ಉಡುಪಿಯ ನಟಿ ಇಶಿಕಾ ಕಿರುತೆರೆಯಲ್ಲಿ ಮಿಂಚಿಂಗ್; 'ಅವನು ಮತ್ತು ಶ್ರಾವಣಿ' ಸೀರಿಯಲ್ ಕಲಿಸಿದ್ದೇನು?

ಸಿನಿಮಾದಲ್ಲಿ ನಟಿಸಬೇಕು ಅನ್ನೋದು ಪ್ರತಿಯೊಬ್ಬ ನಟಿಯ ಕನಸು. ಇಲ್ಲೊಬ್ಬರಿಗೆ ಧಾರಾವಾಹಿಯಲ್ಲಿ ನಟಿಸುವುದಕ್ಕೆ ಇಷ್ಟ. ಆದರೆ, ಈ ನಟಿಗೆ ಮೊದಲು ಅವಕಾಶ ಸಿಕ್ಕಿದ್ದು ಸಿನಿಮಾಗಳಲ್ಲಿಯೇ. 9ನೇ ತರಗತಿಯಿಂದಲೇ ಸಿನಿಮಾಗಳಿಗೆ ಬಣ್ಣ ಹಚ್ಚಿ ಗಮನ ಸೆಳೆದಿದ್ದರು.

ಈ ನಟಿಗೆ ಮೊದಲು ಧಾರಾವಾಹಿಗಳಲ್ಲಿ ನಟಿಸಬೇಕು ಅನ್ನೋ ಆಸೆ. ಕನ್ನಡದ ಐದು ಸಿನಿಮಾಗಳಲ್ಲಿ ನಟಿಸಿದ ಬಳಿಕ ಕೊನೆಗೂ ಧಾರಾವಾಹಿಯೊಂದರಲ್ಲಿ ನಟಿಸುತ್ತಿದ್ದಾರೆ. ಅಂದ್ಹಾಗೆ, ಈ ನಟಿ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ 'ಅವನು ಮತ್ತೆ ಶ್ರಾವಣಿ'ಯ ನಾಯಕಿ ಇಶಿಕಾ ಶೆಟ್ಟಿಗಾರ್. ಫಿಲ್ಮಿಬೀಟ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ತನ್ನ ಜರ್ನಿಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

Actress Eeshika Shettigar said she learned patience from Avanu Mathe Shravani serial

ಇಶಿಕಾ ಲೈಫ್ ಜರ್ನಿ ಎಲ್ಲಿಂದ ಶುರುವಾಗುತ್ತೆ?

"ನಾನು ಹುಟ್ಟಿದ್ದು ಉಡುಪಿಯಲ್ಲಿ. ಬಳಿಕ ಬೆಂಗಳೂರಿಗೆ ಶಿಫ್ಟ್ ಆದ್ವಿ. ನಾನು ಪಿಯುಸಿ ಮುಗಿಸುತ್ತಿದ್ದಂತೆ ಸಿನಿಮಾ ಮಾಡುವುದಕ್ಕೆ ಶುರು ಮಾಡಿದೆ. 9ನೇ ತರಗತಿಯಿಂದಲೇ ನಾನು ಸಿನಿಮಾ ಮಾಡುವುದಕ್ಕೆ ಶುರು ಮಾಡಿದೆ. ಊರ್ವಿ, ಗರುಡ, ಮನದ ಮರೆಯಲಿ ಅಂತ ನಾಲ್ಕೈದು ಸಿನಿಮಾಗಳನ್ನು ಮಾಡಿದ್ದೇನೆ. ಅದಾದ್ಮೇಲೆ ಕಾನೂನು ಪದವಿ ಮಾಡುತ್ತಿದ್ದೆ. ಆ ಮೇಲೆ ಸೀರಿಯಲ್ ಮಾಡಬೇಕು ಅಂತ ಅನಿಸಿತ್ತು. ಹೀಗಾಗಿ ಲುಕ್ ಟೆಸ್ಟ್ ಕೊಡುವುದಕ್ಕೆ ಶುರು ಮಾಡಿದೆ. ಆ ಸಮಯಕ್ಕೆ ಅವನು ಮತ್ತು ಶ್ರಾವಣಿಗೆ ಕರೆ ಬಂತು. ಇದು ರಿಪ್ಲೆಸ್ಮೆಂಟ್ ಪಾತ್ರ ಆಗಿದ್ದರಿಂದ ನನಗೆ ಇಷ್ಟ ಆಗಿರಲಿಲ್ಲ. ಹಾಗೇ ರಿಪ್ಲೆಸ್ಮೆಂಟ್ ಆದರೆ ಜನರಿಗೆ ಇಷ್ಟ ಆಗುತ್ತಾ ಅನ್ನೋ ಮೈಂಡ್ ಸೆಟ್‌ನಲ್ಲಿ ಇದ್ದೆ. ಈ ಪ್ರಾಜೆಕ್ಟ್ ತೆಗೆದುಕೊಂಡ ಮೇಲೆ ಖುಷಿಯಾಗಿದೆ."

