twitter
    For Quick Alerts
    ALLOW NOTIFICATIONS  
    For Daily Alerts

    ಅಯ್ಯೋ ಇದು ಹೇಗೆ ಸಾಧ್ಯ? 1963 ಹಾಗೂ 2013ರಲ್ಲಿ ಬಂದಿತ್ತು 'ಒಮಿಕ್ರಾನ್' ಸಿನಿಮಾ

    |

    ಇಷ್ಟು ದಿನ ಕೊರೊನಾಗೆ ಭಯಬಿದ್ದು ಲಸಿಕೆ ಪಡೆದ ಬಳಿಕ ಕೊಂಚ ನೆಮ್ಮದಿಯಾಗಿ ಇದ್ದರು. ಆದರೆ, ಕಳೆದೊಂದು ವಾರದಿಂದ 'ಒಮಿಕ್ರಾನ್' ಅನ್ನುವ ಹೊಸ ತಳಿ ಮತ್ತಷ್ಟು ಆತಂಕ ಸೃಷ್ಟಿಸಿದೆ. ಈ ತಳಿಯ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ. ಈ ಹೊಸ ತಳಿಗೆ ಪರಿಣಾಮವೇನು? ಇದು ಜೀವಕ್ಕೆ ಅಪಾಯ ತರುತ್ತಾ? ಯಾವ ವಯೋಮಾನದವರ ಮೇಲೆ ಪರಿಣಾಮ ಬೀರುತ್ತೆ. ಹೀಗೆ ನೂರೆಂಟು ಪ್ರಶ್ನೆಗಳು ಜನರ ಮುಂದಿದೆ. ಲಸಿಕೆ ಪಡೆದ ಬಳಿಕ ನೆಮ್ಮದಿಯಾಗಿ ಜೀವಿಸಬಹುದು ಅಂದುಕೊಂಡವಿರಗೆ 'ಒಮಿಕ್ರಾನ್' ಮತ್ತೊಂದು ತಲೆ ನೋವಾಗಿದೆ.

    ಇಡೀ ವಿಶ್ವದಲ್ಲಿ 'ಒಮಿಕ್ರಾನ್' ಅನ್ನುವ ಪದ ಟ್ರೆಂಡಿಂಗ್‌ನಲ್ಲಿದೆ. ಇದೂವರೆಗೂ ಬಹುತೇಕ ಜನರಿಗೆ ಇಂತಹದ್ದೊಂದು ಪದ ಪ್ರಪಂಚದಲ್ಲಿ ಇದೆ ಅನ್ನುವುದೇ ಗೊತ್ತಿರಲಿಲ್ಲ. ವಿಶ್ವದ ಯಾವುದೇ ಮೂಲೆಯಲ್ಲಿ ಇಂತಹದ್ದೊಂದು ಪದ ಇದೆ ಎಂದು ಸಾಮಾನ್ಯ ಜನರು ಊಹಿಸಿಯೂ ಇರಲಿಲ್ಲ. ಹೀಗಿರಬೇಕಾದರೆ, 'ಒಮಿಕ್ರಾನ್' ಅನ್ನುವ ಹೆಸರಿಟ್ಟುಕೊಂಡು ಈಗಾಗಲೇ ಎರಡು ಸಿನಿಮಾ ಬಂದು ಹೋಗಿದೆ ಅನ್ನುವುದು ಯಾರಿಗೆ ಗೊತ್ತಿರಲು ಸಾಧ್ಯ? ಹೌದು.. ಈಗಾಗಲೇ 'ಒಮಿಕ್ರಾನ್' ಅನ್ನುವ ಹೆಸರಿನಲ್ಲಿ ಎರಡು ಸಿನಿಮಾ ಅಧಿಕೃತವಾಗಿ ರಿಲೀಸ್ ಆಗಿದೆ.

    1963ರಲ್ಲಿ ಬಂದಿತ್ತು 'ದಿ ಒಮಿಕ್ರಾನ್ ವೇರಿಯಂಟ್'

    1963ರಲ್ಲಿ ಬಂದಿತ್ತು 'ದಿ ಒಮಿಕ್ರಾನ್ ವೇರಿಯಂಟ್'

