Bigg Boss: 2ನೇ ಕ್ಲಾಸ್ ಓದಿರೋ ಯುವಕ ಬಿಗ್ ಬಾಸ್ ಕದ ತಟ್ಟಿದ್ದೇಗೆ? ಈಗ ಹೇಗಿದೆ ದಿವಾಕರ್ ಲೈಫ್?

ಬಿಗ್ ಬಾಸ್ ಕನ್ನಡ ಹಲವು ಮಂದಿಗೆ ಒಳ್ಳೆಯ ವೇದಿಕೆ ಕೊಟ್ಟಿದೆ. ಅವರ ವೃತ್ತಿ ಬದುಕನ್ನು ಇನ್ನಷ್ಟು ಉತ್ತುಂಗಕ್ಕೆ ಕರೆದುಕೊಂಡು ಹೋಗಿದೆ. ಆದರೆ, ಕೆಲವರು ಏನಾದರು? ಬಿಗ್ ಬಾಸ್ ಫೇಮ್ ಅನ್ನು ಬಳಸಿಕೊಳ್ಳುವುದಕ್ಕೆ ಯಾಕೆ ವಿಫಲರಾದರು? ಅನ್ನೋದು ಪ್ರಶ್ನೆ ಇನ್ನೂ ಹಲವರನ್ನು ಕಾಡುತ್ತಲೇ ಇದೆ. ಬಿಗ್ ಬಾಸ್ ಕನ್ನಡದ 12 ಸೀಸನ್‌ಗಳಲ್ಲಿ 5ನೇ ಸೀಸನ್ ವಿಭಿನ್ನವಾಗಿ ನಿಂತಿತ್ತು.

ಹೌದು, ಬಿಗ್ ಬಾಸ್ ಕನ್ನಡದ 5ನೇ ಸೀಸನ್‌ನಲ್ಲಿ ಸಾಮಾನ್ಯ ಜನರಿಗೂ ಅವಕಾಶ ನೀಡಲಾಗಿತ್ತು. ಆ ಕೋಟಾದಲ್ಲಿ ಆಯ್ಕೆಯಾಗಿದ್ದವರು ದಿವಾಕರ್. ಬಿಗ್ ಬಾಸ್‌ ಸೀಸನ್ 5 ಗೆಲ್ಲದೇ ಹೋದರೂ ಈ ರಿಯಾಲಿಟಿ ಶೋ ಮೂಲಕ ವೀಕ್ಷಕರಿಗೆ ಹತ್ತಿರವಾದರು. ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡರು. ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಏನೋ ಮಾಡೇ ಮಾಡುತ್ತಾರೆ ಅಂತ ವೀಕ್ಷಕರು ಮಾತಾಡಿಕೊಂಡರು.

Bigg Boss Kannada season 5 runner Divakar exclusive interview about his present Life

ಕೆಲವು ವರ್ಷಗಳಿಂದ ಬಿಗ್ ಬಾಸ್ ದಿವಾಕರ್ ಸುದ್ದಿಯಲ್ಲಿ ಇರಲಿಲ್ಲ. ಸೈಲೆಂಟ್ ಆಗಿ ತೆರೆಮರೆಯಲ್ಲಿ ಉಳಿದು ಬಿಟ್ಟಿದ್ದರು. ಆದ್ರೀಗ ಫಿಲ್ಮಿಬೀಟ್ ಕನ್ನಡಕ್ಕೆ ಸಿಕ್ಕಿದ್ದು, ಅವರ ಲೈಫ್‌ನಲ್ಲಿ ಏನೆಲ್ಲ ನಡೆಯುತ್ತಿದೆ ಅನ್ನೋದನ್ನು ಹಂಚಿಕೊಂಡಿದ್ದಾರೆ. ಬಿಗ್ ಬಾಸ್ ಬಳಿಕ ಅವರ ಲೈಫ್ ಹೇಗಿದೆ? ಲೈಫ್‌ನಲ್ಲಿ ಏನೇನು ಆಗುತ್ತಿದೆ ಅನ್ನೋದನ್ನು ಹೇಳಿಕೊಂಡಿದ್ದಾರೆ.

ಬಿಗ್ ಬಾಸ್ ಬಳಿಕ ಲೈಫ್ ಹೇಗಿದೆ?

"ಲೈಫ್ ತುಂಬಾನೇ ಚೆನ್ನಾಗಿದೆ ಅಂತ ಹೇಳುವುದಕ್ಕಿಂತ ಅದ್ಭುತವಾಗಿದೆ. ಇದೆಲ್ಲದಕ್ಕೂ ನನಗೆ ಬಿಗ್ ಬಾಸ್ ಕಾರಣ ಅಂತ ಹೇಳುವುದಕ್ಕೆ ಇಷ್ಟ ಪಡುತ್ತೇನೆ. ನನಗಂತೂ ಇದು ತುಂಬಾನೇ ದೊಡ್ಡ ವೇದಿಕೆ. ಕೆಲವರು ಬಿಗ್ ಬಾಸ್‌ ಅನ್ನು ಏನು ಅಂದುಕೊಳ್ಳುತ್ತಾರೋ ಗೊತ್ತಿಲ್ಲ. ನನಗಂತೂ ಬಹಳ ದೊಡ್ಡ ಅವಕಾಶ. ನನ್ನನ್ನು ಎಲ್ಲಾ ಗುರುತು ಹಿಡಿಯುತ್ತಾರೆ, ಬ್ಯುಸಿನೆಸ್, ಸಿನಿಮಾಗಳನ್ನು ಮಾಡಿದ್ದೇನೆ ಅಂದರೆ, ಅದೆಲ್ಲದಕ್ಕೂ ಕಾರಣವೇ ಬಿಗ್ ಬಾಸ್. ಇದನ್ನು ಹೇಗೆ ವರ್ಣಿಸಬೇಕೋ ಗೊತ್ತಿಲ್ಲ"

