Oscar awards 2025 : ಹೇಗಿತ್ತು 97ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ? ಅತೀ ಹೆಚ್ಚು ಪ್ರಶಸ್ತಿ ಪಡೆದ ಚಿತ್ರ ಯಾವುದು ?

ಸಿನಿಮಾ ಕ್ಷೇತ್ರದ ಅತೀ ಶ್ರೇಷ್ಠ ಪ್ರಶಸ್ತಿ ಆಸ್ಕರ್. ಪ್ರತಿ ವರ್ಷದಂತೆ ಈ ಬಾರಿ ಕೂಡ ಆಸ್ಕರ್ ಪ್ರಶಸ್ತಿ ಸಮಾರಂಭ ಗ್ರ್ಯಾಂಡ್ ಆಗಿ ನಡೆಯುತ್ತಿದೆ. ವಿಶ್ವದ ಅತೀ ದೊಡ್ಡ ಪ್ರಶಸ್ತಿ ಸಮಾರಂಭದಲ್ಲಿ ಹಲವು ಸಿನಿಮಾಗಳು ವಿವಿಧ ಕ್ಯಾಟಗರಿಯಲ್ಲಿ ಆಯ್ಕೆಯಾಗಿವೆ. 97ನೇ ಅಕಾಡೆಮಿ ಅವಾರ್ಡ್ (ಆಸ್ಕರ್) ಅಮೆರಿಕದ ಲಾಸ್ ಏಂಜಲೀಸ್‌ನ ಗಾಲ್ಭಿ ಥಿಯೇಟರ್‌ನಲ್ಲಿ ನಡೆಯುತ್ತಿದೆ.

ಈ ಬಾರಿ ಆಸ್ಕರ್ ಪ್ರಶಸ್ತಿಯಲ್ಲಿ 23 ವಿಭಾಗಗಳಿವೆ. ಪ್ರತಿಯೊಂದು ಕ್ಯಾಟಗರಿಯಲ್ಲೂ ಐದು ನಾಮಿನೇಷನ್‌ಗಳು ಆಗಿವೆ. 20 ನಟ,ನಟಿಯರು ಈ ಪ್ರಶಸ್ತಿಗೆ ನಾಮಿನೇಟ್ ಆಗಿದ್ದರೆ, 53 ಸಿನಿಮಾಗಳನ್ನು ಪ್ರಶಸ್ತಿಗಾಗಿ ಸೆಣೆಸಾಡಲಿವೆ. ಇದರಲ್ಲಿ 5 ಮಂದಿ ನಿರ್ದೇಶಕರು, 5 ಅಂತರಾಷ್ಟ್ರೀಯ ಸಿನಿಮಾಗಳು ಆಯ್ಕೆ ಆಗಿದೆ. ಇವರಲ್ಲಿ ಯಾರಿಗೆ ಹೆಚ್ಚು ಪ್ರಶಸ್ತಿ ಅನ್ನೋದು ಕುತೂಹಲ.

Oscars award 2025 live updates Nominations full winners list and highlights

ಆಸ್ಕರ್ ಇತಿಹಾಸದಲ್ಲಿಯೇ ಇಂಗ್ಲಿಷ್ ಭಾಷೆ ಅಲ್ಲದ ಸಿನಿಮಾ ಅತೀ ಹೆಚ್ಚು ವಿಭಾಗದಲ್ಲಿ ನಾಮಿನೇಷನ್ ಆಗಿದೆ. ಫ್ರೆಂಚ್ ಭಾಷೆಯ ಸಿನಿಮಾ ಮ್ಯೂಸಿಕಲ್, ಕ್ರೈಂ ಸಿನಿಮಾ 'ಎಮಿಲಿಯಾ ಪರೇಜ್' ಸುಮಾರು 13 ಕ್ಯಾಟಗರಿಯಲ್ಲಿ ನಾಮಿನೇಟ್ ಆಗಿದೆ. 'ಎಮಿಲಿಯಾ ಪರೇಜ್' ಮೆಕ್ಸಿಕೋದ ಡ್ರಗ್ ಲೀಡರ್ ತನ್ನ ಕ್ರೈಂಗಳನ್ನು ಮರೆ ಮಾಚುವುದಕ್ಕೆ ಲಿಂಗ ಪರಿವರ್ತನೆಗೆ ಮುಂದಾಗುತ್ತಾನೆ. ಆತನ ಕಥೆಯನ್ನು ತೆರೆಮೇಲೆ ತರಲಾಗಿದ್ದು ವಿಶ್ವದ ಗಮನ ಸೆಳೆದಿದೆ. ನಂತರ 10 ವಿಭಾಗಗಳಲ್ಲಿ 'ದಿ ಬ್ರುಟಲಿಸ್ಟ್' ಸಿನಿಮಾ ಆಯ್ಕೆಯಾಗಿದೆ. 97ನೇ ಆಸ್ಕರ್ ಪ್ರಶಸ್ತಿ ಸಮಾರಂಭದ ಲೈವ್ ಅಪ್‌ಡೇಟ್ಸ್ ಇಲ್ಲಿದೆ.

  • Mar 3, 2025 9:15 AM
    ಅತ್ಯುತ್ತಮ ಸಿನಿಮಾ: 'ಅನೋರಾ'

    2025ನೇ ಸಾಲಿನ ಆಸ್ಕರ್ ಪ್ರಶಸ್ತಿ ಸಮಾರಂಭದ ಕೊನೆಯ ಅವಾಡ್ ಅತ್ಯುತ್ತಮ ಸಿನಿಮಾ. ಈ ವಿಭಾಗದಲ್ಲಿ 'ಅನೋರಾ' ಸಿನಿಮಾ ಗೆದ್ದುಕೊಂಡಿದೆ. ಈ ವರ್ಷದಲ್ಲಿ 'ಅನೋರಾ' ಅತ್ಯುತ್ತಮ ಸಿನಿಮಾ ಪ್ರಶಸ್ತಿ ಜೊತೆಗೆ ಐದು ಅವಾರ್ಡ್‌ಗಳನ್ನು ಗೆದ್ದುಕೊಂಡಿದೆ.