    ಇದೊಂಥರಾ ನಗಬೇಕೋ ಅಳಬೇಕೋ ಅನ್ನುವ ಸನ್ನಿವೇಶ. 'ಒಮಿಕ್ರಾನ್' ಅನ್ನುವ ಕಣ್ಣಿಗೆ ಕಾಣದ ವೈರಸ್ ಇಡೀ ವಿಶ್ವದ ಜನರು ಆತಂಕದಲ್ಲಿ ಇರಿಸಿದೆ. ಈ ಮಧ್ಯೆ ಇಂತಹದ್ದೊಂದು ಸಿನಿಮಾ 58 ವರ್ಷಗಳ ಹಿಂದೆ ರಿಲೀಸ್ ಆಗಿತ್ತು ಅಂದರೆ, ನಂಬುವವರು ಯಾರು? ಆದರೆ, 1963ರಲ್ಲಿ 'ದಿ ಒಮಿಕ್ರಾನ್ ವೇರಿಯಂಟ್' ಅನ್ನುವ ಸಿನಿಮಾವೊಂದು ತೆರೆಕಂಡಿತ್ತು. ಇದೊಂದು ವೈಜ್ಞಾನಿಕ ಸಿನಿಮಾ ಆಗಿತ್ತು. ಈ ಸಿನಿಮಾ ಕಥೆ ಹಾಗೂ ಚಿತ್ರಕಥೆಯನ್ನು ಯುಫೊ ಗ್ರೆಗೊರೆಟ್ಟಿ ಬರೆದು ನಿರ್ದೇಶಿಸಿದ್ದರು. ಈಗ ಒಮಿಕ್ರಾನ್ ವೈರಸ್‌ನಷ್ಟೇ ಈ ಸಿನಿಮಾ ಕೂಡ ಫೇಮಸ್ ಆಗುತ್ತಿದೆ.

    'ಒಮಿಕ್ರಾನ್ ಸಿನಿಮಾ ಕಥೆಯೇನು?

    'ಒಮಿಕ್ರಾನ್ ಸಿನಿಮಾ ಕಥೆಯೇನು?

    'ದಿ ಒಮಿಕ್ರಾನ್ ವೇರಿಯಂಟ್' ಸಿನಿಮಾ ಕಥೆಗೂ ಈಗ ಭಯ ಹುಟ್ಟಿಸುತ್ತಿರುವ ವೈರಸ್‌ಗೂ ಯಾವುದೇ ರೀತಿಯ ಸಂಬಂಧವಿಲ್ಲ. ಬೇರೆ ಪ್ರಪಂಚದಿಂದ ಬರುವ ಏಲಿಯನ್ ಭೂಮಿ ಪ್ರವೇಶ ಮಾಡಿ ವ್ಯಕ್ತಿಯೊಬ್ಬನನ್ನು ಅಪಹರಿಸುತ್ತದೆ. ಭೂಮಿ ಮೇಲೆ ವಾಸಿಸುವ ವ್ಯಕ್ತಿಯ ಶರೀರವನ್ನು ಪರೀಕ್ಷೆಗೆ ಒಳಪಡಿಸುತ್ತದೆ. ಈ ಮೂಲಕ ಭೂಮಿಯ ಮೇಲೆ ಹೇಗೆ ಆಕ್ರಮಣ ಮಾಡಬಹುದು ಅನ್ನುವ ಮಾಹಿತಿಯನ್ನು ಕಲೆ ಹಾಕುತ್ತದೆ. ಇದು 'ದಿ ಒಮಿಕ್ರಾನ್ ವೇರಿಯಂಟ್' ಸಿನಿಮಾ ಒಂದೆಳೆ ಕಥೆ. ಆದರೆ, ಈ ಸಿನಿಮಾ ಬಂದಿದೆ ಅನ್ನುವುದು ಅದೆಷ್ಟೋ ಮಂದಿಗೆ ಗೊತ್ತೇ ಇಲ್ಲ.

    'ದಿ ಒಮಿಕ್ರಾನ್ ವೇರಿಯಂಟ್' ಸಿನಿಮಾ ಎಲ್ಲಿದೆ?

    'ದಿ ಒಮಿಕ್ರಾನ್ ವೇರಿಯಂಟ್' ಸಿನಿಮಾ ಪ್ರೇಕ್ಷಕರ ಮನಗೆಲ್ಲುವಲ್ಲಿ ಸೋತಿತ್ತು. ವೇನಿಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಈ ಸಿನಿಮಾ ನಾಮಿನೇಟ್ ಆಗಿತ್ತು. ಅಲ್ಲಿಂದ ಇಲ್ಲಿವರೆಗೂ ಸುದ್ದಿಯಲ್ಲೇ ಇರದ ಈ ಸಿನಿಮಾ ಬರೋಬ್ಬರಿ 58 ವರ್ಷಗಳ ಬಳಿಕ ಇಂಟರ್‌ನೆಟ್‌ನಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಈ ಸಿನಿಮಾವನ್ನು ಹುಡುಕಿ ಯೂಟ್ಯೂಬ್‌ನಲ್ಲಿವೂ ಹಾಕಲಾಗಿದೆ. ವಿಪರ್ಯಾಸ ಅಂದರೆ, ಅಲ್ಲಿ ಕೂಡ ಈ ಸಿನಿಮಾ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ಲ. ನಿಮಗೆ ಈ ಸಿನಿಮಾ ನೋಡಬೇಕು ಅಂದರೆ, ಈ ಕೆಳಗೆ ಸಿನಿಮಾದ ಲಿಂಕ್ ಇದೆ.

