Oscars 2023: ಭಾರತಕ್ಕೆ ಆಸ್ಕರ್ ಪ್ರಶಸ್ತಿ: ಪಿಸುಗುಟ್ಟಿದ 'ದಿ ಎಲಿಫೆಂಟ್ ವಿಸ್ಪರರ್ಸ್'
ಇಡೀ ವಿಶ್ವವೇ ಈ ದಿನಕ್ಕೆ ಕಾದು ಕೂತಿತ್ತು. ಅದರಲ್ಲಿ ಭಾರತ ಕೂಡ ಒಂದು. ಆಸ್ಕರ್ ಪ್ರಶಸ್ತಿಯ ನಾಲ್ಕು ವಿವಿಧ ವಿಭಾಗಗಳಲ್ಲಿ ಭಾರತ ಪೈಪೋಟಿ ಮಾಡುತ್ತಿತ್ತು. ಅಮೆರಿಕದ ಲಾಸ್ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಇಡೀ ವಿಶ್ವವೇ ಸೇರಿದೆ. ಭಾರತೀಯ ಕಾಲಮಾನ ಪ್ರಕಾರ ಬೆಳಗ್ಗೆ 5.30ಕ್ಕೆ ಕಾರ್ಯಕ್ರಮ ಅರಂಭವಾಗಿದೆ.
95ನೇ ಆಸ್ಕರ್ ಸಮಾರಂಭದಲ್ಲಿ ಭಾರತ ಮೊದಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಕಾರ್ತಿಕಿ ಗೊನ್ಸಾಲ್ವಿಸ್ ನಿರ್ದೇಶಿಸಿದ ಶಾರ್ಟ್ ಡಾಕ್ಯೂಮೆಂಟರಿ 'ದಿ ಎಲಿಫೆಂಟ್ ವಿಸ್ಪರರ್ಸ್' ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಈ ಸಿನಿಮಾ 'ಹಾಲೌಟ್', 'ಹೌ ಡು ಯು ಮೆಜರ್ ಅ ಇಯರ್', 'ದಿ ಮಾರ್ಥಾ ಮಿಚಲ್ ಎಫೆಕ್ಟ್' ಹಾಗೂ 'ಸ್ಟ್ರೆಂಜರ್ ಅಟ್ ದಿ ಗೇಟ್' ಸಿನಿಮಾ ಜೊತೆ ಪೈಪೋಟಿ ನಡೆಸಿತ್ತು.

ಆಸ್ಕರ್ ಪ್ರಶಸ್ತಿ ಗೆದ್ದ ಶಾರ್ಟ್ ಡಾಕ್ಯೂಮೆಂಟರಿ 'ದಿ ಎಲಿಫೆಂಟ್ ವಿಸ್ಪರರ್ಸ್' ಅನ್ನು ಅಚಿನ್ ಜೈನ್ ಮತ್ತು ಗುನೀತ್ ಮೊಂಗಾ. 'ದಿ ಎಲಿಫೆಂಟ್ ವಿಸ್ಪರರ್ಸ್' ಶಾರ್ಟ್ ಡಾಕ್ಯೂಮೆಂಟರಿ 41 ನಿಮಿಷವಿದೆ. ನಿರ್ದೇಶಕ ಕಾರ್ತಿಕಿ ಗೊನ್ಸಾಲ್ವಿಸ್ ಪ್ರಶಸ್ತಿಯನ್ನು "ನನ್ನ ತಾಯಿನಾಡು ಭಾರತಕ್ಕೆ ಅರ್ಪಣೆ" ಎಂದಿದ್ದಾರೆ.
"ನಾನು ಇಲ್ಲಿ ಇವತ್ತು ನಮ್ಮ ಮತ್ತು ನಮ್ಮ ನೈಸರ್ಗಿಕ ಪ್ರಪಂಚದ ನಡುವಿನ ಪವಿತ್ರ ಬಂಧದ ಬಗ್ಗೆ ಮಾತನಾಡಲು ಬಂದಿದ್ದೇನೆ. ಸ್ಥಳೀಯ ಸಮುದಾಯದ ಗೌರವಕ್ಕೆ, ಉಳಿದ ಜೀವಿಗಳಿಗೆ ಸಹಾನುಭೂತಿ ತೋರಿಸಲು, ಸಹಬಾಳ್ವೆ ನಡೆಸಲು ಇಲ್ಲಿ ಬಂದಿದ್ದೇನೆ" ಎಂದು ಪ್ರಶಸ್ತಿ ಸ್ವೀಕರಿಸಿದ ಬಳಿಕ ಗೊನ್ಸಾಲ್ವೆಸ್ ಹೇಳಿದ್ದಾರೆ.
41 ನಿಮಿಷದ ಈ ಡಾಕ್ಯೂಮೆಂಟರಿ ಸಿನಿಮಾ ಅನಾಥವಾಗಿದ್ದ ಆನೆ ಮರಿ ರಾಘು ಹಾಗೂ ಇತನನ್ನು ನೋಡಿಕೊಳ್ಳುವ ಮಾವೂತನ ನಡುವೆ ಕಥೆಯನ್ನು ತೋರಿಸಲಾಗಿದೆ. ತಮಿಳುನಾಡಿನ ಮಧುಮಲೈ ರಾಷ್ಟ್ರೀಯ ಉದ್ಯಾನವನದಲ್ಲಿ ಮಾವೂತ ದಂಪತಿ ಬೊಮ್ಮನ್ ಹಾಗೂ ಬೆಳ್ಳಿ ಇಬ್ಬರೂ ಅನಾಥವಾಗಿದ್ದ ಆನೆ ಮರಿ ರಾಘುವನ್ನು ತಮ್ಮ ಮಕ್ಕಳಂತೆಯೇ ಬೆಳೆಸಿದ್ದರು. ರಾಘೂ ಹಾಗೂ ಮಾವೂತ ದಂಪತಿ ನಡುವಿನ ಸಂಬಂಧವನ್ನು ನಿರ್ದೇಶಕಿ ಕಾರ್ತಿಕಿ ಗೋನ್ಸಾಲ್ವಿಸ್ ಸೆರೆಹಿಡಿದಿದ್ದರು. ಇದು ಕಾರ್ತಿಕಿಯವರ ಮೊದಲ ನಿರ್ದೇಶನದ ಶಾರ್ಟ್ ಡಾಕ್ಯೂಮೆಂಟರಿ ಆಗಿತ್ತು.
ತಮಿಳುನಾಡಿನ ಪ್ರಕೃತಿ ಸುಂದರ ದೃಶ್ಯಗಳು, ಮಾವೂತ ಹಾಗೂ ಆನೆಯ ನಡುವಿನ ಸಂಬಂಧ, ಮಾವೂತ ದಂಪತಿಯ ಬದುಕು, ಅವರ ನೋವು ನಲಿವುಗಳನ್ನು ಈ ಶಾರ್ಟ್ ಡಾಕ್ಯೂಮೆಂಟರಿಯಲ್ಲಿ ಸೆರೆ ಹಿಡಿಯಲಾಗಿತ್ತು. ಇದೇ ಕಿರು ಚಿತ್ರಕ್ಕೀಗ ಆಸ್ಕರ್ ಪ್ರಶಸ್ತಿ ಲಭಿಸಿದೆ.


Click it and Unblock the Notifications