ಧಾರಾವಾಹಿ ಕಡೆ ಬಂದಿದ್ದೇಕೆ?

"ನನಗೆ ಮೊದಲು ಸೀರಿಯಲ್ ಮಾಡಿ ಆಮೇಲೆ ಸಿನಿಮಾ ಮಾಡಬೇಕು ಅನ್ನೋ ಮೈಂಡ್ ಸೆಟ್ ಇತ್ತು. ಆದರೆ, ಪೋಷಕರು ನನಗೆ ಒತ್ತಾಯ ಮಾಡಿದ್ದರು. ಐದು ಸಿನಿಮಾಗಳೇನಿದೆ ಅದನ್ನು ಅವರು ಹೇಳಿದ್ದಕ್ಕೆ ಮಾಡಿದೆ. ಧಾರಾವಾಹಿಯಲ್ಲಿ ನಟಿಸುವುದು ನನ್ನ ಕನಸಾಗಿತ್ತು. ಈಗ ಅಂದುಕೊಂಡಂತೆ ಸೀರಿಯಲ್ ಮಾಡುತ್ತಿದ್ದೇನೆ. ಇದಾದ್ಮೇಲೆ ಸಿನಿಮಾದಲ್ಲಿ ಒಳ್ಳೆಯ ಪ್ರಾಜೆಕ್ಟ್ ತೆಗೆದುಕೊಳ್ಳಬೇಕು ಅಂತಿದ್ದೇನೆ."

Actress Eeshika Shettigar said she learned patience from Avanu Mathe Shravani serial

ಸಿನಿಮಾನಾ? ಧಾರಾವಾಹಿನಾ?

"ಸಿನಿಮಾ ಹಾಗೂ ಸೀರಿಯಲ್ ಎರಡರಲ್ಲೂ ಅದರದ್ದೇ ಆದ ತೂಕವಿದೆ. ಸಿನಿಮಾದಲ್ಲೂ ಫ್ಯಾನ್ಸ್, ಫೇಮ್‌ ಸಿಗುತ್ತೆ. ಅದರಲ್ಲೂ ಸೀರಿಯಲ್‌ನಲ್ಲಿ ತುಂಬಾನೇ ಜಾಸ್ತಿ ಅಂತ ಹೇಳಬಹುದು. ಎಲ್ಲರ ಮನೆಗೂ ಹೋಗುತ್ತಿರುತ್ತೇವೆ. ಎಲ್ಲರೂ ಸೀರಿಯಲ್‌ನಲ್ಲಿ ನೋಡುತ್ತಿರುತ್ತಾರೆ. ಸೀರಿಯಲ್‌ನಲ್ಲಿ ತುಂಬಾನೇ ಕಲಿಯಬಹುದು. ತುಂಬಾ ಉದ್ದದ ಸೀನ್ ಇರುತ್ತೆ. ಈ ಕಾರಣಕ್ಕೆ ಕಲಿಯುವುದಕ್ಕೆ ಇದು ತುಂಬಾನೇ ಸಹಾಯ ಮಾಡುತ್ತೆ."

