'RRR' ಸಿನಿಮಾದ ಬ್ರಿಟಿಷ್ ಅಧಿಕಾರಿ ದಿಢೀರ್ ನಿಧನ: ಕಾರಣವೇನು?

ರಾಜಮೌಳಿ ನಿರ್ದೇಶಿಸಿದ RRR ಸಿನಿಮಾ ವಿಶ್ವದ ಮಟ್ಟಿದಲ್ಲಿ ಸದ್ದು ಮಾಡಿದ್ದು ಗೊತ್ತೇ ಇದೆ. ಈ ಸಿನಿಮಾ ಮೂಲಕ ಕೇವಲ ಜೂ.ಎನ್‌ಟಿಆರ್,ರಾಮ್‌ ಚರಣ್ ಅಷ್ಟೇ ಜನಪ್ರಿಯರಾಗಲಿಲ್ಲ. ವಿದೇಶಿ ನಟ ರೇ ಸ್ಟೀವನ್‌ಸನ್ ಪಾತ್ರಕ್ಕೂ ಮೆಚ್ಚುಗೆ ವ್ಯಕ್ತವಾಗಿತ್ತು.

RRR ಸಿನಿಮಾದಲ್ಲಿ ಬ್ರಿಟಿಷ್ ಅಧಿಕಾರಿಯಾಗಿ ನಟಿಸಿದ್ದ ರೇ ಸ್ಟೀವನ್‌ಸನ್‌ಗೆ ನಟನೆ ಮೆಚ್ಚುಗೆ ಸೂಚಿಸಿದ್ದರು. ಇದೇ ನಟ ಭಾನುವಾರ (ಮೇ 21) ದಿಢೀರನೇ ನಿಧನರಾಗಿದ್ದಾರೆ. ನಟನ ಆಪ್ತರು ಈ ವಿಷಯವನ್ನು ಖಚಿತ ಪಡಿಸಿದ್ದು, ಕಾರಣ ಇನ್ನೂ ತಿಳಿದು ಬಂದಿಲ್ಲ.

RRR Rome Thor Fame Irish actor Ray Stevenson dies at 58

ರೇ ಸ್ವೀವನ್‌ಸನ್‌ಗೆ 58ಸ ವರ್ಷ ವಯಸ್ಸಾಗಿತ್ತು. RRR ಸಿನಿಮಾಗೂ ಮುನ್ನವೇ ಹಲವು ಸಿನಿಮಾಗಳಲ್ಲಿ ಹಾಗೂ ಟಿವಿ ಶೋಗಳಲ್ಲಿ ನಟಿಸಿ ಜನಪ್ರಿಯರಾಗಿದ್ದರು. ಆದರೆ, RRR ಬಳಿಕ ಮತ್ತೆ ಅವರಿಗೆ ಡಿಮ್ಯಾಂಡ್ ಬಂದಿತ್ತು. ಇತ್ತೀಚೆಗೆ ಹೊಸ ಸಿನಿಮಾಗೆ ಸಹಿ ಹಾಕಿದ್ದರು ಎನ್ನಲಾಗಿದೆ.

ಮೇ 25, 1964ರಲ್ಲಿ ಲಿಸ್ಬನ್‌ನಲ್ಲಿ ರೇ ಸ್ಟೀವನ್‌ಸನ್ ಹುಟ್ಟಿದರು. ಎಂಟನೇ ವಯಸ್ಸಿನಲ್ಲಿ ಲಿಸ್ಬನ್‌ನಿಂದ ಇಂಗ್ಲೆಂಡ್‌ಗೆ ಶಿಫ್ಟ್ ಆಗಿದ್ದರು. 29 ವರ್ಷಕ್ಕೆ ಪದವಿ ಪಡೆದ ಬಳಿಕ ನಿರಂತರವಾಗಿ ಸಿನಿಮಾಗಳು ಹಾಗೂ ಟಿವಿ ಶೋಗಳಲ್ಲಿ ನಟಿಸಲು ಆರಂಭಿಸಿದ್ದರು.

1998ರಲ್ಲಿ ತೆರೆಕಂಡಿದ್ದ 'ಥಿಯೆರಿ ಆಫ್ ಫ್ಲೈಟ್' ಸಿನಿಮಾ ರೇ ಸ್ಟೀವನ್‌ಸನ್‌ಗೆ ಜನಪ್ರಿಯತೆ ತಂದುಕೊಟ್ಟಿತ್ತು. 'ಥಾರ್' ಹಾಗೂ 'ರೋಮ್' ಅಂತ ಸಿನಿಮಾದಲ್ಲಿ ನಟಿಸಿ ಜನಪ್ರಿಯಗೊಂಡಿದ್ದರು.

RRR ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿದ ಬಳಿಕ 'ಆಕ್ಸಿಡೆಂಟ್ ಮ್ಯಾನ್: ಹಿಟ್‌ಮ್ಯಾನ್ಸ್ ಹಾಲಿಡೇ' ಸಿನಿಮಾದಲ್ಲಿ ನಟಿಸಿದ್ದರು. ಇದು, ರೇ ಸ್ಟೀವನ್‌ಸನ್ ನಟಿಸಿದ ಕೊನೆಯ ಸಿನಿಮಾ. ಇದರೊಂದಿಗೆ HBO ಸೀರಿಸ್ 'ರೋಮ್'ನ ಎಲ್ಲಾ 22 ಎಪಿಸೋಡ್‌ಗಳಲ್ಲಿ ಕಾಣಿಸಿಕೊಂಡಿದ್ದರು.

58 ವರ್ಷ ನಟ RRR ಸಿನಿಮಾ ಬಳಿಕ ಸಿನಿಮಾಗಳಲ್ಲಿ ಆಫರ್ ಹೆಚ್ಚಾಗಿದ್ದವು. ಈ ಹೊತ್ತಲ್ಲೇ ರೇ ಸ್ಟೀವನ್‌ಸನ್‌ನಲ್ಲಿ ನಿಧನರಾಗಿದ್ದು ಚಿತ್ರರಂಗಕ್ಕೆ ದೊಡ್ಡ ನಷ್ಟ ಆಗಿದೆ. ಇವರ ದಿಢೀರ್ ನಿಧನಕ್ಕೆ RRR ತಂಡ ಸಂತಾಪ ಸೂಚಿಸಿದೆ.

"ನಮ್ಮೆಲ್ಲರಿಗೂ ಇದು ಶಾಕಿಂಗ್ ನ್ಯೂಸ್. ರೇ ಸ್ಟೀವನ್‌ಸನ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ನೀವು ನಮ್ಮ ಹೃದಯದಲ್ಲಿ ಯಾವಾಗಲೂ ಇರುತ್ತೀರ.. ಸರ್ ಸ್ಕಾಟ್" ಎಂದು RRR ತಂಡ ಟ್ವೀಟ್ ಮಾಡಿದೆ.

More from Filmibeat

English summary
RRR Rome Thor Fame Irish actor Ray Stevenson dies at 58,, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X