Oscars 2026 Winners List: ಈ ಬಾರಿ ಆಸ್ಕರ್ ಗೆದ್ದವರ ಇವರೇ.. ಯಾರಿಗೆಲ್ಲ ಯಾವ ಪ್ರಶಸ್ತಿ?
ಸಿನಿಮಾ ಕ್ಷೇತ್ರದಲ್ಲಿ ನೀಡಲಾಗುವ ವಿಶ್ವದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಆಸ್ಕರ್. ಈ ಪ್ರಶಸ್ತಿ ಪಡೆಯಬೇಕು ಅನ್ನೋದು ಜಗತ್ತಿನ ಪ್ರತಿಯೊಬ್ಬ ಫಿಲ್ಮ್ ಮೇಕರ್‌ನ ಕನಸು. ಅದಕ್ಕೆ ಪ್ರತಿ ವರ್ಷ ವಿಶ್ವದ ಮೂಲೆ ಮೂಲೆಯಲ್ಲಿರುವ ಸಿನಿಮಾ ಮಂದಿ ಪ್ರಯತ್ನ ಪಡುತ್ತಲೇ ಇರುತ್ತಾರೆ. ಪ್ರತಿ ವರ್ಷದಂತೆ ಈ ವರ್ಷ ಕೂಡ ಅದ್ಧೂರಿಯಾಗಿ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿದೆ. ವಿಶ್ವದ ಅತ್ಯುನ್ನತ ಸಿನಿಮಾಗಳು ಪ್ರಶಸ್ತಿಯನ್ನು ಗೆದ್ದಿವೆ.
ಅಕಾಡೆಮಿ ಅವಾರ್ಡ್ ಅಂತಲೂ ಕರೆಯುವ ಆಸ್ಕರ್ ಪ್ರಶಸ್ತಿ ಸಮಾರಂಭ ಅದ್ಧೂರಿಯಾಗಿ ನಡೆದಿದೆ. ಇರಾನ್-ಇಸ್ರೇಲ್-ಅಮೆರಿಕ ಯುದ್ಧದ ಭೀತಿಯ ಹೊರತಾಗಿಯೂ ಯಶಸ್ವಿಯಾಗಿ ನಡೆದಿದೆ. ಇದು ಕೇವಲ ಪ್ರಶಸ್ತಿ ಸಮಾರಂಭ ಅಷ್ಟೇ ಅಲ್ಲ. ಸೆಲೆಬ್ರೆಟಿಗಳ ಫ್ಯಾಷನ್, ಭಾವನಾತ್ಮಕ ಭಾಷಣ ಹಾಗೂ ಆಸ್ಕರ್ ಗೆದ್ದ ಸಿನಿಮಾ ತಂಡಗಳು ಹೈಲೈಟ್ ಆಗಿವೆ. ಅಷ್ಟೇ ಅಲ್ಲದೆ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ ಸೆಲೆಬ್ರೆಟಿಗಳನ್ನು ನೋಡುವುದೇ ಕಣ್ಣಿಗೆ ಹಬ್ಬ.

ಈ ಬಾರಿ ಭಾರತೀಯರಿಗೆ ಆಸ್ಕರ್ ಪ್ರಶಸ್ತಿ ನಿರಾಸೆ ಮೂಡಿಸಿದೆ. ಅದಕ್ಕೆ ಕಾರಣ ಭಾರತದ ಒಂದೇ ಒಂದು ಸಿನಿಮಾ ನಾಮಿನೇಟ್ ಆಗಿಲ್ಲ. ಹೀಗಾಗಿ ಈ ವರ್ಷ ಭಾರತೀಯ ಫಿಲ್ಮ್ ಮೇಕರ್ಸ್‌ಗೆ ಬೇಸರ ಮೂಡಿಸಿದೆ. ಇನ್ನು ಈಗಾಗಲೇ ನಾಮಿನೇಟ್ ಆಗಿರುವ ಸಿನಿಮಾಗಳ ಪೈಕಿ 'ಸಿನ್ನೆರ್ಸ್' 16 ವಿಭಾಗದಲ್ಲಿ ನಾಮಿನೇಟ್ ಆಗಿತ್ತು. ಹಾಗೇ ಟೈಟಾನಿಕ್ ಹೀರೋ ಲಿಯನಾರ್ಡೋ ಡಿಕ್ಯಾಪ್ರಿಯೋ ನಟಿಸಿದ 'ಒನ್ ಬ್ಯಾಟಲ್ ಆಫ್ಟರ್ ಎನದರ್' ಪ್ರಶಸ್ತಿಯನ್ನು ಪಡೆದುಕೊಂಡಿದೆ.
