Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BBK9: "ಕಳಪೆ ಅಂತ ಜೈಲಿಗೆ ಕಳಿಸಿದಾಗಲೇ ರಾಜಣ್ಣ ಹುಟ್ಟಿಕೊಂಡಿದ್ದು" –ರೂಪೇಶ್ ರಾಜಣ್ಣ!
ಬಿಗ್ ಬಾಸ್ ಕನ್ನಡ ಸೀಸನ್ 9 ಯಶಸ್ವಿಯಾಗಿ ಮುಗಿದಿದೆ. ಸುಮಾರು 100 ದಿನಗಳ ಕಾಲ ವಿಭಿನ್ನ ಮನಸ್ಥಿತಿಯ ಸ್ಪರ್ಧಿಗಳು ಬಿಗ್ ಬಾಸ್ ಮನೆಯೊಳಗೆ ಹೋಗಿದ್ದರು. ಅವರಲ್ಲಿ ಗ್ರ್ಯಾಂಡ್ ಫಿನಾಲೆವರೆಗೂ ಉಳಿದುಕೊಂಡಿದ್ದು, ಐದು ಮಂದಿ ಮಾತ್ರ. ಇವರಲ್ಲಿ ರೂಪೇಶ್ ರಾಜಣ್ಣ ಕೂಡ ಒಬ್ಬರು.
ಬಿಗ್ ಬಾಸ್ ಮನೆಯೊಳಗೆ ರೂಪೇಶ್ ರಾಜಣ್ಣ 100 ದಿನಗಳ ಕಾಲ ಉಳಿದುಕೊಳ್ಳಲು ಯಶಸ್ವಿಯಾಗಿದ್ದರು. ಆದರೆ, ಬಿಗ್ ಬಾಸ್ ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೂ, ಈ ರಿಯಾಲಿಟಿ ಶೋನಿಂದ ರೂಪೇಶ್ ಕಲಿತಿದ್ದೇನು? ಟಾಸ್ಕ್ ಬಗ್ಗೆ ಏನಂತಾರೆ? ಇಂತಹದ್ದೇ ಒಂದಿಷ್ಟು ವಿಷಯಗಳನ್ನು ಫಿಲ್ಮ್‌ಬೀಟ್ ಜೊತೆ ಹಂಚಿಕೊಂಡಿದ್ದಾರೆ. ಈ ಸಂದರ್ಶನದ ಡಿಟೈಲ್ಸ್ ಇಲ್ಲಿದೆ.
ಬಿಗ್
ಬಾಸ್
ಸೀಸನ್
1ರಿಂದ
9ರವರೆಗೆ
ಟ್ರೋಫಿ
ಗೆದ್ದವರು
ಹಾಗೂ
ರನ್ನರ್
ಅಪ್
ಆದವರ
ಸಂಪೂರ್ಣ
ಪಟ್ಟಿ

'ಈಗ ಜವಾಬ್ದಾರಿ ಸ್ವಲ್ಪ ಜಾಸ್ತಿಯಾಗಿದೆ'
"ಬಿಗ್ ಬಾಸ್ ಮನೆಯೊಳಗೆ ಹೋಗಬೇಕಾದರೆ ನಾನು ಹೊಸಬನಾಗಿ ಹೋಗಿದ್ದೆ. ಹೊರಗಡೆ ಹೇಗೆ ಇರುತ್ತಿದೆ. ಒಳಗಡೆನೂ ಹಾಗೇ ಇರಬೇಕು. ನಾನ್ಯಾಕೆ ಬದಲಾಗಬೇಕು ಅಂತಿದೆ. ಅಂದರೆ, ಒಬ್ಬ ವ್ಯಕ್ತಿ ಹೇಗೆ ಇರುತ್ತೀವಿ ಒಳಗೆ ಹೋದಾಗಲೂ ಹಾಗೇ ಇರಬೇಕು. ನಮ್ಮದು ಹೋರಾಟ ಜೀವನ ಬೇರೆ. ಮತ್ತೆ ಮನೆಯಲ್ಲಿ ಇದ್ದಾಗ ನಾನು ಹೇಗೆ ಇರುತ್ತೀನಿ. ನಾವು ನಾವಾಗಿದ್ದರೆ ಸಾಕು ಅಂತ ತಲೆಯಲ್ಲಿ ಇಟ್ಟುಕೊಂಡು ಹೋಗಿದ್ದು. ಈಗ ಜವಾಬ್ದಾರಿ ಸ್ವಲ್ಪ ಜಾಸ್ತಿಯಾಗಿದೆ. ಮೊದಲಾಗಿದ್ದರೆ ಎಷ್ಟು ಜನರಿಗೆ ತಲುಪುತ್ತಿದ್ದೆವೋ. ಏನೇ ಬರೆದರೂ ನಡೆಯುತ್ತಿತ್ತು. ಈಗ ಜವಾಬ್ದಾರಿ ಹೆಚ್ಚಾಗಿದೆ. ಅದನ್ನು ಗಮನದಲ್ಲಿ ಇಟ್ಕೊಂಡು ಸಮಾಜದ ಜೊತೆ ವರ್ತಿಸಬೇಕಾಗುತ್ತೆ."

