Bigg Boss: "ನಮ್ರತಾ ಬಗ್ಗೆ ನನಗೆ ಫೀಲಿಂಗ್ ಇತ್ತು,ಕ್ಯಾಮರಾಗೋಸ್ಕರ ಹೇಳಿದ್ದಲ್ಲ": ಸ್ನೇಹಿತ್ ಓಪನ್ ಟಾಕ್
ಬಿಗ್ ಬಾಸ್ ಮನೆಯಲ್ಲಿ ನಿನ್ನೆ (ಡಿಸೆಂಬರ್ 10) ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ. ಬಿಗ್ ಬಾಸ್ ಮನೆಯಿಂದ ಸುಮಾರು 64 ದಿನಗಳ ಸುಧೀರ್ಘ ಪಯಣವನ್ನು ಮುಗಿಸಿ ಸ್ನೇಹಿತ್ ಹೊರ ಬಂದಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಒಂದಿಷ್ಟು ಏರಿಳಿತಗಳನ್ನು ಕಂಡಿರೋ ಸ್ನೇಹಿತ್ ಬಿಗ್ ಬಾಸ್ ಜರ್ನಿ ಇಲ್ಲಿಗೆ ಮುಗಿದಿದೆ.
ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಜಿಯೋ ಸಿನಿಮಾಗೆ ನೀಡಿದ ಸಂದರ್ಶನದಲ್ಲಿ ಮನೆಯೊಳಗೆ ಕಳೆದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯ ಮೊದಲ ಕ್ಯಾಪ್ಟನ್ ಆಗಿದ್ದ ಸ್ನೇಹಿತ್, ಹೊರ ಬರುವಾಗ ಕ್ಯಾಪ್ಟನ್ ರೂಮ್‌ಗೆ ಬೀಗ ಹಾಕಿ ಬಂದಿದ್ದಾರೆ. ಆಟದಲ್ಲಿ ತೋರಿದ ಛಲ, ನಮ್ರತಾ ಜೊತೆಗಿನ ಸ್ಮರಣೀಯ ಕ್ಷಣಗಳು, ವಿನಯ್ ಜೊತೆಗಿನ ಸ್ನೇಹ, ಕ್ಯಾಪ್ಟನ್ ಆದಾಗ ಮಾಡಿದ ತಪ್ಪುಗಳ ಬಗ್ಗೆ ಹೇಳಿಕೊಂಡಿದ್ದಾರೆ. ಈ ಸಂದರ್ಶನದ ಝಲಕ್ ಇಲ್ಲಿದೆ.

"ಹೊರಬರುತ್ತೇನೆಂದು ನಿರೀಕ್ಷಿಸಿದ್ದೆ"
"64 ದಿನ ಬಿಗ್‌ಬಾಸ್ ಮನೆಯಲ್ಲಿದ್ದು ಹೊರಗೆ ಬಂದಿದ್ದೀನಿ. ಒಂದು ಮೊಮೆಂಟ್‌ನಲ್ಲಿಯೂ ನನಗೆ ಪಶ್ಚಾತ್ತಾಪ ಮಾಡಿಕೊಂಡಿಲ್ಲ. ಪ್ರತಿ ವಾರವನ್ನು ನಾನು ನನ್ನ ಕೊನೆಯ ವಾರ ಎಂದುಕೊಂಡೇ ಆಡಿದ್ದೇನೆ. ಎಲ್ಲೋ ಒಳಗಡೆ ಫೀಲಿಂಗ್ ಇತ್ತು. ಸಂಜೆ ಅಲ್ಲಿ ಕೂತಾಗ, ಈವತ್ತು ಹೊರಗೆ ಹೋಗಿ ತಾಜಾ ಗಾಳಿ ಉಸಿರಾಡುತ್ತೇನೆ ಎಂದು ಅನಿಸಿತ್ತು." ಎಂದು ಸ್ನೇಹಿತ್ ಹೇಳಿಕೊಂಡಿದ್ದಾರೆ.
