Exclusive: '777 ಚಾರ್ಲಿ' ಟ್ರೈಲರ್ ನೋಡೇ ಕಣ್ಣೀರಿಟ್ಟ ಜಾನ್ ಅಬ್ರಹಾಂ: ನಿರ್ದೇಶಕರ ಬಳಿ ಹೇಳಿದ್ದೇನು?

ಕನ್ನಡದ ಮತ್ತೊಂದು ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಇಷ್ಟ ಪಡುತ್ತಿದ್ದಾರೆ. ಅದು ಮತ್ಯಾವುದೂ ಅಲ್ಲ ರಕ್ಷಿತ್ ಶೆಟ್ಟಿ ಹಾಗೂ ಕಿರಣ್ ರಾಜ್ ಕಾಂಬಿನೇಷನ್‌ ಸಿನಿಮಾ '777 ಚಾರ್ಲಿ'. ಈ ಸಿನಿಮಾ ನೋಡಿದ ಪ್ರೇಕ್ಷಕರು ಭಾವುಕರಾಗಿದ್ದಾರೆ. ಈ ಸಿನಿಮಾ ನೋಡಿದ ಮೇಲೆ ಪ್ರಾಣಿಗಳ ಮೇಲೆ ಪ್ರೀತಿ ಮತ್ತಷ್ಟು ಹೆಚ್ಚಾಗಿದೆ.

'777 ಚಾರ್ಲಿ' ಪ್ರೇಕ್ಷಕರಿಗ ಮನಗೆದ್ದಿದ್ದಷ್ಟೇ ಅಲ್ಲ. ಸೆಲೆಬ್ರೆಟಿಗಳ ಮನಸ್ಸು ಕೂಡ ಗೆದ್ದಿದೆ. ಭಾಷೆಯ ಭೇದ ಭಾವ ಇಲ್ಲದೆನೇ ಸಿನಿಮಾ ಇಷ್ಟ ಪಡುತ್ತಿದ್ದಾರೆ. ಅದರಲ್ಲೂ ಬಾಲಿವುಡ್ ಮಂದಿ '777 ಚಾರ್ಲಿ' ಸಿನಿಮಾವನ್ನು ಇಷ್ಟ ಪಡುತ್ತಿದ್ದಾರೆ. ನಿರ್ಮಾಪಕ ಬೋನಿ ಕಪೂರ್ ಈ ಸಿನಿಮಾ ಬಗ್ಗೆ ಮೆಚ್ಚುಗೆ ಮಾತುಗಳನ್ನು ಆಡಿದ್ದರು. ಇದರ ಹಿಂದೆ ಜಾನ್ ಅಬ್ರಹಾಂಗೂ ಈ ಸಿನಿಮಾ ತುಂಬಾನೇ ಇಷ್ಟ ಆಗಿದೆ.

ಹೌದು, ಬಾಲಿವುಡ್ ಮಸಲ್ ಮ್ಯಾನ್ ಜಾನ್ ಅಬ್ರಹಾಂ '777 ಚಾರ್ಲಿ' ಸಿನಿಮಾ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ. ನಿರ್ದೇಶಕ ಕಿರಣ್ ರಾಜ್‌ಗೆ ಸ್ವತ: ಫೋನ್ ಮಾಡಿ ಸಿನಿಮಾ ಬಗ್ಗೆ ಮಾತಾಡಿದ್ದಾರೆ. ಜಾನ್ ಅಬ್ರಹಾಂ ಸಿನಿಮಾ ಬಗ್ಗೆ ಏನು ಹೇಳಿದರು? ಚಾರ್ಲಿ ಇಷ್ಟ ಆಯ್ತಾ? ಇವೆಲ್ಲಾ ವಿಷಯಗಳ ಬಗ್ಗೆ '777 ಚಾರ್ಲಿ' ನಿರ್ದೇಶಕ ಕಿರಣ್ ರಾಜ್ ಫಿಲ್ಮ್ ಬೀಟ್ ಜೊತೆ ಹಂಚಿಕೊಂಡಿದ್ದಾರೆ.