'ಅಲ್ಲಿ ಒಂದೂ ಮೊಟ್ಟೆಗೂ ಜಗಳ ಆಗುತ್ತೆ'
" ಹೊರಗಡೆನೂ ಒಳಗಡೆನೂ ತುಂಬಾನೇ ವ್ಯತ್ಯಾಸವಿದೆ. ಉದಾಹರಣೆಗೆ ಒಳಗೆಡೆ ಒಂದು ಮೊಟ್ಟೆ ಯಾರಾದರೂ ಕದ್ದರೆ, ಅದಕ್ಕೆ ದೊಡ್ಡ ಜಗಳ ಆಗುತ್ತೆ. ಹೊರಗಡೆ ಒಂದು ಮೊಟ್ಟೆಗೆ ಯಾರೂ ಜಗಳ ಆಡಲ್ಲ. ಒಳಗಡೆ ಯಾರೋ ಕಾಲು ಇಟ್ಟರು, ಟಚ್ ಮಾಡಿದ್ರು ಅನ್ನೋ ಕಾರಣಕ್ಕೆ ದೊಡ್ಡ ಮಾತಾಗುತ್ತೆ. ಹೊರಗಡೆ ಹೋಗ್ಲಿ ಬಿಡಪ್ಪ ಅಂತಾರೆ. ಇಷ್ಟೇ ವ್ಯತ್ಯಾಸ. "

'ನಾನು ಸ್ವಲ್ಪ ತಾಳ್ಮೆಯನ್ನು ಕಲಿತೆ'
" ನಾನು ಸ್ವಲ್ಪ ತಾಳ್ಮೆಯನ್ನು ಕಲಿತೆ ಇಲ್ಲ ಅಂತ ಹೇಳಲ್ಲ. ಅಮೇಲೆ ಅಲ್ಲಿ ಟಾಸ್ಕ್ ಆಡುವಾಗ ಸಮಯ ನೀಡುತ್ತಿದ್ದರು. ಒಂದು ಗಂಟೆಯೊಳಗೆ ಮುಗಿಸುತ್ತಿದ್ದೆವು. ಹೊರಗಡೆ ನಾವು ಏನೋ ಕೆಲಸ ಮಾಡುವಾಗ ಬಿಡು ಇನ್ನೂ ಒಂದೆರಡು ಗಂಟೆ ಆಗಲಿ ಮಾಡೋಣ ಅನ್ನೋದಿತ್ತು. ಈಗ ಎಷ್ಟು ಸಮಯದೊಳಗೆ ಮುಗಿಸಬೇಕೋ ಅಷ್ಟರಲ್ಲಿ ಮುಗಿಸಬೇಕು ಅಂತ ಬಂದಿದೆ. ಊಟ ತಿಂಡಿ ವಿಚಾರದಲ್ಲಿ ನಾವೇನಾದೂ ಸಿಕ್ಕಿಲ್ಲ ಅಂದರೆ ಜಗಳ ಮಾಡುತ್ತೀವಿ. ನಮ್ಮ ಮನೆಯಲ್ಲಿ ಇದ್ದಾಗ ಮನೆ ಕೆಲಸ ಮಾಡೋದಿಲ್ಲ. ಅಲ್ಲಿ ಹೋದಾಗ ಅವೆಲ್ಲವನ್ನೂ ಕಲಿತೆವು."
'ಜೈಲಿನಲ್ಲಿ ನಿಜವಾದ ರಾಜಣ್ಣ'
ಒಂದು ವಾರ ನನಗೆ ಫುಲ್ ಕನ್ಫ್ಯೂಷನ್ ಇತ್ತು. ಇವರು ಯಾಕೆ ಹೀಗೆ ಮಾಡುತ್ತಿದ್ದಾರೆ ಅನ್ನೋ ಗೊಂದಲವಿತ್ತು. ಆಮೇಲೆ ಪ್ರತಿಯೊಬ್ಬರನ್ನೂ ಸೂಕ್ಷ್ಮವಾಗಿ ಗಮನಿಸುತ್ತಾ ಹೋದೆ. ನನಗೆ ಒಮ್ಮೆ ಕಳಪೆ ಕೊಟ್ಟು ಹೊರಗಡೆ ಕೂರಿಸುತ್ತಾರೆ. ಅವಾಗ ನನಗೆ ಫೈಯರ್ ಆಗಿ ಹೋಯ್ತು. ಇವರು ಹಿಂಗೆ ಮಾಡುತ್ತಿದ್ದಾರಾ? ಆವಾಗ ನಿಜವಾದ ರಾಜಣ್ಣ ಹುಟ್ಟಿಕೊಳ್ತಾನೆ. ಜೈಲಲ್ಲಿ ಹುಟ್ಟಿಕೊಳ್ಳುತ್ತಾನೆ. ಮುಂದಿನದೆಲ್ಲ ನಿಮಗೆ ಗೊತ್ತೇ ಇದೆ." ಎಂದು ರಾಜಣ್ಣ ಫಿಲ್ಮಿಬೀಟ್ ಜೊತೆ ಹಂಚಿಕೊಂಡಿದ್ದಾರೆ.