BBK 11: "ಹಂಸ ನನ್ನ ಎದೆ ಮೇಲೆ ಕಾಲಿಟ್ಮೇಲೆ ನನ್ನ ಮುಖದಲ್ಲಿ ಕಳೆ ಬಂದಿದೆ"; ಬಿಗ್‌ಬಾಸ್ ಸ್ಪರ್ಧಿ ಲಾಯರ್ ಜಗದೀಶ್

ಬಿಗ್‌ ಬಾಸ್ ಕನ್ನಡ 11 ರಿಯಾಲಿಟಿ ಶೋ ಈ ಬಾರಿಗೆ ಸಾಕಷ್ಟು ಕಾರಣಗಳಿಗೆ ಸುದ್ದಿಯಾಗಿತ್ತು. ಅದರಲ್ಲೂ ಲಾಯರ್ ಜಗದೀಶ್ ಮೂರು ವಾರಗಳ ಕಾಲ ಬಿಗ್‌ ಬಾಸ್ ಮನೆಯಲ್ಲಿ ತನ್ನದೇ ಹವಾ ಇಟ್ಟುಕೊಂಡಿದ್ದರು. ಲಾಯರ್ ಜಗದೀಶ್ ಎಲ್ಲಿದ್ದಾರೋ ಅಲ್ಲಿ ಜಗಳ ಗಲಾಟೆ ಇದ್ದೇ ಇರುತ್ತೆ ಅನ್ನೋದನ್ನು ಎಕ್ಸ್‌ಪೆಕ್ಟ್ ಮಾಡಬಹುದಿತ್ತು. ಇದು ಮೊದಲ ವಾರದ ಕಥೆ.

ಎರಡನೇ ವಾರ ಲಾಯರ್ ಜಗದೀಶ್ ರೊಮ್ಯಾಂಟಿಕ್ ಮೂಡಿಗೆ ಜಾರಿದ್ದರು. ಅದರಲ್ಲೂ ಹಂಸ ಹಾಗೂ ವಕೀಲ್ ಸಾಬ್ ಜೋಡಿ ಕಿರುತೆರೆ ವೀಕ್ಷಕರನ್ನು ನಗೆಗಡಲ್ಲಿ ತೇಲಿಸಿದ್ದು ಇದೆ. ಆ ಒಂದು ವಾರ ಜಗದೀಶ್ ಹಾಗೂ ಹಂಸ ಕಾಂಬಿನೇಷನ್ ವರ್ಕ್ ಆಗಿತ್ತು. ಇಬ್ಬರ ರೊಮ್ಯಾಂಟಿಕ್ ಟಾಕ್, ಮುಂಗಾರು ಮಳೆ ಸೀನ್ ಎಲ್ಲವೂ ಕಿರುತೆರೆ ವೀಕ್ಷಕರಿಗೆ ಕಚಗುಳಿ ಇಡುತ್ತಿತ್ತು.

Bigg Boss Kannada 11 contestant Lawyer Jagadish revealed about his journey with Hamsa in the show

ಮೂರನೇ ವಾರ ಲಾಯರ್ ಜಗದೀಶ್ ಮತ್ತೆ ಉಗ್ರಸ್ವರೂಪ ತಾಳಿದ್ದರು. ಈ ಹಂತದಲ್ಲಿ ಜಗದೀಶ್ ಹಾಗೂ ಮನೆ ಮಂದಿಯ ಸಂಬಂಧ ಹದಗೆಟ್ಟಿತ್ತು. ಕೊನೆಯದಾಗಿ ಈ ಕಿತ್ತಾಟದಲ್ಲಿ ಬಿಗ್‌ಬಾಸ್ ಜರ್ನಿಯನ್ನು ಅಂತ್ಯ ಮಾಡಿದ್ದರು. ಈ ಮೂರು ವಾರಗಳ ಜರ್ನಿಯನ್ನು ಲಾಯರ್ ಜಗದೀಶ್ ಫಿಲ್ಮಿಬೀಟ್ ಕನ್ನಡದ ಜೊತೆ ಹಂಚಿಕೊಂಡಿದ್ದಾರೆ. ಹಂಸ ಹಾಗೂ ತನ್ನ ನಡುವಿನ ಕೆಮಿಸ್ಟ್ರಿ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ಅದರ ಝಲಕ್ ಇಲ್ಲಿದೆ.

