»   » ನಿರ್ದೇಶಕ ಬಿ.ಎಸ್.ಲಿಂಗದೇವರು ವಿಶೇಷ ಸಂದರ್ಶನ

ನಿರ್ದೇಶಕ ಬಿ.ಎಸ್.ಲಿಂಗದೇವರು ವಿಶೇಷ ಸಂದರ್ಶನ

Posted By:
Subscribe to Filmibeat Kannada

ಕನ್ನಡ ಚಿತ್ರರಂಗ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಪರಭಾಷೆ ಸಿನಿಮಾಗಳೊಂದಿಗೆ ಸ್ಪರ್ಧೆಗಿಳಿಯುತ್ತಿರುವ ಕನ್ನಡ ಚಿತ್ರಗಳ ಮೇಕಿಂಗ್ ಶೈಲಿ ಈಗ ಯಾವ ಭಾಷೆಗೂ ಕಮ್ಮಿ ಇಲ್ಲ. ಕಲಾತ್ಮಕ ಚಿತ್ರವಾದರೂ, ಪ್ರಶಸ್ತಿ ಪಡೆಯುವಲ್ಲಿ ಕನ್ನಡ ಚಿತ್ರಗಳು ಸದಾ ಮುಂದು.

ಈ ಬಾರಿ ಎರಡು ರಾಷ್ಟ್ರ ಪ್ರಶಸ್ತಿ ಪಡೆಯುವ ಮೂಲಕ ಕನ್ನಡ ನಾಡಿಗೆ ಕೀರ್ತಿ ತಂದಿರುವ ಚಿತ್ರ 'ನಾನು ಅವನಲ್ಲ...ಅವಳು'. ಮಂಗಳಮುಖಿಯ ಜೀವನಚರಿತ್ರೆಯನ್ನ ಆಧಾರವಾಗಿಟ್ಟುಕೊಂಡು ತಯಾರಾಗಿರುವ ಈ ಚಿತ್ರಕ್ಕೆ ಉತ್ತಮ ನಟ ಮತ್ತು ಮೇಕಪ್ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಲಭಿಸಿದೆ.


ಇನ್ನೂ ಬಿಡುಗಡೆ ಆಗದ 'ನಾನು ಅವನಲ್ಲ...ಅವಳು' ಚಿತ್ರದ ಸೂತ್ರಧಾರಿ ಬಿ.ಎಸ್.ಲಿಂಗದೇವರು ಮತ್ತು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಂಚಾರಿ ವಿಜಯ್ 'ಒನ್ ಇಂಡಿಯಾ' ಕಛೇರಿಗೆ ಭೇಟಿ ನೀಡಿದ್ದರು. 'ನಾನು ಅವನಲ್ಲ...ಅವಳು' ಚಿತ್ರದ ಬಗ್ಗೆ ನಿರ್ದೇಶಕ ಬಿ.ಎಸ್.ಲಿಂಗದೇವರು ನೀಡಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ....


Naanu Avanalla Avalu director B.S.Lingadevaru Interview

* 'ನಾನು ಅವನಲ್ಲ...ಅವಳು' ಚಿತ್ರದಲ್ಲಿ ನೀವು ಕಂಡುಕೊಂಡ ಚಾಲೆಂಜಸ್ ಏನು?


- ಇಡೀ ಸಮಾಜ ಕಂಡರಿಯದ ಬದುಕು ಮಂಗಳಮುಖಿಯರದ್ದು. ಅಂಥವರ ಬಗ್ಗೆ ಸಿನಿಮಾ ಮಾಡೋಕೆ ಹೋದಾಗ, ಪ್ರತಿ ಹೆಜ್ಜೆ ಕೂಡ ಚಾಲೆಂಜ್. ಇದು ಕಲ್ಪನೆ ಅಥವಾ ಫ್ಯಾಂಟಸಿ ಸಿನಿಮಾ ಅಲ್ಲ. ಮಂಗಳಮುಖಿಯರ ನಿಜಜೀವನವನ್ನ ಆಧರಿಸಿ ಮಾಡಿರುವ ಸಿನಿಮಾ. ತಮಿಳಿನಲ್ಲಿ ಪ್ರಕಟವಾದ ಆಟೋ ಬಯೋಗ್ರಫಿ ಇದು. ಕನ್ನಡದಲ್ಲಿ ಅನುವಾದ ಆದ್ಮೇಲೆ ನಾವು ಸಿನಿಮಾ ಮಾಡಿದ್ದು. ಅದೇ ದೊಡ್ಡ ಚಾಲೆಂಜ್. ಎರಡನೇ ದೊಡ್ಡ ಚಾಲೆಂಜ್ ಕಲಾವಿದರ ಆಯ್ಕೆ ಮತ್ತು ಲೊಕೇಷನ್ಸ್. [ಸಂದರ್ಶನ : ಸಂಚಾರಿ ವಿಜಯ್ 'ಅವನು...ಅವಳಾದ' ಪರಿ]


