ವಿಶ್ವದ ಮೊದಲ ಐಮ್ಯಾಕ್ಸ್ ಸಿನಿಮಾ 'ದಿ ಒಡಿಸ್ಸಿ': ಭಾರತದಲ್ಲಿ ಟಿಕೆಟ್ ಬುಕ್ಕಿಂಗ್ ಶುರು

ಜಗತ್ತಿನ ಜನಪ್ರಿಯ ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ (Christopher Nolan) ಅವರ ಆಕ್ಷನ್ ಸಿನಿಮಾ 'ದಿ ಒಡಿಸ್ಸಿ' (The Odyssey) ನೋಡುವುದಕ್ಕೆ ಇಡೀ ಜಗತ್ತೇ ಎದುರು ನೋಡುತ್ತಿದೆ. ಈ ಸಿನಿಮಾ ಜುಲೈ 17, 2026 ರಂದು ಈ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರುವುದಕ್ಕೆ ಸಜ್ಜಾಗಿದೆ. ಅದಕ್ಕೂ ಒಂದು ತಿಂಗಳ ಮುಂಚಿತವಾಗಿಯೇ ಭಾರತದಲ್ಲಿ ಈ ಸಿನಿಮಾದ ಅಡ್ವಾನ್ಸ್ ಬುಕಿಂಗ್ ಆರಂಭ ಮಾಡಲಾಗಿದೆ. ಈ ಮೂಲಕ ಭಾರತೀಯ ಚಿತ್ರಪ್ರೇಮಿಗಳಿಗೆ ಈ ಸಿನಿಮಾ ತಂಡದ ಬಿಗ್ ಸರ್ಪ್ರೈಸ್ ನೀಡಿದೆ.

ಸಿನಿಮಾ ಜಗತ್ತಿನಲ್ಲಿ ಹೊಸದಾಗಿ ಸಂಚಲನ ಸೃಷ್ಟಿಸುತ್ತಿರುವ ಐಮ್ಯಾಕ್ಸ್ ಫಿಲ್ಮ್ ತಂತ್ರಜ್ಞಾನವನ್ನು ಬಳಸಿ 'ದಿ ಒಡಿಸ್ಸಿ' ಸಿನಿಮಾವನ್ನು ಶೂಟ್ ಮಾಡಲಾಗಿದೆ. ಈ ಸಿನಿಮಾವನ್ನು ಸಂಪೂರ್ಣವಾಗಿ ಐಮ್ಯಾಕ್ಸ್ ಕ್ಯಾಮೆರಾಗಳಲ್ಲೇ ಚಿತ್ರೀಕರಣಗೊಂಡಿರೋದು ವಿಶೇಷ. ಇದು ಐಮ್ಯಾಕ್ಸ್ ಕ್ಯಾಮರಾಗಳಲ್ಲಿ ಚಿತ್ರೀಕರಣಗೊಂಡ ಮೊದಲ ಸಿನಿಮಾವಾಗಿದೆ. ಹೀಗಾಗಿ ಸಿನಿಮಾ ಬಗ್ಗೆ ಕ್ರೇಜ್ ದುಪ್ಪಟ್ಟಾಗಿದೆ.

World s First Imax movie The Odyssey Advance ticket booking is open

ಇದನ್ನು ಗಮನದಲ್ಲಿ ಇಟ್ಟುಕೊಂಡು ಆಸ್ಕರ್ ಪ್ರಶಸ್ತಿ ವಿಜೇತ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ಹಾಗೂ ತಂಡ ಒಂದು ತಿಂಗಳು ಮೊದಲೇ ಅಡ್ವಾನ್ಸ್ ಬುಕಿಂಗ್ ಅನ್ನು ಆರಂಭ ಮಾಡಿದ್ದಾರೆ. ಈ ಸಿನಿಮಾದಲ್ಲಿ ಮ್ಯಾಟ್ ಡಾಮನ್ (ಒಡಿಸ್ಸಿಯಸ್ ಆಗಿ), ಟಾಮ್ ಹಾಲೆಂಡ್ (ಟೆಲಿಮ್ಯಾಕಸ್ ಆಗಿ) ಮತ್ತು ಆನ್ ಹ್ಯಾಥ್‌ವೇ (ಪೆನೆಲೋಪ್ ಆಗಿ) ನಟಿಸಿದ್ದಾರೆ. ಇವರ ಜೊತೆಗೆ ಝೆಂಡಾಯಾ, ರಾಬರ್ಟ್ ಪ್ಯಾಟಿನ್ಸನ್ ಮತ್ತು ಚಾರ್ಲಿಜ್ ಥೆರಾನ್ ಅವರಂತಹ ದೊಡ್ಡ ಸ್ಟಾರ್‌ ಕಾಸ್ಟ್ ಈ ಸಿನಿಮಾಗಿದೆ.

