ನಟನೆ ಮತ್ತು ಸೈಕಾಲಜಿ ಎರಡೂ ಇಷ್ಟ: 'ಸ್ನೇಹದ ಕಡಲಲ್ಲಿ' ನಟಿ ಪ್ರಕೃತಿ ಪ್ರಸಾದ್ ನಟನಾ ಜರ್ನಿ
ಬೆಂಗಳೂರಿನ ಪ್ರತಿಭೆ ಪ್ರಕೃತಿ ಪ್ರಸಾದ್ ಅವರು ಆಕಸ್ಮಿಕವಾಗಿ ನಟನಾ ಕ್ಷೇತ್ರಕ್ಕೆ ಬಂದವರು. ಹತ್ತನೇ ತರಗತಿಯ ರಜಾ ಸಮಯದಲ್ಲಿ ಕೇವಲ ಹವ್ಯಾಸಕ್ಕಾಗಿ ನಟನಾ ತರಬೇತಿ ಪಡೆದ ಇವರು, 'ಸೌಭಾಗ್ಯವತಿ' ಧಾರಾವಾಹಿಯ ಮೂಲಕ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ವೃತ್ತಿಯಲ್ಲಿ ನಟಿಯಾಗಿದ್ದರೂ, ಶೈಕ್ಷಣಿಕವಾಗಿ M.Sc. (ಕೌನ್ಸೆಲಿಂಗ್ ಅಂಡ್ ಫ್ಯಾಮಿಲಿ ಥೆರಪಿ) ಪದವೀಧರೆಯಾಗಿರುವ ಇವರು, ಭವಿಷ್ಯದಲ್ಲಿ ನಟನೆಯ ಜೊತೆಜೊತೆಗೆ ಸೈಕಾಲಜಿ ಕ್ಲಿನಿಕ್ ಆರಂಭಿಸುವ ದೊಡ್ಡ ಕನಸನ್ನು ಹೊಂದಿದ್ದಾರೆ. ಪ್ರಸ್ತುತ 'ಸ್ನೇಹದ ಕಡಲಲ್ಲಿ' ಧಾರಾವಾಹಿಯ 'ವಿದ್ಯಾ' ಎಂಬ ಸಕಾರಾತ್ಮಕ ಪಾತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ಇವರು, ಮೈಕ್ರೋ ಡ್ರಾಮಾ ಮತ್ತು ಸಿನಿಮಾ ರಂಗದಲ್ಲೂ ತಮ್ಮನ್ನು ತೊಡಗಿಸಿಕೊಳ್ಳುತ್ತಾ ಯಶಸ್ವಿ ಪಯಣ ಮುಂದುವರಿಸುತ್ತಿದ್ದಾರೆ.
1.ನೀವು ಎಲ್ಲಿಯವರು? ಹೇಗೆ ನಿಮಗೆ ನಟನೆ ಕಡೆ ಬರಬೇಕು ಅನಿಸಿತು?
ನಾನು ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಲ್ಲೇ, ನಮ್ಮ ಅಮ್ಮ ಮೈಸೂರಿನವರು. ಆಕ್ಟಿಂಗ್ ಗೆ ಬರಬೇಕು ಅಂತ ಮೊದಲೇ ಪ್ಲಾನ್ ಇರಲಿಲ್ಲ. 10th ಮುಗಿದ ಮೇಲೆ ರಜೆ ಇತ್ತಲ್ಲ, ಅವಾಗ ಸುಮ್ಮನೆ ಟೈಮ್ ಪಾಸ್ ಗೆ ಅಂತ 'ಲೈಮ್ ಲೈಟ್ ಆಕ್ಟಿಂಗ್ ಅಕಾಡೆಮಿ'ಗೆ ಸೇರಿಕೊಂಡೆ. ಅಲ್ಲಿ ಹೋದಮೇಲೆ ಈ ಫೀಲ್ಡ್ ಬಗ್ಗೆ ಕ್ಯೂರಿಯಾಸಿಟಿ ಶುರುವಾಯ್ತು.

2. ನೀವು ಎಂಟ್ರಿ ಕೊಡುವಾಗ ಏನಾದರೂ ಇಂಟರೆಸ್ಟಿಂಗ್ ಸ್ಟೋರಿ ಇದೆಯಾ?
