ಪ್ರಾಣದ ಹಂಗು ತೊರೆದು ರಷ್ಯಾ ದಾಳಿಯನ್ನು ಸೆರೆ ಹಿಡಿಯಲು ಮುಂದಾದ ಉಕ್ರೇನ್ ಡೈರೆಕ್ಟರ್
ರಷ್ಯಾ ಹಾಗೂ ಉಕ್ರೇನ್ ನಡುವಿನ ಯುದ್ಧ ಇನ್ನೂ ನಿಂತಿಲ್ಲ. ಎರಡೂ ಕಡೆಯೂ ಅಪಾರ ಸಾವು-ನೋವುಗಳಾಗಿದೆ. ಉಕ್ರೇನ್‌ನ ಇರ್ಪಿನ್, ಕೀವ್ ನಗರಗಳ ಮೇಲೆ ರಷ್ಯಾ ಕ್ಷಿಪಣಿಗಳ ಸುರಿಮಳೆಯನ್ನೇ ಸುರಿಸುತ್ತಿದೆ. ಇದೇ ವಿಶ್ವವೇ ಈ ಯುದ್ಧದ ವಿರುದ್ಧ ನಿಂತಿದ್ದರೂ, ರಷ್ಯಾ ಮಾತ್ರ ಯುದ್ಧ ನಿಲ್ಲಿಸುವ ಲಕ್ಷಣಗಳು ಕಾಣಿಸುತ್ತಿಲ್ಲ. ತಮ್ಮ ದೇಶಕ್ಕಾಗಿ ಉಕ್ರೇನ್ ಜನರು ಸ್ವಯಂ ಪ್ರೇರಿತರಾಗಿ ಬಂದೂಕು ಹಿಡಿದಿದ್ದಾರೆ. ಇಂತಹ ಗಂಭೀರ ಸನ್ನಿವೇಶದಲ್ಲಿ ಉಕ್ರೇನ್‌ನ ನಿರ್ದೇಶಕರೊಬ್ಬರು ಕ್ಯಾಮರಾ ಹಿಡಿದು ಯುದ್ಧ ಸನ್ನಿವೇಶಗಳನ್ನು ಡಾಕ್ಯೂವೆಂಟರಿ ಮಾಡಲು ನಿರ್ಧರಿಸಿದ್ದಾರೆ.
ಉಕ್ರೇನ್‌ನ ಸಿನಿಮಾ ನಿರ್ದೇಶಕ ವಸ್ಯಾನೋವಿಚ್ ಕೂಡ ರಷ್ಯಾ ವಿರುದ್ಧ ಯುದ್ಧದಲ್ಲಿ ಭಾಗಿಯಾಗಿಯಾಗಿದ್ದಾರೆ. ಆದರೆ, ಈ ನಿರ್ದೇಶಕ ಬಂದೂಕು ಹಿಡಿದಿಲ್ಲ. ಬದಲಾಗಿ ಕ್ಯಾಮರಾ ಹಿಡಿದು ಯುದ್ಧದಲ್ಲಿ ಭಾಗಿಯಾಗಿದ್ದಾರೆ. ಹೌದು, ಉಕ್ರೇನ್ ಮೇಲಿನ ರಷ್ಯಾ ದಾಳಿಯನ್ನು ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿಯಲು ಸಜ್ಜಾಗಿದ್ದಾರೆ. ನಿರ್ದೇಶಕ ವಸ್ಯಾನೋವಿಚ್ ಜೊತೆ ನಿರ್ಮಾಪಕ ವ್ಲಾಡಿಮಿರ್ ಯಟ್ಸೆನ್‌ಕೋ ಕೂಡ ಕೈ ಜೋಡಿಸಿದ್ದಾರೆ. ಈ ಬಗ್ಗೆ ಅಂತರಾಷ್ಟ್ರೀಯ ಮಾಧ್ಯಮದೊಂದಿಗೆ ಜೊತೆ ತಮ್ಮ ಅಭಿಪ್ರಾಯಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಸಾಕ್ಷಾಚಿತ್ರದಲ್ಲಿ ಏನೇನಿದೆ?
ಉಕ್ರೇನ್ ನಿರ್ದೇಶಕ ವಸ್ಯಾನೋವಿಚ್ ಅಪಾಯದ ಸಂದರ್ಭದಲ್ಲಿಯೇ ಯುದ್ಧದಿಂದಾದ ಅನಾಹುತಗಳನ್ನು ಸೆರೆಹಿಡಿಯಲು ನಿರ್ಧರಿಸಿದ್ದಾರೆ. ರಾಷ್ಯ ದಾಳಿಯಿಂದ ಉಕ್ರೇನ್ ರಾಜಧಾನಿ ಕೀವ್ ಸ್ಥಿತಿಯನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯಲಿದ್ದಾರೆ. ಈ ಡಾಕ್ಯೂಮೆಂಟರಿಯಲ್ಲಿ ಕೀವ್‌ನಲ್ಲಿರುವ ಜನರು, ಅವರ ಪರಿಸ್ಥಿತಿ, ಯುವಕರು ಮತ್ತು ಹಿರಿಯರು, ಇರ್ಪಿನ್‌ನಿಂದ ಜನರ ಸ್ಥಳಾಂತರ, ಕ್ಷಿಪಣಿ ದಾಳಿಯಿಂದ ಮುರಿದು ಬಿದ್ದ ಸೇತುವೆ ಇಂತಹ ದೃಶ್ಯಗಳನ್ನು ಡಾಕ್ಯೂಮೆಂಟರಿಯಲ್ಲಿ ಸೆರೆ ಹಿಡಿಯಲಿದ್ದಾರೆ.

