Mission Impossible 8: ಭಾರತದಲ್ಲಿ 'ಮಿಷನ್ ಇಂಪಾಸಿಬಲ್' ಕೊನೆಯ ಸರಣಿ ಮೊದಲ ದಿನ ಎಷ್ಟು ಗಳಿಸಬಹುದು?

ಹಾಲಿವುಡ್‌ನ ಸ್ಪೈ, ಆಕ್ಷನ್ ಥ್ರಿಲ್ಲರ್‌ಗಳು ಭಾರತದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ ಉದಾಹರಣೆಗಳು ಸಾಕಷ್ಟಿವೆ. ಅದರಲ್ಲೂ ಹಾಲಿವುಡ್ ಸೂಪರ್‌ಸ್ಟಾರ್ ಟಾಮ್ ಕ್ರೂಸ್ ನಟನೆಯ 'ಮಿಷನ್ ಇಂಪಾಸಿಬಲ್' ಸೀರಿಸ್‌ಗಳೇ ಸಾಕ್ಷಿ. ಇಂದು (ಮೇ 17) ಹಾಲಿವುಡ್ ಸಿನಿಮಾ ಪ್ರಿಯರು ಕಾತುರದಿಂದ ಕಾಯುತ್ತಿದ್ದ ಮಿಷನ್ ಇಂಪಾಸಿಬಲ್ ಕೊನೆಯ ಸರಣಿ ಕೊನೆಗೂ ರಿಲೀಸ್ ಆಗಿದೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ ಈ ಸಿನಿಮಾ ಭಾರತದಲ್ಲಿ ಸಿಕ್ಕಾಪಟ್ಟೆ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ.

ಕ್ರಿಸ್ಟೋಫರ್ ಮೆಕ್ವಾರಿ ನಿರ್ದೇಶಿಸಿರುವ 'ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್'ಗೆ ಭಾರತದಲ್ಲಿ ಗ್ರ್ಯಾಂಡ್ ರಿಲೀಸ್ ಆಗಿದೆ. ಸಿನಿಮಾ ರಿಲೀಸ್ ಆದ ಕ್ಷಣದಿಂದಲೇ ಇಂಟರ್‌ನೆಟ್‌ನಲ್ಲಿ ಈ ಸಿನಿಮಾ ಟ್ರೆಂಡಿಂಗ್‌ನಲ್ಲಿ ಇದೆ. ಈ ಹಿಂದೆ ತೆರೆಕಂಡಿರುವ 'ಮಿಷನ್ ಇಂಪಾಸಿಬಲ್' ಸೀರಿಸ್‌ಗಳಲ್ಲೇ ಅತೀ ದೊಡ್ಡ ಓಪನಿಂಗ್ ಪಡೆದುಕೊಂಡ ಸಿನಿಮಾ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಅಭಿಪ್ರಾಯ ಪಟ್ಟಿದ್ದಾರೆ. ಕರ್ನಾಟಕದಲ್ಲೂ ಈ ಸಿನಿಮಾಗೆ ಒಳ್ಳೆಯ ಓಪನಿಂಗ್ ಸಿಕ್ಕಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

Tom Cruise starrer Mission Impossible The Final Reckoning Box Office Day 1 prediction India

ಟಾಮ್‌ ಕ್ರೂಸ್ ಸಿನಿಮಾ ಅಂದರೆ ಆಕ್ಷನ್, ಥ್ರಿಲ್ ಇದ್ದೇ ಇರುತ್ತೆ. ಈ ವಿಚಾರದಲ್ಲಿ ಪ್ರೇಕ್ಷಕರಿಗೆ ಮೋಸ ಆಗುವುದಿಲ್ಲ. ಇನ್ನು ಕೊನೆಯ ಸೀರಿಸ್‌ನಲ್ಲಿ ಸ್ಟೋರಿ ಕಾಂಪ್ಲಿಕೆಟ್ ಆಗದಿದ್ರೂ, ಆಕ್ಷನ್‌ ಸೀನ್‌ಗಳಿಗೆ ಬರವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಇಂತಹ ದೊಡ್ಡ ಸಿನಿಮಾ ರಿಲೀಸ್ ಆದಾಗ ಭಾರತದ ಬಾಕ್ಸಾಫೀಸ್ ಕೂಡ ಅಷ್ಟೇ ಮುಖ್ಯ ಆಗುತ್ತೆ. ಅಷ್ಟಕ್ಕೂ ಭಾರತದಲ್ಲಿ ಮೊದಲ ದಿನ 'ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್' ಕೊನೆಯ ಸೀರಿಸ್ ಎಷ್ಟು ಕಲೆಕ್ಷನ್ ಮಾಡಬಹುದು? ತಿಳಿಯುವುದಕ್ಕೆ ಮುಂದೆ ಓದಿ.

ಅಡ್ವಾನ್ಸ್ ಬುಕಿಂಗ್ ಭರ್ಜರಿ

ಪ್ಯಾರಾಮೌಂಟ್ ಪಿಕ್ಚರ್ಸ್ ನಿರ್ಮಾಣ ಮಾಡಿರುವ ಈ ಸಿನಿಮಾಗೆ ಭಾರತದಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಭಾರತದಲ್ಲಿ 'ಮಿಷನ್ ಇಂಪಾಸಿಬಲ್ 8' ಅಡ್ವಾನ್ಸ್ ಬುಕಿಂಗ್‌ ಅಂತ ಒಂದು ಲಕ್ಷಕ್ಕಿಂತಲೂ ಅಧಿಕ ಟಿಕೆಟ್‌ಗಳನ್ನು ಸೇಲ್ ಮಾಡಿದೆ. ಬಹುತೇಕ ಮಲ್ಟಿಪ್ಲೆಕ್ಸ್‌ನಲ್ಲಿ ಈ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಅದರಲ್ಲೂ ವೀಕೆಂಡ್‌ ಆಗಿರುವುದರಿಂದ ಸಿನಿಮಾ ಕಲೆಕ್ಷನ್ ವಿಚಾರದಲ್ಲೂ ಕೋಟಿ ಲೆಕ್ಕದಲ್ಲಿ ಎರಡು ಡಿಜಿಟ್ ದಾಟುತ್ತೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಮೊದಲ ದಿನದ ಲೆಕ್ಕಾಚಾರವೇನು?

ಟಾಮ್ ಕ್ರೂಸ್ ಸಿನಿಮಾಗಳಿಗೆ ಭಾರತದಲ್ಲಿ ಒಳ್ಳೆಯ ಫ್ಯಾನ್ ಬೇಸ್ ಇದೆ. ಕಳೆದ ಏಳು ಸೀರಿಸ್‌ಗಳಿಗೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಭಾರತದಲ್ಲಿ ನೂರಾರು ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಈಗ ಕೊನೆಯ ಸೀರಿಸ್ ಆಗಿದ್ದರಿಂದ ನಿರೀಕ್ಷೆ ಸ್ವಲ್ಪ ಜಾಸ್ತಿನೇ ಇದೆ. ಸ್ಯಾಕ್ನಿಲ್ಕ್ ಪ್ರಕಾರ, ಮೊದಲ ಎರಡು ಶೋಗಳಿಂದ ಭಾರತದಲ್ಲಿ 5 ಕೋಟಿ ರೂಪಾಯಿ ಎಂದು ವರದಿ ಮಾಡಿದೆ. ಆದರೆ, ಸಂಜೆಯ ವೇಳೆ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗಲಿದೆ. ಹೀಗಾಗಿ ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಈ ಸಿನಿಮಾ ಮೊದಲ ದಿನ 16 ಕೋಟಿಯಿಂದ 20 ಕೋಟಿ ರೂಪಾಯಿವರೆಗೂ ಕಲೆಕ್ಷನ್ ಆಗಬಹುದು ಎಂದು ನಿರೀಕ್ಷೆ ಮಾಡಲಾಗಿದೆ.

Tom Cruise starrer Mission Impossible The Final Reckoning Box Office Day 1 prediction India

ತಮಿಳುನಾಡಿನಲ್ಲೇ ಹೆಚ್ಚು

'ಮಿಷನ್ ಇಂಪಾಸಿಬಲ್: ದಿ ಫೈನಲ್ ರೆಕನಿಂಗ್'ಗೆ ಅಚ್ಚರಿ ಎಂಬಂತೆ ತಮಿಳುನಾಡಿನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಒಂದು ಲೆಕ್ಕಾಚಾರದ ಪ್ರಕಾರ ಟಾಮ್ ಕ್ರೂಸ್ ಸಿನಿಮಾಗೆ ತಮಿಳುನಾಡು ಒಂದರಿಂದ 4 ರಿಂದ 5 ಕೋಟಿ ರೂಪಾಯಿ ಕಲೆಕ್ಷನ್ ಆಗಲಿದೆ ಎನ್ನುತ್ತಿದ್ದಾರೆ ಟ್ರೇಡ್ ಎಕ್ಸ್‌ಪರ್ಟ್ಸ್. ಇನ್ನೊಂದು ಕಡೆ ಕರ್ನಾಟಕದಲ್ಲೂ ಮಿಷನ್ ಇಂಪಾಸಿಬಲ್ 8 ಪಾಸಿಟಿವ್ ರೆಸ್ಪಾನ್ಸ್ ಸಿಕ್ಕಿದೆ. ಬೆಂಗಳೂರು, ಮೈಸೂರು ಹಾಗೂ ಮಂಗಳೂರಿನಲ್ಲಿ ಹೆಚ್ಚು ಕಲೆಕ್ಷನ್ ಆಗುವ ಸಾಧ್ಯತೆಯಿದೆ. ಹೀಗಾಗಿ ಕರ್ನಾಟಕದಿಂದ ಸುಮಾರು 1.5 ರಿಂದ 2 ಕೋಟಿವರೆಗೂ ಕಲೆಕ್ಷನ್ ಆಗಬಹುದೆಂದು ಅಂದಾಜಿಸಲಾಗಿದೆ.

Take a Poll

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X