Oscar Awards 2024: ಬೆಸ್ಟ್ ವಸ್ತ್ರ ವಿನ್ಯಾಸ ಪ್ರಶಸ್ತಿ ನೀಡಲು ಬೆತ್ತಲಾಗಿ ಬಂದ WWE ಸ್ಟಾರ್ ಜಾನ್ ಸೇನಾ

2024ನೇ ಸಾಲಿನ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಮಾರಂಭ ಪ್ರತಿ ವರ್ಷದಂತೆ ಅದ್ಧೂರಿಯಾಗಿ ನಡೆದಿದೆ. ಯುಎಸ್‌ಎಯ ಕ್ಯಾಲಿಫೋರ್ನಿಯಾದ ಡಾಲ್ಬಿ ಥಿಯೇಟರ್‌ನಲ್ಲಿ ಸಿನಿಮಾ ಜಗತ್ತಿನ ಅತ್ಯುನ್ನತ ಪ್ರಶಸ್ತಿಯನ್ನು ನೀಡಲಾಗಿದೆ. ಈ ವೇಳೆ ವೇದಿಕೆ ಮೇಲೆ WWE ಸ್ಟಾರ್ ಹಾಗೂ ಅಮೆರಿಕದ ನಟ ಜಾನ್ ಸೇನಾ ಬೆತ್ತಲೆಯಾಗಿ ವೇದಿಕೆಗೆ ಬಂದಿದ್ದಾರೆ.

ಪ್ರೊಫೆಷನಲ್ ಕುಸ್ತಿ ಪಟು ಜಾನ್ ಸೇನಾ ಆಸ್ಕರ್ ವೇದಿಕೆ ಮೇಲೆ ಪ್ರಶಸ್ತಿ ನೀಡುವುದಕ್ಕೆ ಬಂದಿದ್ದರು. ಆದರೆ, ವೇದಿಕೆ ಮೇಲೆ ಬೆತ್ತಲೆಯಾಗಿ ಬಂದು ಅಚ್ಚರಿ ಮೂಡಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸರಿ ತಪ್ಪುಗಳ ಬಗ್ಗೆ ಈಗಾಗಲೇ ಚರ್ಚೆ ಆರಂಭ ಆಗಿದೆ.

Oscar Awards 2024 WWE Superstar John Cena takes over the stage on Naked

ಜಾನ್ ಸೇನಾ ಆಸ್ಕರ್ ವೇದಿಕೆ ಮೇಲೆ 'ಪೂರ್ ಥಿಂಗ್ಸ್' ಸಿನಿಮಾಗೆ ಅತ್ಯುತ್ತಮ ವಸ್ತ್ರ ವಿನ್ಯಾಸ ಪ್ರಶಸ್ತಿಯನ್ನು ನೀಡಲು ಬಂದಿದ್ದರು. ಈ ವೇಳೆ ಆಸ್ಕರ್ ಪ್ರಶಸ್ತಿ ಸಮಾರಂಭದ ನಿರೂಪಕ ಜಿಮ್ಮಿ ಕಿಮ್ಮೆಲ್ ಅಲ್ಲಿ ನೆರೆದಿದ್ದವರಿಗೆ ಜಾನ್ ಸೇನಾ ಬೆತ್ತಲೆಯಾಗಿ ವೇದಿಕೆ ಮೇಲೆ ಬರುತ್ತಾರೆ ಎಂದು ಸುಳಿವು ನೀಡುತ್ತಿದ್ದರು. ಈ ವೇಳೆ ತೆರೆಮರೆಯಲ್ಲಿ ನಿಂತಿದ್ದ ಜಾನ್‌ ಸೇನಾ ನಿರೂಪಕರೊಂದಿಗೆ ಚರ್ಚೆ ಆರಂಭ ಮಾಡುತ್ತಾರೆ.

2024ರ ಆಸ್ಕರ್ ಪ್ರಶಸ್ತಿ ಸಮಾರಂಭದ ನಿರೂಪಕ ಜಿಮ್ಮಿ ಕಿಮ್ಮೆಲ್ " ಈ ವೇದಿಕೆ ಮೇಲೆ ವ್ಯಕ್ತಿಯೊಬ್ಬ ಬೆತ್ತಲೆಯಾಗಿ ಓಡುವುದನ್ನು ನೀವು ಕಲ್ಪನೆ ಮಾಡಿಕೊಳ್ಳಬಹುದೇ? ಅದು ಕ್ರೇಜಿಯಾಗಿರುತ್ತೆ ಅಲ್ಲವೇ? ಎಂದು ಪ್ರೇಕ್ಷಕರಿಗೆ ಪ್ರಶ್ನೆ ಮಾಡುತ್ತಾರೆ. ಇದೇ ವೇಳೆ WWE ಸ್ಟಾರ್ ಹಾಗೂ ಹಾಲಿವುಡ್ ನಟ ಜಾನ್ ಸೇನಾ ಎಂಟ್ರಿ ಆಗುತ್ತೆ. ನಿರೂಪಕ ಹಾಗೂ ಜಾನ್ ಸೇನಾ ನಡುವೆ ಸಂಭಾವಣೆ ಕೂಡ ನಡೆಯುತ್ತೆ.

