For Quick Alerts
  ALLOW NOTIFICATIONS  
  For Daily Alerts

  2020ರ ವೈರಸ್ ಅನಾಹುತದ ಬಗ್ಗೆ ಮೊದಲೇ ಭವಿಷ್ಯ ನುಡಿದಿತ್ತು ಈ ಸಿನಿಮಾ

  |

  ಕೊರೊನಾ ವೈರಸ್ ಅಥವಾ ಕೋವಿಡ್ 19 ಸಂಕಷ್ಟ ಬಹುಪಾಲು ಜನರನ್ನು ಸಂಕಷ್ಟಕ್ಕೆ ನೂಕಿದೆ. ವಿವಿಧ ದೇಶಗಳ ಸರ್ಕಾರದ ಪ್ರಮುಖರೂ, ಸೆಲೆಬ್ರಿಟಿಗಳೂ ಇದಕ್ಕೆ ಒಳಗಾಗಿದ್ದಾರೆ. ವೈರಸ್ ಕಾಟದ ಬಗ್ಗೆ ಹಿಂದೆಯೂ ಅನೇಕ ವರದಿಗಳು ಬಂದಿದ್ದವು. ಆದರೆ ಹಾಲಿವುಡ್‌ನ 'ಕಂಟೇಜಿಯನ್' ಎಂಬ ಸಿನಿಮಾ ನೋಡಿದವರಿಗೆ ಬಹುಶಃ, ಈಗಿನ ಹೋಯ್ದಾಟಗಳನ್ನು ಕಂಡಾಗ ಇವನ್ನೆಲ್ಲ ಆಗಲೇ ನೋಡಿದ್ದೇವೆಲ್ಲವೇ ಎನಿಸಬಹುದು.

  2011ರಲ್ಲಿ ಬಿಡುಗಡೆಯಾಗಿದ್ದ 'ಕಂಟೇಜಿಯನ್' ಸಿನಿಮಾದಲ್ಲಿ ಸಾಮಾನ್ಯ ವ್ಯಕ್ತಿ (ಮ್ಯಾಟ್ ಡಮೊನ್) ಜಗತ್ತಿನಾದ್ಯಂತ ವ್ಯಾಪಿಸುವ ಮಾರಕ ವೈರಸ್‌ನಿಂದ ಭಾಗಶಃ ಕುಸಿದು ಹೋಗಿದ್ದ ಸಾಮಾಜಿಕ ವ್ಯವಸ್ಥೆಯನ್ನು ಸರಿಪಡಿಸುವ ಹೋರಾಟಕ್ಕೆ ಇಳಿಯುತ್ತಾನೆ.

  ಈ ಚಿತ್ರದ ನಿರ್ದೇಶಕ ಸ್ಟೀವನ್ ಸೋಡರ್‌ಬರ್ಗ್ ಮತ್ತು ಬರಹಗಾರ ಸ್ಕಾಟ್ ಬರ್ನ್ಸ್, ಸಿನಿಮಾವನ್ನು ಸಾಧ್ಯವಾದಷ್ಟು ಮಟ್ಟಿಗೆ ವಾಸ್ತವಕ್ಕೆ ಹತ್ತಿರವಾಗಿರುವಂತೆ ಮಾಡಲು ಉದ್ದೇಶಿಸಿದ್ದರು. ಇಂತಹ ನೈಜ ಮಾರಕ ಪಿಡುಗುಗಳ ಬಗ್ಗೆ ಪರಿಣತಿ ಹೊಂದಿರುವ ನೂರಾರು ತಜ್ಞರನ್ನು ಸಂಪರ್ಕಿಸಿ ಸಿನಿಮಾ ಮಾಡಿದ್ದರಿಂದ ಅದು ಹೆಚ್ಚು ನೈಜತೆ ಹೊಂದಿತ್ತು.

  ವಾಸ್ತವದ ಚಿತ್ರಣ

  ವಾಸ್ತವದ ಚಿತ್ರಣ

  'ಇಂತಹ ಬಿಕ್ಕಟ್ಟು ಹೇಗೆ ಎದುರಾಗಬಹುದು ಎಂಬ ವಾಸ್ತವದ ಚಿತ್ರಣವನ್ನು ಜನರಿಗೆ ತೋರಿಸಲು ಪ್ರಯತ್ನಿಸುವುದು ಅವರ ಗುರಿಯಾಗಿತ್ತು. ಇಂತಹ ಆರೋಗ್ಯದ ಸಂಗತಿಯಲ್ಲಿ ರಾಜಕೀಯ ನಾಯಕರನ್ನು ಒಂದುಗೂಡುವಂತೆ ಪ್ರೇರಣೆ ನೀಡಲು ಬಯಸಿದ್ದರು' ಎಂದು ಚಿತ್ರತಂಡವು ಸಂಪರ್ಕಿಸಿದ್ದ ಆರೋಗ್ಯ ಪರಿಣತರಲ್ಲಿ ಒಬ್ಬರಾದ ಲಾರಿ ಗೆರೆಟ್ ತಿಳಿಸಿದ್ದಾರೆ.

