ಅಮೆರಿಕದಲ್ಲಿ ವಿದೇಶಿ ಸಿನಿಮಾಗಳಿಗೆ 100ರಷ್ಟು ತೆರಿಗೆ.. ಹಾಲಿವುಡ್ ಉಳಿಸೋಕೆ ಟ್ರಂಪ್ ಹುಚ್ಚಾಟ? ಮನರಂಜನೆಗೂ ಕುತ್ತು?
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತಿಚೆಗೆ ಯಾಕೋ ಜಗತ್ತಿಗೆ ತಲೆ ನೋವಾಗಿ ಪರಿಣಮಿಸುತ್ತಿದ್ದಾರೆ. ಜಗತ್ತಿಗೆ ಬಾಸ್ ಆಗೋ ಅಮಲೋ.. ಇಲ್ಲ ವಯಸ್ಸಿಗೆ ಮೀರಿದ ಹುಚ್ಚಾಟವೋ ಗೊತ್ತಾಗುತ್ತಿಲ್ಲ. ಟ್ರಂಪ್ ಅಷ್ಟೇ ಅಲ್ಲ, ಅವರೊಂದಿಗೆ ಕೆಲಸ ಮಾಡುತ್ತಿರುವವರ ಹೇಳಿಕೆಗಳು ಕೂಡ ಜಗತ್ತಿನ ಇತರ ದೇಶಗಳ ಕಣ್ಣನ್ನು ಕೆಂಪಾಗಿಸುತ್ತಿವೆ. ದಿನಕ್ಕೊಂದು ನಿರ್ಧಾರ. ದಿನಕ್ಕೊಂದು ತೆರಿಗೆ. ದಿನಕ್ಕೊಂದು ಹೇಳಿಕೆಯಿಂದ ಜಾಗತೀಕ ಮಟ್ಟದಲ್ಲಿ ಚರ್ಚೆಗೆ ಒಳಗಾಗುತ್ತಿದ್ದಾರೆ.
ಎರಡನೇ ಬಾರಿ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದಾಗಿನಿಂದ ತೆರಿಗೆಯ ಹುಚ್ಚು ಹಿಡಿದಿದೆ. ಅಮೆರಿಕವನ್ನು ಮತ್ತೆ ಸದೃಢವನ್ನಾಗಿ ಮಾಡಬೇಕೆಂದು ಪಟ್ಟು ಹಿಡಿದು ಕೂತಿರುವ ಟ್ರಂಪ್ ಮಾತೆತ್ತಿದ್ದರೆ ತೆರಿಗೆಯ ಅಸ್ತ್ರ ಬಿಡುತ್ತಿದ್ದಾರೆ. ಭಾರತ ಸೇರಿದಂತೆ ಹಲವು ರಾಷ್ಟ್ರಗಳ ಮೇಲೆ ಕೆಲವು ವಲಯಗಳಿಗೆ ಶೇ.100ರಷ್ಟು ತೆರಿಗೆ ಹೇರಿರುವ ಟ್ರಂಪ್ ಕೆಂಗಣ್ಭಿಗೆ ಗುರಿಯಾಗಿರೋದಂತೂ ಸತ್ಯ.

ಔಷಧಿ, ಸಾಫ್ಟ್‌ವೇರ್, ಕೃಷಿ ಸೇರಿದಂತೆ ಕಣ್ಣಿಗೆ ಕಂಡಿದ್ದಕ್ಕೆಲ್ಲ ತೆರಿಗೆ ಅಂತಿರೋ ಟ್ರಂಪ್ ಈಗ ಸಿನಿಮಾ ಮೇಲೆ ಕಣ್ಣಿಟ್ಟಿದ್ದಾರೆ. ಅಮೆರಿಕ ಬಿಟ್ಟು, ವಿದೇಶದಲ್ಲಿ ನಿರ್ಮಾಣ ಆಗುವ ಸಿನಿಮಾಗಳಿಗೆ ಶೇ.100ರಷ್ಟು ತೆರಿಗೆ ವಿಧಿಸುವುದಾಗಿ ಹೇಳಿದ್ದಾರೆ. ಮತ್ತೊಂದು ಕ್ಷೇತ್ರದ ಮೇಲೆ ತೆರಿಗೆ ಬರೆ ಹಾಕುವುದಕ್ಕೆ ಹೊರಟಿದ್ದಾರೆ. ಈ ಬಗ್ಗೆ ಜಾಗತಿಕ ಮಟ್ಟದಲ್ಲಿ ಯಾವ ರೀತಿ ಚರ್ಚೆಯಾಗುತ್ತೆ ಅನ್ನೋದು ನೋಡಬೇಕಿದೆ.
