ಐಶ್ವರ್ಯಾ ಸಿಂಧೋಗಿ ಈ ಧಾರಾವಾಹಿ ಒಪ್ಪಿದ್ದೇಕೆ? ಮದುವೆ.. ಲವ್‌ ಬಗ್ಗೆ ಏನಂತಾರೆ?

ಸಿನಿಮಾ ಹಾಗೂ ಕಿರುತೆರೆಯ ಜನಪ್ರಿಯ ನಟಿ ಐಶ್ವರ್ಯಾ ಸಿಂಧೋಗಿ. ಇತ್ತೀಚೆಗೆ ಬಿಗ್‌ ಬಾಸ್ ಕನ್ನಡ ರಿಯಾಲಿಟಿ ಶೋ ಮೂಲಕ ಕಿರುತೆರೆ ವೀಕ್ಷಕರ ಮನ ಗೆದ್ದಿರುವ ನಟಿ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಸ್ಟಾರ್ ಸುವರ್ಣದ 'ನಿನ್ನ ಜೊತೆ ನನ್ನ ಕಥೆ' ಧಾರಾವಾಹಿಗೆ ಸ್ವಾತಿ ಎನ್ನುವ ವಿಶೇಷ ಪಾತ್ರದ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಒಂದಿಷ್ಟು ಗ್ಯಾಪ್‌ನ ನಂತರ ಐಶ್ವರ್ಯಾ ಮತ್ತೆ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

'ನಿನ್ನ ಜೊತೆ ನನ್ನ ಕಥೆ' ಧಾರಾವಾಹಿಯಲ್ಲಿ ಅತಿಥಿ ಪಾತ್ರವಾಗಿದ್ದರೂ ನೆಗೆಟಿವ್ ಶೇಡ್. ಈ ಪಾತ್ರವನ್ನು ಒಪ್ಪಿಕೊಳ್ಳುವುದಕ್ಕೆ ಕಾರಣವಿದೆ. ಅದ್ಯಾಕೆ ಅನ್ನೋದನ್ನು ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಹಾಗೇ ತಮ್ಮ ರಿಯಲ್ ಲೈಫ್‌ ಬಗ್ಗೆನೂ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು, ಓದಿದ್ದು, ಅಪ್ಪ ಅಮ್ಮನ ಕಳೆದುಕೊಂಡ ಬಳಿಕ ಬದಲಾದ ಜೀವನ ಇವೆಲ್ಲವನ್ನೂ ಈ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

Actress Aishwarya Sindhogi talks about her new serial marriage love life

ನಿಮ್ಮೂರು, ಶಿಕ್ಷಣ ಎಲ್ಲಾಯ್ತು?

"ನಾನು ಹುಟ್ಟಿ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲೇ. ಮಲ್ಲೇಶ್ವರಂನಲ್ಲಿ ಹುಟ್ಟಿದ್ದು ಬೆಳೆದಿದ್ದೆಲ್ಲ ಸಂಜಯನಗರದಲ್ಲಿ. ಈಗಲೂ ನಾನು ಅಲ್ಲಿಯೇ ಇರೋದು. ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದು. ಡಿಗ್ರಿ ಮಾಡಿದ್ದು ರಾಮಯ್ಯ ಕಾಲೇಜಿನಲ್ಲಿ ಹೋಟೆಲ್ ಮ್ಯಾನೆಜ್ಮೆಂಟ್‌. ಅದಾದ್ಮೇಲೆ ಒಂದು ವರ್ಷ ಯುಎಸ್‌ಗೆ ಇಂಟರ್ನ್‌ಶಿಪ್‌ ಮಾಡುವುದಕ್ಕೆಂದು ಹೋಗಿದ್ದೆ. ಡಿಗ್ರಿ ಸೆಕೆಂಡ್ ಸೆಮಿಸ್ಟರ್‌ನಿಂದಲೇ ಸಿನಿಮಾ ಜರ್ನಿಯನ್ನು ಶುರುಮಾಡಿಕೊಂಡೆ."