Naanu Avanalla Avalu director B.S.Lingadevaru Interview

* 'ನಾನು ಅವನಲ್ಲ...ಅವಳು' ಪ್ರೇಕ್ಷಕರ ಮುಂದೆ ಬರುವುದು ಯಾವಾಗ?


- ಕಮರ್ಶಿಯಲ್ ರಿಲೀಸ್ ಕಷ್ಟ. ನಾವೀಗ ಗ್ಲೋಬಲಿ ಸ್ಪರ್ಧೆಗೆ ಇಳಿಯಬೇಕು. ಗಾಂಧಿನಗರದಲ್ಲಿ ಸ್ಪರ್ಧೆಗೆ ಇಳಿಯುವುದಿಲ್ಲ. ಹಾಲಿವುಡ್ ಮಟ್ಟಕ್ಕೆ ನಾವು ಸ್ಪರ್ಧೆ ಮಾಡ್ಬೇಕು. ಅಲ್ಲದೇ, ಇಂತಹ ಸಿನಿಮಾಗಳಿಗೆ ಥಿಯೇಟರ್ ಗಳು ಸಿಗುವುದು ಕಷ್ಟ. 'ಉಳ್ಳವರು ಶಿವಾಲಯವ ಕಟ್ಟುವರು' ಅಂತಾಗಿದೆ ಈಗಿನ ಗಾಂಧಿನಗರದ ಸ್ಥಿತಿ. ಅದಕ್ಕೆ ನಾವು 'ನಮ್ಮೂರ ಚಿತ್ರೋತ್ಸವ' ಅಂತ ಮಾಡಿ ಎಲ್ಲಾ ಹಳ್ಳಿಗಳಿಗೂ ಬಾಕ್ಸ್ ಎತ್ಕೊಂಡು ಹೋಗಿ ತೋರಿಸುವ ಪ್ಲಾನ್ ಇದೆ. ಸ್ಕೂಲ್, ಕಾಲೇಜ್ ಮತ್ತು ಕಂಪನಿಗಳಿಗೆ ಶೋ ಮಾಡುವ ಬಗ್ಗೆ ಯೋಚಿಸುತ್ತಿದ್ದೇವೆ.


* ಅಂದ್ರೆ ನಿಮ್ಮ ಟಾರ್ಗೆಟ್ ಇರುವುದು ಕ್ಲಾಸ್ ಆಡಿಯನ್ಸ್..?


- ಬರೀ ಕ್ಲಾಸ್ ಅಂತ ಮಾತ್ರ ಅಲ್ಲ. ನಾವು ಹಳ್ಳಿಗೂ ಹೋಗುತ್ತಿದ್ದೇವೆ. ರಾಜ್ಯದ ಮೂಲೆ ಮೂಲೆಗೂ ಹೋಗುವ ಬಗ್ಗೆ ಕೆಲಸ ನಡೆಯುತ್ತಿದೆ. [ರಾಷ್ಟ್ರ ಪ್ರಶಸ್ತಿ ಬಂತು; ಸಂಚಾರಿ ವಿಜಯ್ ಗೆ ಅದೃಷ್ಟ ಖುಲಾಯಿಸ್ತು.!]


Naanu Avanalla Avalu director B.S.Lingadevaru Interview

* 'ನಾನು ಅವನಲ್ಲ...ಅವಳು' ಟೈಟಲ್ ಬಗ್ಗೆ....