2026ರ ಆಸ್ಕರ್ ಪ್ರಶಸ್ತಿ ಗೆದ್ದವರ ಪಟ್ಟಿ
ಅತ್ಯುತ್ತಮ ಸಿನಿಮಾ: ಒನ್ ಬ್ಯಾಟಲ್ ಆಫ್ಟರ್ ಅನದರ್
ಅತ್ಯುತ್ತಮ ನಿರ್ದೇಶನ: ಪಾಲ್ ಥಾಮಸ್ ಆಂಡರ್ಸನ್ (ಒನ್ ಬ್ಯಾಟಲ್ ಆಫ್ಟರ್ ಅನದರ್)
ಅತ್ಯುತ್ತಮ ನಾಯಕ ನಟ: ಮೈಕಲ್ ಬಿ. ಜೋರ್ಡಾನ್ (ಸಿನರ್ಸ್)
ಅತ್ಯುತ್ತಮ ನಟಿ: ಜೆಸ್ಸಿ ಬಕ್ಲೀ (ಹ್ಯಾಮ್ನೆಟ್)
ಅತ್ಯುತ್ತಮ ಛಾಯಾಗ್ರಹಣ: ಆಟಮ್ ಡುರಾಲ್ಡ್ ಅರ್ಕಾಪಾವ್ (ಸಿನರ್ಸ್)
ಅತ್ಯುತ್ತಮ ಎಡಿಟಿಂಗ್: ಆಂಡಿ ಜುರ್ಗೆನ್ಸೆನ್ (ಒನ್ ಬ್ಯಾಟಲ್ ಆಫ್ಟರ್ ಅನದರ್)
ಅತ್ಯುತ್ತಮ ಅಂತರರಾಷ್ಟ್ರೀಯ ಫಿಲ್ಮ್: ಸೆಂಟಿಮೆಂಟಲ್ ವ್ಯಾಲ್ಯೂ (ನಾರ್ವೆ)
ಅತ್ಯುತ್ತಮ ಪೋಷಕ ನಟಿ: ಆಮಿ ಮ್ಯಾಡಿಗನ್ (ವೆಪನ್ಸ್)
ಅತ್ಯುತ್ತಮ ಪೋಷಕ ನಟ:ಸೀನ್ ಪೆನ್ (ಒನ್ ಬ್ಯಾಟಲ್ ಆಫ್ಟರ್ ಅನದರ್)
ಅತ್ಯುತ್ತಮ ಅನಿಮೇಟೆಡ್ ಫೀಚರ್ ಫಿಲ್ಮ್ : ಕೆ-ಪಾಪ್ ಡೆಮನ್ ಹಂಟರ್ಸ್
ಅತ್ಯುತ್ತಮ ಅಡಾಪ್ಟೆಡ್ ಸ್ಕ್ರೀನ್‌ಪ್ಲೇ: ಪಾಲ್ ಥಾಮಸ್ ಆಂಡರ್ಸನ್ (ಒನ್ ಬ್ಯಾಟಲ್ ಆಫ್ಟರ್ ಅನದರ್)
ಅತ್ಯುತ್ತಮ ಒರಿಜಿನಲ್ ಚಿತ್ರಕಥೆ: ರಿಯಾನ್ ಕೂಗ್ಲರ್ (ಸಿನರ್ಸ್)
ಅತ್ಯುತ್ತಮ ಕಾಸ್ಟಿಂಗ್: ಕ್ಯಾಸೆಂಡ್ರಾ ಕುಲುಕುಂಡಿಸ್ (ಒನ್ ಬ್ಯಾಟಲ್ ಆಫ್ಟರ್ ಅನದರ್)
ಅತ್ಯುತ್ತಮ ಲೈವ್-ಆಕ್ಷನ್ ಶಾರ್ಟ್ ಫಿಲ್ಮ್: ದಿ ಸಿಂಗರ್ಸ್, ಟು ಪೀಪಲ್ ಎಕ್ಸ್‌ಚೇಂಜಿಂಗ್ ಸಲೈವಾ
ಅತ್ಯುತ್ತಮ ಅನಿಮೇಟೆಡ್ ಕಿರುಚಿತ್ರ: ದಿ ಗರ್ಲ್ ಹೂ ಕ್ರೈಡ್ ಪರ್ಲ್ಸ್
ಅತ್ಯುತ್ತಮ ವಿಎಫ್‌ಎಕ್ಸ್ : ಅವತಾರ್: ಫೈರ್ ಅಂಡ್ ಆಶ್
ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್: ಫ್ರಾಂಕೆನ್‌ಸ್ಟೈನ್
ಅತ್ಯುತ್ತಮ ವಸ್ತ್ರ ವಿನ್ಯಾಸ: ಕೇಟ್ ಹಾಲೆ (ಫ್ರಾಂಕೆನ್‌ಸ್ಟೈನ್)
ಅತ್ಯುತ್ತಮ ಮೇಕಪ್ ಮತ್ತು ಕೇಶವಿನ್ಯಾಸ: ಫ್ರಾಂಕೆನ್‌ಸ್ಟೈನ್ (ಮೈಕ್ ಹಿಲ್, ಜೋರ್ಡಾನ್ ಸ್ಯಾಮ್ಯುಯೆಲ್ ಮತ್ತು ಕ್ಲಿಯೊನಾ ಫ್ಯೂರಿ)
ಅತ್ಯುತ್ತಮ ಸಾಕ್ಷ್ಯಚಿತ್ರ: ಆಲ್ ದಿ ಎಂಪ್ಟಿ ರೂಮ್ಸ್
ಅತ್ಯುತ್ತಮ ಸಾಕ್ಷ್ಯಚಿತ್ರ (ಫೀಚರ್): ಮಿಸ್ಟರ್ ನೋಬಡಿ ಅಗೇನ್‌ಸ್ಟ್ ಪುಟಿನ್
ಅತ್ಯುತ್ತಮ ಓರಿಜಿನಲ್ ಸ್ಕೋರ್: ಲುಡ್ವಿಗ್ ಗೊರನ್ಸನ್ (ಸಿನರ್ಸ್)
ಅತ್ಯುತ್ತಮ ಸೌಂಡ್ : ಎಫ್1
ಅತ್ಯುತ್ತಮ ಒರಿಜಿನಲ್ ಸಾಂಗ್ : "ಗೋಲ್ಡನ್" (ಕೆಪಾಪ್ ಡೆಮನ್ ಹಂಟರ್ಸ್)


Click it and Unblock the Notifications