ನಟನೆ ಶುರು ಮಾಡಿದ್ದು ಯಾವಾಗ?

"ಕಾಲೇಜಿನಲ್ಲಿ ಇರುವಾಗಲೇ ಚಿಕ್ಕ ಪುಟ್ಟ ಪಾತ್ರ ಮಾಡಿದ್ದೆ. ರಾಂಪ್ ವಾಕ್ ಮಾಡಿದ್ದೆ. ಬಿಗ್ ಬಜಾರ್‌ಗೆ ಮಾಡಲಿಂಗ್ ಎಲ್ಲಾ ಮಾಡಿದ್ದೆ. ಲಕ್ಕಿ ಸಿನಿಮಾದಲ್ಲಿ ಯಶ್ ಅವರೊಂದಿಗೆ ಚಿಕ್ಕ ಪಾತ್ರ ಮಾಡಿದ್ದೆ. ಒಂದು ಹವ್ಯಾಸ ಅಂತ ಮಾಡಿದ್ದೆ ಅಷ್ಟೇ."

ನಿಮ್ಮ ಮೊದಲ ಸಿನಿಮಾ ಬಗ್ಗೆ ಹೇಳಿ

"ನನ್ನ ಮೊದಲ ಸಿನಿಮಾ ನಾಯಕಿಯಾಗಿ 'ಸಪ್ನೋಂಕಿ ರಾಣಿ'. ಇದಕ್ಕಿಂತ ಮುಂಚೆ ಹಾಫ್‌ ಮೆಂಟಲ್‌ ಎನ್ನುವ ಸಿನಿಮಾದಲ್ಲಿ ಒಂದು ಸಾಂಗ್ ಮಾಡಿದ್ದೆ. ಆ ಹಾಡನ್ನು ನೋಡಿ ನನಗೆ ಸಪ್ನೋಂಕಿ ರಾಣಿ ಸಿನಿಮಾಗೆ ಅವಕಾಶ ಸಿಕ್ಕಿತ್ತು. ಅದಾದ್ಮೇಲೆ ನಾನು ಹಿಂತಿರುಗಿ ನೋಡಲಿಲ್ಲ. ದುನಿಯಾ ವಿಜಯ್ ಅವರ ಸಿಂಹಾದ್ರಿ ಮಾಡಿದೆ. ಈ ಸಿನಿಮಾ ಆದ್ಮೇಲೆ ಅವರೇ ನನಗೆ ಜಾಕ್ಸನ್‌ಗೂ ರೆಫರ್ ಮಾಡಿದರು. ಆಮೇಲೆ ಪ್ರಿಯಾಂಕಾ ಉಪೇಂದ್ರ ಅವರೊಂದಿಗೆ ಮಮ್ಮಿ ಎನ್ನುವ ಸಿನಿಮಾ ಮಾಡಿದೆ. ಚೇತನ್ ಚಂದ್ರ ಅವರ ಜೊತೆ ಸಂಯುಕ್ತ 2 ಮಾಡಿದೆ. ಪ್ರಜ್ವಲ್ ದೇವರಾಜ್ ಅವರೊಂದಿಗೆ ಭುಜಂಗ ಸಿನಿಮಾದಲ್ಲಿ ಒಂದು ಇಂಟ್ರುಡಕ್ಷನ್ ಸಾಂಗ್ ಕೂಡ ಮಾಡಿದ್ದೇನೆ. ಹೀಗೆ ಹಲವು ಸಿನಿಮಾ ಮಾಡಿದ್ದೇನೆ. ಇದು ನನ್ನ ಸಿನಿಮಾ ಜರ್ನಿ"

Actress Aishwarya Sindhogi talks about her new serial marriage love life


'ನಾಗಿಣಿ 2' ಒಪ್ಪಿಕೊಂಡಿದ್ದೇಕೆ?