ಅಕಾಡೆಮಿಯವರು ನನ್ನ ಪ್ರೊಫೈಲ್ ಕಳುಹಿಸಿದ್ರು. ಅಲ್ಲಿಂದ ನನಗೆ 'ಸೌಭಾಗ್ಯವತಿ' ಸೀರಿಯಲ್ ಗೆ ಆಡಿಷನ್ ಕಾಲ್ ಬಂತು. ನಮ್ಮದು ತುಂಬಾ ಆರ್ಥೊಡಾಕ್ಸ್ ಫ್ಯಾಮಿಲಿ ಆಗಿರೋದ್ರಿಂದ ಅಮ್ಮನಿಗೆ ಮೊದಲು ಇಷ್ಟ ಇರಲಿಲ್ಲ. ಆದರೆ ಆಮೇಲೆ ನನ್ನ ಆಸಕ್ತಿ ನೋಡಿ ಅವರು ಒಪ್ಪಿಕೊಂಡ್ರು ಮತ್ತು ತುಂಬಾ ಸಪೋರ್ಟ್ ಮಾಡಿದ್ರು.
3. ಈಗ ನೀವು ನಟನೆಗೆ ಬಂದಮೇಲೆ ನಿಮ್ಮ ಮೈಂಡ್ ಸೆಟ್ ಹೇಗಿದೆ? ನಿಮ್ಮ ಆಯ್ಕೆ ಸರಿಯಾಗಿದೆ ಅಂತ ಅನಿಸ್ತಾ?
ಖಂಡಿತ, ನನ್ನ ಡಿಸಿಷನ್ ಕರೆಕ್ಟ್ ಆಗಿದೆ ಅಂತ ಅನಿಸುತ್ತೆ. ಈಗಿನ ಕಾಲದಲ್ಲಿ ಸಾಫ್ಟ್ವೇರ್ ಜಾಬ್ ಇರಲಿ ಅಥವಾ ಬೇರೆ ಯಾವುದೇ ಇರಲಿ, ಅಲ್ಲಿಯೂ ಕೂಡ ಅನ್ಸ್ಟೆಬಿಲಿಟಿ ಇದೆ. ಹೀಗಿರೋವಾಗ ನಟನಾ ಕ್ಷೇತ್ರದಲ್ಲೂ ಕೂಡ ಒಂದು ಪ್ರೊಫೆಷನಲ್ ಆದ ಕೆರಿಯರ್ ರೂಪಿಸಿಕೊಳ್ಳಬಹುದು ಅಂತ ನನಗನ್ನಿಸುತ್ತೆ.
4. ಒಂದು ವೇಳೆ ನೀವು ಆಕ್ಟಿಂಗ್ಗೆ ಬರದೇ ಹೋಗಿದ್ದರೆ ನಿಮ್ಮ ಪ್ರೊಫೆಷನಲ್ ಫೀಲ್ಡ್ ಯಾವುದಾಗಿರುತ್ತಿತ್ತು?
ನಾನು ನಟಿಯಾಗದೇ ಇದ್ದಿದ್ರೆ ಖಂಡಿತವಾಗಿಯೂ ಸೈಕಾಲಜಿಸ್ಟ್ ಅಥವಾ ಫ್ಯಾಮಿಲಿ ಥೆರಪಿಸ್ಟ್ ಆಗಿ ಇರ್ತಿದ್ದೆ. ಯಾಕಂದ್ರೆ ನಾನು M.Sc. ಇನ್ ಕೌನ್ಸೆಲಿಂಗ್ ಅಂಡ್ ಫ್ಯಾಮಿಲಿ ಥೆರಪಿ ಓದಿದ್ದೀನಿ.
5. ಈಗಿನ ಪ್ರೆಸೆಂಟ್ ಸೀರಿಯಲ್ 'ಸ್ನೇಹದ ಕಡಲಲ್ಲಿ' ಪಾತ್ರದ ಬಗ್ಗೆ ಹೇಳಿ?
'ಸ್ನೇಹದ ಕಡಲಲ್ಲಿ' ಸೀರಿಯಲ್ ನಲ್ಲಿ ನನ್ನದು 'ವಿದ್ಯಾ' ಅನ್ನೋ ಕ್ಯಾರೆಕ್ಟರ್. ಇದು ತುಂಬಾ ಬಬ್ಲಿ ಆಗಿರುವ, ಯಾವಾಗಲೂ ಎನರ್ಜಿಟಿಕ್ ಆಗಿರುವ ಪಾತ್ರ. ತುಂಬಾ ಪಾಸಿಟಿವ್ ಆಗಿ ಎಲ್ಲರಿಗೂ ಹೆಲ್ಪ್ ಮಾಡೋ ಸ್ವಭಾವ ಈ ಹುಡುಗಿದು.
