ಪ್ರತಿಷ್ಠಿತ ಆಸ್ಕರ್ ಅಕಾಡೆಮಿಯಿಂದ ಹೃತಿಕ್ ರೋಷನ್, ಆಲಿಯಾ ಭಟ್‌ಗೆ ಆಹ್ವಾನ

ಆಸ್ಕರ್ ಪ್ರಶಸ್ತಿ ನೀಡುವ ಪ್ರತಿಷ್ಠಿತ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಸಂಸ್ಥೆಯು 2020ರ ಸಾಲಿನಲ್ಲಿ ಸದಸ್ಯರನ್ನಾಗಿ ಸೇರಿಕೊಳ್ಳುವಂತೆ ಆಹ್ವಾನ ನೀಡಲಾಗಿರುವ ನಟರು, ನಿರ್ದೇಶಕರು ಮತ್ತು ಸಿನಿಮಾ ಸಂಬಂಧಿತ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಇತರೆ ವಿಭಾಗಗಳ ಜನರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಒಟ್ಟು 819 ಹೊಸ ಸದಸ್ಯರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಚೆನ್ನೈ ಮೂಲದ ಡಿಜಿಟಲ್ ಸೇವಾ ಪೂರೈಕೆ ಸಂಸ್ಥೆ ಕ್ಯೂಬ್ ಸಿನಿಮಾ ಟೆಕ್ನಾಲಜೀಸ್‌ನ ಸಹ ಸಂಸ್ಥಾಪಕ ವಿ. ಸೆಂದಿಲ್ ಕುಮಾರ್, ಬಾಲಿವುಡ್ ನಟರಾದ ಹೃತಿಕ್ ರೋಷನ್ ಮತ್ತು ಆಲಿಯಾ ಭಟ್, ಕ್ಯಾಸ್ಟಿಂಗ್ ಡೈರೆಕ್ಟರ್‌ಗಳಾದ ನಂದಿನಿ ಶ್ರೀಕಾಂತ್, ಟೆಸ್ ಜೋಸೆಫ್, ಸಾಕ್ಷ್ಯಚಿತ್ರ ನಿರ್ದೇಶಕರಾದ ನಿಷ್ತಾ ಜೈನ್ ಮತ್ತು ಅಮಿತ್ ಮಾದೇಶಿಯಾ, ವಸ್ತ್ರ ವಿನ್ಯಾಗಾರ್ತಿ ನೀತಾ ಲುಲ್ಲಾ, ವಿಷ್ಯುವಲ್ ಎಫೆಕ್ಟ್ ಸೂಪರ್ ವೈಸರ್ ವಿಶಾಲ್ ಆನಂದ್ ಮತ್ತು ಸಂದೀಪ್ ಕಮಲ್ ಹಾಗೂ ಫಿಲ್ಮ್ ಕಂಪೋಸರ್ ನೈನಿತಾ ದೇಸಾಯಿ ಇದರಲ್ಲಿದ್ದಾರೆ. ಮುಂದೆ ಓದಿ...

ಮತ ಚಲಾಯಿಸುವ ಸೌಲಭ್ಯ

ಮತ ಚಲಾಯಿಸುವ ಸೌಲಭ್ಯ

ಈ ಆಹ್ವಾನವನ್ನು ಒಪ್ಪಿಕೊಂಡ ಸದಸ್ಯರು 2021ರ ಏಪ್ರಿಲ್ 25ರಂದು ನಡೆಯುವ 93ನೇ ಅಕಾಡೆಮಿ ಅವಾರ್ಡ್ಸ್‌ನಲ್ಲಿ ವಿವಿಧ ವಿಭಾಗಗಳಿಗೆ ಪಾಲ್ಗೊಳ್ಳುವ ಸ್ಪರ್ಧೆಯಲ್ಲಿ ಮತ ಹಾಕುವ ಅವಕಾಶ ಪಡೆಯಲಿದ್ದಾರೆ. ಈ ಮೂಲಕ ಆಸ್ಕರ್ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

