For Quick Alerts
  ALLOW NOTIFICATIONS  
  For Daily Alerts

  ಮೌನಿ, ಮಾಧುರಿಗೆ 'ಬಿಗ್ ಬಾಸ್' ಮನೆಯಲ್ಲಿ ಆದ ಅನುಭವ ಏನು?

  By Suneetha
  |

  ಕಾಮಿಡಿ ಕಿಂಗ್ ಶರಣ್ ಜೊತೆ ರ್ಯಾಂಬೋ ಚಿತ್ರದಲ್ಲಿ 'ಮನೆ ತನ್ಕ ಬಾರೇ ಮನೆ ತನ್ಕ' ಅನ್ನೋ ಹಾಡಿನಲ್ಲಿ ಸಖತ್ ಸ್ಟೆಪ್ ಹಾಕಿದ್ದ ನಟಿ ಮಾಧುರಿ ಇಟಗಿ ಅವರು ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 3ರಲ್ಲಿ ಸ್ಪರ್ಧಾರ್ಥಿಯಾಗಿ, ಮೊದಲನೇ ವಾರದಲ್ಲಿ ಎಲಿಮಿನೇಟ್ ಆಗಿದ್ದು, ಆಯ್ತು.

  ಇದೀಗ ಬಿಗ್ ಬಾಸ್ ಮನೆಯಲ್ಲಿ ಒಂದು ವಾರದಲ್ಲಿ ಕಳೆದ ಆ ಸುಂದರ ಕ್ಷಣಗಳನ್ನು ಹುಬ್ಬಳ್ಳಿ ಬೆಡಗಿ ಸಖತ್ ಮೌನಿ, ನಟಿ ಮಾಧುರಿ ಇಟಗಿ ಅವರು ಫಿಲ್ಮಿಬೀಟ್ ಕನ್ನಡದೊಂದಿಗೆ ಹಂಚಿಕೊಂಡಿದ್ದಾರೆ.

  ಸದ್ಯಕ್ಕೆ 'ಊಜಾ' ಎಂಬ ಹಾರರ್-ಥ್ರಿಲ್ಲರ್ ಸಿನಿಮಾದಲ್ಲಿ ನಟಿಸಿರುವ ನಟಿ ಮಾಧುರಿ ಅವರೊಂದಿಗೆ ನಿಮ್ಮ ಫಿಲ್ಮಿಬೀಟ್ ಕನ್ನಡ ನಡೆಸಿರುವ ಸಂದರ್ಶನ ಇಲ್ಲಿದೆ ನೋಡಿ..['ಬಿಗ್ ಬಾಸ್' ಮನೆಯಿಂದ ಹೊರಬಿದ್ದ ಮಾಧುರಿ ಇಟಗಿ.!]


  *ಬಿಗ್ ಬಾಸ್ ಮನೆಯಲ್ಲಿ ನಿಮಗಾದ ಅನುಭವ.

  _ ಯಾ!! ಇಟ್ ವಾಸ್ ನೈಸ್ ಎಕ್ಸ್ ಪೀರಿಯನ್ಸ್, ನನಗೆ ಫಸ್ಟ್ ಮನೆಗೆ ಒಳಗೆ ಹೋಗುವಾಗ ತುಂಬಾ ಭಯ ಇತ್ತು. ಒಂದು ಫೋನ್ ಇಲ್ಲ, ಇಂಟರ್ ನೆಟ್ ಇಲ್ಲ, ಹೇಗಪ್ಪಾ ಅಲ್ಲಿರೋದು ಅಂತ. ಆದ್ರೆ ಮನೆಗೆ ಎಂಟ್ರಿ ಆಗುವ ಮೊದಲ್ನೆ ದಿನಾನೇ ನನಗೆ ತುಂಬಾ ಜ್ವರ ಇತ್ತು ಹಾಗೆ ನನಗೆ ಯಾರ ಜೊತೆನೂ ಜಾಸ್ತಿ ಮಾತಾಡೋಕೆ ಆಗ್ಲಿಲ್ಲ. ಎಲ್ಲರ ಜೊತೆ ಜಾಸ್ತಿ ಬೆರೆಯೋಕೆ ಆಗ್ಲಿಲ್ಲ. ಮತ್ತೆ ಸೆಕೆಂಡ್ ಡೇ ನಾಮಿನೇಷನ್ ಇತ್ತು. ಇಲ್ಲಿ ನಾನು ಎಲ್ಲರ ಜೊತೆ ಚೆನ್ನಾಗಿ ಬೆರೆತಿಲ್ಲ ಅಂತ ನಾಮಿನೇಟ್ ಆದೆ. ಏನೂ ಮಾಡಕ್ಕಾಗಲ್ಲ ಕಂಪಲ್ಸರಿ ಎರಡು ಹೆಸರು ತಗೊಳ್ಳೇ ಬೇಕು. ಸೋ ನಾನು ಮತ್ತು ನೇತ್ರಾ ಎರಡು ಹೆಸರು ಪಿಕ್ ಮಾಡಿದ್ವಿ.

