»   » ಟ್ರೈಲರ್: ಜಾದು ಪ್ರಪಂಚಕ್ಕೆ ಕರೆದೊಯ್ಯುವ 'ಬ್ಯೂಟಿ ಅಂಡ್ ದಿ ಬೀಸ್ಟ್'

ಟ್ರೈಲರ್: ಜಾದು ಪ್ರಪಂಚಕ್ಕೆ ಕರೆದೊಯ್ಯುವ 'ಬ್ಯೂಟಿ ಅಂಡ್ ದಿ ಬೀಸ್ಟ್'

Posted By:
Subscribe to Filmibeat Kannada

ಹಾಲಿವುಡ್ ಸಿನಿ ಪ್ರಿಯರಲ್ಲಿ ಹೆಚ್ಚು ಕುತೂಹಲ ಹುಟ್ಟು ಹಾಕಿದ್ದ 'ಬ್ಯೂಟಿ ಅಂಡ್ ದಿ ಬೀಸ್ಟ್' ಚಿತ್ರದ ಮೊದಲನೇ ಟ್ರೈಲರ್ ಅನ್ನು ಕಳೆದ ವರ್ಷ(2016) ನವೆಂಬರ್ ನಲ್ಲಿ ಡಿಸ್ನಿ ಬಿಡುಗಡೆ ಮಾಡಿತ್ತು. ಚಿತ್ರತಂಡ ಈಗ ಲೈವ್ ಆಕ್ಷನ್ ಮತ್ತು ಕ್ಲಾಸಿಕ್ ಆನಿಮೇಟೆಡ್ ಆಗಿರುವ ಚಿತ್ರದ ಫೈನಲ್ ಟ್ರೈಲರ್ ಅನ್ನು ನೆನ್ನೆ ಬಿಡುಗಡೆ ಮಾಡಿದೆ.[2017 ರ ಬಹು ನಿರೀಕ್ಷಿತ ಚಿತ್ರ 'ಲೋಗನ್' ಟ್ರೈಲರ್ ಬಿಡುಗಡೆ]

ಮಾರ್ಚ್ ನಲ್ಲಿ ಬಿಡುಗಡೆ ಆಗಲಿರುವ 'ಬ್ಯೂಟಿ ಅಂಡ್ ದಿ ಬೀಸ್ಟ್' ಚಿತ್ರದಲ್ಲಿ 'ಹ್ಯಾರಿ ಪಾಟರ್' ಖ್ಯಾತಿಯ ಎಮ್ಮಾ ವ್ಯಾಟ್ಸನ್ ಅಭಿನಯಿಸಿದ್ದು, ಚಿತ್ರ ಹಲವು ವಿಶೇಷತೆಗಳಿಂದ ಕೂಡಿದೆ.

ವರ್ಲ್ಡ್ ಆಫ್ ಮ್ಯಾಜಿಕ್ ಸ್ಪೆಲ್

ಡಿಸ್ನಿ ಕಂಪೆನಿ ನಿರ್ಮಾಣದ 'ಬ್ಯೂಟಿ ಅಂಡ್ ದಿ ಬೀಸ್ಟ್' ಚಿತ್ರ ಮಕ್ಕಳು ಮತ್ತು ದೊಡ್ಡವರನ್ನು ಬ್ಯೂಟಿಫುಲ್ ಆಗಿರುವ ಮ್ಯಾಜಿಕ್ ವರ್ಲ್ಡ್ ಗೆ ಕರೆದೊಯ್ಯುವ ಚಿತ್ರವಾಗಿದೆ. ನೈಜ ಮತ್ತು ಕ್ರಿಯಾತ್ಮಕವಾದ ಎರಡೂ ದೃಶ್ಯಗಳನ್ನು ಒಳಗೊಂಡಿರುವ 'ಬ್ಯೂಟಿ ಅಂಡ್ ದಿ ಬೀಸ್ಟ್' ಈಗಾಗಲೇ ಮೊದಲ ಟ್ರೈಲರ್ ಮೂಲಕವೇ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ.

ಡಿಸ್ನಿ ಚಿತ್ರದಲ್ಲಿ 'ಹ್ಯಾರಿ ಪಾಟರ್' ನಟಿ

'ಬ್ಯೂಟಿ' ಗೆ ಪ್ರತೀಕವಾಗಿ ಡಿಸ್ನಿ ನಿರ್ಮಾಣದ ಈ ಚಿತ್ರದಲ್ಲಿ 'ಹ್ಯಾರಿ ಪಾಟರ್' ಖ್ಯಾತಿಯ ಎಮ್ಮಾ ವ್ಯಾಟ್ಸನ್ 'ಬೆಲ್ಲೆ' ಎಂಬ ಪಾತ್ರ ನಿರ್ವಹಿಸಿದ್ದಾರೆ.

