ಸಿಎಗೆ ಗುಡ್‌ಬೈ ಹೇಳಿ ನಟನೆ ಕಡೆಗೆ ವಾಲಿದ ನಟಿ; 'ಆಸೆ'ಯ ಇಂಚರಾ ಜೋಶಿ ಬಗ್ಗೆ ನಿಮಗೆಷ್ಟು ಗೊತ್ತು?

ಕನ್ನಡ ಕಿರುತೆರೆ ಯಾವ ಸಿನಿಮಾಗೂ ಕಮ್ಮಿಯಿಲ್ಲ. ಈಗಂತೂ ಸಿನಿಮಾಗಿಂತ ಜೋರಾಗಿ ಟ್ವಿಸ್ಟ್ ಅಂಡ್ ಟರ್ನ್ ಕೊಡುತ್ತಿದ್ದಾರೆ. ಕಾಂಪಿಟೇಷನ್‌ಗೆ ಬಿದ್ದು ಧಾರಾವಾಹಿಗಳನ್ನು ನಿರ್ಮಿಸುತ್ತಿದ್ದಾರೆ. ಹೀಗೆ ಗಮನ ಸೆಳೆಯುತ್ತಿರುವ ಧಾರಾವಾಹಿ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ 'ಆಸೆ'. ಕಿರುತೆರೆ ವೀಕ್ಷಕರು ಈ ಧಾರಾವಾಹಿಯನ್ನು 'ಆಸೆ; ಪಟ್ಟು ನೋಡುತ್ತಿದ್ದಾರೆ.

ಇದೇ ಧಾರಾವಾಹಿಯಲ್ಲಿ ಶ್ರುತಿ ಪಾತ್ರದಲ್ಲಿ ನಟಿಸುತ್ತಿರುವ ಕಿರುತೆರೆ ನಟಿ ಇಂಚರಾ ಜೋಶಿ ಮಿಂಚುತ್ತಿದ್ದಾರೆ. ಈಗಾಗಲೇ ಕನ್ನಡ ಹಾಗೂ ತೆಲುಗಿನ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಇಂಚರಾ ಜೋಶಿ 'ಆಸೆ' ಮೂಲಕ ಮತ್ತೆ ಕನ್ನಡದಲ್ಲಿ ಸದ್ದು ಮಾಡುತ್ತಿದ್ದಾರೆ. ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಇಂಚರಾ ಜೋಶಿ ತಮ್ಮ ಜರ್ನಿ ಹಾಗೂ ಆಸೆ ಧಾರಾವಾಹಿಯ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ.

Aase Kannada serial actress Inchara Joshi life journey and biography

ನಿಮ್ಮ ಊರು ಯಾವುದು? ನಟನೆಯಲ್ಲಿ ಆಸಕ್ತಿ ಬಂದಿದ್ದೇಗೆ?

"ನಾನು ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರುನಲ್ಲೇ. ನಮ್ಮ ಅಮ್ಮ ಕುಂದಾಪುರದವರು. ನಮ್ಮ ಅಪ್ಪ ಬೆಳಗಾವಿ ಕಡೆಯವರು. ನಾನು ನಮ್ಮ ಅಕ್ಕ ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರು. ಆಮೇಲೆ ಓದಿನಲ್ಲಿ ತುಂಬಾ ಚೆನ್ನಾಗಿದೆ. ಬಾಲ್ಯದಲ್ಲಿ ಪ್ರತಿಭಾ ಕಾರಂಜಿ ಅಂತ ಮಾಡುತ್ತಿದ್ದರು. ಆಗ ನಾನೇ ಸ್ಕ್ರಿಪ್ಟ್ ಬರೆದು ಡೈರೆಕ್ಷನ್ ಮಾಡಿದ್ದೆ. ಒಂದು ಎಂಟು ಜನ ಇದ್ವಿ. ವರದಕ್ಷಿಣೆ ಕಿರುಕುಳದ ಬಗ್ಗೆ ಮಾಡಿದ್ವಿ. ಜಿಲ್ಲಾ ಮಟ್ಟದವರೆಗೆ ಹೋಗಿ ಮೂರನೇ ಪ್ರೈಸ್ ಗೆದ್ದುಕೊಂಡಿದ್ವಿ. ಆಗಲೇ ನನಗೆ ಅಕ್ಟಿಂಗ್‌ನಲ್ಲಿ ಆಸಕ್ತಿಯಿದೆ ಅಂತ ಗೊತ್ತಾಯ್ತು."

