BBK 10: "ಮುಂದಿನ ವಾರ ನನ್ನ ಸ್ಥಾನದಲ್ಲಿ ಡ್ರೋನ್ ಪ್ರತಾಪ್ ಇರ್ತಾನೆ" ಎಲಿಮಿನೇಟ್ ಆದ ರಕ್ಷಕ್ ಬುಲೆಟ್ ಭವಿಷ್ಯ
ಬಿಗ್ ಬಾಸ್ ಕನ್ನಡ ಸೀಸನ್ 10 ಈ ಬಾರಿ ಎಲ್ಲರಿಗೂ ವಿಭಿನ್ನ ಅಂತ ಅನಿಸುತ್ತಿದೆ. ಊಹೆ ಮಾಡದವರು ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಾರೆ. ಈ ವಾರ ಇವರೇ ಎಲಿಮಿನೇಟ್ ಆಗಬಹುದು ಅಂತ ಇಟ್ಟುಕೊಂಡ ನಿರೀಕ್ಷೆಗಳಲ್ಲೆವೂ ಉಲ್ಟಾ ಆಗುತ್ತಿದೆ. ಹಾಗೇ ಈ ವಾರ ಬಿಗ್ ಬಾಸ್ ಮನೆಯಿಂದ ರಕ್ಷಕ್ ಬುಲೆಟ್ ಹೊರಬಂದಿದ್ದಾರೆ.
ರಕ್ಷಕ್ ಬುಲೆಟ್ ಬಿಗ್ ಬಾಸ್ ಮನೆಯಲ್ಲಿ ಜೋರಾಗಿಯೇ ಸದ್ದು ಮಾಡಬಹುದು ಎಂಬ ನಿರೀಕ್ಷೆಯಿತ್ತು. ಬಿಗ್‌ಬಾಸ್ ಎಂಟ್ರಿ ಕೊಡುವುದಕ್ಕಿಂತಲೂ ಮುನ್ನ ಸೋಶಿಯಲ್ ಮೀಡಿಯಾಗಳಲ್ಲಿ ರಕ್ಷಕ್ ಜೋರಾಗಿ ಸದ್ದು ಮಾಡಿದ್ದರು. ಹೀಗಾಗಿ ಬಿಗ್ ಬಾಸ್ ಮನೆಯೊಳಗೂ ಗದ್ದಲ ಎಬ್ಬಿಸುತ್ತಾರೆ ಅಂತಲೇ ನಿರೀಕ್ಷೆ ಮಾಡಲಾಗಿತ್ತು.

ಆದರೆ, ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಸೈಲೆಂಟ್ ಆಗಿಯೇ ಇದ್ದರು. ಟಾಸ್ಕ್‌ಗಳಲ್ಲಿ ಭಾಗವಹಿಸಿದ್ದು ಬಿಟ್ಟರೆ, ಉಳಿದವರಂತೆ ಸದ್ದು ಮಾಡಿಲ್ಲ. ಹೀಗಾಗಿ ನಾಲ್ಕನೇ ವಾರಕ್ಕೆ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ. ಎಲಿಮಿನೇಟ್ ಆದ ಕೂಡಲೇ ರಕ್ಷಕ್ ಜಿಯೋ ಸಿನಿಮಾಗೆ ಸಂದರ್ಶನ ನೀಡಿದ್ದು, ನಮ್ರತಾ, ಡ್ರೋನ್ ಪ್ರತಾಪ್ ಹಾಗೂ ವಿನಯ್ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ.
