ಜನಪ್ರಿಯ 'ಹ್ಯಾರಿ ಪಾಟರ್' ಸಿನಿಮಾದ ನಟಿ ಮ್ಯಾಗಿ ಸ್ಮಿತ್ ನಿಧನ: ಆಸ್ಕರ್ ಗೆದ್ದ ನಟಿಯ ಸಾವಿಗೇನು ಕಾರಣ?

ಹಾಲಿವುಡ್‌ನ ಜನಪ್ರಿಯರ ಸಿನಿಮಾ 'ಹ್ಯಾರಿ ಪಾಟರ್'ನಲ್ಲಿ ನಟಿಸಿದ್ದ ನಟಿ ಮ್ಯಾಗಿ ಸ್ಮಿತ್ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು ಎಂದು ಹಿರಿಯ ನಟಿಯ ಸಹಾಯಕಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆಸ್ಕರ್ ಪ್ರಶಸ್ತಿ ಗೆದ್ದಿದ್ದ ಈ ಹಿರಿಯ ನಟಿ ಹಾಲಿವುಡ್‌ನ ಹಲವು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿದ್ದರು.

1969ರಲ್ಲಿ ಈ ನಟಿ 'ದಿ ಪ್ರೈಮ್ ಆಫ್ ಮಿಸ್ ಜೀನ್ ಬ್ರಾಡಿ' ಸಿನಿಮಾದಲ್ಲಿನ ನಟನೆಗಾಗಿ ಆಸ್ಕರ್ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದ್ದರು. 2001 ರಿಂದ 2011ರವರೆಗೆ ಬಂದ ಸಿನಿಮಾ ಸರಣಿ 'ಹ್ಯಾರಿ ಪಾಟರ್' ಮೂಲಕ ಇಂದಿನ ಯುವ ಪೀಳಿಗೆಗೆ ಇಷ್ಟ ಆಗಿದ್ದರು. ಈ ಸಿನಿಮಾ ಪ್ರೋಫೆಸರ್ ಮಿನರ್ವಾ ಮೆಕ್ಗೊನಾಗಲ್ ಪಾತ್ರವನ್ನು ಮ್ಯಾಗಿ ಸ್ಮಿತ್ ನಿಭಾಯಿಸಿದ್ದರು. ಇದರೊಂದಿಗೆ ಬ್ರಿಟಿಷ್ ಡ್ರಾಮ 'ಡೌನ್‌ಟೌನ್ ಅಬ್ಬೆ' ಸಿನಿಮಾ ಮೂಲಕವೂ ಗಮನ ಸೆಳೆದಿದ್ದರು.

Oscar Winning and Harry Potter Actress Maggie Smith Passes Away At 89

ಮ್ಯಾಗಿ ಸ್ಮಿತ್ ನಿಧನದ ಬಗ್ಗೆ ಇಬ್ಬರು ಮಕ್ಕಳು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ. ಶುಕ್ರವಾರ (ಸೆಪ್ಟೆಂಬರ್ 27) ಲಂಡನ್‌ ಆಸ್ಪತ್ರೆಯಲ್ಲಿ ಮ್ಯಾಗಿ ಸ್ಮಿತ್ ನಿಧನರಾಗಿದ್ದಾರೆ ಎಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. "ಮ್ಯಾಗಿ ಸ್ಮಿತ್ ಅವರು ಇಬ್ಬರು ಹಾಗೂ ಐದು ಮಂದಿ ಮೊಮ್ಮಕ್ಕಳನ್ನು ಅಗಲಿದ್ದಾರೆ. ಅಜ್ಜಿಯ ಸಾವಿನಿಂದ ಮಕ್ಕಳು ಹಾಗೂ ಮೊಮ್ಮಕ್ಕಳು ದು:ಖ ಭರಿತರಾಗಿದ್ದಾರೆ" ಎಂದು ಮಾಧ್ಯಮಗಳಿಗೆ ಹೇಳಿಕೆಯನ್ನು ಕೊಟ್ಟಿದ್ದಾರೆ.

ಜನಪ್ರಿಯ ನಟಿ ಮ್ಯಾಗಿ ಸ್ಮಿತ್ ಸುಮಾರು 50 ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 60ರ ದಶಕದಿಂದ ಸಿನಿಮಾಗಳಲ್ಲಿ ನಟಿಸುವುದಕ್ಕೆ ಆರಂಭಿಸಿದ್ದ ಬ್ರಿಟಿಷ್ ನಟಿ ಮ್ಯಾಗಿ ಸ್ಮಿತ್ ಹಲವು ಜನಪ್ರಿಯ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. ಇವರ ವೃತ್ತಿ ಬದುಕಿನಲ್ಲಿ ಎರಡು ಆಸ್ಕರ್ ಪ್ರಶಸ್ತಿಗಳು ಲಭಿಸಿವೆ. 1969ರಲ್ಲಿ 'ದಿ ಪ್ರೈಮ್ ಆಫ್ ಮಿಸ್ ಜೀನ್ ಬ್ರಾಡಿ' ಸಿನಿಮಾಗೆ ಮೊದಲನೇ ಆಸ್ಕರ್ ಗಿಟ್ಟಿಸಿಕೊಂಡರೆ, 1978ರಲ್ಲಿ 'ಕ್ಯಾಲಿಪೋರ್ನಿಯಾ ಸೂಟ್' ಸಿನಿಮಾ ಮತ್ತೊಂದು ಆಸ್ಕರ್ ಪ್ರಶಸ್ತಿ ಬಂದಿತ್ತು.

ಡಿಸೆಂಬರ್ 28, 1938ರಂದು ಇಂಗ್ಲೆಂಡಿನ ಎಸ್ಸೆಕ್ಸ್‌ನಲ್ಲಿ ಜನಿಸಿದ ನಟಿ ಸುಮಾರು ಏಳು ದಶಕಗಳ ಕಾಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಷ್ಟು ಸುದೀರ್ಘ ವರ್ಷಗಳಲ್ಲಿ ನಟಿಗೆ ಸಿಕ್ಕ ಪ್ರಶಸ್ತಿಗಳೇನು ಕಮ್ಮಿಯಿಲ್ಲ. ಎರಡು ಆಸ್ಕರ್ ಪ್ರಶಸ್ತಿ, ಐದು BAFTA ಪ್ರಶಸ್ತಿ, ನಾಲ್ಕು ಎಮ್ಮಿ ಪ್ರಶಸ್ತಿ, ಮೂರು ಗೋಲ್ಡನ್ ಗ್ಲೋಬ್, ಟೋನಿ ಪ್ರಶಸ್ತಿಗಳು ಲಭಿಸಿವೆ. ಇಷ್ಟೇ ಅಲ್ಲದೆ, ಹಾಲಿವುಡ್‌ನಲ್ಲಿ ಇವರನ್ನು 'ಟ್ರಿಪಲ್ ಕ್ರೌನ್ ಆಫ್ ಆಕ್ಟಿಂಗ್‌' ಗೌರವಕ್ಕೂ ಪಾತ್ರರಾಗಿದ್ದಾರೆ. ಆಸ್ಕರ್, ಎಮ್ಮಿ, ಗೋಲ್ಡನ್ ಗ್ಲೋಬ್ ಅಂತ ವಿಶ್ವದ ಶ್ರೇಷ್ಠ ಪ್ರಶಸ್ತಿಗಳನ್ನು ಹೆಚ್ಚು ಬಾರಿ ಕೇವಲ ನಟನಾ ವಿಭಾಗದಲ್ಲಿ ಪಡೆದವರಿಗೆ ಅಮೆರಿಕ ಸಿನಿಮಾದಲ್ಲಿ ಈ ಗೌರವವನ್ನು ಕೊಡುತ್ತಾರೆ.

ಮೊದಲು ರಂಗಭೂಮಿಯಿಂದ ವೃತ್ತಿಯನ್ನು ಆರಂಭಿಸಿದ್ದ ಮ್ಯಾಗಿ ಸ್ಮಿತ್ ಬಳಿಕ ಸಿನಿಮಾದಲ್ಲಿ ನಟಿಸುವುದಕ್ಕೆ ಆರಂಭಿಸಿದ್ದರು. 17ನೇ ವಯಸ್ಸಿಗೆ ನಟನೆಗಿಳಿದ ನಟಿ ಸುಮಾರು 1952 ರಿಂದ 1968ರವರೆಗೂ ರಂಗಭೂಮಿಯಲ್ಲಿ ಹೆಚ್ಚು ಸಕ್ರಿಯರಾಗಿದ್ದರು. ಹಾಗೇ ಕಿರುತೆರೆಯಲ್ಲೂ ಕಾಣಿಸಿಕೊಳ್ಳುವುದಕ್ಕೆ ಶುರು ಮಾಡಿದ್ದರು. ಇಲ್ಲಿಂದ ಅವರ ನಟನೆ ಮೆಚ್ಚುಗೆ ವ್ಯಕ್ತವಾಗಿತ್ತು. ಬಿಡುವಿಲ್ಲದೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುವುದಕ್ಕೆ ಆರಂಭಿಸಿದರು. ಸುಮಾರು ಏಳು ದಶಕಗಳ ಕಾಲ ಕಲಾ ಸೇವೆ ಮಾಡಿ 89ನೇ ವಯಸ್ಸಿನಲ್ಲಿ ಇಹಲೋಕವನ್ನು ತ್ಯಜಿಸಿದ್ದಾರೆ.

More from Filmibeat

English summary
Oscar Winning actress and Harry Potter Actress Maggie Smith Passes Away At 89:
Read more about: hollywood death filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X