  • Mar 3, 2025 9:09 AM
    ಅತ್ಯುತ್ತಮ ನಟಿ: ಮೈಕಿ ಮ್ಯಾಡಿಸನ್ (ಅನೋರಾ)

    ಅತ್ಯುತ್ತಮ ನಿರ್ದೇಶಕ ವಿಭಾಗದಲ್ಲಿ 2025 ಆಸ್ಕರ್ ಪ್ರಶಸ್ತಿಯನ್ನು ಮೈಕಿ ಮ್ಯಾಡಿಸನ್ ಗೆದ್ದುಕೊಂಡಿದ್ದಾರೆ. 'ಅನೋರಾ' ಸಿನಿಮಾದಲ್ಲಿನ ಅದ್ಭುತ ನಟನೆಗೆ ಈ ಪ್ರಶಸ್ತಿ ಲಭಿಸಿದೆ.

  • Mar 3, 2025 9:02 AM
    ಅತ್ಯುತ್ತಮ ನಿರ್ದೇಶಕ: ಸೀನ್ ಬೇಕರ್ (ಅನೋರಾ)

    ಅತ್ಯುತ್ತಮ ನಿರ್ದೇಶಕ ವಿಭಾಗದಲ್ಲಿ 97ನೇ ಅಕಾಡೆಮಿ ಅವಾರ್ಡ್ ಅನ್ನು ಸೀನ್ ಬೇಕರ್ ಪಡೆದುಕೊಂಡಿದ್ದಾರೆ. 'ಅನೋರಾ' ಸಿನಿಮಾದ ನಿರ್ದೇಶನಕ್ಕಾಗಿ ಈ ಪ್ರಶಸ್ತಿ ಲಭಿಸಿದೆ. ಐದು ವರ್ಷವಿರುವಾಗ ತನ್ನ ತಾಯಿ ಸಿನಿಮಾವನ್ನು ಪರಿಚಯಿಸಿದರು. ಇಂದು ಅವರ ಬರ್ತ್‌ಡೇ. ಅದೇ ಆಸ್ಕರ್ ಪ್ರಶಸ್ತಿ ಬಂದಿದೆ ಎಂದು ವೇದಿಕೆ ಮೇಲೆ ಹೇಳಿದ್ದಾರೆ.

  • Mar 3, 2025 8:53 AM
    ಅತ್ಯುತ್ತಮ ನಟ: ಅಡ್ರಿಯನ್ ಬ್ರಾಡಿ (ದಿ ಬ್ರುಟಲಿಸ್ಟ್)

    2025ನೇ ಸಾಲಿನ ಆಸ್ಕರ್ ಪ್ರಶಸ್ತಿಯ ಅತ್ಯುತ್ತಮ ನಟ ವಿಭಾಗದಲ್ಲಿ ಬಾರೀ ಪೈಪೋಟಿಯಿತ್ತು. ಐದು ನಟರು ಈ ಪ್ರಶಸ್ತಿಗಾಗಿ ಸ್ಪರ್ಧೆ ಮಾಡಿದ್ದರು. ಅತ್ಯುತ್ತಮ ನಟ ಪ್ರಶಸ್ತಿಯನ್ನು 'ದಿ ಬ್ರುಟಲಿಸ್ಟ್' ಸಿನಿಮಾದ ನಟ ಅಡ್ರಿಯನ್ ಬ್ರಾಡಿ ಗೆದ್ದುಕೊಂಡಿದ್ದಾರೆ.

  • Mar 3, 2025 8:38 AM
    ಬೆಸ್ಟ್ ಒರಿಜಿನಲ್ ಸ್ಕೋರ್: ಡೆನಿಯಲ್ ಬ್ಲೂಮ್‌ಬರ್ಗ್ ( ದಿ ಬ್ರುಟಲಿಸ್ಟ್)

    ಈ ಬಾರಿಯ ಬೆಸ್ಟ್ ಒರಿಜಿನಲ್ ಸ್ಕೋರ್ ವಿಭಾಗದಲ್ಲಿ 'ದಿ ಬ್ರುಟಲಿಸ್ಟ್' ಸಿನಿಮಾ ಗೆದ್ದುಕೊಂಡಿದೆ. ಈ ಸಿನಿಮಾಗೆ ಡೆನಿಯಲ್ ಬ್ಲೂಮ್‌ಬರ್ಗ್ ಸಂಗೀತವನ್ನು ಸಂಯೋಜನೆ ಮಾಡಿದ್ದರು. ಇದು ಅವರ ಮೊದಲ ಪ್ರಶಸ್ತಿ.

  • Mar 3, 2025 8:30 AM
    ಅತ್ಯುತ್ತಮ ಅಂತರಾಷ್ಟ್ರೀಯ ಸಿನಿಮಾ: 'ಐ ಆಮ್ ಸ್ಟಿಲ್ ಹಿಯರ್'

    97ನೇ ಅಕಾಡೆಮಿ ಅವಾರ್ಡ್ ನಲ್ಲಿ ಅತ್ಯುತ್ತಮ ಅಂತರಾಷ್ಟ್ರೀಯ ಸಿನಿಮಾ ವಿಭಾಗದಲ್ಲಿ ಬ್ರೆಜಿಲ್‌ನ 'ಐ ಆಮ್ ಸ್ಟಿಲ್ ಹಿಯರ್' ಗೆದ್ದುಕೊಂಡಿದೆ.