ಬೀಸ್ಟ್ ಪಾತ್ರದಲ್ಲಿ ನಟ ಡಾನ್ ಸ್ಟೆವೆನ್ಸ್

'ಬ್ಯೂಟಿ ಅಂಡ್ ದಿ ಬೀಸ್ಟ್' ಚಿತ್ರದಲ್ಲಿ ಹಾಲಿವುಡ್ ನಟ ಡಾನ್ ಸ್ಟಿವೆನ್ಸ್ 'ಪ್ರಿನ್ಸ್ ಆಡಂ' ಆಗಿ 'ಬೀಸ್ಟ್' (ಪ್ರಾಣಿ) ಅನ್ನು ಪ್ರತಿನಿಧಿಸುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕ್ಲಾಸಿಕ್ ಆನಿಮೇಟೆಡ್ ರೂಪದಲ್ಲಿ ಬೀಸ್ಟ್ ಪಾತ್ರವನ್ನು ತೋರಿಸಲಾಗಿದ್ದು, ನೈಜ ಮತ್ತು ಕ್ರಿಯಾತ್ಮಕ ದೃಶ್ಯಗಳು ಸಿನಿ ಪ್ರಿಯರಿಗೆ ಹೆಚ್ಚು ಕುತೂಹಲ ಮೂಡಿಸುವಲ್ಲಿ ಸಂಶಯವಿಲ್ಲ.

'ಬ್ಯೂಟಿ ಅಂಡ್ ದಿ ಬೀಸ್ಟ್' ಕಥೆ ಏನು?

ಬೆಲ್ಲೆ (ಎಮ್ಮಾ ವ್ಯಾಟ್ಸನ್) ಎಂಬ ಸುಂದರ ಮತ್ತು ಸ್ವತಂತ್ರವಾಗಿರುವ ಯುವತಿ ಬೀಸ್ಟ್ (ಡಾನ್ ಸ್ಟೆವೆನ್ಸ್) ನಿಂದ, ಅವನ ಕೋಟೆಯೊಳಗೆ ಬಂದಿತವಾಗುತ್ತಾಳೆ. ಬೀಸ್ಟ್ ಗೆ ಹೆದರದೇ, ಅವನಲ್ಲಿನ ಅಂತರಂಗದ ಸೌಂದರ್ಯಕ್ಕೆ ಬೆಲ್ಲೆ ಒಲಿಯುವ ನೈಜ ಮತ್ತು ಜಾನಪದ ಎರಡು ಕಥೆಯನ್ನು ಚಿತ್ರ ಒಳಗೊಂಡಿದೆ. ಹೆಸರಿಗೆ ತಕ್ಕಂತೆ 'ಬ್ಯೂಟಿ ಅಂಡ್ ದಿ ಬೀಸ್ಟ್' ಚಿತ್ರದಲ್ಲಿ ಆನಿಮೇಟೆಡ್ ಮಾತನಾಡುವ ಗಡಿಯಾರ, ಕುಣಿಯುವ ಕೆಟಲ್, ಯುದ್ಧದ ಸನ್ನಿವೇಶಗಳು, ದೈತ್ಯ ಹಿಮಕರಡಿಗಳು, ಆಕ್ಷನ್ ದೃಶ್ಯಗಳು ಚಿತ್ರದಲ್ಲಿವೆ.

'ಬ್ಯೂಟಿ ಅಂಡ್ ದಿ ಬೀಸ್ಟ್' ಟ್ರೈಲರ್

ಡಿಸ್ನಿ 'ಬ್ಯೂಟಿ ಅಂಡ್ ದಿ ಬೀಸ್ಟ್' ಚಿತ್ರದ ಫೈನಲ್ ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದು, 2.31 ನಿಮಿಷವಿರುವ ಚಿತ್ರದ ಟ್ರೈಲರ್ ಅತ್ಯಂತ ಮನಮೋಹಕವಾಗಿದೆ. ಬಿಲ್ ಕಾಂಡನ್ ಆಕ್ಷನ್ ಕಟ್ ಹೇಳಿರುವ 'ಬ್ಯೂಟಿ ಅಂಡ್ ದಿ ಬೀಸ್ಟ್' ಚಿತ್ರ ಮಾರ್ಚ್ 16, 2017 ರಂದು ಬಿಡುಗಡೆ ಆಗುತ್ತಿದೆ.

ಟ್ರೈಲರ್ ನೋಡಿ

English summary
Step into a world of magical spells, talking antiques, a vain villain, and a beauty out to save a beast in Disney's final trailer of their live action film 'Beauty and the Beast'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada