'ಟೈಟಾನಿಕ್' ಸಿನಿಮಾದ ಹಡುಗಿನ ಕ್ಯಾಪ್ಟನ್ ನಿಧನ: ಬರ್ನಾರ್ಡ್ ಹಿಲ್ ಹಾಲಿವುಡ್ ಸಂತಾಪ

ಹಾಲಿವುಡ್‌ನ ಎವರ್‌ಗ್ರೀನ್ ಸಿನಿಮಾ 'ಟೈಟಾನಿಕ್' ಪ್ರತಿಯೊಂದು ಪಾತ್ರಗಳು ಕಣ್ಮುಂದೆ ಇವೆ. ಈ ಸಿನಿಮಾ ನೋಡಿ ಅಚ್ಚರಿ ಪಟ್ಟವರು ಅಯ್ಯೋ ಎಂದು ಕಣ್ಣು ಒದ್ದೆಯಾಗಿಸಿಕೊಂಡಿದ್ದರು. ವಿಶ್ವದ ಮೂಲೆ ಮೂಲೆಯಲ್ಲಿರುವವರಿಗೂ ಈ ಸಿನಿಮಾ ತಲುಪಿತ್ತು. ಲಿಯಾನಾರ್ಡೋ ಡಿಕ್ಯಾಪ್ರಿಯೋ, ಕೇಟ್‌ ವಿನ್ಸ್‌ಲೆಟ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇವರೊಂದಿಗೆ ನಟಿಸಿದ ಪ್ರತಿಯೊಂದು ಪಾತ್ರಕ್ಕೂ ಪ್ರೇಕ್ಷಕರ ಮೇಲೆ ಪ್ರಭಾವ ಬೀರಿತ್ತು.

ಇದೇ 'ಟೈಟಾನಿಕ್' ಸಿನಿಮಾದಲ್ಲಿ ಗಮನ ಸೆಳೆದಿದ್ದ ಮತ್ತೊಂದು ದುರಂತ ಕಂಡ ಹಡುಗಿನ ಕ್ಯಾಪ್ಟನ್‌ ಪಾತ್ರ. ಈ ಪಾತ್ರದಲ್ಲಿ ಹಾಲಿವುಡ್‌ ನಟ ಬರ್ನಾರ್ಡ್ ಹಿಲ್ ನಟಿಸಿದ್ದರು. ಈ ನಟ ನಿನ್ನೆ (ಮೇ 5)ರಂದು ತನ್ನ 79ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಹಾಲಿವುಡ್‌ ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಬರ್ನಾರ್ಡ್ ಹಿಲ್ ನಟಿಸಿದ್ದರು.

titanic actor Bernard Hill Passes Away At 79

ಬೆರ್ನಾರ್ಡ್ ಹಿಲ್ 'ಟೈಟಾನಿಕ್' ಸಿನಿಮಾದಲ್ಲಿ ದುರಂತ ಹಡುಗಿನ ಕ್ಯಾಪ್ಟನ್ ಪಾತ್ರದಲ್ಲಿ ನಟಿಸಿದ್ದರು. ಕ್ಯಾಪ್ಟನ್ ಎಡ್ವರ್ಡ್ ಸ್ಮಿತ್ ಪಾತ್ರದಲ್ಲಿ ನಟಿಸಿ ಜನರ ಮನಸ್ಸನ್ನು ಗೆದ್ದಿದ್ದರು. ಈ ಸಿನಿಮಾ ಸುಮಾರು 11 ಆಸ್ಕರ್ ಪ್ರಶಸ್ತಿಗಳನ್ನು ಗೆದ್ದಿತ್ತು. ಈ ಸಿನಿಮಾ ಕ್ಯಾಪ್ಟನ್ ಎಡ್ವರ್ಡ್ ಸ್ಮಿತ್ ಪಾತ್ರ ಸೈಲೆಂಟ್ ಆಗಿದ್ದರೂ, ಪ್ರಮುಖ ಪಾತ್ರಗಳಷ್ಟೇ ಗಮನ ಸೆಳೆದಿತ್ತು.

ಹಾಲಿವುಡ್‌ನ ಸುಮಾರು ಐದು ದಶಕಗಳ ಕಾಲ ವಿಭಿನ್ನವಾದ ಪಾತ್ರಗಳಲ್ಲಿ ನಟಿಸಿದ್ದಾರೆ. ರಂಗಭೂಮಿ, ಕಿರುತೆರೆ ಹಾಗೂ ಸಾಕಷ್ಟು ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 11 ಆಸ್ಕರ್‌ ಪ್ರಶಸ್ತಿ ಪಡೆದ ಎರಡು ಸಿನಿಮಾಗಳಲ್ಲಿ ನಟಿಸಿದ ಏಕೈಕ ನಟ ಬೆರ್ನಾರ್ಡ್ ಹಿಲ್ ಎಂಬ ಹೆಗ್ಗಳಿಕೆ ಇವರದ್ದು, 'ಟೈಟಾನಿಕ್', 'ಲಾರ್ಡ್ ಆಫ್ ದಿ ರಿಂಗ್ಸ್' ಅನ್ನೋ ಎರಡು ಸಿನಿಮಾಗಳು 11 ಆಸ್ಕರ್ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದವು.