ನಿಮ್ಮ ಮೊದಲ ಸೀರಿಯಲ್ ಯಾವುದು?

"ಸಿಎ ಮುಂದುವರೆಸು ಅಂತ ಅಪ್ಪ ಅಂದರು. ಏನೇ ನನಗೆ ಗೊತ್ತಿಲ್ಲ. ಜಾಸ್ತಿ ಓದುವುದು ಇರುತ್ತೆ ಅಂತ ಅನಿಸುತ್ತಿತ್ತು. ಒಂದು ದಿನ ಹೋಗಿ ಅಪ್ಪ ನನಗೆ ಇದು ಆಗಲ್ಲ ಅಂತ ಅನಿಸುತ್ತೆ ಅಂತ ಹೇಳಿದೆ. ಅಪ್ಪ ಒಂದು ದಿನ ಕೋಪ ಮಾಡಿಕೊಂಡಿದ್ದರು. ಮಾರನೇ ದಿನ ಬಂದು ಉಷಾ ಭಂಡಾರಿ ಇನ್‌ಸ್ಟಿಟ್ಯೂಟ್‌ಗೆ ಸೇರಿಕೊಳ್ತೀಯಾ ಅಂತ ಕೇಳಿದರು. ಡ್ಯಾನ್ಸ್, ಕಳರಿಪಯಟ್ಟು ಹಾಗೂ ಆಕ್ಟಿಂಗ್ ಹೇಳಿಕೊಟ್ಟರು. ಅದಾದ್ಮೇಲೆ ಆಡಿಷನ್ ಶುರು ಮಾಡಿದೆ. 2019, ಜನವರಿ 1ನೇ ತಾರೀಕು ನಾನು ನನ್ನ ಮೊದಲ ಸೀರಿಯಲ್ ಮರಳಿ ಬಂದಳು ಸೀತೆ ಶುರುಮಾಡಿದೆ. ರಾಘವೇಂದ್ರ ರಾಜ್‌ಕುಮಾರ್ ಸರ್ ಅವರ ಪ್ರೊಡಕ್ಷನ್."

ನೀವು ನಟಿಸಿದ ಧಾರಾವಾಹಿ ಬಗ್ಗೆ ಹೇಳಿ

"ಮರಳಿ ಬಂದಳಿ ಸೀತೆಯಲ್ಲಿ ತಂಗಿ ಪಾತ್ರ ಮಾಡುತ್ತಿದ್ದೆ. ಅದಾದ ಎರಡು ತಿಂಗಳಿನಲ್ಲೇ ಕಲರ್ಸ್ ಕನ್ನಡದಲ್ಲಿ ರಂಗನಾಯಕಿ ಅಂತ ಸೀರಿಯಲ್ ಶುರುವಾಯ್ತು. ಅದೂ ಕೂಡ ತಂಗಿ ಪಾತ್ರವೇ. ಎರಡೆರಡು ಸೀರಿಯಲ್ ಶುರುವಾಗಿತ್ತು. ಬಂದ ಆರು ತಿಂಗಳಿಗೆ ಬೆಸ್ಟ್ ಸಹೋದರಿ ವಿಭಾಗದಲ್ಲಿ ಅನುಬಂಧ ಅವಾರ್ಡ್‌ ಸಿಕ್ತು. ಹಾಗೇ ಕಲರ್ಸ್ ಸೂಪರ್‌ನಲ್ಲಿ ಭೂಮಿ ತಾಯಾಣೆ ಶುರುವಾಗಿತ್ತು. ಒಮ್ಮೆಗೆ ಮೂರು ಸೀರಿಯಲ್ ಮಾಡುತ್ತಿದ್ದೆ."

Aase Kannada serial actress Inchara Joshi life journey and biography

ತೆಲುಗು ಸೀರಿಯಲ್ ಸಿಕ್ಕಿದ್ದೇಗೆ?