ಗನ್‌ಗಿಂತ ಕ್ಯಾಮರಾ ಚೆನ್ನಾಗಿ ಹಿಡಿಯಬಲ್ಲೆ
ಉಕ್ರೇನ್ ನಿರ್ದೇಶಕ ವಸ್ಯಾನೋವಿಚ್ ಅಂತರಾಷ್ಟ್ರೀಯ ಮಾಧ್ಯಮ ರಾಯಿಟರ್ಸ್ ಜೊತೆ ಈ ಡಾಕ್ಯೂಮೆಂಟರಿ ಜೊತೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. " ನಾನು ಬಂದೂಕಿಗಿಂತ ಉತ್ತಮವಾಗಿ ಕ್ಯಾಮರಾವನ್ನು ಹಿಡಿಯಬಲ್ಲೆ. ನಾನು ಬೇಗನೇ ಕಲಿಯಬಲ್ಲೆ, ಸಿನಿಮಾ ತೆಗೆಯಬಲ್ಲೆ, ಫೋಟೊಗಳನ್ನು ಸೃಷ್ಟಿಸಬಲ್ಲೆ, ಸಿಂಪಲ್ ಆಗಿ ನೋಡಿದ ಕೂಡಲೇ ಅರ್ಥ ಮಾಡಿಕೊಳ್ಳಬಲ್ಲೆ. " ಎಂದು ಉಕ್ರೇನ್ ಸಿನಿಮಾದ ನಿರ್ದೇಶಕ ವ್ಯಾಸನೋವಿಚ್ ತಿಳಿಸಿದ್ದಾರೆ.

ಬಂದೂಕಿಗಿಂತ ಡಾಕ್ಯೂಮೆಂಟರಿ ಉತ್ತಮ
ರಷ್ಯಾ ದಾಳಿಯನ್ನು ಆರಂಭಿಸುವುದಕ್ಕೂ ಮುನ್ನವೇ ಉಕ್ರೇನ್ ನಿರ್ದೇಶಕ ವ್ಯಾಸನೋವಿಚ್ ಬಂದೂಕು ಹಿಡಿಯುವುದರ ಬಗ್ಗೆ ತರಬೇತಿ ಪಡೆದಿದ್ದರು. ಈ ನಿರ್ದೇಶಕನ ಬಳಿ ಗನ್ ಕೂಡ ಇದೆ. ಆದರೆ, ಈಗ ಆ ಗನ್ ಅನ್ನು ಬಳಸಲಿ ನಿರ್ದೇಶಕ ಸಿದ್ಧನಿಲ್ಲ. "ಅಗತ್ಯ ಬಿದ್ದಾಗ ರಷ್ಯಾ ವಿರುದ್ಧ ಹೋರಾಡಲು ನಾವೆಲ್ಲರೂ ಬಂದೂಕನ್ನು ಹಿಡಿಯುತ್ತೇವೆ. ಬಂದೂಕು ಹಿಡಿದು ಹೋರಾಡುವುದಕ್ಕೂ ಮುನ್ನ ರಷ್ಯಾ ದಾಳಿಯಿಂದ ಆದ ಈ ನಷ್ಟವನ್ನು ಸೆರೆ ಹಿಡಿಯುವುದು ಮುಖ್ಯ." ಎಂದು ವ್ಯಾಸನೋವಿಕ್ ಹೇಳಿದ್ದಾರೆ.

ಡಾಕ್ಯೂಮೆಂಟರಿ ಉಪಯೋಗ ಹೇಗೆ?
ಉಕ್ರೇನ್ ನಿರ್ದೇಶಕ ವ್ಯಾಸನೋವಿಚ್ ಯುದ್ಧದ ದೃಶ್ಯಗಳನ್ನು ಸೆರೆ ಹಿಡಿದ ಬಳಿಕ ಏನು ಮಾಡಬೇಕು ಎನ್ನುವುದನ್ನು ಮುಂದೆ ನಿರ್ಧರಿಸಲಿದ್ದಾರೆ. ಸದ್ಯ ತನ್ನ ಕ್ಯಾಮರಾದಲ್ಲಿ ಭೀಕರ ದೃಶ್ಯಗಳು, ಅದರಿಂದಾದ ಪರಿಣಾಮಗಳನ್ನು ಸೆರೆಹಿಡಿಯಲಿದ್ದಾರೆ. ನಿರ್ದೇಶಕ ವ್ಯಾಸನೋವಿಚ್ ಉತ್ತರ ಉಕ್ರೇನ್‌ನ ಝೈಟೊಮಿರ್‌ನವರು. 2012ರಲ್ಲಿ ಹಾಸ್ಯ ಸಿನಿಮಾ 'ಬ್ಯುಸಿನೆಸ್ ಆಸ್ ಯೂಸುವಲ್' ನಿರ್ದೇಶಿಸಿದ್ದರು. 2019ರಲ್ಲಿ 'ಅಟ್ಲಾಂಟಿಸ್' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾ ಸೈನಿಕನೊಬ್ಬ ಆಘಾತದ ಬಳಿಕ ಖಿನ್ನತೆಗೆ ಒಳಗಾಗುವ ಕಥೆಯನ್ನು ಹೊಂದಿದೆ. ಇದು ವೆನಿಸ್ ಫಿಲ್ಮ್‌ಫೆಸ್ಟಿವಲ್ ನಲ್ಲಿ ಆ ಭಾಗಿಯಾಗಿ ಮೆಚ್ಚುಗೆ ಗಳಿಸಿತ್ತು.


Click it and Unblock the Notifications











