Oscars 2024: 2024ನೇ ಸಾಲಿನ ಆಸ್ಕರ್ ಪ್ರಶಸ್ತಿ ಸಮಾರಂಭವನ್ನು ಎಲ್ಲಿ, ಹೇಗೆ ವೀಕ್ಷಿಸಬಹುದು?

96ನೇ ಸಾಲಿನ ಅಕಾಡೆಮಿ ಪ್ರಶಸ್ತಿ ಇದೇ ತಿಂಗಳು ನಡೆಯಲಿದೆ. ಸಿನಿ ಪ್ರಿಯರು, ವಿಶ್ವದ ಮೂಲೆ ಮೂಲೆಯಲ್ಲಿರೋ ಸಿನಿಮಾ ಮಂದಿ ಆಸ್ಕರ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ. ವಿಶ್ವದ ಪ್ರತಿಷ್ಠಿತಯನ್ನು ಗೆಲ್ಲಬೇಕು ಅನ್ನುವ ಸಿನಿಮಾ ಮಂದಿಯ ಕನಸು ನನಸಾಗಲು ಇನ್ನು ಕೆಲವೇ ದಿನಗಳು ಬಾಕಿಯಿದೆ.

2024ನೇ ಸಾಲಿನ ಆಸ್ಕರ್ ಪ್ರಶಸ್ತಿ ಮಾರ್ಚ್ 10ರಂದು ಲಾಸ್ ಎಂಜಲೀಸ್‌ನಲ್ಲಿರುವ ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆಯುತ್ತಿದೆ. ಈ ಅದ್ಧೂರಿ ಸಮಾರಂಭದ ತಯಾರಿ ಈಗಾಗಲೇ ಶುರುವಾಗಿದೆ. ಭಾರತದ ಸಿನಿಮಾಗಳು ಕೂಡ ಹಲವು ವರ್ಷಗಳಿಂದ ಈ ಪ್ರಶಸ್ತಿಯನ್ನು ಗೆಲ್ಲುವ ಪ್ರಯತ್ನವನ್ನು ಹಲವು ವರ್ಷಗಳಿಂದ ಮಾಡುತ್ತಲೇ ಇದೆ. ಆದರೆ, ಪ್ರಶಸ್ತಿ ಗೆಲ್ಲುವುದಕ್ಕೆ ಸಾಧ್ಯವಾಗಿಲ್ಲ.

The 96th oscar Awards where to watch

ಕಳೆದ ಸಾಲಿನಲ್ಲಿ RRR ಸಿನಿಮಾದ "ನಾಟು ನಾಟು.." ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿತ್ತು. ಅದು ಬಿಟ್ಟರೆ ಪ್ರಮುಖ ಕ್ಯಾಟಗರಿಯಲ್ಲಿ ಭಾರತೀಯ ಸಿನಿಮಾಗಳಿಗೆ ಆಸ್ಕರ್ ಬಂದಿಲ್ಲ. ಈ ಬಾರಿ ಕೂಡ ಮಲಯಾಳಂ ಸಿನಿಮಾ '2018' ಭಾರತದಿಂದ ಆಸ್ಕರ್‌ ಪ್ರಶಸ್ತಿ ರೇಸ್‌ನಲ್ಲಿತ್ತು. ಆದರೆ, ಆರಂಭದಲ್ಲಿ ಮುಗ್ಗರಿಸಿ ನಿರಾಸೆ ಮೂಡಿಸಿದೆ. ಹಾಗಿದ್ದರೆ, ಆಸ್ಕರ್ ಪ್ರಶಸ್ತಿಯನ್ನು ಭಾರತದಲ್ಲಿ ಎಲ್ಲಿ? ಹೇಗೆ ವೀಕ್ಷಿಸಿಬಹುದು? ಮುಂದೆ ಓದಿ..

ಆಸ್ಕರ್ ಪ್ರಶಸ್ತಿ ಸಮಾರಂಭವನ್ನು ನೋಡುವುದೇ ಕಣ್ಣಿಗೆ ಹಬ್ಬ. ಪ್ರಶಸ್ತಿ ಸಮಾರಂಭದಲ್ಲಿನ ವೈಭವ, ಪರ್ಫಾಮೆನ್ಸ್, ನಿರೂಪಣೆ ಇವೆಲ್ಲವೂ ಪ್ರೇಕ್ಷಕರನ್ನು ಸೆಳೆಯುತ್ತೆ. ಹೀಗಾಗಿ 2024ನೇ ಸಾಲಿನ ಆಸ್ಕರ್ ಪ್ರಶಸ್ತಿ ಸಮಾರಂಭದ ಮೇಲೆ ಸಿನಿಮಾ ಪ್ರಿಯರು ಕಣ್ಣಿಟ್ಟಿದ್ದಾರೆ. ಅಂದ ಹಾಗೆ ಈ ಸಮಾರಂಭವನ್ನು ಭಾರತದಲ್ಲಿರುವವರೂ ಕಣ್ತುಂಬಿ ಕೊಳ್ಳಬಹುದು. ಡಿಸ್ನಿ+ಹಾಟ್‌ಸ್ಟಾರ್‌ 2024ನೇ ಸಾಲಿನ ಆಸ್ಕರ್ ಪ್ರಶಸ್ತಿ ಸಮಾರಂಭವನ್ನು ಲೈವ್ ಆಗಿ ತೋರಿಸಲಿದೆ.