ನಿಮ್ಮ ಲೈಫ್‌ನಲ್ಲಿ ಬಿಗ್ ಬಾಸ್‌ ಎಫೆಕ್ಟ್ ಏನು?

"ನಾನು ಬಿಗ್ ಬಾಸ್‌ಗೆ ಹೋಗುವುದಕ್ಕೂ ಮುನ್ನ ಸೇಲ್ಸ್ ಮ್ಯಾನ್ ಆಗಿ ಹೋದವನು. ಬಿಗ್ ಬಾಸ್‌ಗೆ ಹೋಗಿ ಬಂದ್ಮೇಲೆ 10ಕ್ಕಿಂತ ಹೆಚ್ಚು ಪಟ್ಟು ಬ್ಯುಸಿನೆಸ್ ಆಗುತ್ತಿದೆ. ಎರಡನೆಯದ್ದು ನಾನು ಕಂಡಿರುವ ಕನಸು. ನಾನು ಹೀರೋ ಆಗಬೇಕು ಅಂತ ಬೆಂಗಳೂರಿಗೆ ಬಂದೋನು. ಅದೆಲ್ಲವನ್ನೂ ನನಸು ಮಾಡಿದ್ದು ಬಿಗ್ ಬಾಸ್. ದರ್ಶನ್ ಸರ್, ಸುದೀಪ್ ಸರ್ ಅನ್ನು ಪೊಲೀಸ್ ಗೆಟಪ್‌ನಲ್ಲಿ ನೋಡಬೇಕಾದರೆ, ನಾನು ಒಂದು ಸಿನಿಮಾದಲ್ಲಿ ಪೊಲೀಸ್ ಆಗಿ ನಟಿಸಬೇಕು ಅಂತ ಆಸೆ ಇಟ್ಟವನು. ಫಸ್ಟ್‌ ಸಿನಿಮಾ 'ರೇಸ್'‌ನಲ್ಲಿ ಪೊಲೀಸ್ ಪಾತ್ರವೇ ಸಿಕ್ಕಿತ್ತು."

ಬಿಗ್ ಬಾಸ್‌ನಿಂದ ಬಂದ್ಮೇಲೆ ಏನಾಯ್ತು?

"ಬಿಗ್ ಬಾಸ್‌ನಿಂದ ಹೊರ ಬಂದ್ಮೇಲೆ ಬಹಳಷ್ಟು ಮಂದಿ ಸಿಕ್ಕಿದರು. ಅಷ್ಟು ಕೊಡಿ ಹೀರೊ ಆಗಬಹುದು. ಇಷ್ಟು ಕೊಡಿ ಅಂತ ಬಂದರು. ಈಗೀನ ಯುವಕರಿಗೂ ಅದನ್ನೇ ಹೇಳುತ್ತಾರೆ. ₹5 ಲಕ್ಷ ಕೊಡಿ, ₹10 ಲಕ್ಷ ಕೊಡಿ ಹೀರೊ ಆಗಬಹುದು ಎನ್ನುತ್ತಾರೆ. ಅವರಿಗೆ ಹೇಳೋದು ಏನಂದರೆ, ನೀವು ಪಡುವ ಕಷ್ಟವೇ ನಿಮ್ಮನ್ನು ಹೀರೋ ಮಾಡುತ್ತೆ. ದುಡ್ಡು ಖರ್ಚು ಮಾಡಿ ಸಿನಿಮಾ ಮಾಡಬಹುದು. ಸ್ಟಾರ್ ಆಗೋದು ಕಷ್ಟ" ಎನ್ನುತ್ತಾರೆ.

ಬಿಗ್ ಬಾಸ್ ದಿವಾಕರ್‌ಗೆ ಸಿನಿಮಾಗಳಲ್ಲಿ ಅವಕಾಶಗಳಿಗೆ ಅವಕಾಶ ಬಂದಿತ್ತು. ಆದರೆ, ಅವರು ಅಂದುಕೊಂಡಂತಹ ಬಿಗ್ ಬಜೆಟ್ ಸಿನಿಮಾಗಳು ಸಿಕ್ಕಿಲ್ಲ. ಇಂದಿಗೂ ತನ್ನ ಕನಸುಗಳನ್ನು ಈಡೇರಿಸಿಕೊಳ್ಳುವುದಕ್ಕೆ ದಿವಾಕರ್ ಶತಪ್ರಯತ್ನ ಮಾಡುತ್ತಲೇ ಇದ್ದಾರೆ. ಸದ್ಯ ಬ್ಯುಸಿನೆಸ್ ಜೊತೆಗೆ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

More from Filmibeat

English summary
Bigg Boss Kannada season 5 runner Divakar exclusive interview about his present Life.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X