ಲೆಜೆಂಡ್ ಬಾಲಕೃಷ್ಣ ಸಿನಿಮಾದಲ್ಲಿ ಅವಕಾಶ ಸಿಗುವುದಕ್ಕೆ ನಮ್ಮ ಅಮ್ಮನೇ ಕಾರಣ ಎಂದ ದುನಿಯಾ ವಿಜಯ್

'ಸಲಗ' ಸಿನಿಮಾ ಬಿಡುಗಡೆ ಬಳಿಕ ಸ್ಯಾಂಡಲ್‌ವುಡ್‌ನಲ್ಲಿ ದುನಿಯಾ ವಿಜಯ್ ಹೊಸ ಸೆನ್ಸೇಷನ್ ಹುಟ್ಟಾಕಿದ್ದಾರೆ. ಒಂದು ಸಿನಿಮಾ ವಿಜಯ್‌ಗೆ ಅದ್ಯಾಮ ಮಟ್ಟಿಗೆ ಬೋಸ್ಟ್ ಕೊಟ್ಟಿದೆ ಅನ್ನುವುದಕ್ಕೆ ತೆಲುಗು ಸಿನಿಮಾನೇ ಸಾಕ್ಷಿ. ಟಾಲಿವುಡ್ ಚಿತ್ರರಂಗ ದುನಿಯಾ ವಿಜಯ್‌ಗೆ ಅದ್ಧೂರಿಯಾಗಿ ವೆಲ್‌ಕಮ್ ಮಾಡಿದೆ. ಟಾಲಿವುಡ್ 'ಲೆಜೆಂಡ್' ಬಾಲಕೃಷ್ಣ ನಟಿಸುತ್ತಿರುವ 107ನೇ ಸಿನಿಮಾದಲ್ಲಿ ವಿಜಯ್ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ.

'ಸಲಗ' ಸಿನಿಮಾದ ಬಳಿಕ ವಿಜಯ್ ದುನಿಯಾನೇ ಬದಲಾಗಿದೆ. ಹೊಸ ಹೊಸ ಆಫರ್‌ಗಳು ಹುಡುಕಿಕೊಂಡು ಬರುತ್ತಿವೆ. ಸ್ಯಾಂಡಲ್‌ವುಡ್‌ನಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿರುವ ದುನಿಯಾ ವಿಜಯ್ ಟಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದು ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಈ ಸಂದರ್ಭದಲ್ಲಿ ಫಿಲ್ಮಿ ಬೀಟ್ ಕನ್ನಡ ಜೊತೆ ದುನಿಯಾ ವಿಜಯ್ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಬಾಲಕೃಷ್ಣ ಸಿನಿಮಾದಲ್ಲಿ ವಿಜಯ್ ಪಾತ್ರ, ತೆಲುಗು ಚಿತ್ರಕ್ಕೆ ನೀಡಿದ ಕಾಲ್‌ಶೀಟ್, ಮುಂದಿನ ಕನ್ನಡ ಸಿನಿಮಾ, ಅಮ್ಮನ ಸಾವಿನ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ.

ಸಲಗ ಬಳಿಕ ಎಲ್ಲವೂ ಬದಲಾಗುತ್ತಿದೆ

ಸಲಗ ಬಳಿಕ ಎಲ್ಲವೂ ಬದಲಾಗುತ್ತಿದೆ

"ಸಲಗ ಒಂದು ದೊಡ್ಡ ಸಕ್ಸಸ್ ಆಯ್ತು. ಒಬ್ಬ ಡೈರೆಕ್ಟರ್ ಅಂತ ಅನಿಸಿಕೊಂಡೆ. ನಿಂತುಕೊಂಡ ಹೀರೋ ಅಂತ ಅನಿಸಿಕೊಂಡೆ. ಎಲ್ಲಾ ಕೆಲಸ ನಾನೇ ಮಾಡಿಕೊಂಡೆ. ಕೆಲವೊಂದು ಬಾರಿ ನಮ್ಮ ಕೆಲಸವನ್ನು ನಾವೇ ಮಾಡಿಕೊಳ್ಳಬೇಕು ಶ್ರದ್ಧೆಯಾಗಿ ಅಂತ ಅನಿಸುತ್ತೆ. ಇನ್ನು ಎಲ್ಲೂ ನಿಲ್ಲಲ್ಲ ಮುಂದೆ ಹೋಗುತ್ತಲೇ ಇರುತ್ತೆ. ಅದರ ಬಗ್ಗೆ ನೋ ಡೌಟ್ಸ್. ಈಗ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ತುಂಬಾನೇ ಖುಷಿಯಾಗಿದ್ದೇನೆ." ಎಂದು ಫಿಲ್ಮಿ ಬೀಟ್ ಜೊತೆ ದುನಿಯಾ ವಿಜಯ್ ಹರ್ಚ ವ್ಯಕ್ತಪಡಿಸಿದ್ದಾರೆ.