  • Mar 3, 2025 8:26 AM
    ಅತ್ಯುತ್ತಮ ಛಾಯಾಗ್ರಹಣ: ಲೋಲ್ ಕ್ರಾಲಿ (ದಿ ಬ್ರುಟಲಿಸ್ಟ್)

    2025 ಆಸ್ಕರ್ ಪ್ರಶಸ್ತಿಯ ಛಾಯಾಗ್ರಹಣ ವಿಭಾಗದಲ್ಲಿ 'ದಿ ಬ್ರುಟಲಿಸ್ಟ್' ಸಿನಿಮಾದಲ್ಲಿನ ಕ್ಯಾಮರಾ ವರ್ಕ್‌ಗಾಗಿ ಲೋಲ್ ಕ್ರಾಲಿಗೆ ಈ ಪ್ರಶಸ್ತಿ ಲಭಿಸಿದೆ.

  • Mar 3, 2025 8:16 AM
    2025 ಆಸ್ಕರ್‌ನಲ್ಲಿ ಭಾರತಕ್ಕೆ ನಿರಾಸೆ

    ಈ ಬಾರಿ ಆಸ್ಕರ್ ಪ್ರಶಸ್ತಿಗೆ ಭಾರತದ ಏಕೈಕ ಸಿನಿಮಾ 'ಅನುಜ' ಎಂಟ್ರಿ ಕೊಟ್ಟಿತ್ತು. ಬೆಸ್ಟ್ ಲೈವ್ ಆಕ್ಷನ್ ಶಾರ್ಟ್ ಫಿಲ್ಮ್ ವಿಭಾಗದಲ್ಲಿ ಸ್ಪರ್ಧೆಗೆ ಇಳಿದಿತ್ತು. ಆದರೆ, ಪ್ರಶಸ್ತಿಯನ್ನು ಗೆಲ್ಲುವಲ್ಲಿ ಈ ಶಾರ್ಟ್‌ ಫಿಲ್ಮ್ ವಿಫಲವಾಗಿದೆ.

  • Mar 3, 2025 8:10 AM
    ಬೆಸ್ಟ್ ಲೈವ್ ಆಕ್ಷನ್ ಶಾರ್ಟ್ ಫಿಲ್ಮ್ : ಐ ಆಮ್ ನಾಟ್ ಎ ರೋಬೋಟ್

    97ನೇ ಅಕಾಡೆಮಿ ಅವಾರ್ಡ್‌ನ ಬೆಸ್ಟ್ ಲೈವ್ ಆಕ್ಷನ್ ಶಾರ್ಟ್ ಫಿಲ್ಮ್ ವಿಭಾಗದಲ್ಲಿ 'ಐ ಆಮ್ ನಾಟ್ ಎ ರೋಬೋಟ್' ಗೆದ್ದುಕೊಂಡಿದೆ. ಈ ವಿಭಾಗದಲ್ಲಿ ಪ್ರಿಯಾಂಕಾ ಚೋಪ್ರಾ ಅವರ 'ಅನುಜಾ' ಪೈಪೋಟಿಯಲ್ಲಿತ್ತು.

  • Mar 3, 2025 8:01 AM
    ಬೆಸ್ಟ್ ವಿಜ್ಯೂವಲ್ಸ್ ಎಫೆಕ್ಸ್ಟ್: 'ಡ್ಯೂನ್: ಪಾರ್ಟ್ 2'

    2025ನೇ ಸಾಲಿನ ಅತ್ಯುತ್ತಮ ವಿಜ್ಯೂವಲ್ಸ್ ಎಫೆಕ್ಟ್ಸ್ ವಿಭಾಗದಲ್ಲಿನ ಆಸ್ಕರ್ ಪ್ರಶಸ್ತಿ 'ಡ್ಯೂನ್: ಪಾರ್ಟ್ 2'ಗೆ ಲಭಿಸಿದೆ. ಪಾಲ್ ಲ್ಯಾಂಬರ್ಟ್, ಸ್ಟೀಫನ್ ಜೇಮ್ಸ್, ರೈಸ್ ಸಾಲ್ಕೊಂಬ್ ಮತ್ತು ಗೆರ್ಡ್ ನೆಫ್ಜರ್ ಬೆಸ್ಟ್ ವಿಜ್ಯೂವಲ್ಸ್ ಎಫೆಕ್ಟ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

  • Mar 3, 2025 7:59 AM
    ಬೆಸ್ಟ್ ಸೌಂಡ್: 'ಡ್ಯೂನ್: ಪಾರ್ಟ್ 2'

    97ನೇ ಅಕಾಡೆಮಿ ಅವಾರ್ಡ್ ಪ್ರಶಸ್ತಿಯನ್ನು ಅತ್ಯುತ್ತಮ ಸೌಂಡ್ ವಿಭಾಗದಲ್ಲಿ 'ಡ್ಯೂನ್: ಪಾರ್ಟ್ 2' ಗೆದ್ದುಕೊಂಡಿದೆ. ಗ್ಯಾರೆತ್ ಜಾನ್, ರಿಚರ್ಡ್ ಕಿಂಗ್, ರಾನ್ ಬಾರ್ಟ್ಲೆಟ್ ಮತ್ತು ಡೌಗ್ ಹೆಂಫಿಲ್ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

  • Mar 3, 2025 7:47 AM
    ಬೆಸ್ಟ್ ಡಾಕ್ಯೂಮೆಂಟರಿ ಫೀಚರ್ ಫಿಲ್ಮ್: 'ನೋ ಅದರ್ ಲ್ಯಾಂಡ್'

    97ನೇ ಆಸ್ಕರ್ ಪ್ರಶಸ್ತಿ ಸಮಾಂಭದಲ್ಲಿ ಬೆಸ್ಟ್ ಡಾಕ್ಯೂಮೆಂಟರಿ ಫೀಚರ್ ಫಿಲ್ಮ್ ವಿಭಾಗದಲ್ಲಿ 'ನೋ ಅದರ್ ಲ್ಯಾಂಡ್' ಗೆದ್ದುಕೊಂಡಿದೆ.

  • Mar 3, 2025 7:47 AM
    ಬೆಸ್ಟ್ ಡಾಕ್ಯೂಮೆಂಟರಿ ಶಾರ್ಟ್ ಫಿಲ್ಮ್:'ದಿ ಓನ್ಲಿ ಗರ್ಲ್ ಇನ್‌ ದಿ ಆರ್ಕೆಸ್ಟ್ರಾ'

    2025ನೇ ಸಾಲಿನ ಬೆಸ್ಟ್ ಡಾಕ್ಯೂಮೆಂಟರಿ ಶಾರ್ಟ್‌ ಫಿಲ್ಮ್ಸ್ ವಿಭಾಗದಲ್ಲಿ 'ದಿ ಓನ್ಲಿ ಗರ್ಲ್ ಇನ್‌ ದಿ ಆರ್ಕೆಸ್ಟ್ರಾ' ಫಿಲ್ಮ್ ಪ್ರಶಸ್ತಿ ಗೆದ್ದಿದೆ. ಮೋಲಿ ಒ'ಬ್ರೇನ್ ಮತ್ತು ಲಿಸಾ ರೆಮಿಂಗ್ಟನ್‌ಗೆ ಪ್ರಶಸ್ತಿ ಪಡೆದುಕೊಂಡಿದ್ದಾರೆ.

  • Mar 3, 2025 7:34 AM
    ಬೆಸ್ಟ್ ಒರಿಜಿನಲ್ ಸಾಂಗ್; "ಎಲ್ ಮಾಲ್"

    ಬೆಸ್ಟ್ ಒರಿಜಿನಲ್ ಸಾಂಗ್ ವಿಭಾಗದಲ್ಲಿ 97ನೇ ಅಕಾಡೆಮಿ ಅವಾರ್ಡ್ 'ಎಮಿಲಿಯಾ ಪೆರೇಜ್' ಸಿನಿಮಾದ "ಎಲ್‌ ಮಾಲ್" ಸಾಂಗ್ ಪಾಲಾಗಿದೆ. ಈ ಹಾಡಿಗೆ ಕ್ಲೆಮೆಂಟ್ ಡುಕೋಲ್ ಮತ್ತು ಕ್ಯಾಮಿಲ್ಲೆ ಸಂಗೀತ ನೀಡಿದ್ದರು. ಕ್ಲೆಮೆಂಟ್ ಡುಕೋಲ್, ಕ್ಯಾಮಿಲ್ಲೆ ಮತ್ತು ಜಾಕ್ವೆಸ್ ಆಡಿಯರ್ಡ್ ಸಾಹಿತ್ಯವನ್ನು ರಚಿಸಿದ್ದಾರೆ.

  • Mar 3, 2025 7:28 AM
    ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: 'ವಿಕೆಡ್'

    2025ನೇ ಸಾಲಿನ ಬೆಸ್ಟ್ ಪ್ರೊಡಕ್ಷನ್ ಡಿಸೈನ್ ಆಸ್ಕರ್ ಪ್ರಶಸ್ತಿ 'ವಿಕೆಡ್' ಸಿನಿಮಾ ಗೆದ್ದುಕೊಂಡಿದೆ. ನಾದನ್ ಕ್ರೌಲಿ ಮತ್ತು ಲೀ ಸ್ಯಾಂಡಲ್ಸ್ ಪಾಲಾಗಿದೆ. ಈ ಹಿಂದೆ ನಾದನ್ ಕ್ರೌಲಿ 7 ಬಾರಿ ಆಸ್ಕರ್‌ಗೆ ನಾಮಿನಿಯಾಗಿದ್ದರು. ಲೀ ಸ್ಯಾಂಡಲ್ಸ್ ಮೂರು ಬಾರಿ ನಾಮಿನಿ ಆಗಿದ್ದರು.

  • Mar 3, 2025 7:18 AM
    ಅತ್ಯುತ್ತಮ ಪೋಷಕ ನಟಿ: ಜೊಯಿ ಸಲ್ಡಾನಾ (ಎಮಿಲಿಯಾ ಪೆರೇಜ್)

    ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಜೊಯಿ ಸಲ್ಡಾನಾ ಪಾಲಾಗಿದೆ. 'ಎಮಿಲಿಯಾ ಪೆರೇಜ್' ಸಿನಿಮಾದ ಅತ್ಯುತ್ತಮ ನಟನೆಗಾಗಿ ಜೋಯಿಗೆ ಲಭಿಸಿದೆ. ಆಸ್ಕರ್ ಅನೌನ್ಸ್ ಆಗುತ್ತಿದ್ದಂತೆ ಭಾವುಕರಾದ ನಟಿ, ಈ ಪ್ರಶಸ್ತಿಯನ್ನು ಅಮ್ಮ, ಅಜ್ಜಿ ಹಾಗೂ ಕುಟುಂಬಕ್ಕೆ ಅರ್ಪಿಸಿದ್ದಾರೆ.