ಹೋಮರ್ ಅವರ ಜಗತ್‌ ಪ್ರಸಿದ್ಧ ಕಥೆಯನ್ನು ಅವರು ಹಿಂದೆಂದೂ ಯಾರೂ ಮಾಡದ ರೀತಿಯಲ್ಲಿ ತೆರೆಮೇಲೆ ತರುತ್ತಿದ್ದಾರೆ. ಟ್ರಾಯ್ ಯುದ್ಧ ಮುಗಿದ ನಂತರ ಇಥಾಕಾದ ರಾಜ ಒಡಿಸ್ಸಿಯಸ್ ತನ್ನ ಮನೆಗೆ ಮರಳುವ ಅಪಾಯಕಾರಿ ಪ್ರಯಾಣವೇ 'ದಿ ಒಡಿಸ್ಸಿ' ಸಿನಿಮಾದ ಕಥೆ. ಜೂನ್ 8 ರಿಂದ ಭಾರತದಾದ್ಯಂತ ಐಮ್ಯಾಕ್ಸ್ ಸ್ಕ್ರೀನ್‌ಗಳ ಮುಂಗಡ ಟಿಕೆಟ್ ಬುಕಿಂಗ್ ಆರಂಭ ಆಗಿದೆ. ಈ ಸಿನಿಮಾ ರಿಲೀಸ್‌ಗೂ ಮುನ್ನವೇ ಟಿಕೆಟ್ ಕಾಯ್ದಿರಿಸುವ ಅವಕಾಶ ಪಡೆದ ವಿಶ್ವದ ಮೊದಲ ಕೆಲವು ದೇಶಗಳ ಪೈಕಿ ಭಾರತವೂ ಕೂಡ ಒಂದಾಗಿದೆ. ಇದು ಗ್ಲೋಬಲ್ ಮಾರುಕಟ್ಟೆಯಲ್ಲಿ ಭಾರತಕ್ಕಿರುವ ಪ್ರಾಮುಖ್ಯತೆಯನ್ನು ಸಾರಿ ಹೇಳುತ್ತಿದೆ.

ಅಡ್ವಾನ್ಸ್ ಬುಕಿಂಗ್ ಆರಂಭವಾಗುತ್ತಿದ್ದಂತೆಯೇ ಭಾರತದಲ್ಲಿ ಟಿಕೆಟ್ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಈ ಮೂಲಕ ಇಲ್ಲಿ ಕ್ರಿಸ್ಟೋಫರ್ ನೋಲನ್ ಅವರ ಕ್ರೇಜ್ ಮತ್ತೊಮ್ಮೆ ಸಾಬೀತಾಗಿದೆ. ಹಾಗೇ ಟಿಕೆಟ್ ದರಗಳು ಕೂಡ ಆಕಾಶದೆತ್ತರದಷ್ಟು ದುಬಾರಿ. ಮುಂಬೈ ಮತ್ತು ಪುಣೆಯಂತಹ ಪ್ರಮುಖ ನಗರಗಳಲ್ಲಿ ಪ್ರೀಮಿಯಂ ಐಮ್ಯಾಕ್ಸ್ ಟಿಕೆಟ್ ದರಗಳು ಬರೋಬ್ಬರಿ 3,000 ರೂ. ಯಿಂದ 3,300 ರೂ. ವರೆಗೆ ತಲುಪಿದೆ. ಕೇವಲ ಕೆಲವೇ ನಿಮಿಷಗಳಲ್ಲಿ ಶೋಗಳು ಹೌಸ್‌ಫುಲ್ ಆಗಿವೆ. ಯಾವುದೇ ಪ್ರಚಾರವಿಲ್ಲದಿದ್ದರೂ ಕೇವಲ ನಿರ್ದೇಶಕನ ಹೆಸರೊಂದಕ್ಕೇ ಟಿಕೆಟ್‌ಗಳು ಇಷ್ಟು ವೇಗವಾಗಿ ಸೇಲ್ ಆಗುತ್ತಿದೆ.

