The Matrix Resurrections Review: ಸತಿ ಪಾತ್ರದಲ್ಲಿ ಮಿಂಚಿದ ಪ್ರಿಯಾಂಕಾ ಚೋಪ್ರಾ!
ಹಾಲಿವುಡ್‌ನಲ್ಲಿ ಇದೂವರೆಗೂ ಬಂದ ಸಿರೀಸ್ ಸಿನಿಮಾಗಳಲ್ಲಿ ಮ್ಯಾಟ್ರಿಕ್ ಸಿರೀಸ್ ಕೂಡ ಒಂದು. ವಿಶ್ವದಾದ್ಯಂತ ಮ್ಯಾಟ್ರಿಕ್ಸ್ ಸರಣಿಗೆ ಅವರದ್ದೇ ಆದ ಅಭಿಮಾನಿ ಬಳಗವಿದೆ. ಈಗ ಇದೇ ಸಿರೀಸ್‌ನ ಮತ್ತೊಂದು ಭಾಗ ಬಿಡುಗಡೆಯಾಗಿದೆ ಅದುವೇ 'ದಿ ಮ್ಯಾಟ್ರಿಕ್ಸ್ ರಿಸರ್ರೆಕ್ಷನ್ಸ್'. ಈ ಹಿಂದೆ ತೆರೆಕಂಡಿರುವ ಸರಣಿಗಳಂತೆ 'ದಿ ಮ್ಯಾಟ್ರಿಕ್ಸ್ ರಿಸರ್ರೆಕ್ಷನ್' ಸಿನಿಮಾ ಕೂಡ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಹಿಂದೆ ಬಿದ್ದಿಲ್ಲ. ಹಿಂದಿನ ಸರಣಿಗಳ ಖದರ್ ಅನ್ನೇ ಈ ಸಿನಿಮಾದಲ್ಲೂಉಳಿಸಿಕೊಂಡಿದೆ.
ಮ್ಯಾಟ್ರಿಕ್ ಸರಣಿ ಸಿನಿಪ್ರಿಯರಿಗೆ ಹೊಸ ಜಗತ್ತನ್ನು ಪರಿಚಯಿಸಿತ್ತು. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಜಗತ್ತಿನಲ್ಲಿ ಮಾನವನ ಎಂಟ್ರಿ. ಆ ಜಗತ್ತಿನಲ್ಲಿ ಒಳಿತಿಗಾಗಿ ಹೊಡೆದಾಟ, ಎಸ್ಕೆಪ್ ಆಗುವ ಕಥೆಯೇ ಈ ಮ್ಯಾಟ್ರಿಕ್ಸ್ ತಿರುಳು. ಹಾಗಂತ ಈ ಸಿನಿಮಾದ ಕಥೆಯನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಗ್ರಾಫಿಕ್ಸ್ ಹಾಗೂ ಆಕ್ಷನ್ ನಿಂದಲೇ ಸದ್ದು ಮಾಡಿದ ಮ್ಯಾಟ್ರಿಕ್ಸ್ ಸರಣಿಯ ಮತ್ತೊಂದು ಸಿನಿಮಾ 'ದಿ ಮ್ಯಾಟ್ರಿಕ್ಸ್ ರಿಸರ್ರೆಕ್ಷನ್ಸ್' ಎರಡು ದಶಕಗಳ ಭವಿಷ್ಯದ ಕಥೆಯನ್ನು ಹೇಳುತ್ತಿದೆ. ಸಿನಿಮಾದ ಪಾತ್ರ, ಕಥೆ, ಪ್ರಿಯಾಂಕಾ ಚೋಪ್ರಾ ಪಾತ್ರ ಹೇಗಿದೆ? ವಿವರಕ್ಕೆ ಮುಂದೆ ಓದಿ.

ಮ್ಯಾಟ್ರಿಕ್ ಪಾತ್ರ ನಿಯೋ ಈಗ ಲೆಜೆಂಡ್
ನಿಯೋ ಪಾತ್ರ ಹಾಲಿವುಡ್ ಸಿನಿಮಾ 'ದಿ ಮ್ಯಾಟ್ರಿಕ್ಸ್' ಸರಣಿಯ ಐಕಾನಿಕ್ ಪಾತ್ರ. ಇದೂವರೆಗೂ ಬಿಡುಗಡೆಯಾಗಿರುವ ಸರಣಿಗಳಲ್ಲಿ ಈ ಪಾತ್ರ ಮುಂದುವರೆಯುತ್ತಲೇ ಬಂದಿದೆ. ನಟ ಕೀನು ರೀವ್ಸ್ ಈ ಸಿನಿಮಾದಲ್ಲಿ ನಿಯೋ ಅವತಾರದಲ್ಲಿ ಕಾಣಿಸಿಕೊಳ್ಳುತ್ತಲೇ ಬಂದಿದ್ದಾರೆ. ಆದರೆ, ಈ ಬಾರಿ ನಿಯೋ ಪ್ರಮೋಷನ್ ಸಿಕ್ಕಿದ್ದು, ನಿಯೋ ಈಗ ಲೆಜೆಂಡ್ ಪಟ್ಟಕ್ಕೆ ಏರಿದ್ದಾರೆ. ಹಿಂದಿನ ಸರಣಿಗಳಿಗೆ ಹೋಲಿಸಿದರೆ, ನಿಯೋ ಪಾತ್ರ ಮತ್ತಷ್ಟು ಪ್ರಬುದ್ಧ ಮತ್ತು ಶಾಂತವಾಗಿದೆ ಅಂತ ಅನಿಸುತ್ತೆ. ಕಾಲ ಬದಲಾದಂತೆ ನಿಯೋ ಲೆಜೆಂಡ್ ಆಗಿ ಬದಲಾಗಿರುವುದರೊಂದಿಗೆ ವಯಸ್ಸು ಆಗಿದೆ ಎಂದು ಸಿನಿಮಾದಲ್ಲಿ ತೋರಿಸಲಾಗಿದೆ.