  • Mar 3, 2025 7:12 AM
    ಅತ್ಯುತ್ತಮ ಸಂಕಲನ: ಅನೋರಾ (ಸೀನ್ ಬೇಕರ್)

    ಅತ್ಯುತ್ತಮ ಸಂಕಲನ ವಿಭಾಗದಲ್ಲಿ 2025ನೇ ಸಾಲಿನ ಆಸ್ಕರ್ ಪ್ರಶಸ್ತಿಯನ್ನು 'ಅನೋರಾ' ಪಾಲಾಗಿದೆ. ಅನೋರಾದ ಸೀನ್ ಬೇಕರ್ ಗೆದ್ದುಕೊಂಡಿದ್ದಾರೆ. ದಿ ಬ್ರುಟಲಿಸ್ಟ್, ಕಾನ್‌ಕ್ಲೇವ್, ಎಮಿಲಿಯಾ ಪೆರೇಜ್, ವಿಕೆಡ್ ಪೈಪೋಟಿಯಲ್ಲಿ ಇದ್ದವು.

  • Mar 3, 2025 7:10 AM
    ಜೇಮ್ಸ್ ಬಾಂಡ್ ಸಿನಿಮಾಗೆ ಗೌರವ

    ಆಸ್ಕರ್ 2025 ಪ್ರಶಸ್ತಿ ಸಮಾರಂಭದಲ್ಲಿ ಜೇಮ್ಸ್ ಬಾಂಡ್ ಸಿನಿಮಾಗೆ ವಿಶೇಷ ಗೌರವ ಸಿಕ್ಕಿದೆ. ಜೇಮ್ಸ್ ಬಾಂಡ್ ಸಿನಿಮಾದ ನಟಿ ಹಾಲೆ ಬೆರ್ರಿ ಈ ಸೀರಿಸ್ ಅನ್ನು ಹಾಡಿ ಹೊಗಳಿದ್ದಾರೆ. ದಿ ಸಬ್‌ಸ್ಟೆನ್ಸ್ ಸಿನಿಮಾದ ನಟಿ ಮಾರ್ಗರೇಟ್ ಕ್ವಾಲಿ ಜೇಮ್ಸ್ ಬಾಂಡ್ ಸಿನಿಮಾದ ಥೀಮ್ ಸಾಂಗ್‌ಗೆ ಹೆಜ್ಜೆ ಹಾಕಿದ್ದರೆ.

  • Mar 3, 2025 6:55 AM
    ಬೆಸ್ಟ್ ಮೇಕಪ್ & ಹೇರ್‌ಸ್ಟೈಲಿಂಗ್: 'ದಿ ಸಬ್‌ಸ್ಟೆನ್ಸ್'

    ಅತ್ಯುತ್ತಮ ಮೇಕಪ್ & ಹೇರ್‌ಸ್ಟೈಲಿಂಗ್ ಪ್ರಶಸ್ತಿಯನ್ನು 'ದಿ ಸಬ್‌ಸ್ಟೆನ್ಸ್' ಸಿನಿಮಾದ ಪಿಯರೆ-ಒಲಿವಿಯರ್ ಪರ್ಸಿನ್, ಸ್ಟೆಫನಿ ಗಿಲ್ಲನ್ ಮತ್ತು ಮರ್ಲಿನ್ ಸ್ಕಾರ್ಸೆಲ್ಲಿ ಪಾಲಾಗಿದೆ.

  • Mar 3, 2025 6:46 AM
    ಬೆಸ್ಟ್ ಅಡಾಪ್ಟೆಡ್ ಸ್ಕ್ರೀನ್ ಪ್ಲೇ: ಪೀಟರ್ ಸ್ಟ್ರೌಘನ್ ( ಕಾನ್‌ಕ್ಲೇವ್)

    ಆಸ್ಕರ್ 2025ರ ಬೆಸ್ಟ್ ಅಡಾಪ್ಟೆಡ್ ಸ್ಕ್ರೀನ್ ಪ್ಲೇ ವಿಭಾಗದಲ್ಲಿ 'ಕಾನ್‌ಕ್ಲೇವ್' ಸಿನಿಮಾ ಪೀಟರ್ ಸ್ಟ್ರೌಘನ್ ಗೆದ್ದುಕೊಂಡಿದ್ದಾರೆ. ಈ ವಿಭಾಗದಲ್ಲಿ 'ಎ ಕಂಪ್ಲೀಟ್ ಅನ್‌ನೋನ್', 'ಎಮಿಲಿಯಾ ಪರೇಜ್', 'ಸಿಕೆಲ್ ಬಾಯ್ಸ್' , 'ಸಿಂಗ್ ಸಿಂಗ್' ಸಿನಿಮಾಗಳು ಪೈಪೋಟಿ ನೀಡಿದ್ದವು.