ಕ್ಯಾಪ್ಟನ್ ಆದಾಗ ತಪ್ಪು ಮಾಡಿದ್ದೆ
ಬಿಗ್ ಬಾಸ್ ಮನೆಯಲ್ಲಿ ಕಳೆದ 64 ದಿನಗಳಲ್ಲಿ ಕ್ಯಾಪ್ಟನ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಆ ವೇಳೆ ಕೆಲವು ತಪ್ಪುಗಳನ್ನು ಮಾಡಿಕೊಂಡಿದ್ದಾಗಿ ಹೇಳಿದ್ದಾರೆ. "ನನಗೆ ಕ್ಯಾಪ್ಟನ್ ಆಗಿ ದುಪ್ಪಟ್ಟು ಅಧಿಕಾರ ಕೊಟ್ಟಾಗ ಒಂದಿಷ್ಟು ತಪ್ಪುಗಳನ್ನು ಮಾಡಿದ್ದೇನೆ. ಆ ತಪ್ಪುಗಳಿಂದ ಒಂದಿಷ್ಟು ಜನ ತೊಂದರೆಯನ್ನೂ ಅನುಭವಿಸಿದ್ದಾರೆ. ಆ ಗಿಲ್ಟ್ ನನಗೆ ಕೊನೆಯ ತನಕ ಕಾಡುತ್ತದೆ. ನನ್ನ ಫ್ರೆಂಡ್ಸ್‌ಗೆ ಕೊನೆ ಕ್ಷಣದ ತನಕವೂ ನಿಷ್ಠನಾಗಿದ್ದೆ. ನಂಗೆ ಯಾರು ಆಗಲ್ವೋ ಅವರಿಂದ ದೂರ ಇದ್ದೆ" ಎಂದು ಹೇಳಿದ್ದಾರೆ.

ಕಳೆದ ವಾರ ಬೆಸ್ಟ್ ವಾರ:
ನಾನು ಕಳೆದ ವಾರ ಎಲಿಮಿನೇಷನ್‌ನಲ್ಲಿದ್ದ ಕೊನೆಯ ಇಬ್ಬರು ಸ್ಫರ್ಧಿಗಳಲ್ಲಿ ನಾನೂ ಒಬ್ಬನಾಗಿದ್ದೆ. ನನ್ನ ಪ್ರಕಾರ ಆ ವಾರ ನನ್ನ ಬೆಸ್ಟ್ ವಾರ. ಎಷ್ಟು ಟಾಸ್ಕ್ ಗೆದ್ದಿದೀನಿ ಅಂದ್ರೆ, ಮನೆಯಲ್ಲಿ ಸುಮಾರು ಜನ ಇಷ್ಟು ವಾರಗಳಲ್ಲಿಯೂ ಅಷ್ಟೊಂದು ಟಾಸ್ಕ್ ಗೆದ್ದಿಲ್ಲ. ಆದರೆ ಯಾಕೆ ಬಾಟಮ್ ಟು ನಲ್ಲಿದ್ದೆ ಎಂದು ಗೊತ್ತಾಗಿರಲಿಲ್ಲ." ಎಂದು ಹೇಳಿದ್ದಾರೆ.
"ಮತ್ತೆ ಮನೆಗೆ ಹೋದರೆ ಬದಲಾಗಲ್ಲ"
ಒಂದು ವೇಳೆ ಮತ್ತೆ ಬಿಗ್‌ಬಾಸ್ ಮನೆಯೊಳಗೆ ಹೋದರೆ ನಾನು ಆಟದಲ್ಲಿ ಏನೂ ಬದಲಾವಣೆ ಮಾಡ್ಕೊಳಲ್ಲ ಎಂದು ಹೇಳಿದ್ದಾರೆ. "ಈಗ ಆಡುತ್ತಿದ್ದಷ್ಟೇ ಅಗ್ರೆಸಿವ್ ಆಗಿ ಆಡುತ್ತೇನೆ. ಯಾರ ಜೊತೆಯಲ್ಲಿ ಫ್ರೆಂಡ್ ಆಗಿದ್ನೋ ಅವರ ಜೊತೆಗೇ ಸ್ನೇಹ ಮುಂದುವರಿಸುತ್ತೇನೆ. ಮನೆಯಲ್ಲಿ ಇನ್ನೊಂದಿಷ್ಟು ಜನರ ಜೊತೆ ನನಗೆ ಹೊಂದಿಕೆ ಆಗುವುದಿಲ್ಲ. ಹೀಗಾಗಿ ನನ್ನನ್ನು ಬಿಗ್‌ಬಾಸ್ ಮನೆಯೊಳಗೆ ವಾಪಸ್ ಕಳಿಸಿದರೂ ನಾನು ಹಾಗೆಯೇ ಇರ್ತೀನಿ.. ಬದಲಾಗುವುದಿಲ್ಲ " ಎಂದಿದ್ದಾರೆ.