6. 'ಸ್ನೇಹದ ಕಡಲಲ್ಲಿ' ಬಗ್ಗೆ ಏನು ಹೇಳಬಹುದು? ಪ್ರೇಕ್ಷಕರು ಹೇಗೆ ರೆಸ್ಪಾನ್ಸ್ ಮಾಡುತ್ತಿದ್ದಾರೆ?
ಸೀರಿಯಲ್ ತುಂಬಾ ಚೆನ್ನಾಗಿ ಹೋಗ್ತಿದೆ. ಜನರಿಂದ ಪಾಸಿಟಿವ್ ರೆಸ್ಪಾನ್ಸ್ ಬರ್ತಿದೆ. ವಿದ್ಯಾ ಪಾತ್ರವನ್ನು ಜನರು ಇಷ್ಟಪಡ್ತಿದ್ದಾರೆ ಅಂತ ಗೊತ್ತಾದಾಗ ತುಂಬಾ ಖುಷಿಯಾಗುತ್ತೆ.
7. ನಿಮಗೂ ಮತ್ತು ಸುವರ್ಣಗೂ ಒಡನಾಟ ಚೆನ್ನಾಗಿದೆ ಅನಿಸುತ್ತೆ?
ಹೌದು, ಸ್ಟಾರ್ ಸುವರ್ಣ ವಾಹಿನಿ ಜೊತೆ ಕೆಲಸ ಮಾಡೋದು ತುಂಬಾ ಕಂಫರ್ಟಬಲ್ ಆಗಿದೆ. ನಮ್ಮನ್ನ ಅವರು ನಡೆಸಿಕೊಳ್ಳೋ ರೀತಿ ಮತ್ತು ಅಲ್ಲಿನ ಎನ್ವಿರಾನ್ಮೆಂಟ್ ನನಗೆ ತುಂಬಾ ಇಷ್ಟ.
8. ಸಿನಿಮಾ ಜರ್ನಿ ಬಗ್ಗೆ ಹೇಳಬಹುದಾ?
ಸಿನಿಮಾ ಅನ್ನೋದು ಒಂದು ದೊಡ್ಡ ಪ್ಲಾಟ್ಫಾರ್ಮ್. ಕಿರುತೆರೆಗಿಂತ ಸಿನಿಮಾ ಜರ್ನಿ ಸ್ವಲ್ಪ ಡಿಫರೆಂಟ್ ಆಗಿರುತ್ತೆ. ಅಲ್ಲಿ ಒಂದು ಕ್ಯಾರೆಕ್ಟರ್ ನ ಪೋರ್ಟ್ರೇ ಮಾಡೋ ರೀತಿ ಮತ್ತು ಅದರ ಇಂಪ್ಯಾಕ್ಟ್ ದೊಡ್ಡದಾಗಿರುತ್ತೆ.
9. ಮೈಕ್ರೋ ಡ್ರಾಮಾ ಎಕ್ಸ್ಪೀರಿಯನ್ಸ್ ಮತ್ತು ಅದರ ಫ್ಯೂಚರ್ ಹೇಗಿದೆ?
ಮೈಕ್ರೋ ಡ್ರಾಮಾ ಅನ್ನೋದು ಈಗಿನ ಹೊಸ ಟ್ರೆಂಡ್. ಜನರು ತುಂಬಾ ಬ್ಯುಸಿ ಇರೋದ್ರಿಂದ ಶಾರ್ಟ್ ಆಗಿ ಇರೋ ಕಂಟೆಂಟ್ ಇಷ್ಟಪಡ್ತಾರೆ. ಮುಂದೆ ಈ ಫಾರ್ಮ್ಯಾಟ್ಗೆ ಡಿಜಿಟಲ್ ಮೀಡಿಯಾದಲ್ಲಿ ದೊಡ್ಡ ಫ್ಯೂಚರ್ ಇದೆ.
10. ಪೇಮೆಂಟ್ ವಿಷಯಕ್ಕೆ ಬಂದ್ರೆ ಸ್ಮಾಲ್ ಸ್ಕ್ರೀನ್ ಮತ್ತೆ ಮೈಕ್ರೋ ಡ್ರಾಮಾ ಎರಡನ್ನೂ ಹೇಗೆ ಕಂಪೇರ್ ಮಾಡ್ತೀರಾ?
