Avatar 3: ₹2156 ಕೋಟಿಯ 'ಅವತಾರ್ 3' ವೀಕ್ಷಿಸಿದ ರಾಜಮೌಳಿ; ಥಿಯೇಟರ್‌ನಲ್ಲಿ ಮಕ್ಕಳಂತೆ ಆಗಿದ್ದ ಜಕ್ಕಣ್ಣ

ಜಗತ್ತೇ ಎದುರು ನೋಡುತ್ತಿರುವ ಮೋಸ್ಟ್ ಎಕ್ಸ್‌ಪೆಕ್ಟೆಡ್ ಹಾಲಿವುಡ್ ಸಿನಿಮಾ 'ಅವತಾರ್ 3' ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಜಗತ್ತಿನ ಅತ್ಯಂತ ಯಶಸ್ವಿ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ನಿರ್ದೇಶನ 'ಅವತಾರ್: ಫೈರ್ ಅಂಡ್ ಆಶ್' (ಅವತಾರ್ 3) ಡಿಸೆಂಬರ್ 19ರಂದು ಅದ್ಧೂರಿ ರಿಲೀಸ್‌ಗೆ ವೇದಿಕೆ ಸಜ್ಜಾಗಿದೆ. ಇದು 'ಅವತಾರ್‌'ನ ಮೂರನೇ ಸೀರಿಸ್. ಹೀಗಾಗಿ ಸಿನಿಮಾ ಮೇಲೆ ಇಡೀ ವಿಶ್ವವೇ ಕಣ್ಣು ಇಟ್ಟಿದೆ.

ಜೇಮ್ಸ್ ಕ್ಯಾಮರೂನ್ ನಿರ್ದೇಶಿಸಿದ 'ಅವತಾರ್ 3'ಯಲ್ಲಿ ಸ್ಯಾಮ್ ವರ್ತಿಂಗ್‌ಟನ್, ಝೋ ಸಲ್ಡಾನಾ, ಸಿಗೋರ್ನಿ ವೀವರ್, ಸ್ಟೀಫನ್ ಲ್ಯಾಂಗ್, ಕೇಟ್ ವಿನ್ಸ್‌ಲೆಟ್, ಊನಾ ಚಾಪ್ಲಿನ್ ಸೇರಿದಂತೆ ವಿಶ್ವದ ಜನಪ್ರಿಯ ಸ್ಟಾರ್‌ಗಳು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಎಲ್ಲಕ್ಕಿಂತ ಜಗತ್ತಿನ ಜನಪ್ರಿಯ ಟೆಕ್ನಿಷಿಯನ್‌ಗಳು ಈ ಸಿನಿಮಾಗಾಗಿ ಕೆಲಸ ಮಾಡಿದ್ದಾರೆ.

SS Rajamouli Reviewed James Cameron s most expected movie Avatar Fire and Ash

'ಅವತಾರ್ 3' ಸಿನಿಮಾಗಾಗಿ ರಸೆಲ್ ಕಾರ್ಪೆಂಟರ್ ಕ್ಯಾಮರಾ ವರ್ಕ್ ಮಾಡಿದ್ದರೆ, ಸೈಮನ್ ಫ್ರ್ಯಾಂಗ್ಲೆನ್ ಸಂಗೀತ ನೀಡಿದ್ದಾರೆ. ಸ್ಟೀಫನ್ ರಿವ್ಕಿನ್, ಡೇವಿಡ್ ಬ್ರೆನ್ನರ್, ಜಾನ್ ರೆಫುವಾ ಹಾಗೂ ಜೇಮ್ಸ್ ಕ್ಯಾಮರೂನ್ ಎಡಿಟಿಂಗ್ ಮಾಡಿದ್ದಾರೆ. ಅಂದರೇನೆ ನೋಡುಗರ ಕಣ್ಣಿಗೆ ಹಬ್ಬ ನೀಡುವ 'ಅವತಾರ್' ಮೂರನೇ ಸರಣಿ ಮೂಲಕವೂ ಪ್ರೇಕ್ಷಕರನ್ನು ರಂಜಿಸುವುದಕ್ಕೆ ಮುಂದಾಗಿದ್ದಾರೆ. ಈ ಸಿನಿಮಾದ ಚುಟುಕು ವಿಮರ್ಶೆಯನ್ನು ಎಸ್‌ ಎಸ್‌ ರಾಜಮೌಳಿ ಮಾಡಿದ್ದಾರೆ. ಇವರ ಅಭಿಪ್ರಾಯದಲ್ಲಿ ಸಿನಿಮಾ ಹೇಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ಜೇಮ್ಸ್ ಕ್ಯಾಮರೂನ್ ನಿರ್ಮಿಸಿ, ನಿರ್ದೇಶಿಸುತ್ತಿರುವ ಈ ಸಿನಿಮಾದ ಬಜೆಟ್ ಬಲು ದುಬಾರಿ. ಇಂಡಿಯಾ.ಕಾಮ್ ವರದಿ ಮಾಡಿದಂತೆ 'ಅವತಾರ್ 3'ಯನ್ನು ₹2156 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಸಿನಿಮಾ ಈಗಾಗಲೇ ಅಂದರೆ, ಡಿಸೆಂಬರ್ 1 ರಂದು ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ವಿಶ್ವ ಪ್ರೀಮಿಯರ್ ಕಂಡಿದೆ. ಇದರ ಬೆನ್ನಲ್ಲೇ, ಚಿತ್ರದ ಕುರಿತು ಮೊದಲ ಅಭಿಪ್ರಾಯಗಳು ಹೊರಬೀಳುತ್ತಿವೆ.

ಇತ್ತೀಚೆಗೆ ಎಸ್ ಎಸ್ ರಾಜಮೌಳಿ ಹಾಗೂ ಜೇಮ್ಸ್ ಕ್ಯಾಮರೂನ್ ಇಬ್ಬರೂ ವಿಡಿಯೋ (virtual conversation) ಮೂಲಕ ಪರಸ್ಪರ ಸಿನಿಮಾ ಬಗ್ಗೆ ಚರ್ಚೆ ಮಾಡಿದ್ದಾರೆ. ಆ ವಿಡಿಯೋವನ್ನು 20th ಸೆಂಚುರಿ ಸ್ಟುಡಿಯೋ ಇಂಡಿಯಾ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದೆ. ಈ ವೇಳೆ ಇಬ್ಬರ ದಿಗ್ಗಜರ ನಡುವೆ ಆರಂಭದಲ್ಲಿ ಪರಸ್ಪರ ಹೊಗಳಿಕೆಯ ಮಾತುಕತೆಗಳು ನಡೆದಿವೆ. ಆನಂತರ ರಾಜಮೌಳಿ ಸಿನಿಮಾ ಬಗ್ಗೆ ತನ್ನ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

SS Rajamouli Reviewed James Cameron s most expected movie Avatar Fire and Ash

"ಅವತಾರ್: ಫೈರ್ ಅಂಡ್ ಆಶ್ ಸಿನಿಮಾವನ್ನು ಸಂಪೂರ್ಣವಾಗಿ ಆನಂದಿಸಿದ್ದೇನೆ. ಅಂತಹ ಕ್ಲಿಷ್ಟಕರವಾದ ಸೀಕ್ವೆನ್ಸ್ ಅನ್ನು ಸೃಷ್ಟಿ ಮಾಡಿದ್ದಕ್ಕೆ ನಿಮಗೆ ಹ್ಯಾಟ್ಸ್ ಆಫ್ ಹೇಳುತ್ತೇನೆ. ಆ ದೃಶ್ಯಗಳು, ಪಾತ್ರಗಳನ್ನು ನಾನು ಸಿನಿಮಾದ ಉದ್ದಕ್ಕೂ ನೋಡುತ್ತಲೇ ಇದ್ದೆ. ಅದೆನ್ನೆಲ್ಲ ನಾನು ನೋಡುವಾಗ ಥಿಯೇಟರ್‌ನಲ್ಲಿ ಮಗುವಂತಾಗಿಬಿಟ್ಟಿದ್ದೆ" ಎಂದು ಸಿನಿಮಾವನ್ನು ಹಾಡಿ ಹೊಗಳಿಸಿದ್ದಾರೆ.

ಈ ಮೂಲಕ ರಾಜಮೌಳಿ ಸಿನಿಮಾವನ್ನು ಹಾಡಿ ಹೊಗಳಿಸಿದ್ದಾರೆ. ಸಿನಿಮಾದಲ್ಲಿ ದೃಶ್ಯ ವೈಭವವನ್ನು ಪ್ರೇಕ್ಷಕರ ಕಣ್ಣುಗಳಿಗೆ ತೃಪ್ತಿ ಕೊಡೋದು ಗ್ಯಾರಂಟಿ. ಹಾಗೇ ಜೇಮ್ಸ್ ಕ್ಯಾಮರೂನ್ ಸೃಷ್ಟಿಸಿದ ಪಾತ್ರಗಳು ಕೂಡ ಸಖತ್ ಮನರಂಜನೆ ನೀಡುತ್ತವೆ. ಪಕ್ಕಾ ಆಕ್ಷನ್, ಸಾಹಸ ಮತ್ತು ಫ್ಯಾಂಟಸಿ ಸಿನಿಮಾ 'ಅವತಾರ್ 3' ಭಾರತದಲ್ಲಿ 2D, MX4D, 3D, IMAX 3D, ಮತ್ತು ಡಾಲ್ಬಿ ಸಿನಿಮಾ 3Dಯಲ್ಲಿ ಇರುತ್ತೆ. ಇಂಗ್ಲಿಷ್, ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

More from Filmibeat

English summary
SS Rajamouli Reviewed James Cameron's most expected movie Avatar Fire and Ash.
Read more about: rajamouli avatar
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X