ನಮ್ಮ ಸ್ನೇಹ ಸುಳ್ಳಲ್ಲ
"ನನ್ನ, ವಿನಯ್ ಮತ್ತು ನಮ್ರತಾ ಸ್ನೇಹ ಬಂಧನ ಅಷ್ಟೇ ಜೆನ್ಯೂನ್ ಆಗಿತ್ತು. ಅದನ್ನು ನೋಡಿ ಉಳಿದವರು ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತಿದ್ದರು. ನಮ್ಮ ಮೂರು ಜನರಲ್ಲಿ ಯಾರನ್ನೋ ಸೇವ್ ಮಾಡಿ, ಇನ್ಯಾರನ್ನೋ ನಾಮಿನೇಟ್ ಮಾಡಿದರೆ ಅವರು ಪ್ರಶ್ನೆ ಮಾಡುತ್ತಿರಲಿಲ್ಲ. ಆ ಸ್ನೇಹದ ಬಗ್ಗೆ ನನಗೆ ಹೆಮ್ಮೆ ಇದೆ." ಎಂದು ಸ್ನೆಹಿತ್ ಹೇಳಿದ್ದಾರೆ.
ನಮ್ರತಾ ಬಗ್ಗೆ ಪೀಲಿಂಹ್ ಇತ್ತು
" ಬಿಗ್ ಬಾಸ್ ಮನೆಯೊಳಗೆ ಏನೇನು ಹೇಳಿದ್ದೇನೋ ಸತ್ಯ. ನನಗೆ ಅವರ ಬಗ್ಗೆ ಫೀಲಿಂಗ್ ಇತ್ತು. ಅದನ್ನು ಹೇಳಿಕೊಂಡಿದ್ದೀನಿ. ಅದು ಎಲ್ಲರಿಗೂ ಗೊತ್ತು. ಅದನ್ನು ನಾನು ಕ್ಯಾಮೆರಾ ಮೊಮೆಂಟ್‌ಗೊಸ್ಕರ ಹೇಳಿದ್ದು ಅಲ್ಲವೇ ಅಲ್ಲ. ಅದು ಅವರಿಗೂ ಗೊತ್ತು. ನನ್ನ ಪ್ರಕಾರ ಜೆನ್ಯೂನ್ ಆಗಿರುವುದು ಮೈಕಲ್, ವಿನಯ್, ನಮ್ರತಾ ಅಷ್ಟೆ. ಟಾಪ್ 5ನಲ್ಲಿ ವರ್ತೂರ್ ಇರ್ತಾರೆ, ಪ್ರತಾಪ್ ಇರ್ತಾರೆ, ವಿನಯ್ ಇರ್ತಾರೆ. ಇನ್ನೊಂದೆರಡು ಜಾಗ ಓಪನ್ ಇದೆ. ತುಕಾಲಿ ಅವರು ಇರಬಹುದು. ಕಾರ್ತಿಕ್-ಸಂಗೀತಾ ಮಧ್ಯದಲ್ಲಿ ಇಬ್ಬರಲ್ಲಿ ಒಬ್ಬರು ಇರಬಹುದು." ಎಂದು ಅಭಿಪ್ರುಆ ವ್ಯಕ್ತ ಪಡಿಸಿದ್ದಾರೆ.
ಬಿಗ್ ಬಾಸ್‌ನಲ್ಲಿ ಮಿಸ್ ಮಾಡಿಕೊಳ್ಳುವುದೇನು?
ಬಿಗ್ ಬಾಸ್ ಮನೆಯಲ್ಲಿ ಏನೆಲ್ಲಾ ಮಿಸ್ ಮಾಡಿಕೊಳ್ಳುತ್ತೇನೆ ಅನ್ನೋದನ್ನು ಇದೇ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. "ಎಲ್ಲ ಲೈಟ್ಸ್ ಆಫ್ ಆದಮೇಲೆ ನಾನು ನಮ್ರತಾ, ವಿನಯ್ ಕೂತುಕೊಂಡು ಮಾತಾಡ್ತಿದ್ವಿ. ಅದು ನಮ್ಮ 'ಮೀ ಟೈಮ್'. ನಾವು ಒಟ್ಟಿಗೇ ಒಂದಿಷ್ಟು ಹೊತ್ತು ಕಾಲ ಕಳೆಯುತ್ತಿದ್ದೆವು. ಫಸ್ಟ್ ಕ್ಯಾಪ್ಟನ್ಸಿ ಗೆದ್ದು ನನ್ನಮ್ಮಂಗೆ ಡೆಡಿಕೇಟ್ ಆಗಿದ್ದನ್ನು ಯಾವತ್ತೂ ಮರೆಯಲ್ಲ. ಅದು ನನ್ನಮ್ಮಂಗೂ ನೆನಪಿನಲ್ಲಿ ಉಳಿಯುತ್ತೆ ಎಂದಿದ್ದಾರೆ.


Click it and Unblock the Notifications