ಎರಡರಲ್ಲೂ ಪೇಮೆಂಟ್ ಸ್ಟ್ರಕ್ಚರ್ ಬೇರೆ ಬೇರೆ ಇರುತ್ತೆ. ಮೈಕ್ರೋ ಡ್ರಾಮಾಗಳಲ್ಲಿ ವರ್ಕಿಂಗ್ ಡೇಸ್ ಕಮ್ಮಿ ಇರುತ್ತೆ. ಆದರೆ ಒಂದು ಪ್ರೊಫೆಷನಲ್ ಲೆವೆಲ್ ನಲ್ಲಿ ನೋಡಿದ್ರೆ, ನಮಗಿರೋ ಎಕ್ಸ್ಪೀರಿಯನ್ಸ್ ಮತ್ತು ಡಿಮ್ಯಾಂಡ್ ಮೇಲೆ ಪೇಮೆಂಟ್ ಡಿಸೈಡ್ ಆಗುತ್ತೆ. ಎರಡರಲ್ಲೂ ಪೇಮೆಂಟ್ ಈಗ ಚೆನ್ನಾಗಿಯೇ ಇದೆ.
11. ಸೀರಿಯಲ್ ವಿಷಯಕ್ಕೆ ಬಂದ್ರೆ ಇಷ್ಟು ದಿನದ ಜರ್ನಿಯನ್ನು ಹೇಗೆ ರಿಕಾಲ್ ಮಾಡ್ಕೋತೀರಾ?
'ಸೌಭಾಗ್ಯವತಿ' ಇಂದ ಶುರುವಾದ ಈ ಪಯಣದಲ್ಲಿ ನಾನು ತುಂಬಾ ಕಲಿತಿದ್ದೇನೆ. ಈ ಜರ್ನಿ ನನಗೆ ತುಂಬಾ ಮೆಚ್ಯೂರಿಟಿ ಕೊಟ್ಟಿದೆ ಮತ್ತು ಒಳ್ಳೊಳ್ಳೆ ಆರ್ಟಿಸ್ಟ್ಗಳ ಜೊತೆ ಕೆಲಸ ಮಾಡೋ ಅವಕಾಶ ಸಿಕ್ಕಿದೆ.
12. ನಿಮ್ಮ ಫ್ಯೂಚರ್ ಪ್ಲಾನ್ ಏನು?
ನನಗೆ ಆಕ್ಟಿಂಗ್ ಅಂದ್ರೆ ಎಷ್ಟು ಇಷ್ಟವೋ, ಸೈಕಾಲಜಿ ಅಂದ್ರೂ ಅಷ್ಟೇ ಇಷ್ಟ. ಹಾಗಾಗಿ ಫ್ಯೂಚರ್ ನಲ್ಲಿ ಸ್ವಲ್ಪ ಎಕ್ಸ್ಪೀರಿಯನ್ಸ್ ತಗೊಂಡು ಆಮೇಲೆ ನನ್ನದೇ ಆದ ಒಂದು ಸೈಕಾಲಜಿ ಕ್ಲಿನಿಕ್ ಓಪನ್ ಮಾಡಿ, ಜನರಿಗೆ ಕೌನ್ಸೆಲಿಂಗ್ ಮಾಡಬೇಕು ಅನ್ನೋ ಪ್ಲಾನ್ ಇದೆ.
13. ನಿಮ್ಮ ಸಿನಿಮಾಗಳ ಬಗ್ಗೆ ಅನುಭವ ಹೇಳಿ?
ಸಿನಿಮಾಗಳಲ್ಲಿ ಕೆಲಸ ಮಾಡುವಾಗ ಪ್ರತಿಯೊಂದು ಶಾಟ್ ಗೂ ಕೊಡೋ ಇಂಪಾರ್ಟೆನ್ಸ್ ಮತ್ತು ಮೇಕಿಂಗ್ ಸ್ಟೈಲ್ ತುಂಬಾ ಅಮೇಜಿಂಗ್ ಆಗಿರುತ್ತೆ. ಅಲ್ಲಿನ ಎಕ್ಸ್ಪೀರಿಯನ್ಸ್ ಕಿರುತೆರೆಗಿಂತ ಸ್ವಲ್ಪ ಡಿಫರೆಂಟ್ ಆಗಿಯೇ ಇರುತ್ತೆ.


Click it and Unblock the Notifications











