ಶ್ರೀಲಂಕಾದ ಕೊಲಂಬೊಗೆ ಹೊರಟಿದ್ದ ಹಡಗು ಮುಂದೆ ಕಟ್ಟಿದ್ದ ಬಾವುಟದಲ್ಲಿ ಸಿಂಹದ ಚಿಹ್ನೆ ಇದ್ದು, 'ಲೀವ್ ದಿ ವರ್ಲ್ಡ್ ಬಿಹೈಂಡ್' ಸಿನಿಮಾದಲ್ಲಿ ಬಳಸಿರುವ ಹಡಗಿನಲ್ಲೂ ಬಿಳಿ ಸಿಂಹವಿತ್ತು ಎಂದು ನೆಟ್ಟಿಗರು ಹೋಲಿಕೆ ಮಾಡುವುದಕ್ಕೆ ಶುರು ಮಾಡಿದ್ದಾರೆ.

More from Filmibeat

English summary
Netizens comparing with Baltimore Bridge collapse with USA ex president Obama produced movie Leave The World Behind
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X