  ಆದಾದ್ಮೆಲೇ ಎಲ್ಲರ ಜೊತೆ ಚೆನ್ನಾಗಿ ಬೆರೆತು, ಕ್ಲೋಸ್ ಆಗಿ ಏನೋ ಒಂಥರಾ ರಿಲೇಷನ್ ಶಿಪ್ ಬಾಂಡ್ ಬೆಳೆದುಬಿಡ್ತು. ಅದರ ಜೊತೆಗೆ ನನಗೆ ಆರೇ ದಿನ ಟೈಮ್ ಇತ್ತು ಅಷ್ಟರಲ್ಲಿ ಎಲಿಮಿನೇಟ್ ಆಗಿ ಬಂದ್ಬಿಟ್ಟೆ. ಆದ್ರೆ ಒಂದು ಖುಷಿ ಕೊಟ್ಟಿದ್ದು ಏನಪ್ಪಾ ಅಂದ್ರೆ, ನಾನು ಹೊರಗಡೆ ಬರ್ಬೇಕಾದ್ರೆ ನನ್ನನ್ನು ಎಲ್ಲರೂ ಸೇವ್ ಮಾಡೋಕೆ ಟ್ರೈ ಮಾಡಿದ್ರು. ಅಲ್ಲದೇ ಯಾರನ್ನ ಉಳಿಸ್ಕೊಳ್ಳೊಕೆ ಇಷ್ಟ ಪಡ್ತೀರಾ ಅಂತ ಸುದೀಪ್ ಅವರು ಕೇಳಿದಾಗ ತುಂಬಾ ಜನ ನನ್ನ ಹೆಸರನ್ನು ಹೇಳಿದ್ರು, ಸೋ ಅದು ನನಗೆ ತುಂಬಾ ಅಂದ್ರೆ ತುಂಬಾ ಖುಷಿ ಕೊಡ್ತು.['ಊಜಾ': ಇದು ಆತ್ಮಗಳ ಜೊತೆ ಆಡುವ ಆಟ]


  * ಹುಚ್ಚ ವೆಂಕಟ್ ಅವರ ಜೊತೆ ಪರಸ್ಪರ ಮಾತು-ಕತೆ ಹೇಗಿತ್ತು?

  -ಆಕ್ಚುವಲಿ ಫಸ್ಟ್ ಹೋದ ಎರಡು-ಮೂರು ದಿನಕ್ಕೆ ಹುಚ್ಚ ವೆಂಕಟ್ ಅವರ ತಂಗಿಯಾಗಿ ಬಿಟ್ಟೆ. ಆಮೇಲೆ ಅವರು ನನ್ನ ಜೊತೆ ತುಂಬಾನೇ ಕ್ಲೋಸ್ ಆಗಿದ್ರು. ಏನಪ್ಪಾ ಅಂದ್ರೆ, ನಾವು ಅವರಿಗೆ ಏನಾದ್ರೂ ಸಲಹೆ ಕೊಡೋ ಬದಲು ಅವರೇ ನಮಗೆ ನೀವು ಹಾಗಿರಿ, ನೀವು ಹೀಗಿರಿ ಅಂತ ತುಂಬಾನೇ ಹೇಳೋರು. ಸೋ ಹೀಗೆ ಅವರ ಜೊತೆ ತುಂಬಾನೇ ಒಂಥರಾ ಸ್ಪೆಷಲ್ ಸಂಬಂಧ ಬೆಳೆದು ಹೋಗಿತ್ತು.