"ಬಿಗ್ ಬಾಸ್‌ನಿಂದ ಹೊರಬಂದಿದ್ದಕ್ಕೆ ಬೇಸರವಿಲ್ಲ"
ಜಿಯೋ ಸಿನಿಮಾಗೆ ನೀಡಿರುವ ಸಂದರ್ಶನದಲ್ಲಿ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಕ್ಕೆ ಬೇಸರವಿಲ್ಲ. ನನ್ನ ಬೆಸ್ಟ್ ಅನ್ನು ನಾನು ಕೊಟ್ಟಿದ್ದೇನೆಂದು ಹೇಳಿಕೆ ಕೊಟ್ಟಿದ್ದಾರೆ. "ಈ ವಾರ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಕ್ಕೆ ನನಗೆ ಯಾವ ಬೇಸರವೂ ಇಲ್ಲ. ನಾನೇನೂ ಇಲ್ಲಿ ಕೇಳಿಕೊಂಡು ಬಂದವನಲ್ಲ. ಅವರಾಗೇ ನನ್ನ ಅಪ್ರೋಚ್ ಮಾಡಿದರು. ಒಪ್ಪಿಗೆ ಆಯ್ತು. ಒಳಗಡೆ ಬಂದೆ. ಒಂದು ತಿಂಗಳ ಇರಬೇಕು ಎಂಬ ಆಸೆ ಇತ್ತು. ಆ ದೇವ್ರು ಮುಂಚೆನೇ ಬರ್ದಿದ್ದ ಅನ್ಸುತ್ತೆ. ನನ್ನ ಬೆಸ್ಟ್ ನಾನು ಕೊಟ್ಟಿದ್ದೀನಿ. ಒಳಗಡೆ ಇದ್ದಾಗ ಮನೆಯ ಕ್ಯಾಪ್ಟನ್ ಆದೆ. 'ಉತ್ತಮ' ತಗೊಂಡೆ. ಆ ಬಗ್ಗೆ ಖುಷಿಯಿದೆ" ಎಂದು ರಕ್ಷಕ್ ಬುಲೆಟ್ ಹೇಳಿದ್ದಾರೆ.

"ಅನ್ನದ ಬೆಲೆ ಚೆನ್ನಾಗಿ ಅರ್ಥ ಆಯ್ತು"
ರಕ್ಷಕ್ ಬುಲೆಟ್ ಸಂದರ್ಶನದಲ್ಲಿ ಆಡಿದ ಮಾತುಗಳಲ್ಲಿ ಹೈಲೆಟ್ ಅಂದರೆ ಇದೇನೆ. ಬಿಗ್ ಬಾಸ್ ಮನೆಯೊಳಗೆ ಹೋಗಿ ಅನ್ನದ ಬೆಲೆ ಗೊತ್ತಾಯ್ತು ಎಂದು ಹೇಳಿದ್ದಾರೆ. "ಓ ಇವತ್ತು ಹಬ್ಬ. ಮನೇಲಿ ಚಿತ್ರನ್ನ, ವಡೆ, ಪಲ್ಯ ಎಲ್ಲ ಮಾಡಿರ್ತಾರೆ. ಇದ್ದಾಗ ನಾವೆಷ್ಟು ದುರಹಂಕಾರದಿಂದ ಇದ್ವಿ. ಈವತ್ತು ಇಲ್ಲಿ ಏನೂ ಇಲ್ದೆ, ಏನಾದ್ರೂ ಕೊಡ್ರಪ್ಪಾ ಅಂತ ಅಲಿತಿದೀವಿ. ಬೀನ್ಸ್ ಕೊಡ್ರಪ್ಪಾ, ಬೀನ್ಸ್ ಪಲ್ಯ ಮಾಡೋಣ. ಅನ್ನ ಕೊಡ್ರಪ್ಪಾ, ಫಲಾವ್ ಮಾಡೋಣ ಅಂತ ಅನಿಸ್ತಿತ್ತು. ಅಷ್ಟ್ ಬೇಜಾರಾಗಿಬಿಟ್ಟಿತ್ತು. ಅನ್ನದ ಬೆಲೆ ತುಂಬ ಚೆನ್ನಾಗಿ ಅರ್ಥ ಮಾಡಿಕೊಂಡೆ." ಎಂದು ರಕ್ಷಕ್ ಅಭಿಪ್ರಾಯ ಪಟ್ಟಿದ್ದಾರೆ.
"ಓರಿಜಿನಲ್ ರಕ್ಷಕ್ ಕಾಣಿಸಿಲ್ಲವೇನೋ?"
"ರಕ್ಷಕ್ ಜಾಸ್ತಿ ಮಾತಾಡ್ತಾನೆ. ಕೋಪ ಬರತ್ತೆ ಅಂತೆಲ್ಲ ಇತ್ತು. ಅದೆಲ್ಲ ಯಾವ್ದೂ ಇಲ್ಲ. ಆಚೆ ಇರೋ ಜನಕ್ಕೆ ಒರಿಜಿನಲ್ ರಕ್ಷಕ್ ಕಾಣಿಸ್ಲಿಲ್ವೇನೋ. ನಾನು ಇರೋದೇ ಹಾಗೆ. ಮನೆಲೂ ಹಾಗೇ ಇರ್ತೀನಿ. ನಾವು ಅಸಮರ್ಥರಾಗಿ ಒಳಗಡೆ ಹೋದ್ವಿ. ಕಷ್ಟಪಟ್ಟು, ಗುರ್ತಿಸಿಕೊಂಡು ಅಸಮರ್ಥರಿಂದ ಸಮರ್ಥನಾದೆ. ಕ್ಯಾಪ್ಟನ್ ಆದೆ. ಉತ್ತಮ ತಗೊಂಡೆ." ಎಂದು ರಕ್ಷಕ್ ತಮ್ಮ ಬಗ್ಗೆ ಹೆಮ್ಮೆ ಪಡುತ್ತಾರೆ.
