ಬಾಹ್ಯಾಕಾಶದಲ್ಲಿ ಚಿತ್ರೀಕರಿಸಿದ ಮೊದಲ ರಿಲೀಸ್: ಹಾಲಿವುಡ್‌ಗೆ ಟಕ್ಕರ್ ಕೊಟ್ಟ ರಷ್ಯಾ!

ಇತ್ತೀಚೆಗೆ ರಷ್ಯಾ ಬಾಹ್ಯಾಕಾಶ ಚಿತ್ರೀಕರಿಸಿದ ಮೊದಲ ಸಿನಿಮಾವನ್ನು ಥಿಯೇಟರ್‌ನಲ್ಲಿ ಪ್ರದರ್ಶನ ಮಾಡಿದೆ. ಈ ಸಿನಿಮಾದ ಹೆಸರು 'ದಿ ಚಾಲೆಂಜ್'. ಈ ಸಿನಿಮಾವನ್ನು ಹಾಲಿವುಡ್‌ಗೆ ಟಕ್ಕರ್ ಕೊಡುವುದಕ್ಕೆಂದೇ ರಷ್ಯಾ ನಿರ್ಮಾಣ ಮಾಡಿದೆ ಎನ್ನಲಾಗಿದೆ.

'ದಿ ಚಾಲೆಂಜ್' ಸಿನಿಮಾ ಏಪ್ರಿಲ್ 20 ರಂದು ರಷ್ಯಾದಲ್ಲಿ ರಿಲೀಸ್ ಆಗಿದೆ. ಈ ಮೂಲಕ ತನ್ನ ವಿರೋಧಿ ದೇಶ ಅಮೆರಿಕದ ವಿರುದ್ಧ ಗೆಲುವು ಸಾಧಿಸಿದೆ. ಅಂದ್ಹಾಗೆ ಸಿನಿಮಾದಿಂದ ಅದೇನು ಗೆಲುವು ಸಾಧಿಸೋದು ಅಂತ ಅನಿಸಬಹುದು. ಇದು ಸಾಮಾನ್ಯ ಸಿನಿಮಾ ಅಲ್ಲ. ಇಂತಹದ್ದೊಂದು ಸಿನಿಮಾ ಮಾಡಬೇಕು ಅಂತ ಹಾಲಿವುಡ್ ಅಂದುಕೊಳ್ಳುವಾಗಲೇ ರಷ್ಯಾ ಅದನ್ನು ಮಾಡಿ ಮುಗಿಸಿದೆ.

Russian Shot First movie in space: The Challenge beats hollywood collects 5.5 Milion US dollar

ಹಾಲಿವುಡ್‌ಗಿಂತ ಮುನ್ನವೇ ಈ ಸಾಧನೆ

2020ಯಲ್ಲಿ ಹಾಲಿವುಡ್‌ ಸೂಪರ್‌ಸ್ಟಾರ್ ಟಾಮ್‌ ಕ್ರೂಸ್ ಬಾಹ್ಯಾಕಾಶದಲ್ಲಿ ಸಿನಿಮಾವನ್ನು ಚಿತ್ರೀಕರಣ ಮಾಡುವುದಾಗಿ ಅನೌನ್ಸ್ ಮಾಡಿದ್ದರು. ಟಾಮ್‌ ಕ್ರೂಸ್‌ಗೆ ನಾಸಾ ಹಾಗೂ ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡುವುದಾಗಿ ಹೇಳಲಾಗಿತ್ತು.

ಟಾಮ್‌ ಕ್ರೂಸ್ ಬಾಹ್ಯಾಕಾಶದಲ್ಲಿ ಸಿನಿಮಾವನ್ನು ಚಿತ್ರೀಕರಣ ಮಾಡುವುದಕ್ಕೆ ಮುನ್ನವೇ ರಷ್ಯಾ ಆ ಕೆಲಸ ಮಾಡಿ ಮುಗಿಸಿದೆ. ಅಷ್ಟೇ 'ದಿ ಚಾಲೆಂಜ್' ಸಿನಿಮಾವನ್ನು ರಿಲೀಸ್ ಮಾಡಿ ಬಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಕೂಡ ಮಾಡುತ್ತಿದೆ. ಈಗಾಗಲೇ 5.5 ಮಿಲಿಯನ್ ಅಮೆರಿಕನ್ ಡಾಲರ್ ಕಲೆಕ್ಷನ್ ಮಾಡಿದೆ.

'ದಿ ಚಾಲೆಂಜ್' ಕಥೆಯೇನು?

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಗಾಯಗೊಂಡಿರೋ ಗಗನಯಾತ್ರಿಗೆ ಚಿಕಿತ್ಸೆ ನೀಡಲು ವೈದ್ಯನನ್ನು ಕುಳುಹಿಸಿಕೊಡಲಾಗುತ್ತೆ. ಅಲ್ಲಿಂದ ಏನಾಗುತ್ತೆ ಅನ್ನೋದು ಸಿನಿಮಾದ ಕಥೆ. ರಷ್ಯಾ ಮಾಹಿತಿಯನ್ನೇ ನೀಡದೇ ನಿರ್ದೇಶಕ ಹಾಗೂ ನಟನನ್ನು 2021ರಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಿಕೊಟ್ಟಿತ್ತು. 12 ದಿನಗಳ ಕಾಲ ಪ್ರಯೋಗಾಲಯದಲ್ಲಿ ಚಿತ್ರೀಕರಣ ಮಾಡಲಾಗಿದೆ.

Russian Shot First movie in space: The Challenge beats hollywood collects 5.5 Milion US dollar

'ದಿ ಚಾಲೆಂಜ್‌' ಸಿನಿಮಾದಲ್ಲಿ ವೈದ್ಯನಾಗಿ ನಟಿಸಿರುವ ರಷ್ಯಾದ ನಟ ಪೆರೆಸಿಲ್ಡ್ ಫುಲ್ ಖುಷಿಯಾಗಿದ್ದಾರೆ. " ಪ್ರತಿಯೊಂದು ಸೆಕೆಂಡ್ ಕೂಡ ದೊಡ್ಡ ಅವಿಷ್ಕಾರ" ಎಂದು ರಷ್ಯಾದ ನಟ ಪೆರೆಸಿಲ್ಡ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಶೂಟ್ ಆಗಿದ್ದು ಹೇಗೆ?

'ದಿ ಚಾಲೆಂಜ್' ಸಿನಿಮಾದಲ್ಲಿ ವೈದ್ಯನಾಗಿ ನಟಿಸಿರುವ ಯೂಲಿಯಾ ಪೆರೆಸಿಲ್ಡ್ ಹಾಗೂ ಕ್ಲಿಮ್ ಶಿಪೆಂಕೊ ಅವರನ್ನು ಬಾಹ್ಯಾಕಾಶಕ್ಕೆ ಕಳುಹಿಸಿ ಕೊಡಲಾಗಿತ್ತು. ಇಲ್ಲಿ ನಿರ್ದೇಶಕರೇ ಕ್ಲಿಮ್ ಶಿಪೆಂಕೊ ಅವರೇ ಕ್ಯಾಮರಾ, ಲೈಟಿಂಗ್ ಹಾಗೂ ಸೌಂಡ್ ಎಲ್ಲವನ್ನೂ ನಿಭಾಯಿಸಿದ್ದರು.

ಬಾಹ್ಯಾಕಾಶದಲ್ಲಿ ಸುಮಾರು 30 ಗಂಟೆಗಳ ಕಾಲ ಚಿತ್ರೀಕರಣ ಮಾಡಲಾಗಿದ್ದು, ಸಿನಿಮಾದಲ್ಲಿ 50 ನಿಮಿಷಗಳಷ್ಟು ಫೂಟೇಜ್ ಅನ್ನು ಬಳಸಿಕೊಳ್ಳಲಾಗಿದೆ. ಬಾಹ್ಯಾಕಾಶಕ್ಕೆ ಕಳಿಸುವ ಮುನ್ನ ತಂಡಕ್ಕೆ ನಾಲ್ಕು ತಿಂಗಳ ಕಾಲ ತರಬೇತಿಯನ್ನು ನೀಡಲಾಗಿತ್ತು. ಬಳಿಕ ಇವರನ್ನು ಸೋಯುಜ್ ಬಾಹ್ಯಾಕಾಶ ನೌಕೆಯಿಂದ ಕಳುಹಿಸಿಕೊಡಲಾಗಿತ್ತು. ಇದರಲ್ಲಿ ರಷ್ಯಾ ಮೂವರು ಗಗನಯಾತ್ರಿಗಳು ಅತಿಥಿಗಳಾಗಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
First movie shot in space: Russian film The Challenge beat hollywood and collects 5.5 million US dollar,know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X