ಧಾರಾವಾಹಿ ಕಲಿಸಿದ್ದೇನು?

"ಅವನು ಮತ್ತು ಶ್ರಾವಣಿಯಲ್ಲಿ ನಟನೆ ಮಾಡುತ್ತಾ 9 ತಿಂಗಳು ಆಗುತ್ತಾ ಬಂತು. ತುಂಬಾ ತಾಳ್ಮೆ ಕಲಿಸಿಕೊಟ್ಟಿದೆ. ಧಾರಾವಾಹಿ ತಂಡದೊಂದಿಗೆ ಹೇಗಿರಬೇಕು ಅಂತ ಹೇಳಿಕೊಟ್ಟಿದೆ. ಆರ್ಟಿಸ್ಟ್ ಜೊತೆ ಹೇಗೆ ವರ್ತಿಸಬೇಕು ಅನ್ನೋದು ಕಲಿತಿದ್ದೀನಿ. ಎಲ್ಲರೂ ನೀವು ಶ್ರಾವಣಿ ಅಲ್ವಾ ಅಂತ ಗುರುತಿಸುತ್ತಾರೆ. ಅದು ತುಂಬಾನೇ ಖುಷಿ ಕೊಡುತ್ತೆ. ತುಂಬಾನೇ ಪ್ರೀತಿ ಕೊಡುತ್ತಿದ್ದಾರೆ. ಬೇರೆ ಬೇರೆ ಪ್ರಾಜೆಕ್ಟ್‌ಗಳು ಬರುತ್ತಿವೆ. ಇನ್ನೇನು ಬೇಕು ಹೇಳಿ."

ಶ್ರಾವಣಿ ಪಾತ್ರ ರಿಯಲ್‌ ಲೈಫ್‌ಗೆ ಹತ್ತಿರವಿದೆಯೇ?

"ಶ್ರಾವಣಿ ಪಾತ್ರಕ್ಕೂ ನನ್ನ ರಿಯಲ್ ಲೈಫ್‌ಗೂ ಡೆಟ್ ಅಪೋಸಿಟ್ ಇಲ್ಲ. ಕೆಲವೊಂದು ಸಾಮ್ಯತೆಗಳು ಇವೆ. ಶ್ರಾವಣಿಗೆ ತಾಳ್ಮೆಯಿದೆ. ಎಲ್ಲರನ್ನೂ ಇಷ್ಟ ಪಡುತ್ತಾಳೆ. ಇಶಿಕಾ ಅಂತ ತಗೊಂಡ್ರೆ, ಎಲ್ಲರೂ ಇಷ್ಟ ಪಡುವಂತಹ ಕ್ಯಾರೆಕ್ಟರ್."

ಸಿಂಬನ ಜೊತೆ ನಟಿಸೋದು ಕಷ್ಟವೇ?

"ಸಿಂಬ (ಶ್ವಾನ) ಟ್ರೈನರ್ ಹೇಳಿದಂತೆ ಕೇಳುತ್ತಾನೆ. ಆರಂಭದಲ್ಲಿ ಚೀಕು ಜೊತೆ ಹೇಗೆ ಕೆಲಸ ಮಾಡಬೇಕು ಅಂತಿದ್ದಾಗ ಸ್ಕಂದ ಅವರು ನನಗೆ ಸಹಾಯ ಮಾಡಿದರು. ಎಲ್ಲರೂ ಇಡೀ ಟೀಮ್ ನನಗೆ ತುಂಬಾನೇ ಸಹಾಯ ಮಾಡಿದರು. ಹೀಗಾಗಿ ನನಗೆ ತುಂಬಾನೇ ಅನುಕೂಲ ಆಯ್ತು."

Actress Eeshika Shettigar said she learned patience from Avanu Mathe Shravani serial

ಮತ್ತೆ ಸಿನಿಮಾ ಕಡೆ ಬರುವುದಿಲ್ಲವೇ?