ವೇದಿಕೆ ಮೇಲೆ ಬೆತ್ತಲೆಯಾಗಿ ಬರುವುದಕ್ಕೂ ಮುನ್ನ " ನಾನು ನನ್ನ ನಿರ್ಧಾರವನ್ನು ಬದಲಿಸಿಕೊಂಡಿದ್ದೇನೆ. ನಾನು ವೇದಿಕೆ ಮೇಲೆ ಬೆತ್ತಲೆಯಾಗಿ ಓಡಾಡುವುದಕ್ಕೆ ಇಷ್ಟ ಪಡುವುದಿಲ್ಲ. ಇದು ಸರಿಯಿಲ್ಲ ಅಂತ ಅನಿಸುತ್ತಿದೆ. ಇಂತಹ ಅದ್ಭುತವಾದ ಸಮಾರಂಭದಲ್ಲಿ ಬೆತ್ತಲಾಗಿ ಬರುವುದು ನಾಚಿಕೆಗೇಡು ಅಲ್ಲವೇ." ಎಂದು ನಿರೂಪಕನೊಂದಿಗೆ ಜಾನ್ ಸೇನಾ ಚರ್ಚೆ ಮಾಡುತ್ತಾರೆ.

ಇಬ್ಬರ ಸಂಭಾಷಣೆ ಬಳಿಕ ನಿರೂಪಕ ಹಿಡಿದುಕೊಂಡಿದ್ದ ಸ್ಟೋರಿ ಬೋರ್ಡ್ ಅನ್ನೇ ಮುಂದಿಟ್ಟುಕೊಂಡು ಬೆತ್ತಲೆಯಾಗಿ ವೇದಿಕೆ ಮೇಲೆ ಎಂಟ್ರಿ ಕೊಟ್ಟಿದ್ದಾರೆ. ಸದ್ಯ ಈ ವಿಡಿಯೋ ಹಾಗೂ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಕೆಲವರಿಂದ ಈಗಾಗಲೇ ಪರ ಹಾಗೂ ವಿರೋಧ ವ್ಯಕ್ತವಾಗುವುದಕ್ಕೆ ಶುರುವಾಗಿದೆ.

ಜಾನ್ ಸೇನಾ ಬೆತ್ತಲಾಗಿ ವೇದಿಕೆ ಮೇಲೆ ಬರುವುದು ಕಾರ್ಯಕ್ರಮದ ಒಂದು ಭಾಗವಾಗಿತ್ತು. ಇದಕ್ಕೆ ಜಾನ್ ಸೇನಾಗೆ ಉತ್ತಮ ಸಂಭಾವನೆಯನ್ನು ಕೂಡ ನೀಡಲಾಗಿದೆ ಎಂದು ಹಲವು ಹಾಲಿವುಡ್ ಸುದ್ದಿ ಬಿತ್ತರಿಸುವ ವೆಬ್‌ಸೈಟ್‌ಗಳು ವರದಿ ಮಾಡಿವೆ. ಆಸ್ಕರ್ ಪ್ರಶಸ್ತಿ ಸಮಾರಂಭದ ಇತಿಹಾಸದಲ್ಲಿ ಈ ಹಿಂದೆ ಕೂಡ ಇಂತಹ ಘಟನೆ ನಡೆದಿದೆ. 46ನೇ ಪ್ರಶಸ್ತಿ ಸಮಾರಂಭದಲ್ಲಿ ಅಂದ್ರೆ, 50 ವರ್ಷಗಳ ಹಿಂದೆ ಎಲಿಜಬೆತ್ ಟೈಲರ್ ಅನ್ನು ಡೆವಿಡ್ ನಿವೆಬ್ ಪರಿಚಯಿಸುವ ವೇಳೆ ವ್ಯಕ್ತಿಯೊಬ್ಬ ಬೆತ್ತಲೆಯಾಗಿ ಓಡಾಡಿದ್ದ ಘಟನೆ ನಡೆದಿತ್ತು.

More from Filmibeat

English summary
Oscar Awards 2024: John Cena goes naked on the stage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X