  • Mar 3, 2025 6:44 AM
    ಬೆಸ್ಟ್ ಒರಿಜಿನಲ್ ಸ್ಕ್ರೀನ್ ಪ್ಲೇ: ಸೀನ್ ಬೇಕರ್ (ಅನೋರಾ)

    'ಅನೋರಾ' ಸಿನಿಮಾದ ಲೇಖಕ ಸೀನ್ ಬೇಕರ್, 'ದಿ ಬ್ರುಟಲಿಸ್ಟ್' ಸಿನಿಮಾದ ಬ್ರಾಡಿ ಕಾರ್ಬೆಟ್, ಮೋನಾ ಫಾಸ್ಟ್‌ವೋಲ್ಡ್, 'ಎ ರಿಯಲ್ ಪೇನ್' ಸಿನಿಮಾದ ಜೆಸ್ಸಿ ಐಸೆನ್‌ಬರ್ಗ್, 'ಸೆಪ್ಟೆಂಬರ್ 5' ಸಿನಿಮಾದ ಮೊರಿಟ್ಜ್ ಬೈಂಡರ್, ಟಿಮ್ ಫೆಹ್ಲ್‌ಬಾಮ್ ಮತ್ತು ಕೋ ರೈಟರ್ ಅಲೆಕ್ಸ್ ಡೇವಿಡ್ , 'ದಿ ಸಬ್‌ಸ್ಟೆನ್ಸ್' ಸಿನಿಮಾದ ಕೊರಾಲಿ ಫಾರ್ಗೆಟ್ ಪೈಪೋಟಿಯಲ್ಲಿ ಇದ್ದರು.

  • Mar 3, 2025 6:31 AM
    ಅತ್ಯುತ್ತಮ ವಸ್ತ್ರ ವಿನ್ಯಾಸ: ಪಾಲ್ ಟೇಜ್‌ವೆಲ್

    'ದಿ ಕಂಪ್ಲೀಟ್ ಅನ್‌ನೋನ್' ಸಿನಿಮಾದ ಅರಿಯಾನ್ನೆ ಫಿಲಿಪ್ಸ್, 'ಕಾನ್‌ಕ್ಲೇವ್' ಸಿನಿಮಾದ ಲಿಸಿ ಕ್ರಿಸ್ಟಲ್, 'ಗ್ಲಾಡಿಯೇಟರ್ 2' ಸಿನಿಮಾದ ಜಾಂಟಿ ಯೆಟ್ಸ್ ಮತ್ತು ಡೇವ್ ಕ್ರಾಸ್‌ಮನ್, 'ನೊಸ್ಫೆರಾಟು' ಸಿನಿಮಾದ ಲಿಂಡಾ ಮುಯಿರ್, 'ವಿಕೆಡ್' ಸಿನಿಮಾದ ಪಾಲ್ ಟೇಜ್‌ವೆಲ್ ಈ ಐವರು ಆಸ್ಕರ್ ಪ್ರಶಸ್ತಿ ಗೆಲ್ಲುವುದಕ್ಕೆ ಪೈಪೋಟಿ ಮಾಡಿದ್ದರು. ಇದರಲ್ಲಿ ಆಸ್ಕರ್ ಪ್ರಶಸ್ತಿಯನ್ನು 'ವಿಕೆಡ್' ಸಿನಿಮಾದ ವಸ್ತ್ರ ವಿನ್ಯಾಸಕ ಪಾಲ್ ಟೇಜ್‌ವೆಲ್ ಪಾಲಾಗಿದೆ.

  • Mar 3, 2025 6:17 AM
    ಅತ್ಯುತ್ತಮ ಆನಿಮೇಷನ್ ಶಾರ್ಟ್ ಫಿಲ್ಮ್: ಇನ್‌ ದಿ ಶಾಡೋ ಆಫ್ ದಿ ಸೈಪ್ರೆಸ್‌

    ಅತ್ಯುತ್ತಮ ಆನಿಮೇಷನ್ ಶಾರ್ಟ್ ಫಿಲ್ಮ್ ಕ್ಯಾಟಗರಿಯಲ್ಲಿ 'ಇನ್‌ ದಿ ಶಾಡೋ ಆಫ್ ದಿ ಸೈಪ್ರೆಸ್‌' ಗೆದ್ದಿದೆ. ಈ ವಿಭಾಗದಲ್ಲಿ 'ಬ್ಯೂಟಿಫುಲ್ ಮೆನ್', 'ಮ್ಯಾಜಿಕ್ ಕ್ಯಾಂಡೀಸ್', 'ವಂಡರ್ ಟು ವಾಂಡರ್', 'ಯಕ್'

  • Mar 3, 2025 6:14 AM
    ಅತ್ಯುತ್ತಮ ಆನಿಮೇಷನ್ ಸಿನಿಮಾ: ಫ್ಲೋ

    2025ರ ಅತ್ಯುತ್ತಮ ಆನಿಮೆಷನ್ ಸಿನಿಮಾ ಪ್ರಶಸ್ತಿಯನ್ನು 'ಫ್ಲೋ' ಗೆದ್ದು ಕೊಂಡಿದೆ. ಸ್ಪರ್ಧೆಯಲ್ಲಿ ಇನ್‌ಸೈಡ್ ಔಟ್ 2, ಮೆಮೋರ್ ಆಫ್ ಎ ಸ್ನೈಲ್, ವ್ಯಾಲೇಸ್ & ಗ್ರೋಮಿಟ್: ವೆಂಜನ್ಸ್ ಮೋಸ್ಟ್ ಫೌಲ್, ದಿ ವೈಲ್ಡ್ ರೋಬೊಟ್ ಇತ್ತು. ಅದನ್ನು ಹಿಂದಿಕ್ಕಿ 'ಫ್ಲೋ' ಗೆದ್ದಿದೆ.