  ಫ್ಲೂ ವೈರಸ್ ಆಧರಿಸಲಾಗಿತ್ತು

  ಫ್ಲೂ ವೈರಸ್ ಆಧರಿಸಲಾಗಿತ್ತು

  ಈ ಚಿತ್ರತಂಡವು ಮೊದಲು ಸಿದ್ಧಪಡಿಸಿದ್ದ ಕಥೆಯಲ್ಲಿ 1918ರಲ್ಲಿ ಲಕ್ಷಾಂತರ ಜನರನ್ನು ಕೊಂದು ಹಾಕಿದ ಫ್ಲೂ ವೈರಸ್‌ನ ಹಾವಳಿಯನ್ನು ಆಧರಿಸಿದ ಅಂಶಗಳಿದ್ದವು. ಆದರೆ 2009ರಲ್ಲಿ ಹಂದಿಜ್ವರ ಎಂದು ಹೆಸರಾದ H1N1 ವೈರಸ್‌ನ ಅಂಶಗಳ ಆಧಾರವಾಗಿ ಪರಿವರ್ತಿಸಲಾಯಿತು.

  ಮತ್ತೆ ಕಥೆ ಬದಲಾವಣೆ

  ಮತ್ತೆ ಕಥೆ ಬದಲಾವಣೆ

  ಹಂದಿಜ್ವರದ ವೈರಸ್ ಅಷ್ಟೊಂದು ಅಪಾಯಕಾರಿಯಾಗಿರಲಿಲ್ಲ. ಮಾನವ ಜನಾಂಗ ಈ ವೈರಸ್‌ಅನ್ನು ಸಮರ್ಥವಾಗಿ ಎದುರಿಸಲು ಶಕ್ತವಾಗಿದ್ದರಿಂದ ತೀವ್ರ ಪ್ರಮಾಣದಲ್ಲಿ ಸಾವು ನೋವು ಸಂಭವಿಸಲಿಲ್ಲ. ಹೀಗಾಗಿ ಈ ವೈರಸ್ ಆಧರಿಸಿದ ಕಥೆ ಅಷ್ಟೊಂದು ಪರಿಣಾಮಕಾರಿಯಲ್ಲ ಮತ್ತು ಸೂಕ್ತವಲ್ಲ ಎಂದು ತೀರ್ಮಾನಿಸಲಾಗಿತ್ತು.

  ಕೊನೆಗೆ ಹಾಂಕಾಂಗ್‌ನಲ್ಲಿ ಹುಟ್ಟಿಕೊಳ್ಳುವಂತಹ ಒಂದು ಕಾಲ್ಪನಿಕ ವೈರಸ್‌ಅನ್ನು ಕೇಂದ್ರೀಕರಿಸಿ ಕಥೆ ರಚಿಸಲಾಯಿತು. ಇದಕ್ಕೆ ಕೊಲಂಬಿಯಾದ ಸೋಂಕು ಮತ್ತು ಇಮ್ಯುನಿಟಿ ಕೇಂದ್ರದ ನಿರ್ದೇಶಕ ಇಯಾನ್ ಲಿಪ್ಕಿನ್ ನೆರವು ನೀಡಿದರು.

  ಏಷ್ಯಾ ಕಾಯಿಲೆಗಳ ಮೂಲ

  ಏಷ್ಯಾ ಕಾಯಿಲೆಗಳ ಮೂಲ

  'ಏಷ್ಯಾದಲ್ಲಿ ಅತಿ ಹೆಚ್ಚಿನ ಕಾಯಿಲೆಗಳು ಹುಟ್ಟಿಕೊಳ್ಳುವುದನ್ನು ನಾವು ಸಾಮಾನ್ಯವಾಗಿ ನೋಡುತ್ತೇವೆ. ಏಕೆಂದರೆ ಜಗತ್ತಿನ ಈ ಭಾಗದಲ್ಲಿ ತೀವ್ರ ಪ್ರಮಾಣದ ವಿನಾಶಕಾರಿ ಕೃತ್ಯಗಳು ನಡೆಯುತ್ತಿವೆ. ಅರಣ್ಯಗಳ ನಾಶ ಮತ್ತು ಹವಾಮಾನ ಬದಲಾವಣೆಯ ಕಾರಣದಿಂದಾಗಿ ಬಾವಲಿಗಳು ಮತ್ತು ಹಕ್ಕಿಗಳ ಸಂಕುಲ ಬಹಳ ಸಂಕಷ್ಟಕ್ಕೆ ಸಿಲುಕಿಕೊಂಡಿವೆ'.