"ಎಲ್ಲಾ ಚೆನ್ನಾಗಿ ನಡೀತಿತ್ತು. ಆಗಲೇ ಕೋವಿಡ್ ಬಂತು. ಒಂದೊಂದೇ ಸೀರಿಯಲ್ ನಿಲ್ಲುವುದಕ್ಕೆ ಶುರುವಾಯ್ತು. ರಂಗನಾಯಕಿ ಅಂತೂ ನನ್ನ ಹುಟ್ಟುಹಬ್ಬದಂದೇ ನಿಂತು ಹೋಯ್ತು. ಅಂದು ತುಂಬಾನೇ ಅತ್ತಿದ್ದೆ. ಸೀರಿಯಲ್‌ಗೆ ಬಂದು ಒಂದು ವರ್ಷಕ್ಕೆ ಹೀಗಾಯ್ತಲ್ಲ ಅಂತ. ನಾನು ಕೃಷ್ಣನನ್ನು ತುಂಬಾನೇ ನಂಬುತ್ತೇನೆ. ಉಡುಪಿಗೆ ಹೋಗಿ ಅಲ್ಲಿ ಮಾತಾಡಿಕೊಂಡು ಬಂದ ದಿನಾನೇ ನನ್ನ ಮೊದಲ ತೆಲುಗು ಸೀರಿಯಲ್ ಅನ್ನು ಕೇಳಿಕೊಂಡು ಬಂದರು."

'ಆಸೆ' ಧಾರಾವಾಹಿ ಒಪ್ಪಿದ್ದೇಕೆ?

"ಮತ್ತೆ ಎರಡನೇ ಕೋವಿಡ್ ಬಂತು. ಸೀರಿಯಲ್‌ಗಳೆಲ್ಲ ಸ್ಟಾಪ್ ಆಯ್ತು. ಆಗ ತೆಲುಗು ಆಫರ್ ಬಂತು ಮಟ್ಟಿಗಾಜುಲು ಅಂತ. ಲೀಡ್ ರೋಲ್‌ನಲ್ಲಿ ನಟಿಸಿದೆ. ಮತ್ತೆ ಸುವರ್ಣದವರು ಕತೆಯೊಂದು ಶುರುವಾಗಿದೆ ಸೀರಿಯಲ್‌ಗೆ ಆಫರ್ ಕೊಟ್ಟರು. ಆಗ ತೆಲುಗು ಕನ್ನಡ ಅಂತ ಎರಡು ಸೀರಿಯಲ್ ಮಾಡುತ್ತಿದೆ. ಮಟ್ಟಿಗಾಜುಲು ಒಂದು ವರ್ಷ ಆದ್ಮೇಲೆ ಮುಗೀತು. ಇತ್ತ ಕಥೆಯೊಂದು ಶುರುವಾಗಿದೆನೂ ಮುಗೀತು. ಆಗಲೇ ಸ್ಟಾರ್ ಸುವರ್ಣದಲ್ಲೇ 'ಆಸೆ' ಸೀರಿಯಲ್ ಶುರುವಾಗಿತ್ತು. ಅದರಲ್ಲಿ ಶ್ರುತಿ ಅಂತ ಹೊಸ ಪಾತ್ರ ಪರಿಚಯಿಸಲಾಗುತ್ತಿತ್ತು. ಈತರ ಪಾತ್ರ ಮಾಡಬೇಕು ಅಂತ ಅನಿಸಿತ್ತು."

ಅಕ್ಕ-ತಂಗಿ ಇಬ್ಬರೂ ಕಿರುತೆರೆಗೆ ಬಂದಿದ್ದೇಗೆ?

"ನಾನು ನಮ್ಮ ಅಕ್ಕ ಇಬ್ಬರೇ ಮೊದಲ ಇಂಡಸ್ಟ್ರಿಗೆ ಬಂದಿದ್ದು. ಅಂದರೆ, ನಮಗೆ ಯಾರೂ ಗಾಢ್ ಫಾದರ್ ಇರಲಿಲ್ಲ. ನಮಗೆ ಯಾರೂ ಬೆಂಬಲಕ್ಕೆ ಇರಲಿಲ್ಲ. ಅಮ್ಮಗೆ ಬೇರೆಯವರು ಹೇಳೋರು. ಆಗಲ್ಲ ನಿಮ್ಮ ಮಕ್ಕಳಿಗೆ ಕಷ್ಟ ಆಗುತ್ತೆ ಅಂತಿದ್ರು. ಅಪ್ಪ ನಮ್ಮ ಬೆಂಬಲಕ್ಕೆ ನಿಂತಿದ್ರು. ಒಂದು ಬೇಜಾರು ಏನಂದ್ರೆ, ನಮ್ಮ ಅಕ್ಕ ಡಿಸೆಂಬರ್‌ನಲ್ಲಿ ಎಂಟ್ರಿ ಕೊಟ್ಟಿದ್ದು, ನಾನು ಜನವರಿಯಲ್ಲಿ ಎಂಟ್ರಿ ಕೊಟ್ಟೆ. ಅವಳನ್ನು ಟಿವಿಯಲ್ಲಿ ನೋಡಿದರು. ನನ್ನನ್ನು ಟಿವಿಯಲ್ಲಿ ನೋಡಲು ಆಗಲಿಲ್ಲ. ನನ್ನ ಶೂಟಿಂಗ್ ಮುಗಿಸಿ 10 ದಿನಕ್ಕೆ ಅವರು ತೀರಿಕೊಂಡರು. ಅವರೇ ನನಗೆ ಬೆಂಬಲವಾಗಿ ನಿಂತಿದ್ದು. ಅದೊಂದು ಬೇಜಾರು ಅಷ್ಟೇ."