  • Mar 3, 2025 6:05 AM
    ಅತ್ಯುತ್ತಮ ಪೋಷಕ ನಟ: ಕೀರನ್ ಕಲ್ಕಿನ್

    ಆಸ್ಕರ್ 2025ರ ಮೊದಲ ಪ್ರಶಸ್ತಿ ಅನೌನ್ಸ್ ಆಗಿದೆ. ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಕೀರನ್ ಕಲ್ಕಿನ್ ಪಾಲಾಗಿದೆ. 'ಎ ರಿಯಲ್ ಪೈನ್' ಸಿನಿಮಾದ ಅತ್ಯುತ್ತಮ ನಟನೆಗೆ ಈ ಪ್ರಶಸ್ತಿ ಲಭಿಸಿದೆ. ಹಾಲಿವುಡ್‌ನ ಸೂಪಸ್ಟಾರ್‌ ಐರನ್ ಮ್ಯಾನ್ ಖ್ಯಾತಿಯ ರಾಬರ್ಟ್ ಡೌನಿ ಜೂನಿಯರ್ ಈ ಪ್ರಶಸ್ತಿಯನ್ನು ನೀಡಿದ್ದಾರೆ.

  • Mar 3, 2025 5:56 AM
    ಸಿಂಥಿಯಾ ಎರಿವೊ ಮತ್ತು ಅರಿಯಾನ ಗ್ರಾಂಡೆರಿಂದ ಶುಭಾರಂಭ

    ಪ್ರತಿಷ್ಠಿತ ಆಸ್ಕರ್ 2025 ಪ್ರಶಸ್ತಿ ಸಮಾರಂಭವನ್ನು ಸಿಂಥಿಯಾ ಎರಿವೊ ಮತ್ತು ಅರಿಯಾನ ಗ್ರಾಂಡೆ ತಮ್ಮ ಗಾಯನದ ಮೂಲಕ ಆರಂಭ ಮಾಡಿದ್ದಾರೆ. ಇವರ ಪರ್ಫಾಮೆನ್ಸ್‌ಗೆ ಸಿನಿಮಾ ಮಂದಿ ಎದ್ದು ನಿಂತು ಗೌರವ ಸೂಚಿಸಿದ್ದಾರೆ.

  • Mar 3, 2025 5:37 AM
    ಆಸ್ಕರ್ 2025 ಪ್ರಶಸ್ತಿ ಪ್ರಶಸ್ತಿ ಆರಂಭ

    ಸಿನಿಮಾ ಕ್ಷೇತ್ರದಲ್ಲಿ ನೀಡಲಾಗುವ ಜಗತ್ತಿನ ಅತ್ಯಂತ ಶ್ರೇಷ್ಠ ಪ್ರಶಸ್ತಿ ಆಸ್ಕರ್ ಸಮಾರಂಭ ಶುಭಾರಂಭಗೊಂಡಿದೆ. ಗಾಯಕಿಯರು ಆಸ್ಕರ್ ಪ್ರಶಸ್ತಿ ಸಮಾರಂಭವನ್ನು ಶುಭಾರಂಭ ಮಾಡಿದ್ದಾರೆ. ಹಾಸ್ಯದ ಮೂಲಕ ಶೋ ಆರಂಭಿಸಿದ ನಿರೂಪಕ ಕಾನನ್ ಒ'ಬ್ರೇನ್

  • Mar 3, 2025 5:35 AM
    ಆಸ್ಕರ್‌ಗೆ ಎಂಟ್ರಿ ಕೊಟ್ಟ ಸೆಲೆನಾ ಗೋಮ್ಜ್

    ಸೆಲೆನಾ ಗೋಮ್ಜ್ ಹಾಗೂ ಅವರ ಭಾವಿ ಪತಿ ಫಿಯಾನ್ಸ್ ಬೆನ್ನಿ ಬ್ಲಾಂಕೋ ಆಸ್ಕರ್ 2025 ರೆಡ್ ಕಾರ್ಪೆಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಫ್ ಶೋಲ್ಡರ್ ಗೌನ್‌ನಲ್ಲಿ ನಟಿ ಹಾಗೂ ಗಾಯಕಿ ಕಾಣಿಸಿಕೊಂಡಿದ್ದಾರೆ.

  • Mar 3, 2025 5:27 AM
    ಈ ಬಾರಿಯ ವಿವಾದಕ್ಕೆ ಸಿಲುಕಿದ ಆಸ್ಕರ್

    ಈ ಬಾರಿ ಆಸ್ಕರ್‌ಗೆ ನಾಮ ನಿರ್ದೇಶನಗೊಂಡ ಸಿನಿಮಾ ಮತ್ತು ನಟರು ಈ ಬಾರಿ ವಿವಾದಕ್ಕೀಡಾಗಿದ್ದಾರೆ. ಅತ್ಯುತ್ತಮ ನಾಯಕಿ ಪ್ರಶಸ್ತಿಗೆ ಕರ್ಲಾ ಸೋಫಿಯಾ ಗಾಸ್ಕೋನ್ ನಾಮ ನಿರ್ದೇಶನಗೊಂಡಿದ್ದಾರೆ. ವಿಶೇಷ ಅಂದರೆ ಇವರು ತೃತಿಯ ಲಿಂಗಿ. ಹೀಗಾಗಿ ಪ್ರಪ್ರಥಮ ಬಾರಿಗೆ ಲಿಂಗತ್ವ ಅಲ್ಪಸಂಖ್ಯಾತ ನಟಿ ಆಸ್ಕರ್ ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ಧಾರೆ. ಈ ಹಿಂದೆ ಕರ್ಲಾ ಜನಾಂಗೀಯ ನಿಂದನೆ ಕುರಿತು ಮಾಡಿದ್ದ ಟ್ವಿಟ್‌ಗಳು ಮತ್ತೆ ಮುನ್ನೆಲೆಗೆ ಬಂದಿವೆ. ತಮ್ಮ ಈ ಫೋಸ್ಟ್‌ಗಳಿಗೆ ಅವತ್ತು ವ್ಯಾಪಕ ಠೀಕೆ ವ್ಯಕ್ತವಾದ ಹಿನ್ನೆಲೆ ಕರ್ಲಾ ಕ್ಷಮೆ ಕೇಳಿದ್ದರೂ ಕೂಡ ಜನರ ಕೋಪ ಕಡಿಮೆಯಾಗಿಲ್ಲ. ಹಾಗೇ ದಿ ಬ್ರೂಟ್ ಲಿಸ್ಟ್ ಚಿತ್ರ ಅತ್ಯುತ್ತಮ ಚಿತ್ರ ವಿಭಾಗದಲ್ಲಿದೆ. ಆದರೆ ಈ ಚಿತ್ರದಲ್ಲಿ ಪ್ರಮುಖ ಪಾತ್ರಧಾರಿಗಳನ್ನು ಎಐ ಮೂಲಕ ತಿರುಚಲಾಗಿದೆ ಎನ್ನುವ ಆರೋಪವನ್ನು ಮಾಡಲಾಗಿದೆ.