  * ಮನೆಗೆ ಹೋದ ಒಂದು ವಾರದಲ್ಲೇ, ನೀವು ಎಲಿಮಿನೇಟ್ ಆದ್ರಲ್ಲ, ಸೋ ನಿಮ್ಮಲ್ಲೇ ಏನಾದ್ರೂ ಮೈನಸ್ ಪಾಯಿಂಟ್ ಇತ್ತು ಅಂತ ನಿಮಗನ್ನಿಸಿತಾ?

  -ಇಟ್ ವಾಸ್ ನಾಟ್ ಎ ಮೈನಸ್ ಪಾಯಿಂಟ್. ಇದಕ್ಕೆ ನಾನು ಮೈನಸ್ ಪಾಯಿಂಟ್ ಅನ್ನೋ ಬದಲು, ನಾನು ಅನ್ ಲಕ್ಕಿ ಅಂತ ಹೇಳಬಹುದು. ನಾನು ಇವಾಗ್ಲೂ ಬೇಕಾದ್ರೂ ಹೇಳ್ತೀನಿ ಇದು ನನ್ನ ಮೈನಸ್ ಪಾಯಿಂಟ್ ಅಲ್ಲ. ಇವನ್ ಸುದೀಪ್ ಅವರು ಕೂಡ ನೀವು ಅನ್ ಲಕ್ಕಿ ಅಂದ್ರು, ಮತ್ತೆ ನನಗೆ ಲಕ್ ಇರ್ಲಿಲ್ಲ. ಲಕ್ ಇಲ್ಲದೋರಿಗೆ ಅನ್ ಲಕ್ಕಿ ಅಂತ ಹೇಳಬಹುದು ಹೊರತು ಅದು ಮೈನಸ್ ಪಾಯಿಂಟ್ ಅಲ್ಲ.

  ಮತ್ತೆ ಇದು ಒಂದು ಕಾರಣ ಇರಬಹುದು, ಅದು ನಿಮಗೂ ಗೊತ್ತಿದೆ ನೀವು ಶೋ ನೋಡ್ತಾ ಇದ್ರಲ್ಲಾ, ಏನಪ್ಪಾ ಅಂದ್ರೆ ನನ್ನಷ್ಟಕ್ಕೆ ನಾನು ಇರ್ತಾ ಇದ್ದೆ. ಯಾವುದೇ ಥರದ ಆಕ್ಟ್ ಮಾಡೋಕೆ ಹೋಗ್ತಾ ಇರ್ಲಿಲ್ಲಾ, ಮತ್ತೆ ಅದೇ ನಾನು ಫಸ್ಟ್ ಡೇ ಹೋಗುವಾಗ ಜ್ವರ ಬಂದು ನಾನು ಫಿಸಿಕಲಿ ತುಂಬಾ ಸುಸ್ತಾಗಿದ್ದೆ. ಹಾಗಾಗಿ ಯಾರ ಹತ್ರಾನೂ ಜಾಸ್ತಿ ಬೆರೆಯೋಕೆ ಆಗ್ಲಿಲ್ಲ. ಶೋ ಮುಗಿಸಿಕೊಂಡು ಮನೆ ಒಳಗೆ ಹೋಗುವಾಗ ತುಂಬಾ ಲೇಟ್ ಕೂಡ ಆಗಿತ್ತು. ಅದಿಕ್ಕೆ ನಾಮಿನೇಟ್ ಆಗಿದ್ದು ನಿಜ. ಮತ್ತೆ ನಾನು ಸೈಲೆಂಟ್ ಅನ್ನೋ ರೀಸನ್ ಎಲ್ಲರೂ ಕೊಟ್ರು. ಆದರೂ ನಾನು ಹೊರಗಡೆ ಬರೋವಷ್ಟರಲ್ಲಿ ನನಗೆ ಎಲ್ಲರು ತುಂಬಾನೇ ಕ್ಲೋಸ್ ಆಗಿಬಿಟ್ಟಿದ್ರು. ಸೋ ನನ್ನ ಪ್ರಕಾರ ಇಲ್ಲಿ ಯಾವುದೇ ಮೈನಸ್ ಪಾಯಿಂಟ್ ಇತ್ತು ಅದಕ್ಕೆ ನಾನು ಹೊರಗಡೆ ಬಂದೆ ಅಂತ ಅಲ್ಲ.

  English summary
  Kannada Actress Madhuri Itagi shares experience Bigg Boss Kannada 3. Actress Madhuri Itagi after exti 'Bigg Boss kannada 3' and Shared her experience with Filmibeat Kannada. Here is the Interview.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X