Oscar Award 2024: ಆಸ್ಕರ್ ಪ್ರಶಸ್ತಿ ಸಮಾರಂಭದ ವೇಳೆ ಗಾಜಾ ಬೆಂಬಲಿಗರಿಂದ ಪ್ರತಿಭಟನೆ

ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಮಾರಂಭದ ಅದ್ಧೂರಿಯಾಗಿ ನಡೆದಿದೆ. ಆದರೆ, ಈ ಪ್ರಶಸ್ತಿ ಆರಂಭಕ್ಕೂ ಮುನ್ನ ಸಾವಿರಾರು ಮಂದಿ ಹಾಲಿವುಡ್‌ನ ಪ್ರಮುಖ ಏರಿಯಾದಲ್ಲಿ ಪ್ರತಿಭಟನೆಗೆ ಮುಂದಾಗಿದ್ದರು. ಆಸ್ಕರ್ ಅಂತಹ ಪ್ರಮುಖ ಪ್ರಶಸ್ತಿ ಸಮಾರಂಭದ ವೇಳೆ ಪ್ರತಿಭಟನಾಗಾರರು ಕಾರ್ಯಕ್ರಮದ ಆಯೋಜಕರಿಗೆ ದೊಡ್ಡ ತಲೆ ನೋವಾಗಿ ಪರಿಣಮಿಸಿದ್ದರು.

ಆಸ್ಕರ್ ಪ್ರಶಸ್ತಿ ಆರಂಭ ಆಗುವುದಕ್ಕೆ ಕೆಲವೇ ನಿಮಿಷಗಳು ಇರುವಾಗಲೇ ಪ್ರತಿಭಟನಾಗಾರರು ಹಾವಳಿ ಇಟ್ಟಿದ್ದರು. ಇದರಿಂದ ಸರಿಯಾದ ಸಮಯಕ್ಕೆ ಆರಂಭ ಆಗಬೇಕಿದ್ದ ಪ್ರಶಸ್ತಿ ಪ್ರಧಾನ ಸಮಾರಂಭ ಅಂದುಕೊಂಡಿದ್ದಕ್ಕಿಂತ ಐದು ನಿಮಿಷ ತಡವಾಗಿ ಆರಂಭ ಆಗಿತ್ತು.

Oscar Award 2024 Gaza supporters protest in a rally in Hollywood blocking traffic

ಇಸ್ರೇಲ್ ಮತ್ತು ಹಮಾಸ್ ನಡುವೆ ನಡುವೆ ಯುದ್ಧ ನಡೆಯುತ್ತಿದೆ. ಇದರನ್ನು ವಿರೋಧಿಸಿದ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಇಸ್ರೇಲ್ ಹಾಗೂ ಹಮಾಸ್ ನಡುವೆ ಕದನ ವಿರಾಮ ಘೋಷಿಸ ಬೇಕು ಎಂಬುದು ಪ್ರತಿಭಟನಾಗಾರರ ಬೇಡಿಕೆಯಾಗಿತ್ತು. ಈ ಸಂಬಂಧ ಸಾವಿರಾರು ಮಂದಿ ಫಲಕಗಳನ್ನು ಹಿಡಿದು ರಸ್ತೆಯನ್ನು ಬ್ಲಾಕ್ ಮಾಡಿದ್ದರು. ಇದರಿಂದ ಕೆಲ ಕಾಲ ಟ್ರಾಫಿಕ್ಸ್ ಸಮಸ್ಯೆ ಎದುರಾಗಿತ್ತು.

ಆಸ್ಕರ್ ಪ್ರಶಸ್ತಿ ಆರಂಭಕ್ಕೆ ಮೂರು ಗಂಟೆ ಮುಂಚೆ ಪ್ರತಿಭಟನಾಗಾರರು ಸ್ಥಳಕ್ಕೆ ಆಗಮಿಸಿದ್ದರು. ಬಳಿಕ ಪ್ಯಾಲೆಸ್ಟೀನ್‌ನ ಬಾವುಟ ಹಿಡಿದು ಘೋಷಣೆಗಳನ್ನು ಕೂಗುವುದಕ್ಕೆ ಆರಂಭಿಸಿದ್ದರು. ನಂತರ ಆಸ್ಕರ್ ಪ್ರಶಸ್ತಿ ನಡೆಯುವ ಸ್ಥಳ ಡಾಲ್ಬಿ ಥಿಯೇಟರ್‌ ಕಡೆಗೆ ಬರುವ ಪ್ರಮುಖ ದಾರಿಗಳನ್ನು ಬ್ಲಾಕ್ ಮಾಡಿರುವ ಬಗ್ಗೆ ವರದಿ ಮಾಡಲಾಗಿದೆ. ಇದರಿಂದ ಕೆಲ ಕಾಲ ಟ್ರಾಫಿಕ್ ಜಾಮ್ ಕೂಡ ಆಗಿತ್ತು ಎನ್ನಲಾಗಿದೆ.

ಡಾಲ್ಬಿ ಥಿಯೇಟರ್‌ನಿಂದ ಸುಮಾರು ಒಂದು ಮೈಲಿಯ ಅಂತರದಲ್ಲಿ ಪ್ಯಾಲೆಸ್ಟೀನ್ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆಂದು ಅಮೆರಿಕದ ಲಾಸ್ ಏಂಜಲೀಸ್ ಪೊಲೀಸರು ಮಾಹಿತಿ ನೀಡಿದ್ದಾರೆ. ಪೊಲೀಸರ ಪ್ರಕಾರ, ಸುಮಾರು 500 ರಿಂದ 700 ಮಂದಿ ಪ್ರತಿಭಟನಾಗಾರರು ಭಾಗವಹಿಸಿದ್ದರು. ಇಸ್ರೇಲ್ ಹಾಗೂ ಹಮಾಸ್ ನಡುವೆ ಕದನ ವಿರಾಮ ಘೋಷಿಸುವಂತೆ ಅಮೆರಿಕ ಒತ್ತಡ ಹೇರಬೇಕು ಎಂಬುವುದು ಅವರ ಬೇಡಿಕೆಯಾಗಿತ್ತು.

More from Filmibeat

English summary
Oscar Award 2024: Gaza supporters protest while Academy Awards ceremony.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X