"ಸ್ಪರ್ಧಿಗಳಲ್ಲಿ ನಮ್ರತಾ ಜೆನ್ಯೂನ್"
ಬಿಗ್ ಬಾಸ್ ಮನೆಯೊಳಗೆ ಯಾವ್ಯಾವ ಸ್ಪರ್ಧಿಗೆ ಹೇಗೆ ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ಮನೆಯೊಳಗಿನ ಸ್ಪರ್ಧಿಗಳಲ್ಲಿ ಜೆನ್ಯೂನ್ ಅಂದ್ರೆ ನಮ್ರತಾ. ಸ್ಟ್ರಾಟಜಿ ಅಂತ ಬಂದ್ರೆ ವಿನಯ್. ಆದರೆ, ಬೇಡದಿರೋ ವಿಷಯಕ್ಕೆ ಭಾಗ್ಯಶ್ರೀ ನಾಟಕ ಮಾಡಿದ್ದಾರೆ. ಅಳೋದು ಒಂದೇ ಅಲ್ಲ ಲೈಫ್‌ನಲ್ಲಿ. ಅದನ್ನು ಸ್ಟ್ರಾಂಗಾಗಿ ಫೇಸ್ ಮಾಡಬೇಕು. ಸತ್ಯವನ್ನು ಮುಖಕ್ಕೆ ಹೊಡೆದ ಹಾಗೆ ಹೇಳೋರು ವಿನಯ್. ಮತ್ತೆ ಫೈನಲ್‌ನಲ್ಲಿ ನಮ್ರತಾ ಇರಲೇಬೇಕು. ಕಾರ್ತಿಕ್ ಬರಬಹುದೇನೋ. ನಮ್ರತಾ ವಿನ್ನರ್ ಆಗಬೇಕು." ಎಂದು ರಕ್ಷಕ್ ಬುಲೆಟ್ ಅಭಿಪ್ರಾಯ ಪಟ್ಟಿದ್ದಾರೆ.
"ನನ್ನ ಜಾಗದಲ್ಲಿ ಪ್ರತಾಪ್ ಇರ್ತಾನೆ"
ಬಿಗ್ ಬಾಸ್ ಮನೆಗೆ ಹೋದಲ್ಲಿಂದ ಡ್ರೋನ್ ಪ್ರತಾಪ್ ಚರ್ಚೆಯಲ್ಲಿದ್ದಾರೆ. ಪ್ರತಿಯೊಬ್ಬ ಸ್ಪರ್ಧಿಯೂ ಪ್ರತಾಪ್ ಅನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ ಎಂದೆನಿಸುತ್ತಿದೆ. ರಕ್ಷಕ್ ಕೂಡ ಡ್ರೋನ್ ಪ್ರತಾಪ್ ಬಗ್ಗೆ ಭವಿಷ್ಯ ನುಡಿದಿದ್ದಾರೆ. "ಈ ವಾರ ಕಡಿಮೆ ಪರ್ಫಾರ್ಮೆನ್ಸ್ ಕೊಟ್ಟಿದ್ದು ಪ್ರತಾಪ್. ಮೋಸ್ಟ್ಲಿ ಮುಂದಿನ ವಾರ ನನ್ನ ಜಾಗದಲ್ಲಿ ಅವನು ಇರ್ತಾನೆ ಅಂದ್ಕೊಂಡಿದೀನಿ." ಎಂದು ಬಿಗ್ ಬಾಸ್ ಮನೆಯಲ್ಲಿ ಡ್ರೋನ್ ಪ್ರತಾಪ್ ಭವಿಷ್ಯದ ಬಗ್ಗೆ ರಕ್ಷಕ್ ಬುಲೆಟ್ ಅಭಿಪ್ರಾಯ ಪಟ್ಟಿದ್ದಾರೆ.


Click it and Unblock the Notifications