68 ದೇಶಗಳಿಂದ ಆಹ್ವಾನಿತರು

68 ದೇಶಗಳಿಂದ ಆಹ್ವಾನಿತರು

ನೂತನ ಆಹ್ವಾನಿತರಲ್ಲಿ 75 ಮಂದಿ ಆಸ್ಕರ್ ನಾಮನಿರ್ದೇಶಿತರು ಸೇರಿದ್ದಾರೆ. 15 ಮಂದಿ ಈ ಹಿಂದೆ ಆಸ್ಕರ್ ವಿಜೇತರಿದ್ದಾರೆ. ಎಂಟು ಆಹ್ವಾನಿತರಿಗೆ ಅಕಾಡೆಮಿಯ ವಿವಿಧ ಶಾಖೆಗಳಿಗೆ ಸೇರಿಕೊಳ್ಳಲು ಕೋರಲಾಗಿದೆ. ಆದರೆ ಆಹ್ವಾನಿತರು ಒಮ್ಮೆ ಸದಸ್ಯತ್ವ ಒಪ್ಪಿಕೊಂಡ ಬಳಿಕ ಅವರು ತಮ್ಮ ಆಯ್ಕೆಯ ಯಾವುದಾದರೂ ಒಂದು ವಿಭಾಗವನ್ನು ಆಯ್ದುಕೊಳ್ಳಲು ಅವಕಾಶವಿದೆ. 68 ದೇಶಗಳಿಂದ ಶೇ 49ರಷ್ಟು ಅಂತಾರಾಷ್ಟ್ರೀಯ ಮಟ್ಟದ ಆಹ್ವಾನಿತರನ್ನು ಅಕಾಡೆಮಿ ಒಳಗೊಂಡಿದೆ.

ಕಳೆದ ವರ್ಷವೂ ಏಕೈಕ ಪ್ರತಿನಿಧಿ

ಕಳೆದ ವರ್ಷವೂ ಏಕೈಕ ಪ್ರತಿನಿಧಿ

ಸೆಂಥಿಲ್ ಕುಮಾರ್ ಅವರನ್ನು 'ಮೆಂಬರ್ಸ್ ಅಟ್ ಲಾರ್ಜ್' ವಿಭಾಗದಡಿ ಆಯ್ಕೆ ಮಾಡಲಾಗಿದೆ. ಕಳೆದ ವರ್ಷ 'ಬಾಹುಬಲಿ' ಚಿತ್ರದ ವಿಎಫ್ಎಕ್ಸ್ ನಿರ್ದೇಶಕ ಶ್ರೀನಿವಾಸ್ ಮೋಹನ್ ಅವರನ್ನು ಮಾತ್ರ ದಕ್ಷಿಣ ಭಾರತದಿಂದ ಆಹ್ವಾನಿಸಲಾಗಿತ್ತು. ಉಳಿದಂತೆ ಬಾಲಿವುಡ್‌ ನಿರ್ದೇಶಕ ಅನುರಾಗ್ ಕಶ್ಯಪ್, ಜೋಯಾ ಅಖ್ತರ್, ರಿಯೇಶ್ ಬಾತ್ರಾ, ಅನುಪಮ್ ಖೇರ್ ಮತ್ತು ಶೆರ್ರಿ ಭಾರ್ದಾ ಅವರನ್ನು ಆಹ್ವಾನಿಸಲಾಗಿತ್ತು.

ಬಾಲಿವುಡ್‌ಗೆ ಆದ್ಯತೆ

ಬಾಲಿವುಡ್‌ಗೆ ಆದ್ಯತೆ

2016ರಿಂದಲೂ ಅಕಾಡೆಮಿ ವಿವಿಧ ದೇಶಗಳಿಂದ ಸದಸ್ಯರನ್ನು ಆಹ್ವಾನಿಸತೊಡಗಿದೆ. ಆಸ್ಕರ್ ಅಕಾಡೆಮಿ 'ಬಿಳಿಯ'ರಿಂದಲೇ ತುಂಬಿಕೊಂಡಿದೆ ಎಂಬ ಆರೋಪ ಕೇಳಿಬಂದಿದ್ದರಿಂದ ತನ್ನ ನೀತಿಯನ್ನು ಬದಲಿಸಿಕೊಂಡಿತ್ತು. ಆದರೆ 2018ರಲ್ಲಿ 20 ಮಂದಿ ಭಾರತೀಯರನ್ನು ಆಹ್ವಾನಿಸಿದ್ದರೂ, ಅದು ಸಂಪೂರ್ಣ ಬಾಲಿವುಡ್ ಕೇಂದ್ರಿತವಾಗಿತ್ತು.

More from Filmibeat

English summary
Oscars: Hrithik, Alia Bhat, Senthil Kumar among Indians invited to Join Film Academy as members in the year 2020.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X