ಶೂಟಿಂಗ್ ಬಳಿಕ ಆಟ ಶುರು

ಶೂಟಿಂಗ್ ಬಳಿಕ ಆಟ ಶುರು

"ಜನವರಿ 15ರ ಬಳಿಕ ಸಿನಿಮಾ ಶೂಟಿಂಗ್ ಆರಂಭ ಆಗುತ್ತಿದೆ. ನಾನು ತುಂಬಾನೇ ಖುಷಿಯಾಗಿದ್ದೀನಿ. ಒಳ್ಳೆಯದು ಆಗುತ್ತೆ ಅಂದರೆ ಹೀಗೆ ಇಲ್ಲವೆ. ನನಗೆ ನಿರ್ದೇಶಕರು ಸಿನಿಮಾದ ಲೈನ್ ಹೇಳಿದ್ದಾರೆ. ಅಲ್ಲಿ ಹೋದಮೇಲೆ ಆಟಗಳನ್ನು ಶುರು ಮಾಡುತ್ತೇವೆ. ನಾವು ಇಲ್ಲಿ ಮಾತಾಡುವುದಕ್ಕೂ, ಫೀಲ್ಡ್‌ನಲ್ಲಿ ಹೀಗಿ ನೋಡುವುದಕ್ಕೂ ತುಂಬಾನೇ ವ್ಯತ್ಯಾಸವಿದೆ. ಅದಕ್ಕೆ ನನ್ನ ಪಾತ್ರ ಎಷ್ಟು ಪವರ್‌ಫುಲ್ ಆಗಿದೆ ಅನ್ನುವುದನ್ನು ಈಗಲೇ ಹೇಳುವುದಕ್ಕೆ ಸಾಧ್ಯವಿಲ್ಲ." ಎಂದು ವಿಜಯ್ ಪಾತ್ರದ ಬಗ್ಗೆ ವಿವರಿಸಿದ್ದಾರೆ.

5 ತಿಂಗಳು ಕಾಲ್‌ಶೀಟ್ ಕೊಟ್ಟಿದ್ದೇನೆ

5 ತಿಂಗಳು ಕಾಲ್‌ಶೀಟ್ ಕೊಟ್ಟಿದ್ದೇನೆ

ಟಾಲಿವುಡ್‌ಗೆ ಕಾಲಿಡುತ್ತಿರುವ ದುನಿಯಾ ವಿಜಯ್ ನಿರ್ದೇಶಕ ಗೋಪಿಚಂದ್ ಮಲಿನೇನಿಗೆ ದೊಡ್ಡ ಕಾಲ್‌ಶೀಟ್ ಅನ್ನೇ ನೀಡಿದ್ದಾರೆ. ಈ ಬಗ್ಗೆ ಫಿಲ್ಮೀಬೀಟ್ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. "ನಿರ್ದೇಶಕರು ಸುಮಾರು 4 ರಿಂದ 5 ತಿಂಗಳು ಕಾಲ್ ಶೀಟ್ ತೆಗೆದುಕೊಂಡಿದ್ದಾರೆ. ನೀವು ಈಗೇನು ನೋಡುತ್ತೀರಾ ಹಾಗೇ ಕಾಣಿಸಿಕೊಳ್ಳುತ್ತೇನೆ. ಮೀಸೆ, ಸಾಲ್ಟ್ ಅಂಡ್ ಪೆಪ್ಪರ್ ಲುಕ್‌ ಸಿನಿಮಾದಲ್ಲಿ ಇರುತ್ತೆ." ಎಂದು ದುನಿಯಾ ವಿಜಯ್ ತಿಳಿಸಿದ್ದಾರೆ.