"ಯುಎಸ್‌ಗೆ ಹೋದಾಗ ಮಟಾಷ್‌ ಅಂತ ಸಿನಿಮಾ ಮಾಡಿದೆ. ಅದು ನರಸಿಂಹರಾಜು ಅವರ ಕೊನೆಯ ಮೊಮ್ಮಗನ ಸಿನಿಮಾ. ಅದಾದ್ಮೇಲೆ ಕೆಲವು ಘಟನೆಗಳು ನಡೆದವು. ಅಪ್ಪ ಅಮ್ಮನನ್ನು ಕಳೆದುಕೊಳ್ಳಬೇಕಾಯ್ತು. ಕೋವಿಡ್ ಬಂತು. ಇವೆಲ್ಲವೂ ಒಟ್ಟೊಟ್ಟಿಗೆ ಬಂದು ಹೋಯ್ತು. ಆಗ ನಾನು ಇಂಡಸ್ಟ್ರಿಯಿಂದ ದೂರನೇ ಇದ್ದೆ. ಆಗ ನಾನು ನಾಗಿಣಿ 2 ಧಾರಾವಾಹಿಯಿಂದ ಕಮ್‌ಬ್ಯಾಕ್ ಮಾಡಿದೆ. ನಾಗಿಣಿ 2 ನನ್ನ ಲೈಫ್ ಅನ್ನೇ ಬದಲಾಯಿಸಿತು."

ನೀವು ಮಾಡುತ್ತಿದ್ದ ಬ್ಯುಸಿನೆಸ್ ಬಗ್ಗೆ ಹೇಳಿ

"ನನ್ನ ಲೈಫ್‌ನಲ್ಲಿ ನಡೆದ ಘಟನೆಗಳ ಬಳಿಕ 3 ವರ್ಷ ಏನು ಮಾಡಲಿ ಎನ್ನುವ ಹಾಗೆ ಆಗಿತ್ತು. ನಮ್ಮ ತಂದೆಯ ಬ್ಯುಸಿನೆಸ್ ಅನ್ನು ನೋಡಿಕೊಳ್ಳುತ್ತಿದ್ದೆ. ಆದರೆ, ತುಂಬಾ ಹೆವಿ ಅಂತ ಅನಿಸುತ್ತಿತ್ತು. ಇತ್ತ ನಮ್ಮ ತಾಯಿಗೂ ಹುಷಾರಿರಲಿಲ್ಲ. ಬ್ಯುಸಿನೆಸ್ ಹ್ಯಾಂಡ್‌ ಓವರ್ ಮಾಡಬೇಕಾದ ಪರಿಸ್ಥಿತಿಯಿತ್ತು. ಅದಾದ್ಮೇಲೆ ನನ್ನ ಬ್ಯುಸಿನೆಸ್ ಶುರು ಮಾಡಿದೆ. ಅದು ತುಂಬಾನೇ ಚೆನ್ನಾಗಿ ನಡೀತಾ ಇತ್ತು. ಎಲ್ಲಾ ಸೆಲೆಬ್ರಿಟಿಗಳು ನನ್ನ ಗ್ರಾಹಕರಾಗಿದ್ದರು. ಅದು ಹ್ಯಾಂಡ್‌ಮೇಕ್ ಸ್ಕಿನ್‌ಕೇರ್ ಆಗಿತ್ತು. ಲಿಪ್‌ಬಾಮ್, ಹ್ಯಾಂಡ್‌ಮೇಸ್ ಸೋಪು ಈತರ. ಅದು ತುಂಬಾನೇ ಚೆನ್ನಾಗಿ ನಡೆಯುತ್ತಿತ್ತು. ನಾಗಿಣಿ 2 ಯಾವಾಗ ಶುರುವಾಯ್ತು. ಟೈಮ್ ಸಿಗಲಿಲ್ಲ. ಕೋವಿಡ್ ಶುರುವಾಗಿತ್ತು. ಹೀಗಾಗಿ ಬ್ಯುಸಿನೆಸ್ ನಿಲ್ಲಿಸಬೇಕಾಯ್ತು."