  • Mar 3, 2025 5:23 AM
    ಕಾನನ್ ಒ'ಬ್ರೇನ್ ನಿರೂಪಣೆ

    ಈ ಬಾರಿ ಆಸ್ಕರ್ ಪ್ರಶಸ್ತಿಯನ್ನು ಕಾನನ್ ಒ'ಬ್ರೇನ್ ನಿರೂಪಣೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮ ಎಕ್ಸ್ ಖಾತೆಯಲ್ಲಿ ಅವರದ್ದೇ ಫೋಟೊವೊಂದನ್ನು ಹಂಚಿಕೊಂಡಿದ್ದು, ತಮ್ಮನ್ನು ತಾವು ತಮಾಷೆ ಮಾಡಿಕೊಂಡಿದ್ದಾರೆ.

  • Mar 3, 2025 5:18 AM
    ಅತ್ಯುತ್ತಮ ನಟಿಯ ಲಿಸ್ಟ್

    ಸಿಂಥಿಯಾ ಎರಿವೊ (ವಿಕೆಡ್‌) ಕಾರ್ಲಾ ಸೋಫಿಯಾ ಗ್ಯಾಸ್ಕಾನ್ (ಎಮಿಲಿಯಾ ಪೆರೆಜ್‌) ಮೈಕಿ ಮ್ಯಾಡಿಸನ್ (ಅನೋರಾ) ಡೆಮಿ ಮೂರ್ (ದಿ ಸಬ್‌ಸ್ಟೆನ್ಸ್‌) ಫರ್ನಾಂಡಾ ಟೊರೆಸ್ (ಐ ಆಮ್ ಸ್ಟಿಲ್ ಹಿಯರ್‌)

  • Mar 2, 2025 11:48 PM
    ಅತ್ಯುತ್ತಮ ನಟ ಲಿಸ್ಟ್

    ಆಡ್ರಿಯನ್ ಬ್ರಾಡಿ (ದಿ ಬ್ರೂಟಲಿಸ್ಟ್) ತಿಮೋತಿ ಚಲಮೆಟ್ (ಎ ಕಂಪ್ಲೀಟ್ ಅನ್‌ನೋನ್‌) ಕೋಲ್ಮನ್ ಡೊಮಿಂಗೊ (ಸಿಂಗ್ ಸಿಂಗ್) ರಾಲ್ಫ್ ಫಿಯೆನ್ನೆಸ್ (ಕಾನ್‌ಕ್ಲೇವ್) ಸೆಬಾಸ್ಟಿಯನ್ ಸ್ಟಾನ್ (ದಿ ಅಪ್ರೆಂಟಿಸ್)

  • Mar 2, 2025 11:48 PM
    ಅತ್ಯುತ್ತಮ ನಿರ್ದೇಶಕರ ಲಿಸ್ಟ್

    ಸೀನ್ ಬೇಕರ್ (ಅನೋರಾ) ಬ್ರಾಡಿ ಕಾರ್ಬೆಟ್ (ದಿ ಬ್ರೂಟಲಿಸ್ಟ್) ಲುಕಾ ಗ್ವಾಡಾಗ್ನಿನೊ ( ಎ ಕಂಪ್ಲೀಟ್ ಅನ್‌ನೋನ್) ಜಾಕ್ವೆಸ್ ಆಡಿಯಾರ್ಡ್ ( ಎಮಿಲಿಯಾ ಪೆರೆಜ್) ಡೆನಿಸ್ ವಿಲ್ಲೆನ್ಯೂವ್ (ಡ್ಯೂನ್:ಪಾರ್ಟ್ 2)

  • Mar 2, 2025 11:48 PM
    ನಾಮಿನೇಷನ್ ಲಿಸ್ಟ್‌ನಲ್ಲಿ 10 ಅತ್ಯುತ್ತಮ ಸಿನಿಮಾಗಳು

    1 ಅನೋರಾ 2 ದಿ ಬ್ರುಟಲಿಸ್ಟ್ 3 ಎ ಕಂಪ್ಲೀಟ್ ಅನ್‌ನೋನ್ 4 ಕಾನ್‌ಕ್ಲೇವ್ 5 ಡ್ಯೂನ್: ಪಾರ್ಟ್ 2 6 ಎಮಿಲಿಯಾ ಪರೇಜ್ 7 ಐಮ್ ಸ್ಟಿಲ್ ಹೀಯರ್ 8 ನಿಕೆಲ್ ಬಾಯ್ಸ್ 9 ದಿ ಸಬ್‌ಸ್ಟೆನ್ಸ್ 10 ವಿಕೆಡ್

More from Filmibeat

English summary
Oscars award 2025 live updates about full winners list and highlights
Read more about: oscars 2025 winners awards
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X