"ಈಗ ಸಿನಿಮಾಗಳ ಸ್ಟೋರಿಯನ್ನು ಕೇಳುತ್ತಿದ್ದೇನೆ. ಯಾವುದು ಇಷ್ಟ ಆಗುತ್ತೋ ಅದನ್ನು ತೆಗೆದುಕೊಂಡು ಸಿನಿಮಾ ಮಾಡುತ್ತೇನೆ. ಮಾಡಲಿಂಗ್ ಮಾಡುತ್ತಿದ್ದೇನೆ. ಫೋಟೊಶೂಟ್‌ಗಳನ್ನು ಮಾಡುತ್ತಿರುತ್ತೇನೆ."

ಕಿರುತೆರೆಯಲ್ಲಿ ಮೀಟೂ ಸಂಸ್ಕೃತಿ ಇದೆಯೇ?

"ನನಗೆ ಈ ಚಿತ್ರರಂಗದಲ್ಲಿ ಅನುಭವ ತುಂಬಾನೇ ಕಮ್ಮಿಯಿದೆ. ಈಗ ಧಾರಾವಾಹಿ ಮಾಡುತ್ತಿದ್ದೇನೆ. ನಾನು ಚಿಕ್ಕವಳಿಂದ ಏನು ಸಿನಿಮಾ ಮಾಡಿದ್ದೀನಿ. ಅದು ನನಗೆ ಇಂಪ್ಯಾಕ್ಟ್ ಆಗಿಲ್ಲ. ನನ್ನ ಪೋಷಕರು ನೋಡಿಕೊಳ್ಳುತ್ತಿದ್ದರು. ಅವರು ನನ್ನೊಂದಿಗೆ ಬರುತ್ತಿದ್ದರು. ಅದೇನು ಸಮಸ್ಯೆ ಆಗಿಲ್ಲ. ನಾನೀಗ ಸೀರಿಯಲ್‌ನಲ್ಲಿ ನಟಿಸುತ್ತಿದ್ದೇನೆ. ಆ ಇಡೀ ತಂಡ ಸಮಾನವಾಗಿಯೇ ನೋಡುತ್ತಿದ್ದಾರೆ."

ಮೊದಲ ಧಾರಾವಾಹಿ ಬಗ್ಗೆ ಏನಂತಿರಾ?

"ಈ ಸೀರಿಯಲ್‌ಗೆ ರಿಪ್ಲೇಸ್ಮೆಂಟ್ ಆದಾಗ ಸೋಶಿಯಲ್ ಮೀಡಿಯಾದಲ್ಲಿ ಜನರು ಬೈತಿದ್ರು. ಅವರಿಗೂ ನಮ್ಮನ್ನು ಒಪ್ಪಿಕೊಳ್ಳುವುದು ಕಷ್ಟ ಆಗಿರುತ್ತೆ. ಒಮ್ಮೆ ರೀಚ್ ಆಗಿ ನನ್ನನ್ನು ಇಷ್ಟ ಪಡುವುದಕ್ಕೆ ಶುರು ಮಾಡಿದ ಮೇಲೆ ಈಗ ಪ್ರತಿಯೊಬ್ಬರೂ ಇಷ್ಟ ಪಡುತ್ತಾರೆ. ನನ್ನ ಆಕ್ಟಿಂಗ್, ಕಾಸ್ಟ್ಯೂಮ್ ಬಗ್ಗೆ ಮಾತಾಡುತ್ತಿದ್ದಾರೆ. ಇದಕ್ಕೆ ಸ್ಕಂದ ಅಶೋಕ್, ಡೈರೆಕ್ಟರ್ ಅನಿಲ್ ಸರ್, ಪ್ರಡ್ಯೂಸರ್ ತುಂಬಾನೇ ಸಹಾಯ ಮಾಡಿದ್ದಾರೆ."

More from Filmibeat

English summary
Actress Eeshika shettigar said she learned patience from Avanu Mathe Shravani serial:
Read more about: actress interview filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X