ನಿರ್ದೇಶಕ ಕಿರಣ್ ರಾಜ್‌ಗೆ ಜಾನ್ ಅಬ್ರಹಾಂ ಕರೆ

ನಿರ್ದೇಶಕ ಕಿರಣ್ ರಾಜ್‌ಗೆ ಜಾನ್ ಅಬ್ರಹಾಂ ಕರೆ

ಬಾಲಿವುಡ್ ನಟ ಜಾನ್ ಅಬ್ರಹಾಂ '777 ಚಾರ್ಲಿ' ನಿರ್ದೇಶಕ ಕಿರಣ್‌ ರಾಜ್‌ಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಇಂದು ( ಜೂನ್ 15) ಕಿರಣ್ ರಾಜ್‌ಗೆ ಪೋನ್ ಮಾಡಿ ಮಾತಾಡಿ ಶುಭ ಕೋರಿದ್ದಾರೆ. ಬಾಲಿವುಡ್‌ ಸ್ಟಾರ್ ನಟ ಕನ್ನಡದ ಸಿನಿಮಾ '777 ಚಾರ್ಲಿ' ನೋಡಿ ಕರೆ ಮಾಡಿದ್ದು, ನಿರ್ದೇಶಕರಿಗೆ ಇನ್ನಿಲ್ಲದ ಖುಷಿ ಕೊಟ್ಟಿದೆ. ಅಷ್ಟಕ್ಕೂ ಜಾನ್ ಅಬ್ರಹಾಂ '777 ಚಾರ್ಲಿ' ನೋಡಿ ಏನಂದ್ರು? ಅವರಿಗೆ ಈ ಸಿನಿಮಾ ಬಗ್ಗೆ ಹೇಳಿದ್ದು ಯಾರು? '777 ಚಾರ್ಲಿ' ನೋಡಿ ಕಣ್ಣೀರು ಇಟ್ಟಿದ್ದೇಕೆ? ಅನ್ನುವುದೇ ಒಂದು ಇಂಟ್ರೆಸ್ಟಿಂಗ್ ಸ್ಟೋರಿ. ಈ ಎಲ್ಲಾ ವಿಷಯಗಳನ್ನೂ ಕಿರಣ್ ರಾಜ್ ಫಿಲ್ಮಿಬೀಟ್ ಜೊತೆ ಹಂಚಿಕೊಂಡಿದ್ದಾರೆ.

ಸಿನಿಮಾದ ಟ್ರೈಲರ್ ನೋಡಿ ಕಣ್ಣೀರಿಟ್ಟ ಜಾನ್

ಸಿನಿಮಾದ ಟ್ರೈಲರ್ ನೋಡಿ ಕಣ್ಣೀರಿಟ್ಟ ಜಾನ್

" ಬಾಲಿವುಡ್‌ ನಟ ಜಾನ್ ಅಬ್ರಹಾಂ ಫೋನ್ ಮಾಡಿದ್ದರು. '777 ಚಾರ್ಲಿ' ಬಗ್ಗೆ ಮನಸಾರೆ ಮಾತಾಡಿದ್ದರು. ಅವರು ಇನ್ನೂ ಸಿನಿಮಾ ನೋಡಿಲ್ಲ. ಟ್ರೈಲರ್ ನೋಡಿನೇ ಅತ್ತು ಬಿಟ್ಟೆ ಎಂದು ಹೇಳಿದ್ರು. ಹಾಗೇ ಖಂಡಿತಾ ಸಿನಿಮಾ ನೋಡುತ್ತೇನೆ ಎಂದು ಜಾನ್ ಅಬ್ರಹಾಂ ಹೇಳಿದ್ದಾರೆ."

ಚಾರ್ಲಿ ಬಗ್ಗೆ ಜಾನ್‌ಗೆ ತಿಳಿದಿದ್ದು ಹೇಗೆ?

ಚಾರ್ಲಿ ಬಗ್ಗೆ ಜಾನ್‌ಗೆ ತಿಳಿದಿದ್ದು ಹೇಗೆ?

" ಮೊನ್ನೆ ನಮ್ಮ ಸಿ ಎಂ ಬಸವರಾಜ್ ಬೊಮ್ಮಾಯಿ '777 ಚಾರ್ಲಿ' ಸಿನಿಮಾ ನೋಡಿದ್ದರು. ಸಿನಿಮಾ ನೋಡುವ ವೇಳೆ ಬೊಮ್ಮಾಯಿ ಸರ್ ಕಣ್ಣೀರು ಹಾಕಿದ್ದರು. ಇದು ಮಾರನೇ ದಿನವೇ ತುಂಬಾನೇ ಸುದ್ದಿಯಾಗಿತ್ತು. ಆ ವಿಡಿಯೋಗಳನ್ನು ಅವರ ತಂಡ ಜಾನ್ ಅಬ್ರಹಾಂಗೆ ತೋರಿಸಿದ್ರಂತೆ. ಆ ಬಳಿಕ '777 ಚಾರ್ಲಿ' ಸಿನಿಮಾದ ಟ್ರೈಲರ್ ನೋಡಿದ್ದಾರೆ. ಟ್ರೈಲರ್ ಇಷ್ಟ ಆಗಿ, ನನಗೆ ಪೋನ್ ಮಾಡಿ ಮಾತಾಡಿದರು."

'777 ಚಾರ್ಲಿ' ಸಿನಿಮಾ ನೋಡ್ತಾರಾ?

'777 ಚಾರ್ಲಿ' ಸಿನಿಮಾ ನೋಡ್ತಾರಾ?