ಅಪ್ಪ ಅಮ್ಮ ಅಗಲಿದ್ದು ಹೇಗೆ?

"ತಂದೆ ಹೋಗಿದ್ದು ಕಂಪ್ಲೀಟ್ ಶಾಕ್ ಆಗಿತ್ತು. ಅಪ್ಪು ಸರ್‌ದು ಹೇಗಾಗಿತ್ತೋ ಸೇಮ್ ಸಿಚ್ಯೂವೆಷನ್ ನಮ್ಮ ತಂದೆಗೂ ಆಗಿತ್ತು. ನಮ್ಮ ತಂದೆ ಹೈದರಾಬಾದ್‌ಗೆ ಬೆಳಗ್ಗೆನೇ ಪ್ಲೈಟ್‌ನಲ್ಲಿ ಹೋಗಿದ್ದರು. ಹೋಟೆಲ್‌ಗೆ ಹೋಗಿ ಫ್ರೆಶ್ ಆಗುತ್ತಿದ್ದಂತೆ ಅವರಿಗೆ ಹೃದಯ ಸ್ತಂಬನವಾಗಿತ್ತು. ಇತರದ್ದು ಒಂದು ಇದೆ ಅಂತಾನೇ ಗೊತ್ತಿರಲಿಲ್ಲ. ಎಲ್ಲಾ ಸಡನ್ ಆಗಿ ನಡೆದು ಹೋಯ್ತು. ಅವರನ್ನು ಉಳಿಸಿಕೊಳ್ಳುವುದಕ್ಕೆ ಆಗಲಿಲ್ಲ. ಅಮ್ಮಂದು ಹೇಗಿತ್ತು ಅಂದರೆ, ಅವರಿಗೆ ಹಲವು ಆರೋಗ್ಯ ಸಮಸ್ಯೆಯಿತ್ತು. ನನಗೆ ಆಸ್ಪತ್ರೆ ಅಂದರೇನೆ ಆಗುತ್ತಿರಲಿಲ್ಲ. ನಮ್ಮ ತಂದೆ ಇರುವಾಗ ಅವರೇ ನೋಡಿಕೊಳ್ಳುತ್ತಿದ್ದರು. ಲೈಫ್ ಎಲ್ಲಾ ಹೇಳಿಕೊಡುತ್ತೆ. ನಮ್ಮ ತಾಯಿ ಆಸ್ಪತ್ರೆಯಲ್ಲಿ ಇದ್ದಾಗ ತುಂಬಾ ದಿನ ನಾನೇ ನೋಡಿಕೊಳ್ಳುತ್ತಿದ್ದೆ."

ಇಬ್ಬರನ್ನೂ ಕಳ್ಕೊಂಡ್ಮೇಲೆ ಜೀವನ ಹೇಗಿತ್ತು?

"ನಮ್ಮ ತಾಯಿ ತೀರಿಕೊಂಡ ಮೇಲೆ ಮೂರು ತಿಂಗಳು ಡಿಪ್ರೆಷನ್‌ಗೆ ಹೋಗಿದ್ದೆ. ನನಗೆ ಏನು ಮಾಡಬೇಕು ಅಂತಾನೇ ಗೊತ್ತಾಗುತ್ತಿರಲಿಲ್ಲ. ಸಿನಿಮಾ, ಸೀರಿಯಲ್‌ಗೆ ತುಂಬಾನೇ ಆಡಿಷನ್ ಬರುತ್ತಿತ್ತು. ಕೊನೆಗೆ ನನ್ನ ಫ್ರೆಂಡ್ಸ್ ಒತ್ತಾಯ ಮಾಡಿದರು. ನಾಗಿಣಿ 2 ಆಡಿಷನ್‌ ನಡೀತಾ ಇದೆ ಹೋಗು ಅಂದರು. ಮರುದಿನವೇ ಸೆಲೆಕ್ಟ್ ಆಗಿದೆ ಅಂತ ಕಾಲ್ ಬಂತು. ನನಗೆ ಸಿನಿಮಾ, ಸೀರಿಯಲ್ ಅಂತೇನು ಇಲ್ಲ. ಎರಡನ್ನೂ ಒಂದೇ ರೀತಿ ನೋಡುತ್ತೇನೆ. ಆಗ ನನಗೆ ಸೀರಿಯಲ್ ಇಂಡಸ್ಟ್ರಿ ತುಂಬಾನೇ ಹೊಸದು. "

