ಎಂಟ್ರಿ ಕೊಟ್ಟ ನಾಲ್ಕು ತಿಂಗಳಲ್ಲೇ 2 ಧಾರಾವಾಹಿ ಗಿಟ್ಟಿಸಿಕೊಂಡ ಈ 'ಮಹಾನಟಿ' ಯಾರು?

ಕಲಾವಿದರಾಗಬೇಕು ಅಂತ ಕನಸು ಕಟ್ಟಿಕೊಂಡು ಬಂದ ಅದೆಷ್ಟೋ ಮಂದಿಗೆ ನೆಲೆಯಾಗಿದ್ದು ಕಿರುತೆರೆ. ಇಲ್ಲಿ ಪ್ರಸಾರ ಆಗುವ ರಿಯಾಲಿಟಿ ಶೋನಿಂದ, ಧಾರಾವಾಹಿಗಳಿಂದ ತಮ್ಮ ಕನಸನ್ನು ನನಸು ಮಾಡಿಕೊಂಡವರು ಹಲವರಿದ್ದಾರೆ. ಇವರಲ್ಲಿ ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ 'ನೀನಾದೆ ನಾ 2' ಹಾಗೂ 'ಗೌರಿ ಶಂಕರ' ಧಾರಾವಾಹಿಯ ಈ ನಟಿ ಕೂಡ ಒಬ್ಬರು.

ಅಂದ್ಹಾಗೆ, ಕಿರುತೆರೆಗೆ ಎಂಟ್ರಿಕೊಟ್ಟ ಒಂದೇ ವರ್ಷದಲ್ಲಿ ಎರಡು ಧಾರಾವಾಹಿ ಹಾಗೂ ಒಂದು ರಿಯಾಲಿಟಿ ಶೋನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಮಾತೃಭಾಷೆ ತೆಲುಗು ಆಗಿದ್ದರೂ, ಕನ್ನಡದಲ್ಲಿ ಸುಲಲಿತವಾಗಿ ಮಾತಾಡಬಲ್ಲ ಈ ನಟಿಯೇ ರೇಷ್ಮಾ. ಸ್ಟಾರ್ ಸುವರ್ಣ ಚಾನೆಲ್‌ನ ಎರಡು ಧಾರಾವಾಹಿಗಳಲ್ಲಿ ನಟಿಸುತ್ತಿರುವ ಈ ನಟಿ ಫಿಲ್ಮಿಬೀಟ್ ಕನ್ನಡ ಜೊತೆ ತಮ್ಮ ಜರ್ನಿಯನ್ನು ಮೆಲುಕು ಹಾಕಿದ್ದಾರೆ.

Interview Neenade Naa and Gowri Shankar serial actress Reshma journey and life story

ನೀವು ಎಲ್ಲಿಯವರು? ಕಿರುತೆರೆಗೆ ಬಂದಿದ್ದೇಗೆ?

"ನಾನು ಹುಟ್ಟಿದ್ದು ಹಾಸನ. ಅಲ್ಲಿ ಅರಸೀಕರೆ ಅಂತ. ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿ. ಚಿಕ್ಕಂದಿನಿಂದ ಟಿವಿಯಲ್ಲಿ ಬರಬೇಕು ಅಂತ ಆಸೆಯಿತ್ತು. ಆದರೆ, ಗುರಿ ಇದ್ದಿದ್ದು ಬ್ಯುಸಿನೆಸ್ ಮಾಡಬೇಕು ಅಂತ. ವಿದೇಶಕ್ಕೆ ಹೋಗಿ ಓದಬೇಕು ಅಂತಿತ್ತು. ಥಿಯೇಟರ್‌ಗೆ ಬರಬೇಕು ಅಂತೇನು ಇರಲಿಲ್ಲ. ಭರತನಾಟ್ಯಂ ಕಲಿತಿದ್ದೆ. ಆಗ ಸ್ಟೇಜ್‌ ಮೇಲೆ ಹೋಗಿ ಹೋಗಿ ಅದೇ ಅಡಿಕ್ಷನ್ ಆಗಿ ಹೋಯ್ತು. ಒಂದು ದಿನ ಅಪ್ಪನಿಗೆ ಸ್ಪೇಜ್‌ ಜೊತೆ ಇರಬೇಕು ಆತಂಹದ್ದು ಏನಾದರೂ ಹುಡುಕು ಅಂತ ಹೇಳಿದೆ. ಅಪ್ಪ ಬೆನಕಾ ವರ್ಕ್ ಶಾಪ್‌ಗೆ ಕರೆದುಕೊಂಡು ಹೋದರು. ಅಲ್ಲಿ ಹೋದಾಗ ನನಗೆ 16 ವರ್ಷ. ಅಲ್ಲಿಂದ ನಾಟಕಗಳು ನಟಿಸುವುದು ನಡೀತಾ ಇತ್ತು. ಆಗ ಮಹಾನಟಿ ರಿಯಾಲಿಟಿ ಶೋಗೆ ಆಡಿಷನ್ ಇದೆ ಅಂತ ಗೊತ್ತಾಯ್ತು. ಆಗ ನಾನು ಆಡಿಷನ್ ಕೊಟ್ಟು ಸೆಲೆಕ್ಟ್ ಆದೆ. ಅಲ್ಲಿಂದ ಸೀರಿಯಲ್‌ಗೆ ಆಫರ್ ಬಂತು. ಮೊದಲು ನೀನಾದೆ ನಾಗೆ ಅವಕಾಶ ಸಿಕ್ಕಿತ್ತು. ಅಲ್ಲಿ ನನ್ನನ್ನು ನೋಡಿ 'ಗೌರಿ ಶಂಕರ' ಧಾರಾವಾಹಿಗೆ ಗಂಗಾ ಪಾತ್ರಕ್ಕೆ ಆಯ್ಕೆ ಮಾಡಿದರು."

'ನೀನಾದೆ ನಾ' ಧಾರಾವಾಹಿ ಸಿಕ್ಕಿದ್ದೇಗೆ?

"ರಿಯಾಲಿಟಿ ಶೋಗೆ ಆಯ್ಕೆ ಆಗ್ತೀನಿ ಅಂತಾನೇ ಗೊತ್ತಿರಲಿಲ್ಲ. ಅದು ಹೇಗೆ ವರ್ಕ್ ಆಗುತ್ತೆ ಅನ್ನೋದೇ ಗೊತ್ತಿರಲಿಲ್ಲ. ಆಗ ಟೋಟಲಿ ಬ್ಲಾಂಕ್ ಇದ್ದೆ. ಆಗ ಜೀ ಕುಟುಂಬ ಅವಾರ್ಡ್ಸ್‌ಗೆ ಹೋಗಿದ್ವಿ. ಆಗ ಒಬ್ಬ ಜೀ ಪ್ರೋಮೊ ಟೀಮ್‌ನಲ್ಲಿ ಒಬ್ಬರು ನನ್ನನ್ನು ನೋಡಿ, ನೀನಾದೆ ನಾ ಪ್ರೊಡಕ್ಷನ್ ಮ್ಯಾನೇಜರ್‌ಗೆ ನನ್ನ ಪ್ರೊಫೈಲ್ ಅನ್ನು ಪಾಸ್ ಮಾಡಿದರು. ಅದನ್ನು ನೋಡಿ ನೀನಾದೆ ನಾ ಧಾರಾವಾಹಿಗೆ ಆಡಿನಷ್‌ ಕರೆದರು. ಅಲ್ಲಿ ಆಡಿಷನ್ ಕೊಟ್ಮೇಲೆ ಸೆಲೆಕ್ಟ್ ಆಗಿದ್ದು."

Interview Neenade Naa and Gowri Shankar serial actress Reshma journey and life story

ಕಿರುತೆರೆಗೆ ಬಂದು ಎಷ್ಟು ವರ್ಷ ಆಯ್ತು?

"ಎರಡು ವರ್ಷದಿಂದ ಥಿಯೇಟರ್‌ನಲ್ಲಿ ಇದ್ದೀನಿ. ರಿಯಾಲಿಟಿ ಶೋ ಶುರು ಮಾಡಿದ್ದು ಒಂದು ವರ್ಷದ ಹಿಂದೆ. ಈಗ ಸೀರಿಯಲ್ ಶುರು ಮಾಡಿ ನಾಲ್ಕು ತಿಂಗಳು ಆಯ್ತು. ರಿಯಾಲಿಟಿ ಶೋ ಅಂದರೆ, ಥಿಯೇಟರ್‌ ಹಾಗೇನೆ. ಸ್ಟೇಜ್ ತರನೇ ಪರ್ಫಾಮೆನ್ಸ್ ಕೊಡೋದಿತ್ತು. ಆದರೆ, ಸೀರಿಯಲ್‌ನಲ್ಲಿ ಹೊಂದಿಕೊಳ್ಳುವುದಕ್ಕೆ ಕಷ್ಟ ಆಯ್ತು. ಆದರೆ, ನಾನೀಗ ಧಾರಾವಾಹಿಯನ್ನು ಎಂಜಾಯ್ ಮಾಡುತ್ತಿದ್ದೇನೆ."

ನೀವು ಹೆಸರು ಬದಲಿಸಿಕೊಂಡಿದ್ದೇಕೆ?

"ಮಹಾನಟಿ ಮಾಡುವಾಗ ನನ್ನ ಹೆಸರು ಪ್ರವಲಿಕಾ ಅಂತಿತ್ತು. ತುಂಬಾ ಜನಕ್ಕೆ ಅದು ಹೇಳುವುದಕ್ಕೆ ಕಷ್ಟ ಆಗುತ್ತಿತ್ತು ಅಂತ ಸಂಖ್ಯಾಶಾಸ್ತ್ರವನ್ನೆಲ್ಲ ನೋಡಿ ರೇಷ್ಮಾ ಅಂತ ಈಗ ಇಟ್ಟಿದ್ದಾರೆ. "

ಭವಿಷ್ಯದ ಪ್ಲಾನ್ ಏನು?

"ಭವಿಷ್ಯದ ಬಗ್ಗೆ ಗೊತ್ತಿಲ್ಲ. ಇರೋ ಸೀರಿಯಲ್‌ಗಳನ್ನೇ ಚೆನ್ನಾಗಿ ಮಾಡಬೇಕು ಅನ್ನೋ ಆಸೆಯಿದೆ. ಎರಡು ಸೀರಿಯಲ್‌ನಲ್ಲೂ ಅನುಭವಿ ನಟರು ಇದ್ದಾರೆ. ಅವರು ಎಷ್ಟು ಚೆನ್ನಾಗಿ ನಟನೆ ಮಾಡುತ್ತಾರೋ ನಾವೂ ಅಷ್ಟೇ ಚೆನ್ನಾಗಿ ಮಾಡಬೇಕು. ಆಗ ಆ ಸೀನ್ ಅಷ್ಟು ಚೆನ್ನಾಗಿ ಬರುತ್ತೆ. ಫ್ಯೂಚರ್ ಬಗ್ಗೆ ಅಂದರೆ ಸಿನಿಮಾಗೆ ಹೋಗಬೇಕು. ಪರ್ಫಾಮೆನ್ಸ್ ಓರಿಯೆಂಟೆಡ್ ಪಾತ್ರಗಳನ್ನು ಮಾಡಬೇಕು ಅಂತ ಆಸೆಯಿದೆ."

Interview Neenade Naa and Gowri Shankar serial actress Reshma journey and life story

ಓದು-ನಟನೆ ಎರಡೂ ಹೇಗ ಬ್ಯಾಲೆನ್ಸ್ ಆಗ್ತಿದೆ?

"ನಾನು 9ನೇ ತರಗತಿಯಲ್ಲಿ ಇರುವಾಗ ಜಾಸ್ತಿ ಸ್ಟೇಜ್ ಪ್ರೋಗ್ರಾಂ ಕೊಡುವುದಕ್ಕೆ ಹೋಗುತ್ತಿದ್ದೆ. ಕ್ಲಾಸಿಕಲ್ ಡ್ಯಾನ್ಸ್ ಮಾಡುತ್ತಿದ್ದೆ. ಈ ವೇಳೆ ನನ್ನ ಪ್ಯಾಷನ್ ನಟನೆ ಕಡೆಗೆ ವಾಲಿತ್ತು. ಮಹಾನಟಿ ಆಡಿಷನ್ ಕೊಡುವಾಗ 12ನೇ ತರಗತಿ ಪರೀಕ್ಷೆ ಬರೆಯುತ್ತಿದೆ. ಇವತ್ತು ಆಡಿಷನ್‌ ಇದ್ದರೆ ಅದನ್ನು ಕೊಟ್ಟು ಬಂದು ಓದಿ ಕೊಳ್ಳುತ್ತಿದ್ದೆ. ಆ ಮೇಲೆ ಮತ್ತೆ ಹೀಗೆ ಎರಡು ಮೂರು ರೌಂಡ್ ಆಡಿಷನ್ ಇದ್ದಾಗಲೂ ಅದನ್ನೇ ಮಾಡಿದ್ದೇನೆ. ಮಹಾನಟಿ ಪ್ರಸಾರ ಆಗುವಾಗ 12ನೇ ತರಗತಿ ಫಲಿತಾಂಶ ಬಂದಿತ್ತು. ಈಗಲೂ ಅಷ್ಟೇ ಸೀರಿಯಲ್ ಶೂಟ್ ನಡೆಯುವಾಗ ಬಿಕಾಂ ಮೊದಲ ಸೆಮಿಸ್ಟರ್ ಪರೀಕ್ಷೆ ನಡೆಯುತ್ತಿತ್ತು. ನಮ್ಮ ಅಮ್ಮ ಶಿಕ್ಷಣಕ್ಕೆ ಮೊದಲ ಆಧ್ಯತೆ ಕೊಡುತ್ತಾರೆ."

'ನೀನಾದೆ ನಾ' ಧಾರಾವಾಹಿಯಲ್ಲಿ ನಿಮ್ಮ ಪಾತ್ರವೇನು?

"ನೀನಾದೆ ನಾ ಅಲ್ಲಿ ಹೀರೋ ವಿಕ್ರಂ ಹಾಗೂ ವಿಲನ್ ವಿಶ್ವ ಇವರಿಬ್ಬರಿಗೂ ತಂಗಿಯಾಗಿ ನಟಿಸುತ್ತಿದ್ದೇನೆ. ಕಾಲೇಜು ಹುಡುಗಿ ಪಾತ್ರ. ತುಂಬಾನೇ ಮೊಬೈಲ್ ಬಳಕೆ ಮಾಡೋದು, ಟಾಂಟ್ ಕೊಡೋದು ಮಾಡುತ್ತಾಳೆ. ಈ ಪಾತ್ರ ಮೊದಲು ಕಷ್ಟ ಆಗಿತ್ತು. ಯಾಕಂದ್ರೆ, ನಾನು ತುಂಬಾ ಮಾತಾಡೋದಿಲ್ಲ. ಆದರೆ, ಈ ಪಾತ್ರ ವಟ ವಟ ಅಂತ ಮಾತಾಡೋ ಪಾತ್ರ. ಈಗ ಸ್ವಲ್ಪ ಸಾಫ್ಟ್ ಆಗ್ತಾ ಹೋಗಿದೆ. ನನ್ನ ಹಾಗೂ ವೈಶು ಪಾತ್ರ ತುಂಬಾನೇ ಸಾಮ್ಯತೆ ಇದೆ."

'ಗೌರಿ ಶಂಕರ' ಪಾತ್ರ ಹೇಗಿದೆ?

"ಗೌರಿ ಶಂಕರ್ ಬಂದು ತುಂಬಾನೇ ಡಿಫ್ರೆಂಟ್. ಅದು ಹಾಸನದ ಭಾಷೆ ಆಡುತ್ತಾಳೆ. ನಾನು ಹಾಸನದಲ್ಲಿ ಹುಟ್ಟಿದರೂ, ಮನೆಯಲ್ಲಿ ಮಾತಾಡೋದು ತೆಲುಗು. ಅರಸೀಕೆರೆ ನಮ್ಮ ಅಮ್ಮನ ಊರು ಆದರೂ, ನಮ್ಮದು ತೆಲುಗು ಮಾತಾಡುವ ಫ್ಯಾಮಿಲಿ. ಹಾಗಾಗಿ ನನಗೆ ಹಾಸನದ ಭಾಷೆ ಅಷ್ಟಾಗಿ ಗೊತ್ತಿಲ್ಲ. ಬೆಳೆದಿರೋದು ಬೆಂಗಳೂರು ಆಗಿದ್ದರಿಂದ ಮನೆಯಲ್ಲಿ ತೆಲುಗು ಮಾತಾಡುತ್ತೇನೆ. ಬೇರೆ ಕಡೆಗೆ ಕನ್ನಡ ಮಾತಾಡುತ್ತೇನೆ. ನನಗೆ ಈ ಪಾತ್ರದ ಲುಕ್ ಎಲ್ಲಾ ಇಷ್ಟ ಆಯ್ತು. ಆದರೆ, ಒಂದೊಂದು ಪೇಜ್ ಡೈಲಾಗ್ ಕೊಟ್ಟಿದ್ದರು. ಅದು ಆರಂಭದಲ್ಲಿ ಕಷ್ಟ ಆಯ್ತು. ಆಮೇಲೆ ಸುಲಭ ಅನಿಸಿತು. ಗಂಗಾ ಪಾತ್ರ ವೈಶುಗಿಂತ ಫಾಸ್ಟ್ ಆಗಿ ಮಾತಾಡುತ್ತಾಳೆ. ಹೀಗಾಗಿ ಹಿರಿಯ ನಟಿ ಮಂಜುಳಾ ಅವರ ಬಾಡಿ ಲ್ಯಾಂಗ್ವೆಜ್ ಅನ್ನು ಕ್ಯಾಚ್ ಮಾಡಿಕೊಂಡೆ. ಹಾಗೇ ಈ ಪಾತ್ರಕ್ಕೆ ಪ್ರಾಕ್ಟಿಸ್ ಮಾಡಿದೆ."

ಓದು-ಶಿಕ್ಷಣ ನಿಮ್ಮ ಆಯ್ಕೆ ಯಾವುದು?

"ಈ ಫೀಲ್ಡ್‌ಗೆ ಬರುವುದಕ್ಕೂ ಮುನ್ನ ಎಲ್ಲರೂ ಹೇಳಿದ್ದರು. ಇಲ್ಲಿ ಏರಿಳಿತಗಳು ಇರುತ್ತೆ. ಅದನ್ನು ಹಾಗೇ ಸ್ವೀಕರಿಸಬೇಕು. ಹಾಗಿದ್ದರೆ, ಹೋಗು ಅಂತ ಹೇಳಿದ್ದರು. ನೀನಾದೆ ನಾಗೆ ಬಂದಿದ್ದೆ. ವೈಶು ಪಾತ್ರವನ್ನು ಚೆನ್ನಾಗಿ ಮಾಡಬೇಕು ಅಂತಿತ್ತು. ಹೀರೋ ಹೀರೋಯಿನ್‌ಗೆ ಮೊದಲಿನಿಂದಲೂ ಫ್ಯಾನ್ ಬೇಸ್ ಇದೆ. ಇದರ ಮಧ್ಯೆ ವೈಶು ಪಾತ್ರಕ್ಕೆ ನಾನು ಬಂದ ಬಳಿಕ ಫ್ಯಾನ್ ಬೇಸ್ ತುಂಬಾನೇ ಬೇಗ ಶುರುವಾಯ್ತು. ಗೌರಿ ಶಂಕರದ ಗಂಗಾ ಪಾತ್ರಕ್ಕೆ ಬಂದರೆ, ನನ್ನ ಪಾತ್ರವನ್ನೂ ವೀಕ್ಷಕರು ಒಪ್ಪಿಕೊಂಡಿದ್ದಾರೆ. ಹೀಗಾಗಿ ಹೆಚ್ಚೇನು ಯೋಚನೆ ಮಾಡಿಲ್ಲ. ಶಿಕ್ಷಣವನ್ನು ಮುಂದುವರೆಸಿದ್ದೇನೆ. ಸೀರಿಯಲ್ ಬರಲಿಲ್ಲ ಅಂದರೆ, ನನ್ನ ಪ್ರಯತ್ನವನ್ನಂತೂ ನಿಲ್ಲಿಸುವುದಿಲ್ಲ. ಓದುವುದರ ಕಡೆಗೆ ಹೆಚ್ಚು ಗಮನ ಹರಿಸುತ್ತೇನೆ." ಎನ್ನುತ್ತಾರೆ ಕಿರುತೆರೆ ನಟಿ ರೇಷ್ಮಾ.

More from Filmibeat

English summary
Interview Neenade Naa and Gowri Shankar serial actress Reshma journey and life story:
Read more about: actress filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X