"ಎದೆ ಮೇಲೆ ಕಾಲಿಟ್ಟಾಗ ಹಾರ್ಟ್ ನಿಲ್ಲಲಿಲ್ಲ"

"ಹಂಸ ಅವರು ಎಷ್ಟು ತೂಕವಿದ್ದಾರೆ ಅನ್ನೋದು ಗೊತ್ತಿಲ್ಲ. ನನ್ನ ಎದೆ ಮೇಲೆ ಕಾಲಿಟ್ಟರು. ಆದರೆ ಹಾರ್ಟ್ ಪಲ್ಸ್‌ ನಿಲ್ಲಲಿಲ್ಲ. ಇದೆಲ್ಲವೂ ನಾನು ತುಂಬಾ ಯಂಗ್ ಅಂತ ಫೀಲ್ ಆಯ್ತು. ನನ್ನ ಮುಖದಲ್ಲೂ ಅಷ್ಟೇ. ಅವರು ಹೆಜ್ಜೆ ಇಟ್ಟ ಮೇಲೆ ಚೆನ್ನಾಗಿ ಕಾಣಿಸುತ್ತಿದ್ದೇನೆ ಅಂತ ಅನಿಸೋಕೆ ಶುರುವಾಗಿದೆ. ಕಾಲಿನ ಹೆಜ್ಜೆ ಮನುಷ್ಯನ ಮುಖದಲ್ಲಿ ಕಳೆ ತರುತ್ತೆ ಅಂತ ಗೊತ್ತಾಗಿದೆ. ಅವರ ಕಾಲಲ್ಲಿ ಏನು ಕಾಂತಿ ಇದೆಯಲ್ಲ ಅಂತ ಅನಿಸುತ್ತಿದೆ. ಕರ್ನಾಟಕದ ಗಂಡು ಮಕ್ಕಳಿಗೆ ಹೇಳ್ತೀನಿ. ಶನಿವಾರ ಫ್ರೀ ಇದ್ದರೆ, ನಿಮ್ಮ ಪತ್ನಿಯರ ಕಾಲನ್ನು ಎದೆ ಮೇಲೆ ಇಟ್ಟುಕೊಳ್ಳಿ ಮುಖದಲ್ಲಿ ಕಾಂತಿ ಬರುತ್ತೆ." ಎಂದು ಲಾಯರ್ ಜಗದೀಶ್ ಫಿಲ್ಮಿಬೀಟ್ ಸಂದರ್ಶನದಲ್ಲಿ ಹೇಳಿದ್ದಾರೆ.

Bigg Boss Kannada 11 contestant Lawyer Jagadish revealed about his journey with Hamsa in the show

"ರೊಮ್ಯಾಂಟಿಕ್ ಪ್ರಯೋಗ ವರ್ಕ್ ಆಯ್ತು"

"ಮೊದಲ ವಾರ ಮಾಡಿದಂತಹ ಜೇಮ್ಸ್ ಬಾಂಡ್ ಕೆಲಸಗಳಾಗಿರಬಹುದು ಅದು ತುಂಬಾನೇ ಇಷ್ಟ ಆಯ್ತು. ಎರಡನೇ ವಾರ ಮಾಡಿದ ರೊಮ್ಯಾಂಟಿಕ್ ಎಕ್ಸ್‌ಪೆರಿಮೆಂಟ್ಸ್ ಹೃದಯ ಗೆದ್ದಿದ್ದೇವೆ. ಗರ್ಲ್‌ಫ್ರೆಂಡ್ ಜೊತೆ ಎಷ್ಟು ಸಲುಗೆಯಿಂದ ಇರಬಹುದು ಅನ್ನೋದು ವರ್ಕ್ ಆಗಿದೆ. ಸುದೀಪ್ ಸರ್ ಡ್ಯಾನ್ಸ್ ಮಾಡು ಅಂದಾಗ ಫುಲ್ ಹೈಪ್ ಆಗಿಯೇ ಡ್ಯಾನ್ಸ್ ಮಾಡಿದರು. ನಾನು ಹಂಸ ಎಲ್ಲಮ್ಮ ನಿನ್ನ ಮುಟ್ಟೋದು ಅಂದರೆ, ಎಲ್ಲೋ ಹಿಡ್ಕೊಳೋ ಬಿದ್ದರೆ, ನನ್ನ ಗಂಡ ನಿನ್ನ ಬಿಡಲ್ಲ ಅನ್ನೋರು. ಹಂಸ ಅವರು ನನ್ನ ಗುರು ಇದ್ದಂತೆ. ಅವರ ಆಕ್ಟರ್ ಆಗಿದ್ದೋರು. ಅವರ ಜೊತೆ ಆಕ್ಟ್ ಮಾಡುವುದೇ ಅದೃಷ್ಟ." ಎಂದಿದ್ದಾರೆ.

