ಹಾಲಿವುಡ್‌ಗೆ ಹಾರಿದ ನಟ ರಣದೀಪ್ ಹೂಡಾ: ಫಸ್ಟ್ ಲುಕ್ ಹೇಗಿದೆ?

ಬಾಲಿವುಡ್‌ನ ಇರ್ಫಾನ್ ಖಾನ್, ಅನಿಲ್ ಕಪೂರ್, ನಸೀರುದ್ದೀನ್ ಶಾ, ಐಶ್ವರ್ಯಾ ರೈ, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಮುಂತಾದವರ ಸಾಲಿಗೆ ಖ್ಯಾತ ನಟ ರಣದೀಪ್ ಹೂಡಾ ಸೇರಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಇಮ್ತಿಯಾಜ್ ಅಲಿ ನಿರ್ದೇಶನದ 'ಲವ್ ಆಜ್ ಕಲ್' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ರಣದೀಪ್ ಹೂಡಾ, ಹಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

Recommended Video

ಸೀಕ್ರೆಟ್ ರಿವೀಲ್ ಮಾಡಿದ ದೀಪಿಕಾ ಪಡುಕೋಣೆ | DEEPIKA PADUKONE | NITHYA MENEN | FILMIBEAT KANNADA

ನೆಟ್‌ಫ್ಲಿಕ್ಸ್‌ನ 'ಎಕ್ಸ್‌ಟ್ರ್ಯಾಕ್ಷನ್' ಚಿತ್ರದ ಮೂಲಕ ರಣದೀಪ್ ಹೂಡಾ, ಹಾಲಿವುಡ್ ಅಂಗಳಕ್ಕೆ ಕಾಲಿಡುತ್ತಿದ್ದಾರೆ. ಈ ಸಿನಿಮಾದಲ್ಲಿ ಕ್ರಿಸ್ ಹೆಮ್ಸ್‌ವರ್ಥ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಸ್ಯಾಮ್ ಹರ್‌ಗ್ರೇವ್ ನಿರ್ದೇಶನದ ಮೊದಲ ಚಿತ್ರವಿದು. 'ಅವೆಂಜರ್ಸ್: ಎಂಡ್‌ಗೇಮ್' ಖ್ಯಾತಿಯ ನಿರ್ದೇಶಕ ಸಹೋದರರಲ್ಲಿ ಒಬ್ಬರಾದ ಜೋ ರುಸ್ಸೋ ಚಿತ್ರಕ್ಕೆ ಕಥೆ ಬರೆದಿದ್ದಾರೆ.

'ಈ ಚಿತ್ರದಲ್ಲಿ ನಾನು ಸಾಕಷ್ಟು ಆಕ್ಷನ್ ಮಾಡಬೇಕಾಗುತ್ತದೆ. ಹಾಲಿವುಡ್‌ನಲ್ಲಿ ಇಷ್ಟು ಆಕ್ಷನ್ ಭರಿತ ಪಾತ್ರವನ್ನು ಮಾಡುತ್ತಿರುವ ಭಾರತದ ನಟ ನಾನೇ ಮೊದಲಿಗನಿರಬೇಕು. ಹೆಮ್ಸ್‌ವರ್ಥ್, ರುಸ್ಸೋ ಸಹೋದರರು ಮತ್ತು ನಿರ್ದೇಶಕ ಹರ್‌ಗ್ರೇವ್ ಅವರೊಂದಿಗೆ ಕೆಲಸ ಮಾಡುತ್ತಿರುವುದು ಅಮೋಘ ಅನುಭವ' ಎಂದು ರಣದೀಪ್ ಹೂಡಾ ಹೇಳಿದ್ದಾರೆ.

Randeep Hooda Debute To Hollywood Extraction Movie

ತಮ್ಮ ಪಾತ್ರದ ಬಗ್ಗೆ ವಿವರ ಹಂಚಿಕೊಂಡಿರುವ ಹೂಡಾ, 'ಪಾತ್ರವನ್ನು ರೆಕ್ಕಿಂಗ್ ಬಾಲ್ (ಕಟ್ಟಡ ಉರುಳಿಸಲು ಕ್ರೇನ್‌ನಲ್ಲಿ ಬಳಸುವ ಲೋಹದ ಬೃಹತ್ ಗುಂಡು) ಎಂದು ವರ್ಣಿಸಲಾಗಿದೆ. ಸೇನಾ ಸಿಬ್ಬಂದಿಯ ಪಾತ್ರವನ್ನು ನೀಡಿದ್ದಾರೆ. ಆಕ್ಷನ್ ದೃಶ್ಯಗಳಿಗೆ ನಾವು ಹತ್ತು ದಿನಗಳವರೆಗೆ ದಿನಕ್ಕೆ ಎರಡು ಬಾರಿ ತಾಲೀಮು ಮಾಡುತ್ತಿದ್ದೇವೆ. ನನ್ನ ಪಾತ್ರ ಇದುವರೆಗೂ ಬಹಳ ನಾಟಕೀಯವಾಗಿದೆ' ಎಂದು ರಣದೀಪ್ ವಿವರಿಸಿದ್ದಾರೆ.

ಎಕ್ಸ್‌ಟ್ರಾಕ್ಷನ್ ನೆಟ್‌ಫ್ಲಿಕ್ಸ್‌ನಲ್ಲಿ ಏಪ್ರಿಲ್ 24ರಿಂದ ಪ್ರಸಾರವಾಗಲಿದೆ. ಈ ಹಾಲಿವುಡ್ ಸಿನಿಮಾವಲ್ಲದೆ ರಣದೀಪ್, ಸಲ್ಮಾನ್ ಖಾನ್ ನಾಯಕರಾಗಿರುವ 'ರಾಧೆ' ಚಿತ್ರದಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಈದ್ ಹಬ್ಬದ ವೇಳೆ ಬಿಡುಗಡೆಯಾಗಲಿದೆ.

More from Filmibeat

English summary
Bollywood actor Randeep Hooda makes his Hollywood debute with Netflix movie 'Extraction' with Chris Hemsworth.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X