ಡಿಸ್ನಿ+ಹಾಟ್‌ಸ್ಟಾರ್ ಅಧಿಕೃತವಾಗಿ ತನ್ನ ಎಕ್ಸ್‌ ಖಾತೆಯಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ. ಮಾರ್ಚ್ 11ನೇ ತಾರೀಕು ಈ ಓಟಿಟಿ ವೇದಿಕೆಯಲ್ಲಿ ಸಿನಿಮಾ ಜಗತ್ತಿನ ಅತ್ಯಂತ ಪ್ರತಿಷ್ಠಿತ ಸಮಾರಂಭ ಪ್ರಸಾರ ಆಗಲಿದೆ. ಹೀಗಾಗಿ ಸಿನಿಮಾ ಪ್ರಿಯರು ಓಟಿಟಿಯಲ್ಲಿ ಈ ಸಮಾರಂಭವನ್ನು ವೀಕ್ಷಿಸಬಹುದು.

2024ನೇ ಸಾಲಿನ ಆಸ್ಕರ್ ಪ್ರಶಸ್ತಿ ಅಮೆರಿಕದ ಲಾಸ್ ಎಂಜಲೀಸ್‌ನಲ್ಲಿ ಮಾರ್ಚ್ 10ರ ರಾತ್ರಿ ಆರಂಭ ಆಗಲಿದೆ. ಆಗ ಭಾರತದಲ್ಲಿ ನಸುಗಿನ ಜಾವ. ಆಗಲೇ ನಾವು ಮಾರ್ಚ್ 11ಕ್ಕೆ ಕಾಲಿಟ್ಟಿರುತ್ತೇವೆ. ಹೀಗಾಗಿ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಮಾರ್ಚ್ 11ರಂದು ಭಾರತದಲ್ಲಿ ಪ್ರಸಾರ ಆಗಲಿದೆ. ಸೋಮವಾರ (ಮಾರ್ಚ್ 11) ಬೆಳ್ಳಂಬೆಳಗ್ಗೆ 4.30ಕ್ಕೆ ಆಸ್ಕರ್ ಪ್ರಶಸ್ತಿ ಸಮಾರಂಭವನ್ನು ವೀಕ್ಷಿಸಬಹುದು.

2024ರ ಆಸ್ಕರ್ ಪ್ರಶಸ್ತಿಗೆ ಎರಡು ಹಾಲಿವುಡ್ ಸಿನಿಮಾಗಳು ಪೈಪೋಟಿಗೆ ಬಿದ್ದಿವೆ. 'ಓಪನ್‌ಹೈಮರ್' ಸಿನಿಮಾ 13 ವಿಭಾಗದಲ್ಲಿ ನಾಮಿನೇಟ್ ಆಗಿದ್ದರೆ, 'ಬಾರ್ಬಿ' ಎಂಟು ವಿಭಾಗದಲ್ಲಿ ನಾಮನಿರ್ದೇಶನಗೊಂಡಿದೆ. ಆದರೆ, 'ಬಾರ್ಬಿ'ಯಲ್ಲಿ ನಟಿಸಿದ ನಾಯಕಿ ಮಾರ್ಗೊಟ್ ರೂಬ್ಬಿ ಅತ್ಯುತ್ತಮ ನಟಿ ವಿಭಾಗದಲ್ಲಿ ನಾಮಿನೇಟ್ ಆಗಿಲ್ಲದೆ ಇದ್ದಿದ್ದು ಸಿನಿಪ್ರಿಯರಿಗೆ ಅಚ್ಚರಿ ಮೂಡಿಸಿದೆ.

ಕಳೆದ ವರ್ಷ ಭಾರತದ RRR ಸಿನಿಮಾದ "ನಾಟು ನಾಟು.." ಹಾಡಿಗೆ ಆಸ್ಕರ್ ಪ್ರಶಸ್ತಿ ಬಂದಿತ್ತು. ಹಾಗೇ 'ದ ಎಲಿಫೆಂಟ್ ವಿಸ್ಪರರ್ಸ್' ಡಾಕ್ಯೂಮೆಂಟರಿ ಕೂಡ ಪ್ರಶಸ್ತಿ ಗಿಟ್ಟಿಸಿಕೊಂಡಿತ್ತು. ಈ ಬಾರಿ, 2018 ಭಾರತದ ಅಧಿಕೃತ ಎಂಟ್ರಿ ಆಗಿತ್ತು. ಆದರೆ, ಆರಂಭದ ಸುತ್ತಿನಲ್ಲೇ ಹೊರಬಿದ್ದಿದೆ. ಹಾಗಂತ ಬೇಸರ ಪಟ್ಟುಕೊಳ್ಳುವ ಅಗತ್ಯವಿಲ್ಲ. ಸ್ವತಂತ್ರವಾಗಿ '12th ಫೇಲ್' ಆಸ್ಕರ್‌ಗೆ ಲಗ್ಗೆ ಇಟ್ಟಿದೆ. ಹಾಗೇ ಡಾಕ್ಯೂಮೆಂಟರಿ ವಿಭಾಗದಲ್ಲಿ ನಿಶಾ ಪಹುಜಾ ನಿರ್ದೇಶಿಸಿದ ಡಾಕ್ಯೂಮೆಂಟರಿ 'ಕಿಲ್ ಎ ಟೈಗರ್' ಆಸ್ಕರ್ ರೇಸ್‌ನಲ್ಲಿದೆ.

More from Filmibeat

English summary
Oscars 2024: The 96th Academy Awards When And Where You Can Watch In India
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X