ಬೆರ್ನಾರ್ಡ್ ಹಿಲ್‌ಗೆ 1982ರಲ್ಲಿ ತೆರೆಕಂಡಿದ್ದ ಬಿಬಿಸಿ ಸೀರಿಸ್ 'ಬಾಯ್ಸ್ ಫ್ರಮ್‌ ದಿ ಬ್ಲಾಕ್‌ಸ್ಟಫ್' ಮೂಲಕ ಜನಪ್ರಿಯತೆ ಸಿಕ್ಕಿತ್ತು. ಕೇವಲ 'ಟೈಟಾನಿಕ್' ಅಷ್ಟೇ ಅಲ್ಲ, 'ಲಾರ್ಡ್ ಆಫ್ ದಿ ರಿಂಗ್ಸ್' ಸಿನಿಮಾ ಕೂಡ ಅಷ್ಟೇ ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಇದರೊಂದಿಗೆ 'ಸ್ಕಾರ್ಪಿಯನ್ ಕಿಂಗ್' ಹಾಗೂ 'ವಾಲ್ಕಿರೀ' ಅಂತಹ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

titanic actor Bernard Hill Passes Away At 79

ಮಹಾತ್ಮ ಗಾಂಧಿ ಜೀವನ ಚರಿತ್ರೆಯನ್ನು ಆಧರಿಸಿದ ಸಿನಿಮಾ 'ಗಾಂಧಿ'ಯಲ್ಲೂ ಬೆರ್ನಾರ್ಡ್ ಹಿಲ್ ನಟಿಸಿದ್ದರು. ರಿಚರ್ಡ್ ಅಟೆನ್‌ಬರ್ಗ್ ನಿರ್ದೆಶಿಸಿದ 'ಗಾಂಧಿ' ಸಿನಿಮಾದಲ್ಲಿ ಬೆನ್‌ ಕಿಂಗ್‌ಸ್ಲಿ ಮಹಾತ್ಮ ಗಾಂಧಿಯ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಸಾರ್ಜೆಂಟ್ ಪುಟ್ನಮ್ ಅನ್ನುವ ಪಾತ್ರದಲ್ಲಿ ಬೆರ್ನಾರ್ಡ್ ಹಿಲ್ ನಟಿಸಿದ್ದರು.

ಕಳೆದ ಹಲವು ದಿನಗಳಿಂದ ಬೆರ್ನಾರ್ಡ್ ಹಿಲ್ ಅನಾರೋಗ್ಯದಿಂದ ಬಳಲುತ್ತಿದ್ದರು. 79 ವರ್ಷದ ನಟ ಇತ್ತೀಚೆಗಷ್ಟೇ ಬಿಬಿಸಿ ಡ್ರಾಮ " ದಿ ರೆಸ್ಪಾಂಡರ್' ನಲ್ಲಿ ನಟಿಸಿದ್ದರು. ಅದು ಇನ್ನೂ ಪ್ರಸಾರ ಆಗಬೇಕಿದೆ. ಅಷ್ಟರೊಳಗೆ ಬೆರ್ನಾರ್ಡ್ ಹಿಲ್ ಇಹಲೋಕ ತ್ಯಜಿಸಿದ್ದಾರೆ.

ಬೆರ್ನಾರ್ಡ್ ಹಿಲ್ 1976ರಲ್ಲಿ ನಟಿಸಿದ ಬಿಬಿಸಿ ಸರಣೆ 'ಐ, ಕ್ಲಾಡಿಯಸ್' ಜನ ಮನ್ನಣೆ ತಂದುಕೊಟ್ಟಿತ್ತು. ಅಲ್ಲಿಂದ ಹಲವು ಜನ ಮೆಚ್ಚಿದ ಪಾತ್ರಗಳಲ್ಲಿ ಬೆರ್ನಾರ್ಡ್ ಹಿಲ್ ನಟಿಸಿದ್ದಾರೆ. 'ಗಾಂಧಿ', 'ಶೆರ್ಲಿ ವ್ಯಾಲೆಂಟೈನ್', 'ದಿ ಸ್ಕಾರ್ಪಿಯನ್ ಕಿಂಗ್', 'ವಾಲ್ಕಿರೀ' ಅಂತಹ ಸಿನಿಮಾಗಳಲ್ಲಿ ಬೆರ್ನಾರ್ಡ್ ಹಿಲ್ ನಟಿಸಿ ಜನ ಮನ್ನಣೆ ಗಳಿಸಿದ್ದಾರೆ.

More from Filmibeat

English summary
Titanic movie captain Lord Of The Rings actor Bernard Hill Passes Away At 79
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X