ಬಿಗ್ ಬಾಸ್ ಮನೆಯಲ್ಲಿ ನಾಟ್ಕ ಮಾಡೋರ, ಬಗ್ಗೆ ಮಾಧುರಿ ಹೇಳಿದ್ದೇನು?
ನಟಿ ಮಾಧುರಿ ಅವರ ಅಭಿನಯದ ಊಜಾ ಚಿತ್ರ ಈ ವಾರ ತೆರೆ ಕಾಣುತ್ತಿದ್ದು, ಚಿತ್ರದ ಬಗ್ಗೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಜೊತೆಗೆ ಬಿಗ್ ಬಾಸ್ ಮನೆಯಲ್ಲಿ ಅತೀ ಹೆಚ್ಚು ನಾಟ್ಕ ಮಾಡೋರು ಯಾರು ಅನ್ನೋ ಸತ್ಯವನ್ನು ಸಂದರ್ಶನದಲ್ಲಿ ಬಯಲು ಮಾಡಿದ್ದಾರೆ. ರ್ಯಾಂಬೋ ಬೆಡಗಿ ನಟಿ ಮಾಧುರಿ ಇಟಗಿ ಅವರ ಜೊತೆ ನಡೆಸಿದ ಸಂದರ್ಶನದ ಮುಂದುವರಿದ ಭಾಗ ಇಲ್ಲಿದೆ..
* ನಿಮ್ಮ ಪ್ರಕಾರ ಬಿಗ್ ಬಾಸ್ ಮನೆಯಲ್ಲಿ ಗೆಲ್ಲುವವರು ಯಾರು?
- ಹಾ! ನನಗೆ ಮೂರು ಜನ ಪೈನಲ್ ವರೆಗೂ ಹೋಗಬಹುದು ಅಂತ ಅನ್ಸುತ್ತೆ. ಅದ್ರಲ್ಲಿ 1. ಪೂಜಾ ಗಾಂಧಿ ಅವರು 2. ಶ್ರುತಿ ಅಕ್ಕ, ಮತ್ತೆ 3. ಹುಚ್ಚ ವೆಂಕಟಣ್ಣ

* ನಿಮ್ಮ ಪ್ರಕಾರ ಮನೆಯಲ್ಲಿ ತುಂಬಾ ಸ್ಮಾರ್ಟ್ ಪ್ಲೇಯರ್.
- ಕೃತಿಕಾ! ಅವರು ಅದೇ ಥರ ಬಿಹೇವ್ ಮಾಡ್ತಾರೆ.
* ಮನೆ ಒಳಗಡೆ ತುಂಬಾ ನಾಟ್ಕ ಮಾಡೋರು?['ಬಿಗ್ ಬಾಸ್ 3' ಎಲ್ಲಾ 15 ಸ್ಪರ್ಧಿಗಳ ಕಿರು ಪರಿಚಯ]
- ಅದೂ ಕೃತಿಕಾನೇ
* ನಿಮ್ಮ ಫೇವರೆಟ್ ಸ್ಪರ್ಧಿ ಯಾರು?
_ ಮತ್ತೆ ಮೂರು ಜನ 1. ಪೂಜಾ ಗಾಂಧಿ ಅವರು 2. ಶ್ರುತಿ ಅಕ್ಕ, 3. ವೆಂಕಟಣ್ಣ, ಇವರೇ ಮೂರು ಜನ ನನಗೆ ತುಂಬಾ ಇಷ್ಟ ಆಗಿದ್ದು.
* ಯಾರನ್ನ ತುಂಬಾ ಮಿಸ್ ಮಾಡ್ಕೋತಾ ಇದ್ದೀರಾ?
- ಪೂಜಾ, ವೆಂಕಟಣ್ಣ, ಶ್ರುತಿ ಅಕ್ಕ ಮತ್ತು ಚಂದನ್ ಅವರನ್ನ ಮನೆ ಬಿಟ್ಟು ಬರೋವಾಗ ತುಂಬಾ ಮಿಸ್ ಮಾಡ್ಕೊಂಡೇ, ಈಗಲೂ ಮಿಸ್ ಮಾಡ್ಕೋತಾ ಇದ್ದೀನಿ.

*ಕೊನೆಯದಾಗಿ, ಈ ವಾರ ತೆರೆ ಕಾಣುತ್ತಿರುವ ನಿಮ್ಮ 'ಊಜಾ' ಸಿನಿಮಾದ ಬಗ್ಗೆ ಹೇಳಿ.
_ ಹಾ! ಇದೊಂಥರ ಹಾರರ್ ಥರ ಮೂವಿ. ಈ ವಾರ ತೆರೆ ಕಾಣ್ತಾ ಇದೆ. ಇದ್ರಲ್ಲಿ ನನ್ನ ಪಾತ್ರ ಒಂಥರಾ ಟಾಮ್ ಬಾಯ್ (ಗಂಡುಬೀರಿ) ಥರದ ಪಾತ್ರ. ಜೊತೆಗೆ ಕ್ಯಾಮರಮೆನ್, ಕ್ಯಾಮರ ಹ್ಯಾಂಡಲ್ ಮಾಡೋ ಸಖತ್ ಗ್ಲಾಮರ್ ಹುಡುಗಿಯ ಪಾತ್ರ. ಮತ್ತೆ ಮೂವಿನಲ್ಲಿ ಸಖತ್ ಗ್ಲಾಮರ್ ಇದೆ. ಸಿನಿಮಾಟೋಗ್ರಫಿ ತುಂಬಾ ಚೆನ್ನಾಗಿದೆ. ಸಾಂಗ್ಸ್ ತುಂಬಾ ಚೆನ್ನಾಗಿದೆ. ಆಮೇಲೆ ಹೆದ್ರಿಸೋವಂತಹ ತುಂಬಾ ಕಾನ್ಸೆಪ್ಟ್ ಇದೆ. ಒಟ್ನಲ್ಲಿ ಒಂಥರಾ ಥ್ರಿಲ್ಲಿಂಗ್ ಆಗಿದೆ.
* ನೀವು ಇದು ಎರಡನೇ ಬಾರಿಗೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ತಾ ಇರೋದಾ?
- ಇಲ್ಲಾ ಈ ಮೊದಲು ತುಂಬಾ ಚಿತ್ರಗಳಲ್ಲಿ ಅಭಿನಯಿಸಿದ್ದೀನಿ, ಜಗ್ಗೇಶ್ ಹಾಗೂ ರಮೇಶ್ ಅರವಿಂದ್ ಅವರ 'ತೆನಾಲಿ ರಾಮ' ಚಿತ್ರದಲ್ಲಿ ಕಾಣಿಸಿಕೊಂಡಿದ್ದೆ. ನಂತರ ಮುರಳಿ ಜೊತೆ 'ಮುರಾರಿ' ಹಾಗು ತಮಿಳು ಭಾಷೆಯಲ್ಲಿ ತುಂಬಾ ಸಿನಿಮಾ ಮಾಡಿದ್ದೀನಿ. ಆದ್ರೆ ತುಂಬಾ ಹೆಸರು ತಂದು ಕೊಟ್ಟಿದ್ದು ಶರಣ್ ಜೊತೆ ಮಾಡಿದ ರ್ಯಾಂಬೋ ಸಿನಿಮಾ.


Click it and Unblock the Notifications