"ಹಂಸ ನನ್ನ ಬಳಸಿಕೊಂಡರು"

"ಅವರು ನನ್ನನ್ನು ಬಳಸಿಕೊಂಡಿದ್ದಾರೆ ಅಂತ ಅನಿಸಿತ್ತು. ನನ್ನಿಂದ ಅವರು ಬೆಳಗುತ್ತಿದ್ದಾರೆ. ಅವರಿಂದ ನಾನು ಬೆಳಗುತ್ತಿದ್ದೇನೆ ಅನ್ನೋದು ಗೊತ್ತಿರಬೇಕಿತ್ತು. ಆದರೆ, ರಂಜಿತ್ ಹೇಳಿದ್ದನ್ನು ಫಾಲೋ ಮಾಡಿದರೇ ವಿನ: ನಾನು ಹೇಳಿದ್ದನ್ನು ಮಾಡಲಿಲ್ಲ. ರಂಜಿತ್ ಅವರೊಂದಿಗೆ ಬರೀ ಟೈಮ್ ಪಾಸ್ ಮಾಡುತ್ತಿದ್ದರು." ಎಂದು ಹೇಳಿದ್ದಾರೆ.

"ಕ್ರಶ್ ಆಫ್ ಕರ್ನಾಟಕ ಜನರು ಕೊಟ್ಟಿದ್ದು"

"ನಾನು ಎಂಟರ್‌ಟೈನ್ ಮಾಡಿರೋ ಕೆಲಸಕ್ಕೆ ಒಂದು ಗಿಫ್ಟ್ ಬರುತ್ತೆ. ಕ್ರಶ್ ಆಫ್ ಕರ್ನಾಟಕ ಅಂತ. ಅದು ಬಿಗ್‌ ಬಾಸ್ ಅಲ್ಲ ಜನರು ಕಳಿಸಿದ್ದು ಅಂತ ಗೊತ್ತಾಯ್ತು. ಹಂಸ ಅವರ ಎದೆ ಮೇಲೆ ಕಾಲಿಟ್ಟಿದ್ದು, ಬಾತ್ರೂಮ್ ತೊಳೆದಿದ್ದು, ಹಂಸ್ ಅಂತ ಕರೆದಿದ್ದು ಎಲ್ಲವೂ ಒಂದು ವಿಭಿನ್ನವಾದ ಇಮೇಜ್ ಕೊಟ್ಟಿದೆ ಅಂತ ಗೊತ್ತಾಯ್ತು" ಎನ್ನುತ್ತಾರೆ ಲಾಯರ್ ಜಗದೀಶ್.

"ಸ್ಪೂರ್ತಿ ಬಿಎಂಟಿಸಿ ಡ್ರೈವರ್"

"ನಾನು ಬಿಎಂಟಿಸಿಯಲ್ಲಿ ಆಗಾಗ ಟ್ರಾವೆಲ್ ಮಾಡಿದಾಗ, ಚಾಲಕರು ರೆಗ್ಯೂಲರ್ ಆಗಿ ಓಡಾಡುವವರೊಂದಿಗೆ ಏನಮ್ಮಾ ಚೆನ್ನಾಗಿದ್ದೀಯಾ ಅಂತೆಲ್ಲ ಮಾತಾಡುತ್ತಿರುತ್ತಾರೆ. ಆಗ ನನಗೆ ಅನಿಸೋದು ಯಾರದ್ದೋ ಪತ್ನಿಯನ್ನ ತುಂಬಾ ಸಲುಗೆಯಿಂದ ಮಾತಾಡುತ್ತಾರಲ್ಲ ಇದು ಹೇಗೆ ಸಾಧ್ಯ ಅಂತ. ಪ್ರತಿದಿನ ಟ್ರಾವೆಲ್ ಮಾಡುವವರ ಹತ್ತಿರ ಕಂಪರ್ಟ್‌ ಜೋನ್ ಮಾಡಿಕೊಂಡಿದ್ದರು. ಅದನ್ನು ನಾನು ನೋಡಿದ್ದೆ. ಅದನ್ನು ಎಲ್ಲಾದರೂ ಒಂದು ಕಡೆ ಎಕ್ಸ್‌ಪೆರಿಮೆಂಟ್ ಮಾಡಬೇಕು ಅಂದುಕೊಂಡಿದ್ದೆ. ಬಿಗ್‌ಬಾಸ್‌ನಲ್ಲಿ ಮಾಡಿದೆ." ಎಂದು ಲಾಯರ್ ಜಗದೀಶ್ ಸಂದರ್ಶನದಲ್ಲಿ ಹೇಳಿದ್ದಾರೆ.

More from Filmibeat

English summary
Bigg Boss Kannada 11 contestant Lawyer Jagadish revealed about his journey with Hamsa in the show;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X