    2013ರಲ್ಲಿ ಮತ್ತೊಂದು 'ಒಮಿಕ್ರಾನ್' ಸಿನಿಮಾ

    2013ರಲ್ಲಿ ಮತ್ತೊಂದು 'ಒಮಿಕ್ರಾನ್' ಸಿನಿಮಾ

    2013ರಲ್ಲಿ 'ದಿ ವಿಸಿಟರ್ ಫ್ರಮ್ ಪ್ಲಾನೆಟ್ ಒಮಿಕ್ರಾನ್' ಅನ್ನುವ ಸಿನಿಮಾ ತೆರೆಕಂಡಿತ್ತು. ಈ ಬಾರಿ ಒಮಿಕ್ರಾನ್ ಅನ್ನೋ ಏಲಿಯನ್ ಭೂಮಿಗೆ ಕಾಲಿಟ್ಟಿತ್ತು. ತನ್ನೊಂದಿಗೆ ತಂದಿದ್ದ ವೈರಸ್‌ನಿಂದ ಪ್ರಪಂಚವನ್ನು ನಾಶ ಮಾಡಲು ಮುಂದಾಗಿತ್ತು. ಆದರೆ, ಆರಿಜೋನಾದಲ್ಲಿದ್ದ ಮಹಿಳೆ ತನ್ನ ತೋಟದಲ್ಲಿ ಬೆಳೆ ಸಸ್ಯಗಳಿಂದ ಏಲಿಯನ್ ಅನ್ನು ಸೋಲಿಸಿದ್ದಳು. ಇದು ಸಿನಿಮಾದ ಒಂದೆಳೆ ಕಥೆ. ಇದೊಂದು ಕಾಮಿಡಿ ಸಿನಿಮಾ ಆಗಿದ್ದು, ಅಮೆಜಾನ್ ಪ್ರೈಮ್‌ನಲ್ಲಿ ಲಭ್ಯವಿದೆ. ಇದ್ರೊಂದಿಗೆ 1999ರಲ್ಲಿ 'ಒಮಿಕ್ರಾನ್' ಅನ್ನೋ ವಿಡಿಯೋ ಗೇಮ್ ಕೂಡ ಫೇಮಸ್ ಆಗಿತ್ತು.

    ಹೊಸ ತಳಿಗೆ 'ಒಮಿಕ್ರಾನ್' ಹೆಸರೇಕೆ?

    ಹೊಸ ತಳಿಗೆ 'ಒಮಿಕ್ರಾನ್' ಹೆಸರೇಕೆ?

    ಹೊಸ ತಳಿ ಅನ್ವೇಷಣೆ ಆಗುತ್ತಿದ್ದಂತೆ, ಇದು ದೇಶದ ಹೆಸರನ್ನಿಟ್ಟು ಕರೆಯಲಾಗುತ್ತಿತ್ತು. ಈ ಕಾರಣಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ ಯಾರ ಭಾವನೆಗಳಿಗೂ ಧಕ್ಕೆಯಾಗಬಾರದೆಂದು, ಗ್ರೀಕ್ ಅಲ್ಫಾಬೆಟ್ ಅನ್ನು ಬಳಸುತ್ತಿದೆ. ಇದರಿಂದ ಗೊಂದಲ ನಿವಾರಣೆಯಾಗುತ್ತೆ ಅನ್ನುವುದು ವಿಶ್ವಸಂಸ್ಥೆಯ ಅಭಿಪ್ರಾಯ. ಈಗಾಗಲೇ ಡೆಲ್ಟಾ ಅನ್ನುವ ಹೆಸರನ್ನು ಇಡಲಾಗಿದೆ. ಗ್ರೀಕ್ ಭಾಷೆಯ 15ನೇ ಅಕ್ಷರ ಒಮಿಕ್ರಾನ್. ಹೀಗಾಗಿ ಈ ಹೆಸರನ್ನು ಇಡಲಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

    English summary
    Omicron was used as film titles for two films produced in 1963 and 2013. The posters of these films have started trending on the internet.
    Friday, December 3, 2021, 9:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X