For Quick Alerts
  ALLOW NOTIFICATIONS  
  For Daily Alerts

  'ಗರುಡ ಗಮನ ವೃಷಭ ವಾಹನ' ಹಾಡಿಗೆ 'ಗಾಳಿಪಟ' ಭಾವನಾ ಭರತನಾಟ್ಯಂ: ಸಾಂಗ್ ಬಗ್ಗೆ ಏನಂತಾರೆ ಕೇಳಿ?

  |

  'ಗಾಳಿಪಟ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಭಾವನಾ ರಾವ್ ಯಾರಿಗೆ ಗೊತ್ತಿಲ್ಲ. ಇಷ್ಟು ದಿನ ಇವರನ್ನು ನಟಿಯಾಗಿ ನೋಡಿದವರೇ ಹೆಚ್ಚು ಮಂದಿ. ಆದರೆ, ನಟನೆಗೂ ಮುನ್ನ ಭಾವನಾ ರಾವ್ ಒಬ್ಬ ಭರತನಾಟ್ಯಂ ಡ್ಯಾನ್ಸರ್ ಕೂಡ ಹೌದು.

  'ಗಾಳಿಪಟ' ಸಿನಿಮಾದಲ್ಲೂ ಇವರ ಭರತನಾಟ್ಯಂ ಡ್ಯಾನ್ಸ್ ಮೂಲಕವೇ ಗಮನ ಸೆಳೆದಿದ್ದಾರೆ. ಇಷ್ಟು ದಿನ ಸಿನಿಮಾ ಶೂಟಿಂಗ್ ಅಂತ ಮುಳುಗಿ ಹೋಗಿದ್ದ ಭಾವನಾ ರಾವ್ ಭರತನಾಟ್ಯಂ ಕಡೆ ಗಮನಹರಿಸಿರಲಿಲ್ಲ. ಈಗ ಮತ್ತೆ ಆ ಕಡೆಗೆ ಒಲವು ಬೆಳೆಸಿಕೊಂಡಿದ್ದಾರೆ.

  'ಗಾಳಿಪಟ 2' ಹಾಡು ಬಿಡುಗಡೆ: ಮತ್ತೊಮ್ಮೆ ಪ್ರೇಮಸುಧೆ ಹರಿಸಿದ ಜಯಂತ್ ಕಾಯ್ಕಿಣಿ'ಗಾಳಿಪಟ 2' ಹಾಡು ಬಿಡುಗಡೆ: ಮತ್ತೊಮ್ಮೆ ಪ್ರೇಮಸುಧೆ ಹರಿಸಿದ ಜಯಂತ್ ಕಾಯ್ಕಿಣಿ

  ಇತ್ತೀಚೆಗೆ ಬಿಡುಗಡೆಯಾದ 'ಗರುಡ ಗಮನ ವೃಷಭ ವಾಹನ' ಸಿನಿಮಾದ ಚಂದ್ರಚೂಡ ಶಿವ ಹಾಡು ತುಂಬಾನೇ ಸೆಳೆದಿತ್ತು. ಈ ಹಾಡಿಗೆ ಸ್ವತ: ಭಾವನಾ ರಾವ್ ಅವರೇ ಕೊರಿಯೋಗ್ರಾಫಿ ಮಾಡಿ ಹಾಡನ್ನು ಕಂಪೋಸ್ ಮಾಡಿದ್ದಾರೆ. ಯಾವ ಉದ್ದೇಶಕ್ಕೆ ಈ ಹಾಡನ್ನು ಕಂಪೋಸ್ ಮಾಡಿದ್ದಾರೆ? ಈ ಹಾಡಿನ ಹಿನ್ನೆಲೆಯೇನು? ಅನ್ನುವುದನ್ನು ಫಿಲ್ಮಿಬೀಟ್ ಜೊತೆ ಹಂಚಿಕೊಂಡಿದ್ದಾರೆ.

  ಈ ಹಾಡಿನ ಕಲ್ಪನೆ ಬಂದಿದ್ದೇಕೆ?

  ಈ ಹಾಡಿನ ಕಲ್ಪನೆ ಬಂದಿದ್ದೇಕೆ?

  "ನನಗೆ ಸಿನಿಮಾ ತುಂಬಾನೇ ಇಷ್ಟ ಆಗಿತ್ತು. ನಾನು ಭರತನಾಟ್ಯಂ ಡ್ಯಾನ್ಸರ್ ಆಗಿರುವುದರಿಂದ ನನಗೆ ಪೌರಾಣಿಕ ಕತೆಗಳು, ದೇವರ ಹಾಡುಗಳು ನನಗೆ ತುಂಬಾನೇ ಸೆಳೆಯುತ್ತೆ. ಶಿವ ಅಂದರೆ ತಾಂಡವ. ಇಂತಹ ಹಾಡಿನಲ್ಲಿ ಡ್ಯಾನ್ಸ್ ಮೂವ್ಮೆಂಟ್ಸ್ ಜಾಸ್ತಿ ಇರುತ್ತೆ. ಅದಕ್ಕೆ ಈ ಹಾಡನ್ನು ಕೇಳಿದಾಗಲೆಲ್ಲಾ ಏನಾದ್ರೂ ಮಾಡಲೇ ಬೇಕು ಅಂತ ಅನಿಸುತ್ತಿತ್ತು. ಅದಕ್ಕೆ ನಾನೇ ಮನೆಯಲ್ಲೇ ಕೊರಿಯೋಗ್ರಫಿ ಎಲ್ಲಾ ಮಾಡಿದೆ. ಮೊದಲು ನಾನು ನನ್ನ ಯೂಟ್ಯೂಬ್ ಚಾನೆಲ್‌ಗೆ ಮಾಡೋಣ ಅಂದುಕೊಂಡಿದ್ದೆ. ರಾಜ್‌ ಶೆಟ್ಟಿ ಅವರಿಗೆ ಕೇಳಿದಾಗ, ಅವರು ಗ್ರೀನ್ ಸಿಗ್ನಲ್ ಕೊಟ್ಟರು. ಆಮೇಲೆ ಸೀರಿಯಸ್ ಆಗಿ ಕೊರಿಯೋಗ್ರಫಿ ಮಾಡಿ ಶೂಟ್ ಮಾಡಿದ್ವಿ."

  ಎರಡೂ ಹಾಡುಗಳಿಗೆ ಏನಾದರೂ ಸಾಮ್ಯತೆ ಇದೆಯಾ?

  ಎರಡೂ ಹಾಡುಗಳಿಗೆ ಏನಾದರೂ ಸಾಮ್ಯತೆ ಇದೆಯಾ?

  "ಸಿನಿಮಾ ಹಾಡಿನ ಸನ್ನಿವೇಶವನ್ನೂ ಈ ಸಾಂಗ್ ಕೊರಿಯೋಗ್ರಫಿಗೂ ಯಾವುದೇ ಸಂಬಂಧವಿಲ್ಲ. ನಾನು ಈ ಹಾಡಿನಲ್ಲಿ ಬರುವ ಅರ್ಥವನ್ನು ಮಾತ್ರ ತೆಗೆದುಕೊಂಡೆ. ಶಿವನ ಬಗ್ಗೆ ತಲೆಯಲ್ಲಿ ಇಟ್ಟುಕೊಂಡು ಕೊರಿಯೋಗ್ರಫಿ ಮಾಡಿದೆ. ಸಿನಿಮಾದ ಹಾಡನ್ನು ಕೇಳಿದ ಬಳಿಕ ಈ ಹಾಡನ್ನು ಹೀಗೂ ಮಾಡಬಹುದಾ? ಅಂತ ಅನಿಸುತ್ತೆ. ಈ ಡ್ಯಾನ್ಸ್ ಕೊರಿಯೋಗ್ರಫಿ ಮಾಡುವುದಕ್ಕೆ 3 ದಿನಗಳು ಬೇಕಾಯ್ತು. ಮೂರು ನಿಮಿಷದ ಸಾಂಗ್ ಇತ್ತು. ಶೂಟ್ ಯಾರು ಮಾಡುತ್ತಾರೆ? ಲೋಕೇಶನ್ ಟೆಂಪಲ್ ತರನೇ ಇರಬೇಕಿತ್ತು. ಹಸಿರು ಇರಬೇಕಿತ್ತು. ಎಲ್ಲವೂ ಸಿಕ್ಕಿತು. ಮುಂದಿನ ನಿಲ್ದಾಣ ಛಾಯಾಗ್ರಾಹಕ ಅಭಿಮನ್ಯು ಓಕೆ ಅಂದರು. ನಿರಂತರ ಮೂರು ಗಂಟೆ ಶೂಟ್ ಮಾಡಿದ್ವಿ."

  ಎಷ್ಟು ದಿನ ಶೂಟ್ ಮಾಡಿದ್ದೀರಾ?

  ಎಷ್ಟು ದಿನ ಶೂಟ್ ಮಾಡಿದ್ದೀರಾ?

  "ಗಾಳಿಪಟ ಸಿನಿಮಾದಲ್ಲಿ ನಧೀಂ ತನ ಹಾಡಿಗೆ ಬೆಳಗ್ಗೆಯಿಂದ ಸಂಜೆವರೆಗೂ ಡ್ಯಾನ್ಸ್ ಮಾಡುತ್ತಿದೆ. ಆಮೇಲೆ ಟಚ್ ಬಿಟ್ಟು ಹೋಗಿತ್ತು. ಅವತ್ತು ಮೂರು ದಿನ ಬೆಳಗ್ಗೆಯಿಂದ ಸಂಜೆವರೆಗೂ ಶೂಟ್ ಮಾಡಿದ್ದು ಬಿಟ್ಟರೆ ಈವಾಗಲೇ ಶೂಟ್ ಮಾಡಿರೋದು. " ಎನ್ನುತ್ತಾರೆ ನಟಿ ಭಾವನಾ ರಾವ್.

  ಈ ಹಾಡು ನಿಮಗೆ ಯಾಕಷ್ಟು ಮುಖ್ಯ?

  ಈ ಹಾಡು ನಿಮಗೆ ಯಾಕಷ್ಟು ಮುಖ್ಯ?

  "ಎಲ್ಲೋ ಮರೆತು ಹೋಗಿದ್ದೆ ನಾನು. ಈ ಸಿನಿಮಾ, ಶೂಟಿಂಗ್ ಅದು-ಇದೂ ಅಂತ ನಾನು ಭರತನಾಟ್ಯಂ ಡ್ಯಾನ್ಸರ್ ಅನ್ನುವುದನ್ನೇ ಮರೆತು ಹೋಗಿದ್ದೆ. ನನಗೆ ಆಸಕ್ತಿ ಏನು ಅನ್ನುವುದನ್ನೇ ನಾನು ಮರೆತುಬಿಟ್ಟಿದೆ. ಈ ಸಾಂಗ್ ಕೇಳಿದಾಗ ನಾನು ಮತ್ತೆ ಕೊರಿಯೋಗ್ರಫಿ ಮಾಡಿ ಡ್ಯಾನ್ಸ್ ಮಾಡಬೇಕು ಅಂತ ಅನಿಸಿತ್ತು. ಈ ಹಾಡಿಗೆ ಡ್ಯಾನ್ಸ್ ಮಾಡುತ್ತಾ ಮಾಡುತ್ತಾ ನಾನು ಮತ್ತೆ ನನ್ನ ರೂಟ್‌ಗೆ ಬಂದಿದ್ದೇನೆ ಎಂದು ಅನಿಸುತ್ತೆ. ನಾನು ಇನ್ನೂ ಭರತನಾಟ್ಯಂ ಡ್ಯಾನ್ಸರ್ ಅಂತ ಈ ಹಾಡಿನ ಮೂಲಕ ಪ್ರೂವ್ ಮಾಡುತ್ತಿದ್ದೇನೆ ಎಂದು ಅನಿಸುತ್ತಿದೆ."

  ಭರತನಾಟ್ಯಂ ಬಗ್ಗೆ ಈಗಲೂ ಆಸಕ್ತಿ ಇದೆಯಾ?

  ಭರತನಾಟ್ಯಂ ಬಗ್ಗೆ ಈಗಲೂ ಆಸಕ್ತಿ ಇದೆಯಾ?

  " ನಾನು ನಟಿಯಾದ ಮೇಲೆ ಭರತನಾಟ್ಯಂ ಪರ್ಫಾಮೆನ್ಸ್ ಕೊಡುವುದಕ್ಕೆ ನನಗೆ ಸರಿಯಾದ ವೇದಿಕೆ ಸಿಗುತ್ತಿಲ್ಲ. ಸರಿಯಾದ ವೇದಿಕೆ ನನಗೆ ಸಿಗುತ್ತಿಲ್ಲ. ಒಳ್ಳೆ ವೇದಿಕೆ ಸಿಕ್ಕರೆ ಖಂಡಿತವಾಗಿಯೂ ನಾನು ಭರತನಾಟ್ಯಂ ಅನ್ನು ಮುಂದುವರೆಸಿಕೊಂಡು ಹೋಗುತ್ತೇನೆ."

  ಸಿನಿಮಾ ಡ್ಯಾನ್ಸ್ ಮಾಡುವ ಆಸೆ ಇದೆಯಾ?

  " ಹೌದು.. ಎಲ್ಲರಿಗೂ ಕೇಳಿಕೊಂಡಿದ್ದೇನೆ. ನನಗೊಂದು ಒಳ್ಳೆ ಡ್ಯಾನ್ಸ್ ಕೊಡಿ ಎಂದು ಕೇಳುತ್ತಲೇ ಇದ್ದೇನೆ. ಆದರೆ, ಅವರೂ ಏನೂ ಮಾಡುವುದಕ್ಕೆ ಆಗುವುದಿಲ್ಲ. ಯಾಕೆಂದರೆ, ಕ್ಯಾರೆಕ್ಟರ್‌ಗಳಿಗೂ ಅಂತಹ ಡಿಮ್ಯಾಂಡ್ ಬಂದಿಲ್ಲ. ಆದರೆ ಒಂದು ದಿನ ಒಂದೊಳ್ಳೆ ಡ್ಯಾನ್ ಫಿಲ್ಮ್ ಮಾಡುತ್ತೇನೆ ಎನ್ನುವ ನಂಬಿಕೆ ಇದೆ." ಎನ್ನುತ್ತಾರೆ ನಟಿ ಭಾವನಾ ರಾವ್.

  English summary
  Gaalipata Fame Actress Bhavana Rao perform Bharatanatyam On Garuda Gamana Movie Song, Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X