'ಮಂಗಳಮುಖಿಯರ ಮೇಲಿನ ದೃಷ್ಟಿಕೋನ ಬದಲಾಗಬೇಕು'
'ನಾನು ಅವನಲ್ಲ...ಅವಳು' ಸಿನಿಮಾದ ಪೂರ್ವ ತಯಾರಿಯಲ್ಲಾದ ಒಂದು ಘಟನೆಯನ್ನ ನಿರ್ದೇಶಕ ಬಿ.ಎಸ್.ಲಿಂಗದೇವರು ಮೆಲುಕು ಹಾಕಿದರು.....
* ಮಂಗಳಮುಖಿಯರನ್ನ ನಟಿಸುವುದಕ್ಕೆ ಒಪ್ಪಿಸುವುದು ಎಷ್ಟು ಕಷ್ಟ ಆಯ್ತು?
- ತುಂಬಾ ಕಷ್ಟ. ಅವರು ಸ್ಕ್ರೀನ್ ಮೇಲೆ ಬರುವುದಕ್ಕೆ ಒಪ್ಪಿಕೊಳ್ಳುವುದೇ ಇಲ್ಲ. ಅವರ ಪಾತ್ರ, ಡೈಲಾಗ್ ಮಹತ್ವವನ್ನ ಅವರಿಗೆ ಹೇಳಿ ನಂತರ ಒಪ್ಪಿಸಬೇಕು. ನಾನು ಮೊದಲು ವಿಜಯ್ ಕ್ಯಾರೆಕ್ಟರ್ ಗೆ ಒಬ್ಬರು ಮಂಗಳಮುಖಿಯನ್ನೇ ಫೈನಲ್ ಮಾಡಿದ್ದೆ. ಆದ್ರೆ, ಅವರು ದೊಡ್ಡ ಮೊತ್ತ ಕೇಳಿದರು. ಈಗಿನ ಟಾಪ್ ಹೀರೋಯಿನ್ ಗಳು ಕೇಳುವ ಮೊತ್ತ ಕೇಳಿದರು. ನಾನು ಆಗ ನಕ್ಕುಬಿಟ್ಟೆ. ಆದ್ರೆ, ಮಾತನಾಡಿದಾಗ ಅವರ ಬದುಕು ಹೀಗೆಲ್ಲಾ ಇರುತ್ತಾ ಅಂತ ಅನಿಸ್ತು. ಏನೇ ಮಾಡಿದರೂ ಅವರಿರುವುದು ವೇಶ್ಯಾವಾಟಿಕೆ ವೃತ್ತಿಯಲ್ಲಿ. ಸಿನಿಮಾದಲ್ಲಿ ಅವರು ನಟಿಸಿದರೆ, ಅವರು ಮುಂಗಳಮುಖಿ ಅನ್ನೋದು ಎಲ್ಲರಿಗೂ ಗೊತ್ತಾಗುತ್ತೆ. ಅವರ ಕಸ್ಟಮರ್ಸ್ ಹೋಗ್ತಾರೆ. ಹೀಗಾಗಿ ಅಷ್ಟು ದೊಡ್ಡ ಮೊತ್ತ ಬೇಕು ಅಂತ ಕೇಳಿದರು. ಅವರ ಲೈಫಿನ ವಾಸ್ತವ ಇದು. [ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ : ಕನ್ನಡಿಗ ಸಂಚಾರಿ ವಿಜಯ್ ಅತ್ಯುತ್ತಮ]