ಭಾರತದಲ್ಲಿ 'ದಿ ಒಡಿಸ್ಸಿ' ಚಿತ್ರದ ಐಮ್ಯಾಕ್ಸ್ ಟಿಕೆಟ್ ಬುಕ್ಕಿಂಗ್ ಆರಂಭದ ಕುರಿತು ವಾರ್ನರ್ ಬ್ರದರ್ಸ್ ಡಿಸ್ಕವರಿ ಇಂಡಿಯಾದ ಉಪಾಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡೆನ್ಜಿಲ್ ಡಿಯಾಸ್ ಮಾಹಿತಿ ಹಂಚಿಕೊಂಡಿದ್ದಾರೆ. "ಚಲನಚಿತ್ರ ಇತಿಹಾಸದಲ್ಲೇ ಸಂಪೂರ್ಣವಾಗಿ ಐಮ್ಯಾಕ್ಸ್ ಕ್ಯಾಮೆರಾಗಳಲ್ಲೇ ಚಿತ್ರೀಕರಿಸಲಾದ ಮೊದಲ ಸಿನಿಮಾ 'ದಿ ಒಡಿಸ್ಸಿ'. ಈ ಮೈಲಿಗಲ್ಲನ್ನು ತಲುಪಲು ಕ್ರಿಸ್ಟೋಫರ್ ನೋಲನ್ ಸುಮಾರು ಇಪ್ಪತ್ತು ವರ್ಷಗಳ ಕಾಲ ಶ್ರಮಿಸಿದ್ದಾರೆ. ಜೂನ್ 8 ರಂದು, ಭಾರತದಲ್ಲಿ ಮೊದಲ ಬಾರಿಗೆ, ನೋಲನ್ ಅಭಿಮಾನಿಗಳು ಜಗತ್ತಿನಾದ್ಯಂತ ಇರುವ ಇತರ ಅಭಿಮಾನಿಗಳೊಂದಿಗೆ ಏಕಕಾಲದಲ್ಲಿ ತಮ್ಮ ನೆಚ್ಚಿನ ಸೀಟುಗಳನ್ನು ಬುಕ್ ಮಾಡಿಕೊಳ್ಳಬಹುದು. ಭಾರತೀಯ ನೋಲನ್ ಅಭಿಮಾನಿಗಳಿಗೆ ಇದು ಅತ್ಯಂತ ವಿಶೇಷವಾದ ಕ್ಷಣ. ಸಂಪೂರ್ಣ ಐಮ್ಯಾಕ್ಸ್ ಕ್ಯಾಮೆರಾಗಳಲ್ಲಿ ನಿರ್ಮಾಣಗೊಂಡ ಇತಿಹಾಸದ ಮೊದಲ ಚಿತ್ರಕ್ಕಾಗಿ, ಅವರು ವಿಶ್ವದ ಇತರ ದೇಶಗಳ ಜನರೊಂದಿಗೆ ಒಟ್ಟಿಗೆ ಸೀಟುಗಳನ್ನು ಕಾಯ್ದಿರಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.

'ದಿ ಒಡಿಸ್ಸಿ' ಸಿನಿಮಾದ ಐಮ್ಯಾಕ್ಸ್ ಟಿಕೆಟ್‌ಗಳು ಜೂನ್ 8, 2026 ರಿಂದ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದೆ. ಹಾಗೇ ಇದು ಸಿನಿಮಾ ಜುಲೈ 17, 2026 ರಂದು ಭಾರತದಾದ್ಯಂತ ರಿಲೀಸ್ ಆಗಲಿದೆ.

English summary
World's First Imax movie The Odyssey Advance ticket booking is open.
Read more about: movie christopher nolan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X