ಅಮ್ಮ ಹಾರೈಕೆಯಿಂದ ಎಲ್ಲಾ ಒಳ್ಳೆಯದಾಗುತ್ತಿದೆ

ಅಮ್ಮ ಹಾರೈಕೆಯಿಂದ ಎಲ್ಲಾ ಒಳ್ಳೆಯದಾಗುತ್ತಿದೆ

"ತುಂಬಾ ಖುಷಿಯಾಗಿ ಇದ್ದೀನಿ. ದೇವರು ಎಲ್ಲಾ ಒಳ್ಳೆಯದನ್ನು ಮಾಡುತ್ತಿದ್ದಾನೆ. ಬಹುಶ: ಅಮ್ಮ ಸಾಯುತ್ತಾ ದೇವರಿಗೆ ತುಂಬಾ ಬೇಡಿಕೊಂಡು ಹೋಗಿದ್ದಾಳೆ. ನನ್ನ ಮಗನನ್ನು ತುಂಬಾ ಚೆನ್ನಾಗಿ ನೋಡಿಕೋ ಅಂತ ಅದರ ಪ್ರತಿಫಲ ಎಲ್ಲಾ ಕಡೆ ಸಿಗುತ್ತಿದೆ. ಅಷ್ಟು ದೊಡ್ಡ ಹೀರೋ ಮುಂದೆ ನಿಂತುಕೊಂಡು ನಟನೆ ಮಾಡುತ್ತಿರುವುದು ನನ್ನ ಅದೃಷ್ಟ. ಗೋಪಿಚಂದ್ ಮಲಿನೇನಿ ಕೂಡ ತುಂಬಾ ಒಳ್ಳೆಯ ಡೈರೆಕ್ಟರ್. ರವಿತೇಜಾಗೆ ಮಾಡಿದ ಅವರ ತೆಲುಗು ಸಿನಿಮಾ 'ಕ್ರ್ಯಾಕ್' ಸಿನಿಮಾವನ್ನು ನೋಡಿದ್ದೆ." ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಿನಿಮಾ ಬಗ್ಗೆ ಇನ್ನೂ ಆಲೋಚಿಸಿಲ್ಲ

ಕನ್ನಡ ಸಿನಿಮಾ ಬಗ್ಗೆ ಇನ್ನೂ ಆಲೋಚಿಸಿಲ್ಲ

"ಬಾಲಕೃಷ್ಣ ಅವರೊಂದಿಗೆ ತೆಲುಗು ಸಿನಿಮಾ ಮುಗಿದ ಮೇಲೆನೇ ನಾನು ಕನ್ನಡ ಸಿನಿಮಾ ಬಗ್ಗೆ ನಿರ್ಧಾರ ಮಾಡುತ್ತೇನೆ. ಒಂದಿಷ್ಟು ಮಾತುಕತೆ ನಡೆಯುತ್ತಿದೆ. ಒಂದಷ್ಟು ಕತೆಗಳು ಬಂದಿವೆ. ಒಂದಿಷ್ಟು ಮಂದಿ ಅಪ್ರೋಚ್ ಮಾಡಿದ್ದಾರೆ. ನಾನೇ ಸ್ವಲ್ಪ ಚೂಸಿಯಾಗಿದ್ದೇನೆ. ನಾನೇ ಸ್ವಲ್ಪ ಹಿಂದೆ ಮುಂದೆ ನೋಡುತ್ತಿದ್ದೇನೆ. ಸಲಗನಾ ಮೀರಿ ಇನ್ನೊಂದು ಸಿನಿಮಾ ಮಾಡುವುದಕ್ಕೆ ಎದುರು ನೋಡುತ್ತೇನೆ. ಡೈರೆಕ್ಷನ್ ಮಾಡಬೇಕಾ? ನಟಿಸಬೇಕಾ ಇನ್ನೂ ನಿರ್ಧಾರ ಮಾಡಿಲ್ಲ. ಸದ್ಯಕ್ಕೆ ಏನೂ ಯೋಚನೆ ಮಾಡಿಲ್ಲ." ಎನ್ನುತ್ತಾರೆ ದುನಿಯಾ ವಿಜಯ್.

More from Filmibeat

English summary
Duniya Vijay exclusively talks about Balakrishna movie NBK 107. He gave 5 months call sheet to Balakrishna movie and playing super villain role.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X