" ಇನ್ನೂ ಜಾನ್ ಅಬ್ರಹಾಂ '777 ಚಾರ್ಲಿ' ಸಿನಿಮಾವನ್ನು ನೋಡಿಲ್ಲ. ಆದರೆ, ಶೀಘ್ರದಲ್ಲಿ ಸಿನಿಮಾ ವೀಕ್ಷಿಸುವುದಾಗಿ ಹೇಳಿದ್ದಾರೆ. ಮುಂಬೈ ಸಿನಿಮಾ ನೋಡುತ್ತೇನೆ ಎಂದು ಹೇಳಿದ್ದಾರೆ. ಈ ವೇಳೆ ನಮ್ಮ ತಂಡವನ್ನು ಭೇಟಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಅವರೂ ಡಾಗ್ ಲವರ್ ಆಗಿರುವುದರಿಂದ '777 ಚಾರ್ಲಿ' ಅವರಿಗೆ ಇಷ್ಟ ಆಗುತ್ತೆ."

 ಚಾರ್ಲಿ ಬಗ್ಗೆ ಜಾನ್ ಹೇಳಿದ್ದೇನು?

ಚಾರ್ಲಿ ಬಗ್ಗೆ ಜಾನ್ ಹೇಳಿದ್ದೇನು?

"ಜಾನ್ ಅಬ್ರಹಾಂ ಹಾಗೂ ಅವರ ತಂಡ ಬೀದಿ ನಾಯಿಗಳನ್ನು ಹಾಗೂ ಪ್ರಾಣಿಗಳನ್ನು ರಕ್ಷಣೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಪ್ರಾಣಿಗಳೆಂದರೆ ಇಷ್ಟ. ಕಳೆದ ಹಲವು ವರ್ಷಗಳಿಂದ ಇಂತಹ ಉತ್ತಮ ಕೆಲಸದಲ್ಲಿ ಮಾಡಿಕೊಂಡು ಬಂದಿದ್ದಾರೆ. ಈ ಕಾರಣಕ್ಕೆ ಅವರಿಗೆ ಪ್ರಾಣಿಗಳೆಂದರೆ ಇಷ್ಟ. ಹೀಗಾಗಿಯೇ ಸಿನಿಮಾ ಚಾರ್ಲಿ ಬಗ್ಗೆ ಪಾಸಿಟಿವ್ ಆಗಿದ್ದಾರೆ. ಸಿನಿಮಾನೂ ಇಷ್ಟ ಆಗುತ್ತೆ."

ಸಿನಿಮಾ ನೋಡಿ ಟ್ರೈಲರ್ ಶೇರ್ ಮಾಡಿದ್ರು!

" ಹೌದು.. ನನಗೆ ಫೋನ್ ಮಾಡುವುದಕ್ಕೂ ಮುನ್ನ ಜಾನ್ ಅಬ್ರಹಾಂ ಇನ್‌ಸ್ಟಾಗ್ರಾಂನಲ್ಲಿ '777 ಚಾರ್ಲಿ ಸಿನಿಮಾದ ಟ್ರೈಲರ್‌ ಅನ್ನು ಶೇರ್ ಮಾಡಿದ್ದರು. ಅಲ್ಲದೆ ಪ್ರೇಕ್ಷಕರಿಗೆ ಸಿನಿಮಾ ನೋಡುವಂತೆ ಮನವಿ ಕೂಡ ಮಾಡಿಕೊಂಡಿದ್ದರು. ಆಮೇಲೆ ನನಗೆ ಫೋನ್ ಮಾಡಿ ಸಿನಿಮಾ ಬಗ್ಗೆ ಮಾತಾಡಿದ್ರು. ಸಿನಿಮಾ ನೋಡುತ್ತೇನೆ ಅಂತನೂ ಹೇಳಿದ್ರು."

'777 ಚಾರ್ಲಿ ರಿಪೋರ್ಟ್ ಹೇಗಿದೆ?

'777 ಚಾರ್ಲಿ ರಿಪೋರ್ಟ್ ಹೇಗಿದೆ?

" ಎಲ್ಲಾ ಕಡೆ ಸಿನಿಮಾಗೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಮೊದಲ ವಾರಕ್ಕಿಂತ ಎರಡನೇ ವಾರ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗಿದೆ. ಈ ವೀಕೆಂಡ್‌ನಲ್ಲಿ '777 ಚಾರ್ಲಿ' ದಾಖಲೆ ಮಾಡಬಹುದು ಎಂದು ನಿರೀಕ್ಷೆ ಮಾಡಿದ್ದೇವೆ. ಸಿನಿಮಾ ನೋಡುವುದಕ್ಕೆ ಮಕ್ಕಳನ್ನು ಕರೆದುಕೊಂಡು ಫ್ಯಾಮಿಲಿ ಸಮೇತ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ." ಎಂದು ಹರ್ಷ ವ್ಯಕ್ತ ಪಡಿಸಿದ್ದಾರೆ ನಿರ್ದೇಶಕ ಕಿರಣ್ ರಾಜ್.

More from Filmibeat

English summary
Bollywood Actor John Abraham Called Rakshit Shetty 777 Charlie Director Kiranraj, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X