  ಬಾವಲಿಯಿಂದ ಹರಡುವ ವೈರಸ್

  ಬಾವಲಿಯಿಂದ ಹರಡುವ ವೈರಸ್

  'ಕಂಟೇಜಿಯನ್' ಸಿನಿಮಾದಲ್ಲಿ ಬಾವಲಿಯೊಂದು ಹಣ್ಣಿನ ಭಾಗವನ್ನು ಬೀಳಿಸುತ್ತದೆ. ಅದನ್ನು ಹಂದಿ ತಿನ್ನುತ್ತದೆ. ಬಳಿಕ ಆ ಹಂದಿಯನ್ನು ಆಹಾರಕ್ಕಾಗಿ ಕಡಿದು ಹಾಕಲಾಗುತ್ತದೆ. ಹೀಗೆ ಬಾವಲಿಯ ಮೂಲಕ ವೈರಸ್ ಆಹಾರದ ರೂಪದಲ್ಲಿ ಮಾನವನ ದೇಹವನ್ನು ಪ್ರವೇಶಿಸುತ್ತದೆ. ಬಾವಲಿಗಳ ಲಾಲಾರಸದಲ್ಲಿ ಭಾರಿ ಪ್ರಮಾಣದ ವೈರಸ್‌ಗಳಿರುತ್ತವೆ. ಈ ವೈರಸ್‌ಗಳಿಂದ ಬಾವಲಿಗಳಿಗೆ ಹಾನಿಯಾಗುವುದಿಲ್ಲ. ಮಿಗಿಲಾಗಿ ಅವು ತಮ್ಮ ಬೇಟೆಗಾರರಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತವೆ.

  ಈಗಿನ ಪರಿಸ್ಥಿತಿಯನ್ನು ಬಿಂಬಿಸಿತ್ತು

  ಈಗಿನ ಪರಿಸ್ಥಿತಿಯನ್ನು ಬಿಂಬಿಸಿತ್ತು

  ಕೊರೊನಾ ವೈರಸ್‌ನ ಮೂಲ ಕೂಡ ಬಾವಲಿಗಳು ಎಂದೇ ಹೇಳಲಾಗುತ್ತಿದೆ. 'ಕಂಟೇಜಿಯನ್' ಸಿನಿಮಾದ ಗಾಢವಾದ ಕಥಾವಸ್ತುವಿನಲ್ಲಿ ಪ್ರತಿ ದೃಶ್ಯಗಳೂ ಮಹಾನ್ ಸಾಂಕ್ರಾಮಿಕ ಪಿಡುಗು ಉಂಟುಮಾಡುವ ಭೀತಿಯ ಸಂದರ್ಭದಲ್ಲಿ ಉಂಟಾಗುವ ಪರಿಸ್ಥಿತಿಯನ್ನೇ ಬಿಂಬಿಸುತ್ತದೆ. ಇದು ಕೇವಲ ಏನಾಗಿತ್ತು ಅಥವಾ ಏನಾಗಬಹುದು ಎಂಬ ಸಂಗತಿಗಳನ್ನಷ್ಟೇ ದಾಖಲಿಸುವುದಿಲ್ಲ ಎಂದು ವಿವರಿಸಿದ್ದಾರೆ. ವಿಶೇಷವೆಂದರೆ 2011ರ ಈ ಸಿನಿಮಾದ ಕಥೆ ಭವಿಷ್ಯದ ಕಲ್ಪನೆಯೊಂದಿಗೆ ಸಿದ್ಧವಾಗಿತ್ತು. ಈ ಕಥೆ 2020ರಲ್ಲಿ ನಡೆಯುತ್ತಿರುವಂತೆ ಚಿತ್ರಿಸಲಾಗಿತ್ತು. ಕೊರೊನಾ ವೈರಸ್ 2019ರ ಡಿಸೆಂಬರ್‌ನಲ್ಲಿ ತನ್ನ ಹಾವಳಿ ಪ್ರದರ್ಶಿಸಲು ಆರಂಭಿಸಿತ್ತು.

  ಮತ್ತೊಂದು ಸಿನಿಮಾ ವೈರಸ್

  ಮತ್ತೊಂದು ಸಿನಿಮಾ ವೈರಸ್

  ರಜೆ ಕೊಟ್ಟು ಏನೂ ಮಾಡದೆ ಇರುವುದು ಹೇಗೆ? ರಿಸ್ಕ್ ತಗಬೇಡಿ. ಮನೆಯಲ್ಲೇ ಈ ಎರಡು ಸಿನಿಮಾ ನೋಡಿ. ಕೊರೊನಾಗಿಂತ ಮೊದಲು ಬಂದ ವೈರಸ್‌ಗಳ ಕಥಾನಕ. ಈಗಾಗ್ತಾ ಇರೋದು ಅದರ ಪುನರಾವರ್ತನೆ ಅಷ್ಟೇ. ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಇವು ಲಭ್ಯ ಇವೆ ಎಂದು ನಿರ್ದೇಶಕ ಬಿ.ಎಂ. ಗಿರಿರಾಜ್, 'ಕಂಟೇಜಿಯನ್' ಮತ್ತು ನಿಫಾ ವೈರಸ್ ಕುರಿತು ಬಂದ ಮಲಯಾಳಂನ 'ವೈರಸ್' ಚಿತ್ರಗಳನ್ನು ವೀಕ್ಷಿಸುವಂತೆ ಸಲಹೆ ನೀಡಿದ್ದಾರೆ.

  English summary
  Steven Soderbergh directed Contagion movie predicted the 2020 coronavirus crisis in 2011 itself.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X