* ಪ್ರಾದೇಶಿಕ ಹಿನ್ನೆಲೆಯಲ್ಲಿ ಮಂಗಳಮುಖಿಯರೊಂದಿಗೆ ಕೆಲಸ ಮಾಡುವಾಗ ಆದ ತಾಕಲಾಟಗಳು...
- ಅವರ ಸಮುದಾಯದ ಸಮಸ್ಯೆಗಳ ಬಗ್ಗೆ ಕಥೆ ಇದ್ದದ್ದು. ಮಂಗಳಮುಖಿಯರು ಸಮಾಜದಲ್ಲಿ ಎದುರಿಸುವ ಸಮಸ್ಯೆಗಳ ಬಗ್ಗೆ ಸಿನಿಮಾ ಆದ್ದರಿಂದ ಪ್ರಾದೇಶಿಕ ತಾಕಲಾಟಗಳು ಎದುರಾಗಲಿಲ್ಲ. ದಕ್ಷಿಣ ಭಾರತದಲ್ಲಿ ಹೆಚ್ಚು ಕಮ್ಮಿ ಒಂದೇ ಸಮಸ್ಯೆ ಇದೆ. ಉತ್ತರ ಭಾರತದಲ್ಲಿರುವ ಭಾವನೆಗಳೇ ಬೇರೆ. ನಮ್ಮ ಸ್ಕ್ರಿಪ್ಟ್ ಇದ್ದದ್ದು ದಕ್ಷಿಣ ಭಾರತ, ಅದ್ರಲ್ಲೂ ಕರ್ನಾಟಕದಲ್ಲಿರುವ ಸಮಸ್ಯೆ ಮೇಲೆ.

* ಸಾರ್ವಜನಿಕರಿಗೆ ಮಂಗಳಮುಖಿಯರ ಬಗ್ಗೆ ಒಂದು ಭಾವನೆ ಇದ್ದೇ ಇರುತ್ತೆ. ಆದ್ರೆ, ನಿಮ್ಮ 'ನಾನು ಅವನಲ್ಲ...ಅವಳು' ನೋಡಿದ ಬಳಿಕ ಎಲ್ಲರಲ್ಲಿರುವ ಭಾವನೆ ಬದಲಾಗುತ್ತಾ?
- ಚೇಂಜ್ ಆಗಬೇಕು ಅನ್ನುವ ಉದ್ದೇಶ ನಮ್ಮದ್ದು. ಹಾಗಂತ ಕನಿಕರ ಬರಬಾರದು. ಎಲ್ಲರ ದೃಷ್ಟಿಕೋನ ಬದಲಾಗಬೇಕು. ನಮ್ಮ ಜೊತೆಯಲ್ಲಿ ಅವರು ಮುಕ್ತವಾಗಿ ಇರುವ ಹಾಗೆ ಆಗಬೇಕು. [ರಾಷ್ಟ್ರ ಪ್ರಶಸ್ತಿ ಪಡೆದ 'ನಾನು ಅವನಲ್ಲ, ಅವಳು' ಚಿತ್ರ ಕುರಿತು]

* ಮಂಗಳಮುಖಿಯರಿಗೆ 'ನಾನು ಅವನಲ್ಲ...ಅವಳು' ಸಿನಿಮಾದ ಸ್ಪೆಷಲ್ ಶೋ ಮಾಡುವ ಉದ್ದೇಶ ಇದ್ಯಾ?
- ನಮ್ಮ ಇಡೀ ಸಿನಿಮಾದಲ್ಲಿ ಇರುವವರೇ ಅವರು. ಮಂಗಳಮುಖಿಯರಿಗಿಂತ ಸಮಾಜ ನೋಡಬೇಕು. ಸಿನಿಮಾದಿಂದ ಮಂಗಳಮುಖಿಯರಿಗೆ ಏನು ಸಹಾಯ ಆಗುತ್ತೆ ಗೊತ್ತಿಲ್ಲ. ಆದ್ರೆ, ಸಮಾಜ ತಿದ್ದುಕೊಳ್ಳಬೇಕಾದ್ದು ಬಹಳಷ್ಟು ಇದೆ. ನಮ್ಮ ಸಿನಿಮಾದಿಂದ ಸಮಾಜದಲ್ಲಿ ಏನಾದರೂ ಬದಲಾವಣೆ ಆದರೆ ಅದೇ ದೊಡ್ಡ ಸಕ್ಸಸ್.


Click it and Unblock the Notifications