ಅಮೆರಿಕದ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಟ್ರುಥ್ ಸೋಶಿಯಲ್‌ನಲ್ಲಿ ಅಮೆರಿಕಗೆ ಎಂಟ್ರಿ ಕೊಡಲಿರುವ ವಿದೇಶಿ ಸಿನಿಮಾಗಳಿಗೆ ಶೇ.100ರಷ್ಟು ತೆರಿಗೆ ವಿಧಿಸುವುದಾಗಿ ಹೇಳಿದ್ದಾರೆ. ಈ ನಿರ್ಧಾರದ ಹಿನ್ನೆಲೆ ಏನು ಅನ್ನೋದನ್ನು ವಿವರಿಸಿದ್ದಾರೆ. ಹಾಲಿವುಡ್ ಸಂಕಷ್ಟಕ್ಕೆ ಸಿಲುಕಿದೆ. ಇಲ್ಲಿನ ಚಿತ್ರೋದ್ಯಮವನ್ನು ಬೇರೆ ದೇಶಗಳು ತನ್ನಕಡೆಗೆ ಸೆಳೆದಿವೆ. ಹೀಗಾಗಿ ಮತ್ತೆ ಅಮೆರಿಕನ್ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ಎದ್ದು ನಿಲ್ಲುವಂತೆ ಮಾಡುವುದಕ್ಕೆ ತೆರೆ ಅಸ್ತ್ರ ಬಿಟ್ಟಿದ್ದಾರೆ. ಸದ್ಯದ ಹಾಲಿವುಡ್ ಪರಿಸ್ಥಿತಿಯನ್ನು ಮಗುವಿನ ಕೈಯಿಂದ ಕ್ಯಾಂಡಿಯನ್ನು ಕಸಿಕೊಂಡು ಅದನ್ನೇ ತನ್ನ ಕಡೆಗೆ ಸೆಳೆಯುವಂತಿದೆ? ಎಂದು ಟ್ರಂಪ್ ಹೇಳಿದ್ದಾರೆ.
ಹಾಲಿವುಡ್ ಸಿನಿಮಾಗಳು ಜಾಗತಿಕ ಮಟ್ಟದಲ್ಲಿ ವ್ಯಾವಹಾರ ಮಾಡುತ್ತವೆ. ಅಮೆರಿಕದ ಸಿನಿಮಾಗಳು ಬಹಿತೇಕ ಎಲ್ಲಾ ದೇಶಗಳಲ್ಲಿಯೂ ರಿಲೀಸ್ ಆಗುತ್ತವೆ. ಅಲ್ಲದೆ ಕೋಟಿ ಲೆಕ್ಕದಲ್ಲಿ ಹಣವನ್ನು ದೋಚಿಕೊಂಡು ಹೋಗುತ್ತಿದ್ದವು. ಆದರೆ, ಇತ್ತೀಚೆಗೆ ಅಮೆರಿಕದ ಸಿನಿಮಾ ಬಾಕ್ಸಾಫೀಸ್ ಸದ್ದು ಮಾಡುತ್ತಿಲ್ಲ. ಜನರು ಓಟಿಟಿ ಹಾವಳಿಯಿಂದ ಥಿಯೇಟರ್‌ಗೆ ಹೋಗುವುದಕ್ಕೆ ಹಿಂದೇಟು ಹಾಕಿದ್ದಾರೆ. ಹೀಗಾಗಿ ಹಾಲಿವುಡ್ ಅಪಾರ ನಷ್ಟದಲ್ಲಿದೆ ಎಂದು ಹೇಳಲಾಗುತ್ತಿದೆ.
ಒಂದು ಲೆಕ್ಕಾಚಾರದ ಪ್ರಕಾರ, ಹಾಲಿವುಡ್ ಕಳೆದ ಮೂರು-ನಾಲ್ಕು ವರ್ಷಗಳಿಂದ ಸುಮಾರು 5 ಬಿಲಿಯನ್ ಡಾಲರ್‌ನಷ್ಟು ನಷ್ಟ ಅನುಭವಿಸಿದೆ ಎಂದು ಹೇಳಲಾಗಿದೆ. ಇದರೊಂದಿಗೆ ಹಾಲಿವುಡ್‌ನ ರೈಟರ್‌ಗಳು, ತಂತ್ರಜ್ಞರು ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ವಿಎಫ್‌ಎಕ್ಸ್ ಸೇರಿದಂತೆ ಹಲವು ತಾಂತ್ರಿಕ ವಿಷಯಗಳಿಗೆ ಭಾರತ ದೇಶವನ್ನು ಡಿಪೆಂಡ್ ಆಗಿದ್ದರೂ ಕೂಡ ಇದೆ. ಹೀಗಾಗಿ ಟ್ರಂಪ್ ತೆರಿಗೆ ನೀತಿ ಅದಕ್ಕೂ ಕಲ್ಲು ಹಾಕಿದಂತೆ ಇದೆ.
ಇದು ಭಾರತೀಯ ಚಿತ್ರರಂಗದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ. ಭಾರತದ ಸಿನಿಮಾಗಳು ಅಮೆರಿಕಾದಲ್ಲಿ ಪ್ರೀಮಿಯರ್ ಆಗುತ್ತಿತ್ತು. ಅಲ್ಲಿರುವ ಅನಿವಾಸಿ ಭಾರತೀಯರು ಸಿನಿಮಾವನ್ನು ತಪ್ಪದೆ ನೋಡುತ್ತಿದ್ದರು. ಇದರಿಂದ ಕೋಟಿಗಳ ಲೆಕ್ಕದಲ್ಲಿ ಸಿನಿಮಾ ಕಲೆಕ್ಷನ್ ಮಾಡಿತ್ತಿತ್ತು. ಈಗ ಬಜೆಟ್ ಜಾಸ್ತಿಯಾಗುತ್ತೆ. ಜೊತೆಗೆ ಕೆಲವು ದೇಶಗಳು ಸಿನಿಮಾ ರಿಲೀಸ್ ಮಾಡದೇ ಇರುವ ಸಾಧ್ಯತೆನೂ ಇರುತ್ತೆ. ಇದರಿಂದ ಸೂಪರ್‌ಸ್ಟಾರ್‌ಗಳ ಸಂಭಾವನೆಗೂ ಕುತ್ತು ಬೀಳುವ ಸಾಧ್ಯತೆಯಿದೆ.


Click it and Unblock the Notifications