ನಿನ್ನ ಜೊತೆ ನನ್ನ ಕಥೆ ಯಾಕೆ ಒಪ್ಪಿಕೊಂಡ್ರಿ?

"ನನಗೆ ಪೂರ್ಣ ಪ್ರಮಾಣದ ಸೀರಿಯಲ್ ಅನ್ನು ಒಪ್ಪಿಕೊಳ್ಳುವುದಕ್ಕೆ ಇಷ್ಟವಿರಲಿಲ್ಲ. ಸಿನಿಮಾಗೆ ಕೆಲಸ ಮಾಡುತ್ತಿದ್ದರಿಂದ ಸಮಯ ಬೇಕಿತ್ತು. ನಿನ್ನ ಜೊತೆ ನನ್ನ ಕಥೆ ಸೀರಿಯಲ್ ಬಂತು. ಇದರಲ್ಲಿ ಒಂದು 30 ಎಪಿಸೋಡ್‌ಗಳಲ್ಲಿ ಕಾಣಿಸಿಕೊಳ್ಳುತ್ತೇನೆ. ಅತಿಥಿ ಪಾತ್ರ ಆಗಿದ್ದರಿಂದ ಹೇಗಿರುತ್ತೆ ಅಂತ ಹೇಳಿದೆ. ನನ್ನ ಪಾತ್ರದ ಹೆಸರು ಸಾಕ್ಷಿ. ತಂದೆ ರಾಣಾ ಹಾಗೂ ಸಾಕ್ಷಿ ಇಬ್ಬರೂ ರಿಯಲ್‌ ಎಸ್ಟೇಟ್ ಉದ್ಯಮಿಗಳಾಗಿರುತ್ತಾರೆ. ನೆಗೆಟಿವ್ ಶೇಡ್‌ನಲ್ಲಿ ಬಂದರೂ ಪವರ್‌ಫುಲ್ ಆಗಿದೆ. ನನ್ನ ಪ್ರಕಾರ ವಿಲನ್‌ಗಳು ಇಲ್ಲದೆ ಇದ್ದರೆ ಕಥೆಯೇ ಇರುವುದಿಲ್ಲ. ಹೀಗಾಗಿ ಸಾಕ್ಷಿ ಅನ್ನೋ ಪಾತ್ರ ಈ ಕಥೆಗೆ ಪ್ರಮುಖವಾಗುತ್ತೆ."

Actress Aishwarya Sindhogi talks about her new serial marriage love life

ನೆಗೆಟಿವ್ ಪಾತ್ರಗಳೇ ಯಾಕೆ?

"ಹೀರೋಯಿನ್‌ಗೆ ಸರಿ ಸಮನಾಗಿದ್ದರೂ ನಾಗಿಣಿ 2ನಲ್ಲಿ ನನ್ನದು ನೆಗೆಟಿವ್ ಪಾತ್ರವೇ. ನಾನು ಮಾಡಿದ್ದರಲ್ಲಿ ಶಾಂಭವಿ, ಭೈರವಿ ಬಿಟ್ಟರೆ, ಇನ್ನೆಲ್ಲವೂ ನೆಗೆಟಿವ್ ಪಾತ್ರಗಳೇ. ನಾನು ಹೇಳಿದ ಹಾಗೆನೇ ನೆಗೆಟಿವ್ ಪಾತ್ರವಿಲ್ಲದೆ ಸ್ಟೋರಿನೇ ಇರುವುದಿಲ್ಲ. ನನ್ನನ್ನೇ ಯಾಕೆ ಆಯ್ಕೆ ಮಾಡುತ್ತಾರೆ ಅನ್ನೋದು ನನಗೆ ಗೊತ್ತಿಲ್ಲ. ಸಾಮಾನ್ಯವಾಗಿ ನನ್ನನ್ನು ನೋಡಿದಾಗ ಯಾರೂ ನೆಗೆಟಿವ್ ಅಂತ ಹೇಳಲ್ಲ. ಆದರೆ, ಪಾತ್ರ ಅಂತ ಬಂದಾಗ ನಾನು ಫುಲ್‌ಫಿಲ್ ಮಾಡಿದ್ದೇನೆ ಅಂತ ಅನಿಸುತ್ತೆ."

