Oscars 2023: ಕೊನೆಯ ಸಾಲಿನಲ್ಲಿ ಕೂತು ಆಸ್ಕರ್ ಗೆಲ್ಲಿಸಿಕೊಟ್ಟ ರಾಜಮೌಳಿ: ಜಕ್ಕಣ್ಣ ಸಂಭ್ರಮಿಸಿದ ವಿಡಿಯೋ ವೈರಲ್

ರಾಜಮೌಳಿ ನಿರ್ದೇಶಿಸಿದ 'RRR' ಸಿನಿಮಾದ "ನಾಟು ನಾಟು.." ಹಾಡು ಆಸ್ಕರ್ ಪ್ರಶಸ್ತಿಯನ್ನು ಗೆದ್ದು ಇತಿಹಾಸವನ್ನು ಸೃಷ್ಟಿಸಿದೆ. ಇಡೀ ವಿಶ್ವವೇ ಈಗ ನಾಟು ನಾಟು ಅಂತ ಗುನುಗುವಂತಾಗಿದೆ. ಆದರೆ, ಈ ಸಂಭ್ರಮದ ಮಧ್ಯೆ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಓಡುತ್ತಿದೆ. ಆ ವಿಡಿಯೋವನ್ನು ಪ್ರಶಸ್ತಿ ಗೆದ್ದಷ್ಟೇ ಖುಷಿಯಿಂದ ಸಂಭ್ರಮಿಸಲಾಗುತ್ತಿದೆ.

"ನಾಟು ನಾಟು.." ಹಾಡು ಆಸ್ಕರ್ ಪ್ರಶಸ್ತಿ ಗೆಲ್ಲುವ ಸಾಲಿನಲ್ಲಿ ಮುಂಚೂಣಿಯಲ್ಲಿತ್ತು. ಈ ಹಾಡು ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿಯನ್ನು ಗೆಲ್ಲಬಹುದು ಎಂಬ ನಿರೀಕ್ಷೆನೂ ಇತ್ತು. ಹಾಗಂತ ಪ್ರಶಸ್ತಿ ಗೆಲ್ಲೋದು ಅಷ್ಟೊಂದು ಸುಲಭ ಆಗಿರಲಿಲ್ಲ. ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿರುವ ಸಂಗೀತಕಾರರು ಪೈಪೋಟಿ ಕೊಡುತ್ತಿದ್ದರು. ಆದರೂ, ಪ್ರಶಸ್ತಿ ಬಾಚಿಕೊಳ್ಳುವ ಸ್ಪರ್ಧೆಯಲ್ಲಿ "ನಾಟು ನಾಟು.." ಹಿಂದೆಬಿದ್ದಿರಲಿಲ್ಲ. ಆದರೆ, ತನ್ನದೇ ಸಿನಿಮಾದ ಹಾಡೊಂದು ಪ್ರಶಸ್ತಿ ಗೆಲ್ಲುವುದನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಲು ರಾಜಮೌಳಿಗೆ ಆಗಲಿಲ್ಲ.

SS Rajamouli and His Family Were Setting Behind Everyone Else And Won Oscars For Naau Naatu Song

ಕೊನೆಯ ಸಾಲಿನಲ್ಲಿ ಕೂತು ಕಣ್ತುಂಬಿಕೊಂಡ ರಾಜಮೌಳಿ

RRR ಸಿನಿಮಾದ ಸೃಷ್ಟಿಕರ್ತ, ಮೂವಿ ಮಾಂತ್ರಿಕ ಕಳೆದ ಕೆಲವು ದಿನಗಳಿಂದ ಆಸ್ಕರ್ ಪ್ರಶಸ್ತಿ ಗೆಲ್ಲಲು ಪ್ರಚಾರ ಮಾಡುತ್ತಿದ್ದರು. ತಮ್ಮ ತಂಡವನ್ನು ಕಟ್ಟಿಕೊಂಡು ಅಮೆರಿಕದ ಲಾಸ್ ಎಂಜಲೀಸ್‌ನಲ್ಲಿ ಸುತ್ತಾಡಿದ್ದರು. "ನಾಟು ನಾಟು.." ಹಾಡಿಗೆ ಪ್ರಶಸ್ತಿ ಗೆಲ್ಲಿಸಿಕೊಡಲೇ ಬೇಕು ಅಂತ ತೀರ್ಮಾನಿಸಿದ್ದರು. ಇಷ್ಟೆಲ್ಲ ಕಷ್ಟ ಪಟ್ಟಿದ್ದ ರಾಜಮೌಳಿಗೆ ಇತಿಹಾಸ ಸೃಷ್ಟಿಸುವ ಕ್ಷಣವನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಲು ಸಾಧ್ಯವಾಗಿಲ್ಲ.