Aase Kannada serial actress Inchara Joshi life journey and biography

ಆರು ವರ್ಷ ಜರ್ನಿ ಹೇಗಿದೆ?

"ಆರು ವರ್ಷ ಒಂದೊಂದು ವರ್ಷವೂ ಒಂದೊಂದು ತರ ಇತ್ತು. ಟ್ಯಾಲೆಂಟ್‌ ಇದ್ದು, ದೇವರ ಮೇಲೆ ನಂಬಿಕೆ ಇದ್ದರೆ, ಏನೇ ಇದ್ದರೂ ಕೈ ಬಿಡಲ್ಲ. ಎಷ್ಟೇ ಕಷ್ಟ ಇದ್ದರೂ ಫೋಕಸ್ ಮಾಡಬೇಕು. ಎಷ್ಟೇ ಸಾರಿ ಡೌನ್ ಫಾಲ್‌ ಆಗ್ತಿದೆ ಅನ್ನುವಾಗಲೇ ಯಾವುದಾದರೂ ಒಂದು ಸೀರಿಯಲ್ ಸಿಕ್ಕಿದೆ. ನಾನು ಹೀರೋಯಿನ್ ಆದರೆ, ಒಂದೇ ತರ ಕ್ಯಾರೆಕ್ಟರ್ ಬರುತ್ತೆ. ಆದರೆ, ನನಗೆ ಬೇರೆ ಬೇರೆ ಪಾತ್ರ ಮಾಡಬೇಕು. ಈ ಕಥೆಯೊಂದು ಶುರುವಾಗಿದೆಯಲ್ಲಿ ಹುಡುಗ ಹಾಗೇ ಪಾತ್ರ ಮಾಡಿದೆ. ಈ ಆಸೆಯಲ್ಲಿ ಶ್ರುತಿ ಅನ್ನುವ ಪಾತ್ರ ಕೂಡ ಸಿಕ್ಕಾಪಟ್ಟೆ ಡಿಫ್ರೆಂಟ್ ಆಗಿದೆ. ಹೀರೋಯಿನ್ ಆಗಿದ್ದರೆ, ಒಂದೇ ತರ ಅಳೋದು. ಒಂದೇ ತರ ನಗೋದು ಇರುತ್ತಿತ್ತು. ಅದಕ್ಕೆ ನನಗೆ ಆತರ ಪಾತ್ರ ಮಾಡುವುದಕ್ಕಿಂತ ಬೋಲ್ಡ್ ಕ್ಯಾರೆಕ್ಟರ್‌ಗಳನ್ನು ಮಾಡಬೇಕು ಅನಿಸುತ್ತೆ"

ಈ ವೃತ್ತಿ ಮೇಲೆ ಭಯ ಇದೆಯಾ?

"ಮುಂಚೆ ಏನೋ ಭಯಯಿತ್ತು. ಈಗ ಇಲ್ಲ. ಇಂಡಸ್ಟ್ರಿ ಮೇಲೆ ಏನೋ ನಂಬಿಕೆಯಿದೆ. ಇಷ್ಟು ವರ್ಷ ಕೆಲಸ ಮಾಡಿದ ಮೇಲೆ ಭಯವಿಲ್ಲ. ನಾವು ಇದ್ದೀತಿ ಅಂತ ತೋರಿಸಿಕೊಳ್ಳಬೇಕು ಅಷ್ಟೇ. ರೀಲ್ಸ್‌ನಲ್ಲಾಗಲಿ, ಫೋಟೊ ಹಾಕೋದಾಗಲಿ ಮಾಡುತ್ತಾ, ನಾವೂ ಇದ್ದೀವಿ ಅಂತ ಕಾಣಿಸಿಕೊಂಡರೆ, ಅವರಾಗೇ ಅಪ್ರೋಚ್ ಮಾಡುತ್ತಾರೆ. ನಾವು ಕಾಣಿಸಿಕೊಳ್ಳುತ್ತಿಲ್ಲ ಅಂದರೆ, ಎಲ್ಲರೂ ಮರೆತು ಹೋಗುತ್ತಾರಷ್ಟೇ."

'ಆಸೆ'ಯಲ್ಲಿ ನಿಮ್ಮ ಪಾತ್ರದ ಬಗ್ಗೆ ಹೇಳಿ?

"ಆಸೆ ಒಂದು ಟೀಮ್ ಬೆಸ್ಟ್ ಟೀಮ್. ಇದೊಂದು ಫ್ಯಾಮಿಲಿ ತರ ಅನಿಸಿಬಿಟ್ಟಿದೆ. ಇನ್ನು ನನ್ನ ಪಾತ್ರದ ಕಡೆಗೆ ಬಂದರೆ, ನಾನು ರಿಯಲ್ ಲೈಫ್‌ನಲ್ಲಿ ಯಾರಿಗೆ ಏನಾದರೂ ಅಂದರೆ ಅಯ್ಯೋ ಅವರಿಗೆ ಬೇಜಾರು ಆಯ್ತಲ್ಲ ಹೋಗಿ ಮಾತಾಡಿಸೋಣ ಅಂತ ಅನಿಸುತ್ತೆ. ಆದರೆ, ಶ್ರುತಿ ಕ್ಯಾರೆಕ್ಟರ್ ಡೆಡ್ ಅಪೋಸಿಟ್. ಸೀನ್ ಪೇಪರ್ ನೋಡಿದಾಗ ಹೀಗೆ ಹೇಳಿಬಿಟ್ನಾ ಅಂತ ಶಾಕ್ ಆಗುತ್ತೆ. ಹಾಗಿದೆ ನನ್ನ ಪಾತ್ರ."

Aase Kannada serial actress Inchara Joshi life journey and biography

ಅಕ್ಕನಿಗೆ ತಂಗಿನೇ ಪೈಪೋಟಿ ಕೊಡ್ತಿದ್ದಾರಾ?

"ನನ್ನ ಅಕ್ಕನ ಮೊದಲ ಸೀರಿಯಲ್ ಬಿಳಿ ಹೆಂಡ್ತಿ. ಅದೂ ಸುವರ್ಣದಲ್ಲಿಯೇ ಪ್ರಸಾರ ಆಗಿತ್ತು. ಅದೇನಾಯ್ತು ಅಂದರೆ, ಅಕ್ಕನಿಗೆ ಬಿಳಿ ಹೆಂಡ್ತಿ ಸೀರಿಯಲ್‌ಗೆ ಕರೆದಿದ್ದರು. ನನಗೆ ಬೀಳಿ ಹೆಂಡ್ತಿ ಸೀರಿಯಲ್‌ಗೆ ಹೇಳಿದ್ದರು. ಇಬ್ಬರೂ ಅಪೋಸಿಟ್ ಸೀರಿಯಲ್‌ಗೆ ಸೆಲೆಕ್ಟ್ ಆದ್ವಿ. ಅವಳು ಮೊದಲು ಸೆಲೆಕ್ಟ್ ಆದಳು. ಆ ಮೇಲೆ ನಾನು ಆಯ್ಕೆ ಆದೆ. ನಾವಿಬ್ಬರೂ ನಮ್ಮ ಸೀರಿಯಲ್‌ಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಕಾಂಪಿಟೇಷನ್ ಅನ್ನೋದಕ್ಕಿಂತ ಒಂದೇ ಸೀರಿಯಲ್‌ನಲ್ಲಿ ಮಾಡಬೇಕು ಅನ್ನೋ ಆಸೆಯಿದೆ. ಸುವರ್ಣದಲ್ಲಿಯೇ ಮೌನರಾಗ ಸೀರಿಯಲ್‌ನಲ್ಲಿಯೇ ಅದಾಗಬೇಕಿತ್ತು. ಆದರೆ ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ನೋಡೋಣ. ನಾನು ನಮ್ಮ ಅಕ್ಕ ಇಬ್ಬರಿಗೂ ಮಾಡಬೇಕು ಅಂತ ಆಸೆಯಿದೆ." ಎನ್ನುತ್ತಾರೆ ನಟಿ ಇಂಚರಾ ಜೋಶಿ.

More from Filmibeat

English summary
Aase Kannada serial actress Inchara Joshi life journey and biography
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X