ಭಾರತೀಯ ಮೂಲದ ಮಾಡಲ್ ಜೊತೆ 'ಟೈಟಾನಿಕ್' ಹೀರೊ ಲವ್ವಿ ಡವ್ವಿ: ಸುಂದರನ ಮನಗೆದ್ದ ಬ್ಯೂಟಿ ಯಾರು?

ಹಾಲಿವುಡ್‌ನ ಈ ಹ್ಯಾಂಡಲ್‌ಸಮ್ ಹೀರೊ ಯಾರಿಗೆ ಗೊತ್ತಿಲ್ಲ. ಈ ನಟನನ್ನು ಗುರುತಿಸೋಕೆ 'ಟೈಟಾನಿಕ್' ಅಂತಹ ಒಂದು ಸಿನಿಮಾ ಸಾಕು. ಇದೊಂದು ಸಿನಿಮಾದಿಂದ ಇಡೀ ಜಗತ್ತಿನಾದ್ಯಂತ ತನ್ನ ಅಭಿಮಾನಿಗಳನ್ನು ಸಂಪಾದಿಸಿರೋ ಸ್ಟಾರ್ ನಟ ಬಗ್ಗೆ ಪ್ಯಾರಿಸ್‌ನಲ್ಲಿ ಸುದ್ದಿ ಹರಿದಾಡುತ್ತಿದೆ.

ಹೌದು, ಟೈಟಾನಿಕ್ ಹೀರೊ ಲಿಯೊನಾರ್ಡೊ ಡಿಕಾಪ್ರಿಯೊ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿಯ ಸುದ್ದಿ ಭಾರತಕ್ಕೂ ಸಂಬಂಧಿಸಿದೆ. ಎರಡು ದಿನಗಳ ಹಿಂದಷ್ಟೇ ಡಿಕಾಪ್ರಿಯೊ ತನ್ನ ಸ್ನೇಹಿತರು ಹಾಗೂ ಭಾರತೀಯ ಮೂಲದ ಮಾಡಲ್ ನೀಲಂ ಗಿಲ್ ಜೊತೆ ಪ್ಯಾರಿಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

Titanic star Leonardo DiCaprio spotted at Paris with Rumoured Love Neelam Gill

ಒಂದು ತಿಂಗಳ ಹಿಂದಷ್ಟೇ ಲಿಯೊನಾರ್ಡೊ ಡಿಕಾಪ್ರಿಯೋ ತಾಯಿ ಭಾರತೀಯ ಮೂಲದ ಮಾಡಲ್ ನೀಲಂ ಗಿಲ್‌ರನ್ನು ಭೇಟಿ ಮಾಡಿದ್ದರು. ಇಲ್ಲಿಂದ ಇಬ್ಬರ ಡೇಟಿಂಗ್ ಮಾಡುತ್ತಿದ್ದಾರೆಂಬ ಸುದ್ದಿ ಓಡಾಡುತ್ತಿದೆ. ಅಷ್ಟಕ್ಕೂ ಟೈಟಾನಿಕ್ ಹೀರೊ ಡೇಟಿಂಗ್ ಮಾಡುತ್ತಿರೋ ಭಾರತೀಯ ಮೂಲದ ಮಾಡಲ್ ಯಾರು? ಆಕೆಯ ಹಿನ್ನೆಲೆ ಏನು?

ಪಂಜಾಬ್ ಮೂಲದ ಯುಕೆ ಮಾಡಲ್

ಹಾಲಿವುಡ್‌ ಸೂಪರ್‌ಸ್ಟಾರ್ ಲಿಯೊನಾರ್ಡೊ ಡಿಕಾಪ್ರಿಯೊ ಅಂತಹ ನಟನ ಮನಸ್ಸು ಕದ್ದಿರೋ ಬ್ಯೂಟಿ ಬಗ್ಗೆ ಜಗತ್ತೇ ತಲೆ ಕೆಡಿಸಿಕೊಂಡಿದೆ. 28 ವರ್ಷದ ಮಾಡಲ್ ನೀಲಂ ಗಿಲ್ ಇಂಗ್ಲೆಂಡ್‌ನಲ್ಲಿ ಜನಿಸಿದ್ದು, ಆಕೆಯ ಕುಟುಂಬ ಲಂಡನ್‌ನಲ್ಲಿ ವಾಸವಿದೆ. ನೀಲ್ ಗಿಲ್ ಅಜ್ಜ-ಅಜ್ಜಿ ಭಾರತದ ಪಂಜಾಬ್ ಮೂಲದವರು.

Titanic star Leonardo DiCaprio spotted at Paris with Rumoured Love Neelam Gill

ಆದರೂ, ನೀಲಂ ಗಿಲ್ ತಂದೆ-ತಾಯಿ ಹುಟ್ಟಿದ್ದು ಮಾತ್ರ ಲಂಡನ್‌ನಲ್ಲಿಯೇ. ಈಕೆ ಚಿಕ್ಕವಳಿದ್ದಾಗಳೇ ಪೋಷಕರು ವಿಚ್ಛೇದನ ಪಡೆದಿದ್ದರು. ಬಳಿಕ ತಾಯಿಯೇ ಈಕೆಯನ್ನು ಬೆಳೆಸಿದ್ದಾರೆ. ಹೀಗಾಗಿ ನೀಲ್ ಗಿಲ್ ಹಿನ್ನೆಲೆ ತುಂಬಾನೇ ದೊಡ್ಡದಿದೆ.

14 ವರ್ಷವಿದ್ದಾಗಲೇ ಕೆಲಸ

ನೀಲಂ ಗಿಲ್ ಅತೀ ಚಿಕ್ಕ ವಯಸ್ಸಿನಲ್ಲೇ ಕೆಲಸ ಮಾಡುವುದಕ್ಕೆ ಶುರು ಮಾಡಿದ್ದರು. 14ನೇ ವಯಸ್ಸಿನಲ್ಲೇ ನೆಕ್ಸ್ಟ್‌ ಮಾಡಲ್ ಮ್ಯಾನೇಜ್ಮೆಂಟ್ ಕಂಪನಿ ಜೊತೆ ಒಡಂಬಡಿಕೆ ಮಾಡಿಕೊಂಡಿದ್ದರು. 2013ರ ಲಂಡನ್ ಫ್ಯಾಷನ್ ವೀಕ್‌ನಲ್ಲಿ ಬ್ರಿಟನ್‌ನ ಐಶಾರಾಮಿ ಫ್ಯಾಷನ್ ಬ್ರ್ಯಾಂಡ್ ಬರ್ಬೆರ್ರಿಸ್‌ಗಾಗಿ ಕ್ಯಾಟ್‌ವಾಕ್ ಮಾಡಿದ್ದರು.

ನೀಲಂ ಗಿಲ್ ಇದೇ ಏಪ್ರಿಲ್ 2023ರಂದಯ ಮುಂಬೈನಲ್ಲಿ ನಡೆದ NMACCಗೆ ಆಗಮಿಸಿದ್ದರು. ಈ ವೇಳೆ ಭಾರತದ ಬಗ್ಗೆ ತನ್ನ ನೆನಪುಗಳನ್ನ ಹಂಚಿಕೊಂಡಿದ್ದರು. ಭಾರತದ ಬಗ್ಗೆ ಪಾಸಿಟಿವ್ ಮಾತುಗಳನ್ನು ಆಡಿದ್ದರು.

"ಬ್ರಿಟಿಷ್ ಪಂಜಾಬಿ ಮಾಡಲ್"

ನೀಲಂ ಗಿಲ್ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ಆಕ್ಟಿವ್ ಆಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಮಂದಿ ಬೆಂಬಲಿಗರನ್ನು ಹೊಂದಿದ್ದಾರೆ. ತನ್ನನ್ನು "ಬ್ರಿಟಿಷ್ ಪಂಜಾಬಿ ಮಾಡಲ್" ಎಂದು ಬಿಂಬಿಸಿಕೊಂಡಿದ್ದರು.

ಮಾಡಲಿಂಗ್‌ ಕೆಲಸಗಳಿಂದಲೇ ನೀಲಂ ಗಿಲ್ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ. ಅರ್ಮಾನಿ, ಡಿಯಲ್ ಅಂತಹ ಬ್ರ್ಯಾಂಡ್‌ಗಳಿಗೆ ರೂಪದರ್ಶಿಯಾಗಿದ್ದಾರೆ. ಅಲ್ಲದೆ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ.

More from Filmibeat

English summary
Titanic star Leonardo DiCaprio was spotted in Paris with rumoured Love Neelam Gill, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X