- ಕೃತಿ ಕನ್ನಡಕ್ಕೆ ಅನುವಾದವಾಗಿರುವುದು ಇದೇ ಟೈಟಲ್ ನಲ್ಲಿ. ಬೇರೆ ಹೆಸರು ಇಡಬೇಕು ಅಂತ ತುಂಬಾ ಟ್ರೈ ಮಾಡಿದ್ವಿ. 'ಅವನಲ್ಲ ಅವಳು...', 'ಅವನಲ್ಲ', 'ಅವಳು' ಹೀಗೆ ತುಂಬಾ ಪ್ರಯತ್ನ ಪಟ್ವಿ. ಆದ್ರೆ, ಹತ್ತಿರತ್ತಿರಕ್ಕೆ ಬೇರೆ ಟೈಟಲ್ ಗಳು ವಾಣಿಜ್ಯ ಮಂಡಳಿಯಲ್ಲಿ ರಿಜಿಸ್ಟರ್ ಆಗಿತ್ತು. ಕೊನೆಗೆ 'ನಾನು ಅವನಲ್ಲ...ಅವಳು' ಶೀರ್ಷಿಕೆ ಫೈನಲ್ ಮಾಡಿದ್ವಿ.


* ಸರ್ಕಾರದಿಂದ ನಿಮಗೆ ಸಿಗಬೇಕಾದ ಪ್ರೋತ್ಸಾಹ ಮತ್ತು ಮಾನ್ಯತೆ ಸಿಕ್ಕಿದ್ಯಾ?


- ಇಲ್ಲ. ಇದು ದಪ್ಪ ಚರ್ಮದ ಸರ್ಕಾರ. ನಮ್ಮ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ನಮಗೆ ಸರಿಯಾದ ಮಾನ್ಯತೆ ನೀಡಿಲ್ಲ. ಪ್ರಕಾಶ್ ರೈ ಒಬ್ಬರನ್ನ ಬಿಟ್ಟರೆ ಯಾರೂ ಕೂಡ ಉದಾರ ಮನೋಭಾವ ತೋರಿಸಲಿಲ್ಲ. ಅದೇ, ತಾರಾ ಅವರಿಗೆ ಪ್ರಶಸ್ತಿ ಬಂದಾಗ ಅಶೋಕ ಹೊಟೇಲ್ ನಲ್ಲಿ ದೊಡ್ಡ ಫಂಕ್ಷನ್ ಆಗಿತ್ತು. ಅದೇ ರೀತಿ ಇಲ್ಲೂ ಮಾಡಬಹುದಲ್ಲಾ.? ಯಾರಿಗೆ ಪ್ರಶಸ್ತಿ ಬಂದಿದೆ ಅನ್ನೋದೂ ಮುಖ್ಯ ಈಗ.


Naanu Avanalla Avalu director B.S.Lingadevaru Interview

* ಬೇರೆ ಭಾಷೆಯಲ್ಲಿ ಡಬ್ಬಿಂಗ್-ರೀಮೇಕ್ ಮಾಡುವ ಬಗ್ಗೆ?


- ತಮಿಳು ಮತ್ತು ಹಿಂದಿಯಲ್ಲಿ ಡಬ್ಬಿಂಗ್ ಮಾಡುವ ಬಗ್ಗೆ ಮಾತುಕತೆ ಆಗಿದೆ.


'ನಾನು ಅವನಲ್ಲ...ಅವಳು' ಚಿತ್ರದ ಮುಖ್ಯ ಪಾತ್ರಕ್ಕೆ ಮೊದಲು ಓರ್ವ ಮಂಗಳಮುಖಿಯನ್ನ ಸೆಲೆಕ್ಟ್ ಮಾಡಲಾಗಿತ್ತು. ಆದ್ರೆ, ಅವರು ಕೇಳಿದ ದೊಡ್ಡ ಮೊತ್ತ ಮತ್ತು ಅದಕ್ಕೆ ನೀಡಿದ ಕಾರಣ ಕೇಳಿ ನಿರ್ದೇಶಕ ಲಿಂಗದೇವರು ಶಾಕ್ ಆಗಿಬಿಟ್ಟರು. ಆ ಇಂಟ್ರೆಸ್ಟಿಂಗ್ ಕಥೆ ಇಲ್ಲಿದೆ NEXT ಕ್ಲಿಕ್ ಮಾಡಿ.....


English summary
Sanchari Vijay, who bagged the prestigious National Award for B.S.Lingadevaru's Naanu Avanalla Avalu visited 'Oneindia' along with the movie team. Here is an Exclusive Interview with the Director B.S.Lingadevaru.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada