ಆನ್‌ಲೈನ್‌ನಲ್ಲಿ ಕನ್ಯತ್ವ ಹರಾಜಿಗಿಟ್ಟ 22ರ ಯುವತಿ: ಮುಗಿಬಿದ್ದು ₹18 ಕೋಟಿಗೆ ಬಿಡ್ ಗೆದ್ದ ನಟ ಯಾರು?

ಈ ಜಗತ್ತಿಗೆ ಏನಾಗಿದೆ? ಕೆಲವು ಜನರ ವಿಚಿತ್ರ ಮನಸ್ಥಿತಿ ಆಗಾಗ ಸುದ್ದಿಯಾಗುತ್ತಲೇ ಇರುತ್ತೆ. ಹಣ ಮಾಡುವುದಕ್ಕೆ ಏನೇನೋ ಪ್ರಯತ್ನಕ್ಕೆ ಮುಂದಾಗುತ್ತಲೇ ಇರುತ್ತಾರೆ. ಏನೇನನ್ನೋ ಹರಾಜಿಗೆ ಇಡುತ್ತಾರೆ. ಕೋಟಿ ಲೆಕ್ಕದಲ್ಲಿ ಹಣ ಸಂಪಾದನೆ ಮಾಡುತ್ತಾರೆ. ಇನ್ನು ಕೆಲವು ಕಳೆದುಕೊಳ್ಳುತ್ತಾರೆ. ಆದರೆ, ಬ್ರಿಟನ್‌ 22 ವರ್ಷದ ಯುವತಿಯೊಬ್ಬಳು ಹಣ ಸಂಪಾದನೆ ಮಾಡುವುದಕ್ಕಾಗಿ ತನ್ನ ಕನ್ಯತ್ವವನ್ನು ಹರಾಜಿಗೆ ಇಟ್ಟಿದ್ದಾರೆ.

22 ವರ್ಷದ ಯುವತಿಗೇನೋ ಬುದ್ದಿಯಿಲ್ಲ ಅಂದುಕೊಳ್ಳೋಣ. ಆದರೆ, ಈಕೆ ಕನ್ಯತ್ವವನ್ನು 18 ಕೋಟಿ ರೂಪಾಯಿ ಕೊಟ್ಟು ನಟನೊಬ್ಬರ ಖರೀದಿ ಮಾಡಿದ್ದಾನೆ ಅಂದರೆ ಏನು ಹೇಳೋದು. ಹೌದು, ಈ ಎರಡೂ ಸಂಗತಿಗಳು ನಿಜ. ವಿಶ್ವದ ಮೂಲೆ ಮೂಲೆಯಲ್ಲಿ ಕನ್ಯತ್ವವನ್ನು ಮಾರಾಟಕ್ಕೆ ಇಟ್ಟಿರುವ ಯುವತಿ ಬಗ್ಗೆನೇ ಚರ್ಚೆಯಾಗುತ್ತಿದೆ. ಕೆಲವರು ಅಚ್ಚರಿಯಿಂದ ನೋಡುತ್ತಿದ್ದರೆ, ಮತ್ತೆ ಕೆಲವರು ಟೀಕೆ ಮಾಡುತ್ತಿದ್ದಾರೆ.

UK student Laura auction her virginity in online Hollywood actor wins the bid for 18 crore rupees

ಕನ್ಯತ್ವ ಕಳೆದುಕೊಂಡುವ ತನ್ನ ನಿರ್ಧಾರವನ್ನು ಬ್ರಿಟನ್‌ನ ಮ್ಯಾಂಚೆಸ್ಟರ್‌ನ 22 ವರ್ಷದ ಯುವತಿ ಸಮರ್ಥಿಸಿಕೊಂಡಿದ್ದಾಳೆ. ಅದರಲ್ಲೂ ತಾನೇಕೆ ಈ ನಿರ್ಧಾರಕ್ಕೆ ಬಂದೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಅಷ್ಟಕ್ಕೂ ಆ ಯುವತಿ ಯಾರು? ಯಾಕೆ ಈ ಪ್ರಯತ್ನಕ್ಕೆ ಮುಂದಾಗಿದ್ದಾಳೆ? ಈ ಯುವತಿಯ ಕನ್ಯತ್ವವನ್ನು ಖರೀದಿ ಮಾಡಿದ ಆ ಹಾಲಿವುಡ್ ನಟ ಯಾರು? ತಿಳಿಯುವುದಕ್ಕೆ ಮುಂದೆ ಓದಿ.

ಹೌದು, ನೀವು ಹೇಳ್ತಿರೋದು ನಿಜ. ಬ್ರಿಟನ್‌ನ ಕೇವಲ 22 ವರ್ಷ ಯುವತಿ ತೆಗೆದುಕೊಂಡಿರುವ ನಿರ್ಧಾರವಿದು. ಅಂದ್ಹಾಗೆ ತನ್ನ ಕನ್ಯತ್ವವನ್ನು ಮಾರಾಟಕ್ಕೆ ಇಟ್ಟಿರುವ ಈಕೆಯ ಹೆಸರು ಲಾರಾ. ಬ್ರಿಟನ್‌ನ ಮ್ಯಾಂಚೆಸ್ಟರ್‌ನಲ್ಲಿ ಲಾರಾ ವಿದ್ಯಾರ್ಥಿಯಾಗಿದ್ದು, ತನ್ನ ಕನ್ಯತ್ವವನ್ನು ಆನ್‌ಲೈನ್‌ನಲ್ಲಿ ಹರಾಜಿಗೆ ಇಟ್ಟಿದ್ದಳು. ಇದಕ್ಕೆ ವಿಶ್ವದ ಮೂಲೆ ಮೂಲೆಯಿಂದ ಅದ್ಭುತ ಪ್ರತಿಕ್ರಿಯೆ ಸಿಕ್ಕಿದ್ದು, ರಾಜಕಾರಣಿಗಳು, ಉದ್ಯಮಿಗಳು, ಸಿನಿಮಾ ಸ್ಟಾರ್‌ಗಳು ಈ ಆನ್‌ಲೈನ್‌ ಬಿಡ್ಡಿಂಗ್‌ನಲ್ಲಿ ಭಾಗವಹಿಸಿದ್ದರು. ಕೊನೆಗೂ ಹಾಲಿವುಡ್ ನಟನೊಬ್ಬ ಈ ಬಿಡ್ ಗೆದ್ದಿದ್ದಾನೆ ಎಂದು ವರದಿಯಾಗಿದೆ.

ನೀವು ಕೇಳುತ್ತಿರೋದು ನಿಜ. ಯುವತಿ ಏನೋ ಯಾವುದೇ ಕಷ್ಟಗಳಿಗೆ ಸಿಲುಕಿ ಇಂತಹ ನಿರ್ಧಾರಕ್ಕೆ ಮುಂದಾಗಿರಬಹುದು ಅಂದುಕೊಂಡರೂ, ಖರೀದಿ ಮಾಡುವವ ಮನಸ್ಥಿತಿ ಏನು? ಈ ಬಗ್ಗೆನೂ ಗಂಭೀರವಾಗಿ ಯೋಚನೆ ಮಾಡಬೇಕಿದೆ. ಅಂದ್ಹಾಗೆ ಲಾರಾ ಕನ್ಯತ್ವವನ್ನು ಖರೀದಿಸಿರುವ ಆ ಹಾಲಿವುಡ್ ನಟ ಕೊಟ್ಟಿದ್ದು ಬರೋಬ್ಬರಿ 18 ಕೋಟಿ ರೂಪಾಯಿ ಎಂದು ಹೇಳಲಾಗಿದೆ. ಇಷ್ಟೊಂದು ದೊಡ್ಡ ಮೊತ್ತವನ್ನು ಕೊಟ್ಟು ಖರೀದಿಸಿದ್ದರ ಬಗ್ಗೆನೂ ಚರ್ಚೆಯಾಗುತ್ತಿದೆ.

ಈ ಹರಾಜನ್ನು ಎಸ್ಕಾರ್ಟ್‌ ಏಜನ್ಸಿಯೊಂದು ಆಯೋಜನೆ ಮಾಡಿತ್ತು. ಇದೇ ಏಜೆನ್ಸಿ ಈ ಹರಾಜಿನಲ್ಲಿ ಜಗತ್ತಿನಲ್ಲಿರುವ ಶ್ರೀಮಂತರನ್ನು ಭಾಗವಹಿಸುವಂತೆ ಪ್ರೇರೆಪಿಸಿತ್ತು ಎನ್ನಲಾಗಿದೆ. ಲಾರಾ ಕನ್ಯತ್ವವನ್ನು ಖರೀದಿ ಮಾಡುವುದಕ್ಕೆ ವಿಶ್ವದ ಶ್ರೀಮಂತ ರಾಜಕಾರಣಿಗಳು, ಉದ್ಯಮಿಗಳು ಹಾಗೂ ಸಿನಿಮಾ ಸ್ಟಾರ್‌ಗಳು ಮುಂದಾಗಿದ್ದರು. ಈ ಪೈಪೋಟಿಯಲ್ಲಿ ಹಾಲಿವುಡ್ ನಟ ಅತೀ ಹೆಚ್ಚು ಅಂದರೆ, 18 ಕೋಟಿ ರೂಪಾಯಿಗೆ ಬಿಡ್ ಮಾಡಿ ಗೆದ್ದಿದ್ದಾನೆ. ಮುಂದಿನ ಹಂತದ ಪ್ರಕ್ರಿಯೆಗೆ ಮುಂದಾಗಿದ್ದಾರೆ ಎನ್ನಲಾಗಿದೆ.

ಹರಾಜು ಪ್ರತಿಕ್ರಿಯೆಗೂ ಮುನ್ನ ಲಾರಾ ಹರಾಜಿನಲ್ಲಿ ಭಾಗವಹಿಸುವವರನ್ನು ಭೇಟಿ ಮಾಡುವುದಕ್ಕೆ ಅವಕಾಶ ಕಲ್ಪಿಸಲಾಗಿತ್ತು ಎನ್ನಲಾಗಿದೆ. ಹಾಲಿವುಡ್ ನಟನ ಹೆಸರನ್ನು ಇನ್ನೂ ಬಹಿರಂಗಗೊಳಿಸಿಲ್ಲ. ಆದರೆ, ನಟ ಹಾಗೂ ಲಾರಾ ಮಧ್ಯೆ ಒಪ್ಪಂದ ಅಂತಿಮಗೊಂಡ ಬಳಿಕ, ಖರೀದಿಸಿದವರ ಸಮ್ಮುಖದಲ್ಲಿಯೇ ಕನ್ಯತ್ವ ಪರೀಕ್ಷೆಗೆ ಒಳಪಡಿಸಲಾಗುತ್ತೆ. ಆನಂತ್ರ ಈ ಹರಾಜು ಪ್ರಕ್ರಿಯೆ ಅಂತಿಮಗೊಳ್ಳಲಿದೆ.

ಕನ್ಯತ್ವವನ್ನು ಮಾರಾಟಕ್ಕಿಟ್ಟ ಲಾರಾ ಪ್ರತಿಕ್ರಿಯೆ ಕೂಡ ನೀಡಿದ್ದಾಳೆ. "ಈ ಬಗ್ಗೆ ನನಗೆ ಯಾವುದೇ ರೀತಿಯ ವಿಷಾದವಿಲ್ಲ. ಸಾಕಷ್ಟು ಹುಡುಗಿಯರು ಏನನ್ನೂ ಪಡೆಯದೆ ತನ್ನ ಕನ್ಯತ್ವವನ್ನು ಕಳೆದುಕೊಳ್ಳುತ್ತಾರೆ. ಕೊನೆಯ ಪಕ್ಷ ನಾನು ನನ್ನ ಭವಿಷ್ಯವನ್ನು ಭದ್ರಪಡಿಸಿಕೊಂಡಿದ್ದೇನೆ. ನನ್ನ ಈ ನಿರ್ಧಾರದಿಂದ ಅವರು ಶಾಶ್ವತ ಸಂಗಾತಿಯಂತೂ ಆಗುವುದಿಲ್ಲ. ಇದು ಜೀವಮಾನ ಒಪ್ಪಂದ ಅಲ್ಲ. ನನ್ನ ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ" ಎಂದು ಲಾರಾ ಸಮಜಾಯಿಷಿ ಕೊಟ್ಟಿದ್ದಾಳೆ.

More from Filmibeat

English summary
UK student Laura auction her virginity in online. Hollywood actor wins the bid for 18 crore rupees
Read more about: auction virginity
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X