ಕಿರುತೆರೆಯಲ್ಲಿ 'ಜೈಲಲಿತಾ' ಸುಂದರಿ ಮಿಂಚಿಂಗ್: ಸಿಎ ಆಗಬೇಕಾದವರು ನಟನೆಗೆ ಬಂದಿದ್ದೇಕೆ?

ಬಣ್ಣದ ಲೋಕ ಒಂದು ಮಾಯಾಲೋಕ. ಇಲ್ಲಿ ಪ್ರತಿದಿನ ಸಾವಿರಾರು ಕನಸುಗಳು ಹುಟ್ಟಿಕೊಳ್ಳುತ್ತವೆ. ಅದೆಷ್ಟೋ ಜನರು ಸ್ಟಾರ್ ಆಗುವ ಕನಸು ಹೊತ್ತು ಇಲ್ಲಿಗೆ ಬರುತ್ತಾರೆ. ಆದರೆ ಎಲ್ಲರಿಗೂ ಅದೃಷ್ಟ ಒಲಿಯುವುದಿಲ್ಲ. ಕೇವಲ ಪರಿಶ್ರಮ ಮತ್ತು ಛಲ ಇರುವವರು ಮಾತ್ರ ಇಲ್ಲಿ ನೆಲೆ ನಿಲ್ಲಲು ಸಾಧ್ಯ.

ಈಗ ನಾವು ಹೇಳುತ್ತಿರುವ ನಟಿ ಕೂಡ ಅಂತಹವರೇ. ಸ್ಟಾರ್ ಸುವರ್ಣದಲ್ಲಿ ಪ್ರಸಾರ ಆಗುತ್ತಿರುವ ಹೊಚ್ಚ ಹೊಸ ಧಾರಾವಾಹಿ 'ಜೈಲಲಿತಾ'ದ ನಾಯಕಿ. ನೋಡಲು ಸುಂದರಿ ಮಾತ್ರವಲ್ಲ, ಅದ್ಭುತ ಪ್ರತಿಭೆ ಕೂಡ ಹೌದು. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಬಣ್ಣದ ಲೋಕಕ್ಕೆ ಬಂದವರು ಇವರು. ಆರಂಭದಲ್ಲಿ ಇವರು ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು.

Interview Star Suvarna Serial Jayalalitha actress Manaswini acting journey and personal life

ಈಕೆಯ ಪಯಣ ನಿಜಕ್ಕೂ ಕುತೂಹಲಕಾರಿಯಾಗಿದೆ. ಓದಿದ್ದು ಒಂದು, ಮಾಡಿದ್ದು ಮತ್ತೊಂದು ಎನ್ನುವಂತೆ ಇವರ ಜೀವನ ಸಾಗಿದೆ. ಹಾಗಾದರೆ, ಈ ನಟಿ ಯಾರು? ಇವರ ಹಿನ್ನೆಲೆ ಏನು? ಇವರು ಇಷ್ಟು ಬೇಗ ಪ್ರೇಕ್ಷಕರ ಮನ ಗೆದ್ದಿದ್ದು ಹೇಗೆ? ಈ ಎಲ್ಲಾ ಕುತೂಹಲಕಾರಿ ಸಂಗತಿಗಳನ್ನು ನಾವಿಂದು ಇಲ್ಲಿ ಹಂಚಿಕೊಳ್ಳುತ್ತಿದ್ದೇವೆ.

ನೀವು ಎಲ್ಲಿಯವರು? ಚಿತ್ರರಂಗಕ್ಕೆ ಹೇಗೆ ಬಂದಿರಿ?

ಮನಸ್ವಿನಿ: ನಾನು ಮೂಲತಃ ಬೆಂಗಳೂರಿನವಳು. ಆದರೆ 5ನೇ ತರಗತಿಯಿಂದ 10ನೇ ತರಗತಿಯವರೆಗೆ ಕುಣಿಗಲ್‌ನಲ್ಲಿ ಓದಿದೆ. ಅಲ್ಲಿಂದ ಮತ್ತೆ ಬೆಂಗಳೂರಿಗೆ ಬಂದೆವು. ಇಂಡಸ್ಟ್ರಿಗೆ ಬಂದಿದ್ದು ತುಂಬಾ ಆಕಸ್ಮಿಕ. ನನ್ನ ಅಣ್ಣ ಮೊದಲು ಚಿತ್ರರಂಗದಲ್ಲಿದ್ದರು. ಅವರು ನನ್ನ ಫೋಟೋಗಳನ್ನು ವಾಟ್ಸಾಪ್ ಸ್ಟೇಟಸ್‌ಗೆ ಹಾಕಿದಾಗ, ಅದನ್ನು ನೋಡಿದವರು ಆಡಿಷನ್‌ಗೆ ಕರೆದರು. ಹೀಗೆ 'ವಿದ್ಯಾರ್ಥಿ ವಿದ್ಯಾರ್ಥಿನಿಯರೇ' ಸಿನಿಮಾ ಮೂಲಕ ನನ್ನ ಜರ್ನಿ ಶುರುವಾಯ್ತು.

ನಿಮಗೆ ಮೊದಲಿನಿಂದಲೂ ನಟನೆಯ ಬಗ್ಗೆ ಆಸಕ್ತಿ ಇತ್ತಾ?

ಮನಸ್ವಿನಿ: ಖಂಡಿತವಾಗಿಯೂ ಇಲ್ಲ. ನನಗೆ ನಟಿ ಆಗಬೇಕೆಂಬ ಕನಸು ಇರಲಿಲ್ಲ. ನಾನು ಸಿಎ ಓದಬೇಕು ಅಂದುಕೊಂಡಿದ್ದೆ. ಅಣ್ಣನ ಫೋಟೋ ಸ್ಟೇಟಸ್‌ನಿಂದ ಅನಿರೀಕ್ಷಿತವಾಗಿ ಈ ಫೀಲ್ಡ್‌ಗೆ ಬಂದೆ.

ಮನೆಯಲ್ಲಿ ಸಪೋರ್ಟ್ ಹೇಗಿದೆ? ಈವರೆಗಿನ ಪಯಣ ಹೇಗಿದೆ?

ಮನಸ್ವಿನಿ: ಮನೆಯಲ್ಲಿ ತುಂಬಾ ಚೆನ್ನಾಗಿ ಸಪೋರ್ಟ್ ಮಾಡುತ್ತಿದ್ದಾರೆ. ನಮ್ಮ ಅಮ್ಮನಿಗೆ ಮಗ ನಟನಾಗಬೇಕು ಎಂಬ ಆಸೆ ಇತ್ತು. ಈಗ ಮಗಳು ನಟಿಯಾಗಿರುವುದಕ್ಕೆ ಅವರಿಗೆ ತುಂಬಾ ಖುಷಿಯಿದೆ. ಮೊದಲ ಸಿನಿಮಾದಲ್ಲಿ ನಟಿಸುವಾಗ ನನಗೆ ಯಾವುದೂ ಗೊತ್ತಿರಲಿಲ್ಲ, ತುಂಬಾ ಭಯ ಇತ್ತು. ಈಗ ಕಲಿಯುತ್ತಾ ಸಾಗುತ್ತಿದ್ದೇನೆ.

Interview Star Suvarna Serial Jayalalitha actress Manaswini acting journey and personal life

'ಜೈಲಲಿತಾ' ಧಾರಾವಾಹಿಯ ನಿಮ್ಮ ಪಾತ್ರದ ಬಗ್ಗೆ ಹೇಳಿ?

ಮನಸ್ವಿನಿ: ಇಲ್ಲಿ ನನ್ನ ಪಾತ್ರದ ಹೆಸರು ಲಲಿತಾ. ಆಕೆ ತುಂಬಾ ಹೈಪರ್ ಆಕ್ಟಿವ್, ಯಾವಾಗಲೂ ಸ್ಟೈಲಿಶ್ ಆಗಿ ಮಿಂಚಬೇಕು ಎಂದು ಬಯಸುವ ಹುಡುಗಿ. ಜೀವನದಲ್ಲಿ ಎಂತಹದೇ ಕಷ್ಟ ಬಂದರೂ ಅದಕ್ಕೆ ತಲೆಕೆಡಿಸಿಕೊಳ್ಳದೆ ತುಂಬಾ ಕೂಲ್ ಆಗಿ ಇರುತ್ತಾಳೆ. ಜವಾಬ್ದಾರಿಗಳಿಗಿಂತ ಹೆಚ್ಚಾಗಿ ಲೈಫ್ ಎಂಜಾಯ್ ಮಾಡಬೇಕು ಅನ್ನೋದು ಅವಳ ಗುಣ.

ಈ ಪಾತ್ರದಲ್ಲಿ ನೀವು ಯಶ್ ಅವರ ಅಪ್ಪಟ ಅಭಿಮಾನಿ ಎಂದು ಕೇಳಿದ್ದೇವೆ, ನಿಜ ಜೀವನದಲ್ಲಿ ಹೇಗೆ?

ಮನಸ್ವಿನಿ: ಹೌದು ಲಲಿತಾ ಪಾತ್ರ ಯಶ್ ಅವರ ದೊಡ್ಡ ಫ್ಯಾನ್. ಸೀರಿಯಲ್‌ನಲ್ಲಿ ಅವಳು ಪರೀಕ್ಷೆ ಬರೆಯುವಾಗಲೂ ಪೇಪರ್ ಮೇಲೆ ಯಶ್ ಫೋಟೋ ಅಂಟಿಸುವಷ್ಟು ಕ್ರೇಜಿ ಅಭಿಮಾನಿ. ಆದರೆ, ನಾನು ನಿಜ ಜೀವನದಲ್ಲಿ ಡಾ.ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿ. ಅವರ ಶ್ರಮ ಮತ್ತು ಅವರು ಬೆಳೆದು ಬಂದ ಹಾದಿ ನಮಗೆಲ್ಲರಿಗೂ ಸ್ಫೂರ್ತಿ.

ಯಶ್ ಫ್ಯಾನ್‌ ಆಗಿ ಈ ಪಾತ್ರ ಮಾಡುವಾಗ ಏನಾದರೂ ತಯಾರಿ ನಡೆಸಿದ್ರಾ?

ಮನಸ್ವಿನಿ: ಖಂಡಿತ ಯಶ್ ಅವರ ಮ್ಯಾನರಿಸಂ, ಅವರು ಡೈಲಾಗ್ ಹೇಳುವ ರೀತಿ ಮತ್ತು ಅವರ ಆಟಿಟ್ಯೂಡ್ ಅನ್ನು ಈ ಪಾತ್ರಕ್ಕಾಗಿ ಸ್ವಲ್ಪ ಅಳವಡಿಸಿಕೊಂಡಿದ್ದೇನೆ. ಅವರ ಸಿನಿಮಾ ಸ್ಟೈಲ್‌ಗಳನ್ನು ಲಲಿತಾ ಪಾತ್ರದ ಮೂಲಕ ತೋರಿಸಲು ಪ್ರಯತ್ನಿಸುತ್ತಿದ್ದೇನೆ.

Interview Star Suvarna Serial Jayalalitha actress Manaswini acting journey and personal life

ಈ ಸೀರಿಯಲ್‌ನಲ್ಲಿ ನೀವು ಪೊಲಿಟಿಷಿಯನ್ ಆಗ್ತೀರಾ?

ಮನಸ್ವಿನಿ: ಹೌದು ಮುಂದೆ ಕಥೆಯಲ್ಲಿ ಲಲಿತಾ ಪಾತ್ರ ರಾಜಕಾರಣಿಯಾಗಿ ಕಾಣಿಸಿಕೊಳ್ಳಲಿದೆ. ಒಬ್ಬ ಚಟುವಟಿಕೆಯ ಹುಡುಗಿ ಹೇಗೆ ಪೊಲಿಟಿಷಿಯನ್ ಆಗುತ್ತಾಳೆ? ಅವಳು ಎದುರಿಸುವ ಸವಾಲುಗಳೇನು ಎಂಬುದು ಕುತೂಹಲ ಮೂಡಿಸಲಿದೆ.

'ಜೈಲಲಿತಾ' ಇಲ್ಲಿವರೆಗೂ ಹೇಗೆ ಫೀಲ್ ಕೊಟ್ಟಿದೆ?

ಮನಸ್ವಿನಿ: ಇದು ತುಂಬಾ ಒಳ್ಳೆಯ ಅನುಭವ. ಜನರಿಂದ ಸಿಗುತ್ತಿರುವ ಪ್ರತಿಕ್ರಿಯೆ ತುಂಬಾ ಖುಷಿ ಕೊಡುತ್ತಿದೆ. ಈ ಪಾತ್ರದಲ್ಲಿ ಕಾಮಿಡಿ ಮತ್ತು ಎಮೋಷನ್ಸ್ ಎರಡೂ ಇರುವುದರಿಂದ ನನಗೆ ನಟಿಸಲು ತುಂಬಾ ಸ್ಕೋಪ್ ಸಿಕ್ಕಿದೆ.

ನಿಮ್ಮ ಮುಂದಿನ ಗುರಿ ಅಥವಾ ಫ್ಯೂಚರ್ ಗೋಲ್ ಏನು?

ಮನಸ್ವಿನಿ: ನಟನೆಯಲ್ಲಿ ಇನ್ನು ಹೆಚ್ಚಿನ ಸಾಧನೆ ಮಾಡಬೇಕು. ಪ್ರೇಕ್ಷಕರಿಗೆ ಇಷ್ಟವಾಗುವಂತಹ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬ ಆಸೆ ಇದೆ.

ಕೊನೆಯದಾಗಿ ಈ ಸೀರಿಯಲ್ ಬಗ್ಗೆ ಪ್ರೇಕ್ಷಕರಿಗೆ ಏನು ಹೇಳ್ತೀರಾ?

ಮನಸ್ವಿನಿ: ಜೈಲಲಿತಾ ಕೇವಲ ಒಂದು ಕಥೆಯಲ್ಲ, ಇದರಲ್ಲಿ ಮನರಂಜನೆಯ ಜೊತೆಗೆ ಒಂದು ಹೊಸ ತಿರುವು ಇದೆ. ಎಲ್ಲರೂ ದಯವಿಟ್ಟು ನೋಡಿ, ನಮಗೆ ನಿಮ್ಮ ಬೆಂಬಲ ಮತ್ತು ಆಶೀರ್ವಾದ ಸದಾ ಇರಲಿ.

More from Filmibeat

English summary
Interview Star Suvarna Serial Jayalalitha actress Manaswini acting journey and personal life.
Read more about: serial actress tv show
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X