ಕೊರೊನಾ ವೈರಸ್‌ಗೆ ಹಿರಿಯ ಹಾಲಿವುಡ್ ನಟ ಮಾರ್ಕ್ ಬ್ಲಮ್ ಬಲಿ
'ಡೆಸ್ಪೆರೇಟ್ಲಿ ಸೀಕಿಂಗ್ ಸುಸಾನ್', 'ಕ್ರೊಕೊಡೈಲ್ ಡುಂಡೀ' ಮುಂತಾದ ಸಿನಿಮಾ ಹಾಗೂ ನೆಟ್‌ಫ್ಲಿಕ್ಸ್ ಸರಣಿಯ 'ಯೂ'ದಲ್ಲಿ ನಟಿಸುವ ಮೂಲಕ ಹೆಸರುಗಳಿಸಿದ್ದ ಹಿರಿಯ ನಟ ಮಾರ್ಕ್ ಬ್ಲಮ್ ಕೊರೊನಾ ವೈರಸ್‌ನಿಂದ ಮೃತಪಟ್ಟಿದ್ದಾರೆ.
Recommended Video
69 ವರ್ಷದ ಮಾರ್ಕ್ ಬ್ಲಮ್ ಅವರ ಸಾವಿನ ಸುದ್ದಿಯನ್ನು ಸ್ಕ್ರೀನ್ ಆಕ್ಟರ್ಸ್ ಗಿಲ್ಡ್ ಅಮೆರಿಕನ್ ಫೆಡರೇಷನ್ ಆಫ್ ಟೆಲಿವಿಷನ್ ಆಂಡ್ ರೇಡಿಯೋ ಆರ್ಟಿಸ್ಟ್ (ಎಸ್‌ಎಜಿ-ಎಎಫ್‌ಟಿಆರ್‌ಎ) ಕಾರ್ಯನಿರ್ವಾಹಕ ಉಪಾಧ್ಯಕ್ಷ ರೆಬೆಕಾ ಡಮೊನ್ ಬಹಿರಂಗಪಡಿಸಿದ್ದಾರೆ.
'ಮಾರ್ಕ್ ಅವರು ಗಿಲ್ಡ್ ಮತ್ತು ಎಸ್‌ಎಜಿ ಎಎಫ್‌ಟಿಆರ್ಎ ಮಂಡಳಿಯ ಬದ್ಧತೆಯುಳ್ಳ ಸದಸ್ಯರಾಗಿದ್ದರು. 2007-2013ರ ಅವಧಿಯಲ್ಲಿ ಅವರು ಸೇವೆ ಸಲ್ಲಿಸಿದ್ದರು' ಎಂದು ಅವರು ಟ್ವೀಟ್ ಮಾಡಿದ್ದಾರೆ.

ಮಾರ್ಕ್ ಅವರು ಇತ್ತೀಚೆಗೆ 'ಲೈಫ್ ಟೈಮ್' ಮತ್ತು ನೆಟ್‌ಫ್ಲಿಕ್ಸ್‌ನ ಯಶಸ್ವಿ ಸರಣಿ 'ಯೂ'ದಲ್ಲಿ ಪುಸ್ತಕದಂಗಡಿ ಮಾಲೀಕ ಹಾಗೂ ಮತ್ತೊಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
1970ರ ದಶಕದಲ್ಲಿ ಮಾರ್ಕ್ ಅವರು ತಮ್ಮ ವೃತ್ತಿ ಬದುಕು ಆರಂಭಿಸಿದ್ದರು. ಆಲ್ಬರ್ಟ್ ಇನ್ನಾರಟೊ ನಿರ್ದೇಶನದ 'ಗಸ್ ಆಂಡ್ ಅಲ್' ನಾಟಕದ ಮೂಲಕ ಜನಪ್ರಿಯತೆ ಪಡೆದಿದ್ದರು. 'ಲಾಸ್ಟ್ ಇನ್ ಯಾಂಕರ್ಸ್', 'ದಿ ಬೆಸ್ಟ್ ಮ್ಯಾನ್', 'ದಿ ಅಸೆಂಬಲ್ಡ್ ಪಾರ್ಟೀಸ್' ನಾಟಕಗಳಲ್ಲಿ ನಟಿಸಿದ್ದರು. 1985ರಲ್ಲಿ 'ಡೆಸ್ಪರೇಟ್ಲಿ ಸೀಕಿಂಗ್ ಸುಸಾನ್' ಚಿತ್ರದಲ್ಲಿ ಅವರು ಗಮನ ಸೆಳೆದಿದ್ದರು. ಮಾರ್ಕ್ ಅವರ ಸಾವಿಗೆ ಹಾಲಿವುಡ್‌ನ ಅನೇಕ ತಾರೆಯರು ಶೋಕ ವ್ಯಕ್ತಪಡಿಸಿದ್ದಾರೆ.


Click it and Unblock the Notifications











