'ಟೈಟಾನಿಕ್' ಸಿನಿಮಾದ ನಟಿ ಕೇಟ್ ವಿನ್ಸ್‌ಲೆಟ್ ಆಸ್ಪತ್ರೆಗೆ ದಾಖಲು!
'ಟೈಟಾನಿಕ್' ಸಿನಿಮಾದ ಮೂಲಕ ವಿಶ್ವಕ್ಕೆ ಜನಪ್ರಿಯವಾಗಿದ್ದ ಹಾಲಿವುಡ್ ನಟಿ ಕೇಟ್ ವಿನ್ಸ್‌ಲೆಟ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕ್ರೊಯೇಷಿಯಾದಲ್ಲಿ 'ಲೀ' ಅನ್ನೋ ಹೊಸ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.
ಆಸ್ಕರ್ ಪ್ರಶಸ್ತಿ ಗೆದ್ದಿರೋ ಹಾಲಿವುಡ್ ನಟಿ ಕೇಟ್ ವಿನ್ಸ್‌ಲೆಟ್ 'ಲೀ' ಸಿನಿಮಾದ ಶೂಟಿಂಗ್‌ನಲ್ಲಿದ್ದರು. ಈ ವೇಳೆ ಚಿತ್ರೀಕರಣಕ್ಕಾಗಿ ನಿರ್ಮಿಸಿದ್ದ ಸೆಟ್‌ನಿಂದ ಕೆಳಗೆ ಬಿದ್ದಿದ್ದರಿಂದ ಪೆಟ್ಟಾಗಿದೆ. ಹೀಗಾಗಿ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ಹೇಳಲಾಗುತ್ತಿದೆ.

"ಕೇಟ್ ವಿನ್ಸ್‌ಲೆಟ್ ಜಾರಿ ಬಿದ್ದಿದ್ದರು. ಅವರನ್ನು ಕೂಡಲೇ ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಈಗ ಅವರ ಆರಾಮಾಗಿದ್ದು, ಫ್ಲ್ಯಾನ್ ಮಾಡಿದಂತೆಯೇ ಸಿನಿಮಾದ ಶೂಟಿಂಗ್ ನಡೆಯಲಿದೆ. ಈ ವಾರದಿಂದ ಚಿತ್ರೀಕರಣ ನಡೆಯಲಿದೆ" ಎಂದು ಚಿತ್ರತಂಡ ಹೇಳಿಕೆಯನ್ನು ನೀಡಿದೆ.
2015 ರಿಂದ 'ಲೀ' ಸಿನಿಮಾ ತಂಡದ ಜೊತೆ ಕೇಟ್ ವಿನ್ಸ್‌ಲೆಟ್ ಗುರುತಿಸಿಕೊಂಡಿದ್ದಾರೆ. ಈ ಸಿನಿಮಾ ಕೇಟ್ ಎರಡನೇ ವಿಶ್ವ ಯುದ್ಧದ ವರದಿಗಾರ್ತಿ ಲೀ ಮಿಲ್ಲರ್ ಆಗಿ ಕಾಣಿಸಿಕೊಳ್ಳಿದ್ದಾರೆ.

ಈ ವಾರ್ ಡ್ರಾಮ ಸಿನಿಮಾವನ್ನು ಫೋಟೊಗ್ರಾಫರ್ ಆಗಿದ್ದ ಎಲ್ಲೆನ್ ಕುರಾಸ್ ನಿರ್ದೇಶನ ಮಾಡುತ್ತಿದ್ದಾರೆ. ಕೇಟ್ ವಿನ್ಸ್‌ಲೆಟ್ ಜೊತೆ ಮಾರಿಂನ್ ಕೋಟಿಲಾರ್ಟ್, ಜ್ಯೂಡ್ ಲಾ ಸೇರಿದಂತೆ ಹಾಲಿವುಡ್ ದಿಗ್ಗಜರು ನಟಿಸಿದ್ದಾರೆ.


Click it and Unblock the Notifications