ನಿಮ್ಮ ನಮ್ರತಾ ಸ್ನೇಹದ ಬಗ್ಗೆ ಹೇಳ್ತೀರಾ?

"ನನ್ನ ಮೊದಲ ಸೀರಿಯಲ್ ನಾಗಿಣಿ 2. ಅಲ್ಲಿ ನಾನು ನಮ್ರತಾ ಸ್ನೇಹಿತೆಯರಾಗಿದ್ದು. ಅವಳು ತುಂಬಾನೇ ಸ್ಟ್ರಾಂಗ್ ಗರ್ಲ್. ನನಗೆ ತುಂಬಾನೇ ರಿಲೇಟ್ ಆಗುತ್ತಾಳೆ. ನಾನು ಸ್ವತಂತ್ರವಾಗಿ ಬೆಳೆದವಳು. ಅಪ್ಪ ಅಮ್ಮ ನನಗೆ ಯಾವತ್ತೂ ಇದೇ ಮಾಡು ಅದೇ ಮಾಡು ಅಂತ ಕಟ್ಟಾಕಿಲ್ಲ. ನಮ್ರತಾ ಯಂಗ್ ಏಜ್‌ನಿಂದಲೇ ಅವಳ ಜರ್ನಿ ಶುರು ಮಾಡಿದ್ದಾಳೆ. ಅವಳ ಲೈಫ್ ಅನ್ನು ಅವಳು ತುಂಬಾನೇ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾಳೆ. ಅವಳು ಒಂದಷ್ಟು ಹೆಣ್ಣು ಮಕ್ಕಳಿಗೆ ತುಂಬಾನೇ ಸ್ಪೂರ್ತಿಯಾಗುತ್ತಾಳೆ."

ಕೊನೆಯಲ್ಲಿ ನಿಮ್ಮ ಮದುವೆ ಯಾವಾಗ?

"ನಿಜವಾಗಿ ಹೇಳುವುದಾದರೆ, ನನಗೆ ಮದುವೆ ಬಗ್ಗೆ ಕ್ಲಾರಿಟಿ ಇಲ್ಲ. ಮುಂದಿನ ವರ್ಷ ಅಂತ ಅಂದುಕೊಂಡಿದ್ದೇನೆ. ಈಗ ಸದ್ಯಕ್ಕೆ ನಾನು ಸಿಂಗಲ್. ಆಗಲೇ ಹೇಳಿದ ಹಾಗೆ ಯಾವುದೂ ಕ್ಲಾರಿಟಿ ಇಲ್ಲ. ನನಗೊಂದು ಸ್ಪಷ್ಟನೆ ಸಿಕ್ಕಿದ ಮೇಲೆ ನಾನೇ ಅನೌನ್ಸ್ ಮಾಡುತ್ತೇನೆ. ಬಹುಶ: ಮುಂದಿನ ವರ್ಷ ಅಂದುಕೊಂಡಿದ್ದೇನೆ." ಎಂದು ಐಶ್ವರ್ಯಾ ಸಿಂಧೋಗಿ ಹೇಳುತ್ತಾರೆ.

More from Filmibeat

English summary
Actress Aishwarya Sindhogi talks about her new serial, marriage, love life.
Read more about: actress serial tv show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X