ಆಕ್ಷನ್ ಸೀನ್‌ಗಳೇ 'ದಿ ಮ್ಯಾಟ್ರಿಕ್ಸ್' ಜೀವಾಳ
ಕ್ಯಾರಿ ಅನ್ನಿ ಮೊಸ್ 'ದಿ ಮ್ಯಾಟ್ರಿಕ್ಸ್' ಸಿರೀಸ್‌ನ ಮತ್ತೊಂದು ಪಾತ್ರ. ಈ ಪಾತ್ರವನ್ನು 'ದಿ ಮ್ಯಾಟ್ರಿಕ್ಸ್ ರಿಸರ್ರೆಕ್ಷನ್ಸ್' ಸಿನಿಮಾದಲ್ಲಿ ಕರೆತರಲಾಗಿದೆ. ಈ ಸಿನಿಮಾದಲ್ಲಿ ಅದ್ಭುತ ಆಕ್ಷನ್ ಸೀಕ್ವೆನ್ಸ್ ಇಡಲಾಗಿದೆ. ರೀವ್ಸ್ ಹಾಗೂ ಅನ್ನಿ ಮೋಸ್ ಇಬ್ಬರ ಅದ್ಭುತ ಆಕ್ಷನ್ ಸೀಕ್ವೆನ್ಸ್ ಈ ಸಿನಿಮಾದ ಹೈಲೈಟ್. ಈ ಸಾಹಸ ದೃಶ್ಯಗಳು ಈ ಹಿಂದೆ ಬಂದು ಹೋದ ಆಕ್ಷನ್ ಸೀಕ್ವೆನ್ಸ್ ಅನ್ನು ನೆನಪಿಸಲಿದೆ. ಕೆಲವು ಸಾಹಸ ಸನ್ನಿವೇಶಗಳಂತೂ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಥ್ರಿಲ್ ಕೊಡುತ್ತವೆ.

ಮಷಿನ್ ಗ್ರಾಫಿಕ್ಸ್ ಜೊತೆ ಲವ್ ಸ್ಟೋರಿಯಿದೆ
'ದಿ ಮ್ಯಾಟ್ರಿಕ್ಸ್ ರಿಸರ್ರೆಕ್ಷನ್ಸ್' ಹಾಲಿವುಡ್ ಸಿನಿಮಾದ ಮತ್ತೊಂದು ಹೈಲೈಟ್ ಅಂದರೆ, ಸಿನಿಮಾದಲ್ಲಿ ಬಳಸಲಾದ ಗ್ರಾಫಿಕ್ಸ್. ಕೆಲವೊಮ್ಮೆ ಈ ಗ್ರಾಫಿಕ್ಸ್ ಹಾಗೂ ಮಷಿನ್‌ಗಳನ್ನ ಬಳಕೆ ಅತಿಯಾಗಿದೆ ಅಂತ ಅನಿಸುತ್ತೆ. ಅದು ಬಿಟ್ಟರೆ, ನಿಯೋ ಸೂಪರ್‌ಹೀರೋ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇವೆಲ್ಲವುಗಳ ಜೊತೆ ಸಿನಿಮಾದಲ್ಲಿ ಟಿಪಿಕಲ್ ಲವ್ ಸ್ಟೋರಿ ಕೂಡ ಇದೆ. ಅಲ್ಲದೆ ಇದು ರೊಮ್ಯಾಂಟಿಕ್ ಸಿನಿಮಾ ಅಂತನೂ ಫೀಲ್ ಆಗುತ್ತೆ. ಇದೇ ವೇಳೆ ಮಷಿನ್ ಹಾಗೂ ಬುಲೆಟ್ ಗಳ ಹಾವಳಿ ಕೂಡ ಅತಿ ಎನಿಸುತ್ತೆ.

ಸತಿ ಪಾತ್ರದಲ್ಲಿ ಮಿಂಚಿದ ಪ್ರಿಯಾಂಕಾ
'ದಿ ಮ್ಯಾಟ್ರಿಕ್ಸ್ ರಿಸರ್ರೆಕ್ಷನ್ಸ್' ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಿಯಾಂಕಾ ಸತಿ ಎನ್ನುವ ಪಾತ್ರದಲ್ಲಿ ನಟಿಸಿದ್ದು, ಚಿಕ್ಕ ಪಾತ್ರದಲ್ಲೂ ಮಿಂಚಿದ್ದಾರೆ. ಸಿನಿಮಾದಲ್ಲಿರುವ ಹಲವು ಪಾತ್ರಗಳಲ್ಲಿ ಪ್ರಿಯಾಂಕಾ ಚೋಪ್ರಾ ಪಾತ್ರ ಎದ್ದು ಕಾಣುತ್ತದೆ. ಆದರೆ, ಈ ಸಿನಿಮಾದಲ್ಲಿ ಗಮನಸೆಳೆಯುವುದು ಮೋಸ್ ಅವರ ಪಾತ್ರ. ಇವರ ಪ್ರತಿಯೊಂದು ದೃಶ್ಯ ಹಾಗೂ ಆಕ್ಷನ್ ಸೀನ್‌ಗಳೂ ಮಿಸ್ ಮಾಡಲು ಸಾಧ್ಯವೇ ಇಲ್ಲ.


Click it and Unblock the Notifications