ಹೌದು, ಲಾಸ್‌ ಏಂಜಲೀಸ್‌ನ ಡಾಲ್ಬಿ ಥಿಯೇಟರ್‌ನಲ್ಲಿ ಆಸ್ಕರ್ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿತ್ತು. ಈ ವೇಳೆ ರಾಜಮೌಳಿ ಹಾಗೂ ಅವರ ಪತ್ನಿ, ಪುತ್ರನಿಗೆ ಕೊನೆಯ ಸಾಲಿನಲ್ಲಿ ಕೂರಲು ಅವಕಾಶ ಸಿಕ್ಕಿತ್ತು. ಹೀಗಾಗಿ ಹತ್ತಿರದಿಂದ ತಮ್ಮದೇ ಸಿನಿಮಾದ ಹಾಡಿಗೆ ಪ್ರಶಸ್ತಿ ಗೆಲ್ಲುವುದನ್ನು ಕಣ್ತುಂಬಿಕೊಳ್ಳಲು ರಾಜಮೌಳಿಗೆ ಸಾಧ್ಯವಿಲ್ಲ. ಆದರೆ, ಪ್ರಶಸ್ತಿ ಗೆದ್ದ ಕೂಡ ಸಂಭ್ರಮಿಸಿದ ಕ್ಷಣಗಳು ಬೆಲೆ ಕಟ್ಟಲಾಗದು. ಇದೇ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಇತಿಹಾಸ ಸೃಷ್ಟಿಸಿದ "ನಾಟು ನಾಟು.."

"ನಾಟು ನಾಟು.." ಹಾಡು ಹೊಸ ಇತಿಹಾಸವನ್ನೇ ಬರೆದಿದೆ. ಇದು ಒರಿಜಿನಲ್ ಸಾಂಗ್ ಕ್ಯಾಟಗರಿಯಲ್ಲಿ ಭಾರತಕ್ಕೆ ಬಂದ ಎರಡನೇ ಆಸ್ಕರ್ ಪ್ರಶಸ್ತಿ. ಆದರೆ, ಭಾರತದ ಒರಿಜಿನಲ್ ಸಿನಿಮಾದ ಹಾಡಿಗೆ ಸಿಕ್ಕ ಮೊದಲ ಆಸ್ಕರ್ ಪ್ರಶಸ್ತಿ. RRR ಸಂಪೂರ್ಣ ಭಾರತದ ಸಿನಿಮಾ ಆಗಿದ್ದರಿಂದ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಹಾಗೂ ಚಿತ್ರಸಾಹಿತಿ ಚಂದ್ರಬೋಸ್‌ಗೆ ಈ ಪ್ರಶಸ್ತಿ ಬಂದಿದ್ದು ನಿಜಕ್ಕೂ ವಿಶೇಷ.

2009ರಲ್ಲಿ 'ಸ್ಲಮ್ ಡಾಗ್ ಮಿಲಿಯನೇರ್' ಸಿನಿಮಾಗೆ ಇದೇ ಒರಿಜಿನಲ್ ಸಾಂಗ್ ಕ್ಯಾಟಗರಿ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಲಭಿಸಿತ್ತು. ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಹಾಗೂ ಚಿತ್ರ ಸಾಹಿತಿ ಗುಲ್ಜಾರ್ ಇಬ್ಬರಿಗೂ ಆಸ್ಕರ್ ಪ್ರಶಸ್ತಿ ಒಲಿದು ಬಂದಿತ್ತು. ಆದರೆ, 'ಸ್ಲಮ್ ಡಾಗ್ ಮಿಲಿಯನೇರ್' ಅಮೆರಿಕಾದ ನಿರ್ಮಾಣ ಕಂಪನಿಯ ಸಿನಿಮಾ ಆಗಿತ್ತು. ಹೀಗಾಗಿ "ನಾಟು ನಾಟು.." ಪ್ರಶಸ್ತಿ ಗೆದ್ದು ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.


'RRR' ತಂಡ ಉಪಸ್ಥಿತಿ

95ನೇ ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ "ನಾಟು ನಾಟು" ಹಾಡಿಗೆ ಹೆಜ್ಜೆ ಹಾಕಲಾಯ್ತು. ಗಾಯಕರಾದ ರಾಹುಲ್ ಹಾಗೂ ಕಾಲ ಇಬ್ಬರೂ ಹಾಡಿ ರಂಜಿಸಿದ್ರು. ಅಮರಿಕದ ಡ್ಯಾನ್ಸರ್‌ಗಳು ಈ ಹಾಡಿಗೆ ಹೆಜ್ಜೆ ಹಾಕಿದ್ದರು. ಪ್ರಶಸ್ತಿ ಗೆಲ್ಲುವುದಕ್ಕೂ ಮುನ್ನ " ನಾಟು ನಾಟು.." ಪರ್ಫಾಮೆನ್ಸ್ ಪೇಕ್ಷಕರ ಮನಗೆಲ್ಲುವಲ್ಲಿಯೂ ಯಶಸ್ವಿಯಾಗಿತ್ತು.

ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರೋ ಗಾಯಕರ ಲೇಡಿ ಗಾಗಾ ಹಾಗೂ ರಿಹನ್ನಾ ಅಂತಹವರನ್ನೇ ಹಿಂದಿಕ್ಕಿ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಈ ಕ್ಷಣದಲ್ಲಿ 'RRR' ತಂಡದಿಂದ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ, ಸಿನಿ ಸಾಹಿತಿ ಚಂದ್ರಬೋಸ್, ನಿರ್ದೇಶಕ ರಾಜಮೌಳಿ, ಪತ್ನಿ ರಮಾ ರಾಜಮೌಳಿ, ಪುತ್ರ ಕಾರ್ತಿಕೇಯ, ರಾಮ್‌ ಚರಣ್, ಜೂ.ಎನ್‌ಟಿಆರ್ ಹಾಗೂ ಗಾಯಕರಾದ ರಾಹುಲ್ ಹಾಗೂ ಕಾಲ ಭೈರವ ಉಪಸ್ಥಿತಿಯಿತ್ತು.

More from Filmibeat

English summary
SS Rajamouli and His Family Were Setting Behind Everyone Else And Won Oscars For Naatu Naatu Song, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X