93ನೇ ಆಸ್ಕರ್ ಅಕಾಡೆಮಿ ಸಮಾರಂಭ ಏಪ್ರಿಲ್ 25ಕ್ಕೆ ಮುಂದೂಡಿಕೆ

ಚಿತ್ರರಂಗದ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಏಪ್ರಿಲ್‌ಗೆ ಮುಂದೂಡಲಾಗಿದೆ. ಈ ರೀತಿ ಆಸ್ಕರ್ ಅವಾರ್ಡ್ಸ್ ಮುಂದಕ್ಕೆ ಹೋಗುತ್ತಿರುವುದು ಇತಿಹಾಸದಲ್ಲಿ ಇದು ನಾಲ್ಕನೆಯ ಬಾರಿ. ಆದರೆ ಇಷ್ಟು ಸುದೀರ್ಘ ಸಮಯ ಎಂದೂ ಮುಂದೂಡಿಕೆಯಾಗಿರಲಿಲ್ಲ.

Recommended Video

ಶ್ರುತಿ ಹಾಸನ್ ಬೇಡಿಕೆ ಕೇಳಿ ಬೆಚ್ಚಿಬಿದ್ದ ನಿರ್ಮಾಪಕ | Shruthi Hassan

93ನೇ ಅಕಾಡೆಮಿ ಅವಾರ್ಡ್ಸ್ 2021ರ ಏಪ್ರಿಲ್ 25ರಂದು ನಡೆಯಲಿದೆ ಎಂದು ದಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಆಂಡ್ ಸೈನ್ಸಸ್ ಮತ್ತು ಎಬಿಸಿ ಟೆಲಿವಿಷನ್ ನೆಟ್‌ವರ್ಕ್ ಸೋಮವಾರ ತಿಳಿಸಿವೆ. ಈ ಮೊದಲು ನಿಗದಿಪಡಿಸಿದ್ದ ದಿನಾಂಕದಿಂದ ಎಂಟು ವಾರಗಳ ನಂತರ ಕಾರ್ಯಕ್ರಮ ಆಯೋಜಿಸಲಾಗಿದೆ.

ಇದರ ಜತೆಗೆ ಆಸ್ಕರ್‌ಗೆ ಸ್ಪರ್ಧಿಸುವ ಫೀಚರ್ ಫಿಲಂಗಳ ಅರ್ಹತೆಯ ಅವಧಿಯನ್ನೂ 2021ರ ಫೆ. 28ರವರೆಗೆ ವಿಸ್ತರಿಸಲು ಅಕಾಡೆಮಿ ಬೋರ್ಡ್ ಆಫ್ ಗವರ್ನರ್ಸ್. ಹಾಗೆಯೇ ಡಿಸೆಂಬರ್‌ನಲ್ಲಿ ತೆರೆಯಲು ಉದ್ದೇಶಿಸಿದ್ದ ಅಕಾಡೆಮಿ ಮ್ಯೂಸಿಯಂ ಆಫ್ ಮೋಷನ್ ಪಿಕ್ಚರ್ಸ್ ಅನ್ನು ಕೂಡ 2021ರ ಏಪ್ರಿಲ್ 30ರವರೆಗೆ ಮುಂದೂಡಲಾಗಿದೆ.

 Oscars 2021 Postponed To April 25 Due To Coronavirus Pandemic

ಆಸ್ಕರ್ ಈ ಹಿಂದೆ ಹೀಗೆ ಮುಂದೂಡಿದ್ದ ಪ್ರಸಂಗ 1981ರಲ್ಲಿ ನಡೆದಿತ್ತು. ಆಗ ಅಧ್ಯಕ್ಷ ರೊನಾಲ್ಡ್ ರೇಗಾನ್ ಅವರ ಹತ್ಯೆ ಪ್ರಯತ್ನ ನಡೆದಿದ್ದರಿಂದ 24 ಗಂಟೆ ತಡವಾಗಿ ನಡೆದಿತ್ತು. 1938ರಲ್ಲಿ ಲಾಸ್ ಏಂಜಲಿಸ್‌ನಲ್ಲಿ ನೆರೆ ಬಂದಿದ್ದಾಗ ಮತ್ತು 1968ರಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಹತ್ಯೆ ನಡೆದಿದ್ದಾಗ ಆಸ್ಕರ್ ಮುಂದೂಡಿಕೆಯಾಗಿತ್ತು.

ಆಸ್ಕರ್‌ಗೆ ಪ್ರಯತ್ನಿಸುವ ಸಿನಿಮಾಗಳಿಗೆ ಹೆಚ್ಚಿನ ಕಾಲಾವಕಾಶ ದೊರಕಿದೆ. 2020ರ ಜನವರಿ 1ರಿಂದ 2021ರ ಫೆ. 28ರವರೆಗೆ ಬಿಡುಗಡೆಯಾದ ಫೀಚರ್ ಫಿಲಂಗಳು ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ.

ವಿಶೇಷ ವಿಭಾಗದಲ್ಲಿ, ಅಂದರೆ ಅನಿಮೇಟೆಡ್ ಫೀಚರ್ ಫಿಲಂ, ಡಾಕ್ಯುಮೆಂಟರಿ ಫೀಚರ್, ಡಾಕ್ಯುಮೆಂಟರಿ ಶಾರ್ಟ್ ಸಬ್ಜೆಕ್ಟ್, ಇಂಟರ್‌ನ್ಯಾಷನಲ್ ಫೀಚರ್ ಫಿಲಂ, ಅನಿಮೇಟೆಡ್ ಶಾರ್ಟ್ ಫಿಲಂ ಮತ್ತು ಲೈವ್ ಆಕ್ಷನ್ ಶಾರ್ಟ್ ಫಿಲಂಗಳಿಗೆ 2020ರ ಡಿ. 1 ಅಂತಿಮ ದಿನಾಂಕವಾಗಿದೆ.

ಬೆಸ್ಟ್ ಪಿಕ್ಚರ್, ಒರಿಜಿನಲ್ ಸ್ಕೋರ್, ಒರಿಜಿನಲ್ ಸಾಂಗ್ ಮುಂತಾದ ಸಾಮಾನ್ಯ ಪ್ರವೇಶ ವಿಭಾಗದಲ್ಲಿ ಸಲ್ಲಿಕೆಗೆ ಜನವರಿ 15, 2021 ಕೊನೆಯ ದಿನಾಂಕವಾಗಿದೆ.

More from Filmibeat

English summary
The 93rd Oscars have been postponed to 25 April, 2021, eight weeks later thank originally planned.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X